ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

By Nagaraja

ಒಂದು ಕಾಲದಲ್ಲಿ ಎಲ್ಲರ ಮನೆ ಮಾತಾಗಿದ್ದ ಐಕಾನಿಕ್ ಎಲ್‌ಎಂಎಲ್ ಇದೀಗ ಭರ್ಜರಿ ರಿ ಎಂಟ್ರಿ ಕೊಟ್ಟಿದೆ. ಹೌದು, ಎಲ್‌ಎಂಎಲ್ ಸ್ಟಾರ್ ಯುರೋ 150 ಸಿಸಿ ಆಟೋಮ್ಯಾಟಿಕ್ ಸ್ಕೂಟರ್ ದೇಶದಲ್ಲಿ ಲಾಂಚ್ ಕಂಡಿದೆ.

ದಶಕಗಳ ಹಿಂದೆ ಇಟಲಿಯ ವೆಸ್ಪಾ ಜತೆ ಪಾಲುದಾರಿಕೆ ಹೊಂದಿದ್ದ ಎಲ್‌ಎಂಎಲ್ ಗೇರ್ ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದ್ದವು. ಇದು 1980 ಹಾಗೂ 90ರ ದಶಕದಲ್ಲಿ ಫ್ರೀಡಂ ಬ್ರಾಂಡ್ ಪರಿಚಯಿಸಿದ್ದ ಎಲ್‌ಎಂಎಲ್ ಅತಿ ಹೆಚ್ಚು ಹೆಸರು ಗಿಟ್ಟಿಸಿಕೊಂಡಿತ್ತು. ಆದರೆ ವೆಸ್ಪಾ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ಎಲ್‌ಎಂಎಲ್ ಆರ್ಥಿಕ ವಿಚಾರದಲ್ಲಿ ಭಾರಿ ನಷ್ಟ ಅನುಭವಿಸಿತ್ತು. ಇದೀಗ ಕಳೆದು ಹೋಗಿರುವ ವೈಭವವನ್ನು ಮರುಕಳಿಸುವ ಪ್ರಯತ್ನದಲ್ಲಿರುವ ಎಲ್‌ಎಂಎಲ್ ಸ್ಟಾರ್ ಯುರೋ 150ಸಿಸಿ ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆಗೊಳಿಸಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ನೂತನ ಯುರೋ ಸ್ಟಾರ್ ಯುರೋ 150ಸಿಸಿ ಆಟೋಮ್ಯಾಟಿಕ್ ಸ್ಕೂಟರಿನ ಪ್ರಮುಖ ವಿಶೇಷತೆಯೆಂದರೆ ದಶಕಗಳ ಹಿಂದಿನ ಕ್ಲಾಸಿಕ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಎಲ್‌ಎಂಎಲ್ ಯಶ ಕಂಡಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಇದರ ಜತೆಗೆ ಆಧುನಿಕ ಸಿವಿಟಿ ಆಟೋಮ್ಯಾಟಿಕ್ ತಂತ್ರಗಾರಿಕೆಯನ್ನು ಆಳವಡಿಸಿಕೊಳ್ಳಲಾಗಿದೆ. ಆದರೆ ಹೊಸ ಆವೃತ್ತಿಯಲ್ಲಿ ಸ್ಕೂಟರ್ ಹಿಂದುಗಡೆ ಹೆಚ್ಚುವರಿ ಚಕ್ರ ಅಲಭ್ಯತೆ ಕಾಡಲಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಸಂಪೂರ್ಣ ಮೆಟಲ್ ದೇಹ ವಿನ್ಯಾಸವನ್ನು ಪಡೆದಿರುವ ಸ್ಟಾರ್ ಯುರೋ, ವೆಸ್ಪಾ ತರಹನೇ ಮೊನೊಕಾಕ್ ಚಾಸೀಸ್ ಪಡೆದುಕೊಂಡಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಪ್ರಸ್ತುತ ದೇಶದಲ್ಲಿ 150 ಸಿಸಿ ಆಟೋಮ್ಯಾಟಿಕ್ ಸ್ಕೂಟರ್ ಮಾತ್ರ ಲಭ್ಯವಿರಲಿದೆ. ಇದು 1760 ಎಂಎಂ ಉದ್ದ, 695 ಎಂಎಂ ಅಗಲ, 820 ಎಂಎಂ ಎತ್ತರ ಮತ್ತು 1260 ಎಂಎಂ ವೀಲ್ ಬೇಸ್ ಹೊಂದಿರಲಿದೆ. ಹಾಗೆಯೇ 112 ಕೆ.ಜಿ ಭಾರ ಹೊಂದಿರುವ ಎಲ್‌ಎಂಎಲ್ ಸ್ಟಾರ್ ಯುರೋ, 160 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದುಕೊಂಡಿರಲಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಅಂದ ಹಾಗೆ ಎಲ್‌ಎಂಎಲ್ ಸ್ಟಾರ್ ಯುರೋದಲ್ಲಿ ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್, ಫೋರ್ಸ್ಡ್ ಏರ್ ಕೂಲ್ಡ್ ಎಂಜಿನ್ ಲಗತ್ತಿಸಲಾಗಿದೆ. ಇದು 9 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಅದೇ ರೀತಿ ಗಂಟೆಗೆ ಗರಿಷ್ಠ 90 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ಇನ್ನು ಸಂಸ್ಥೆಯ ಪ್ರಕಾರ ಪ್ರತಿ ಲೀಟರ್‌ಗೆ 55 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ನೂತನ ಎಲ್‌ಎಂಎಲ್ ಆಟೋಮ್ಯಾಟಿಕ್ ಸ್ಕೂಟರ್ ಹೊಂದಿರಲಿದೆ. ಇದು ಏಳು ಲೀಟರ್ ಇಂಧನ ಸಹ ಪಡೆದುಕೊಂಡಿದೆ.

ಐಕಾನಿಕ್ ಎಲ್‌ಎಂಎಲ್ ರಿ ಎಂಟ್ರಿ; ಇತಿಹಾಸ ಮರುಕಳಿಸಲಿದೆಯೇ?

ವೆಸ್ಪಾ ಹಾಗೂ ಆಕ್ಟಿವಾ ತರಹನೇ ಸ್ಟಾರ್ ಯುರೋ ಸಹ ಮುಂದುಗಡೆ ಸಿಂಗಲ್ ಸೈಡಡ್ ಸಸ್ಫೆಷನ್ ಪಡೆದುಕೊಳ್ಳಲಿದೆ. ಹಾಗೆಯೇ ಡ್ರಮ್ ಬ್ರೇಕ್ ಸ್ಟಾಂಡರ್ಡ್ ಆಗಿರಲಿದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಐಚ್ಛಿಕವಾಗಿರಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಅಹಮದಾಬಾದ್)

ದರ ಮಾಹಿತಿ (ಎಕ್ಸ್ ಶೋ ರೂಂ ಅಹಮದಾಬಾದ್)

  • ಎಲ್‌ಎಂಎಲ್ ಸ್ಟಾರ್ ಯುರೋ 150 ಬೇಸ್ - ರು. 54,014
  • ಎಲ್‌ಎಂಎಲ್ ಸ್ಟಾರ್ ಯುರೋ 150 ಜತೆಗೆ ಡಿಸ್ಕ್ ಬ್ರೇಕ್ - ರು. 57,918
  • ಎಲ್‌ಎಂಎಲ್ ಸ್ಟಾರ್ ಯುರೋ 150 ಸಿಸಿ ಜತೆಗೆ ಡಿಸ್ಕ್ ಬ್ರೇಕ್ ಮತ್ತು ಮಲ್ಟಿ ಶೇಡ್ ಕಲರ್ - ರು. 59,422

Most Read Articles

Kannada
English summary
To try to cash in on the rekindled popularity of scooters in recent years, LML has launched the Star Euro 150cc automatic scooter.
Story first published: Tuesday, February 25, 2014, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X