ಮಹೀಂದ್ರ ಸೆಂಚುರೊ ಮೈಲೇಜ್- 85.4 kmpl
ನಿಮ್ಮಿಂದ ಇದನ್ನು ಊಹಿಸಲು ಸಾಧ್ಯವೇ? ಸಾಮಾನ್ಯ ಪ್ರಯಾಣಿಕ ಬೈಕ್‌ವೊಂದು ಗರಿಷ್ಠ ಅಂದರೆ ಪ್ರತಿ ಲೀಟರ್‌ಗೆ 75 ಕೀ.ಮೀ. ತನಕ ಮೈಲೇಜ್ ನೀಡಬಲ್ಲದು. ಹಾಗಿರುವಾಗ ಮಹೀಂದ್ರದ ನೂತನ ಸೆಂಚುರೊ ಬೈಕ್ ಬರೋಬ್ಬರಿ 85.4 ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಪ್ರಕಟಿಸಿದೆ.
ಹೌದು, ಕೆಲವು ದಿನಗಳ ಹಿಂದೆಯಷ್ಟೇ ಮಹೀಂದ್ರ ಸೆಂಚುರೊ ಬಿಡುಗಡೆಗೊಂಡಿತ್ತು. ಈ ಮೂಲಕ ಭಾರತ ಮಾರುಕಟ್ಟೆ ಮಹೀಂದ್ರ ಟು ವೀಲರ್ಸ್ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು. (ಇದಕ್ಕೂ ಮುನ್ನ ಪ್ಯಾಂಥರೊ ಲಾಂಚ್ ಆಗಿತ್ತು.)
110ಸಿಸಿ ವಿಭಾಗದಲ್ಲಿ ಕಾಣಿಸಿಕೊಂಡಿರುವ ಮಹೀಂದ್ರ ಸೆಂಚುರೊ ದರ 45,000 ರು.ಗಳಾಗಿವೆ. ಹಾಗಿರುವಾಗ ಇಷ್ಟು ಕಡಿಮೆ ದರದಲ್ಲಿ ಗರಿಷ್ಠ ಮೈಲೇಜ್ ನೀಡುವ ಬೈಕ್ ಮಾರುಕಟ್ಟೆ ತಲುಪಿದರೆ ಯಾರಿಗೆ ತಾನೇ ಬೇಡವೆನ್ನಲು ಸಾಧ್ಯ?
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಜ ಪರಿಸ್ಥಿತಿಯಲ್ಲಿ ಸೆಂಚುರೊ ಎಷ್ಟು ಮೈಲೇಜ್ ನೀಡಲಿದೆ ಎಂಬುದು ನಿರ್ಣಾಯಕವೆನಿಸಲಿದೆ. ಐದು ವರ್ಷಗಳ ವಾರಂಟಿ ಜತೆ ಆಗಮಿಸಿರುವ ಮಹೀಂದ್ರ ಸೆಂಚುರೊ ಮುಂಗಡವಾಗಿ ಕಾಯ್ದಿರಿಸಿರುವ ಮೊದಲ 10,000 ಗ್ರಾಹಕರಿಗೆ ರು. 1000 ಡಿಸ್ಕೌಂಟ್ ಕೂಡಾ ಘೋಷಿಸಲಾಗಿದೆ.
ವಿಸೃತ ವರದಿಗಾಗಿ ಭೇಟಿ ಕೊಡಿರಿ ಸ್ಪ್ಲೆಂಡರ್ ಪ್ರತಿಸ್ಪರ್ಧಿ ಮಹೀಂದ್ರ ಸೆಂಚುರೊ ರಸ್ತೆಗೆ


Click it and Unblock the Notifications









