ಸ್ಪ್ಲೆಂಡರ್ ಪ್ರತಿಸ್ಪರ್ಧಿ ಮಹೀಂದ್ರ ಸೆಂಚುರೊ ರಸ್ತೆಗೆ

Posted By:

ದೇಶದ ದ್ವಿಚಕ್ರ ಮಾರುಕಟ್ಟೆ ಸಂಭ್ರಮಪಡುವ ರೀತಿಯಲ್ಲಿ ಇನ್ನೊಂದು ಪ್ರಯಾಣಿಕ ಬೈಕ್‌ನ ಆಗಮನವಾಗಿದೆ. ಪ್ರಮುಖವಾಗಿಯೂ ಹೀರೊ ಸ್ಪ್ಲೆಂಡರ್ ಪ್ರತಿಸ್ಪರ್ಧಿ ಎನಿಸಿಕೊಂಡಿರುವ ಮಹೀಂದ್ರ ಸೆಂಚುರೊ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆಗೊಳ್ಳುವ ಮೂಲಕ ಗಮನ ಸೆಳೆದಿದೆ.

ದರ ಮಾಹಿತಿ: ರು. 45,000

ಪ್ರಮುಖವಾಗಿಯೂ ದೇಶದ ರಸ್ತೆಗೆ ಅನುಗುಣವಾಗಿ ಮಹೀಂದ್ರ ಸೆಂಚುರೊ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಇಂಟೆಲಿಜೆನ್ಸ್ ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಒಟ್ಟು 120 ಕೆ.ಜಿ ತೂಕವಿರುವ 106 ಸಿಸಿ ಸೆಂಚುರೊ ದರ 45,000 ರು.ಗಳಾಗಿವೆ.

To Follow DriveSpark On Facebook, Click The Like Button
ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಪ್ಯಾಂಥರೊ ಆವೃತ್ತಿಗೆ ಹೋಲಿಸಿದಾಗ ಸೆಂಚುರೊ ದರ ಸ್ವಲ್ಪ ದುಬಾರಿ ಅನಿಸಿದರೂ ಮಾರುಕಟ್ಟೆಯಲ್ಲಿ ತನ್ನ ನಿಕಟ ಸ್ಪರ್ಧಾಳುವಾದ ಹೋಂಡಾ ಡ್ರೀಮ್ ಯುಗಾ ಜತೆ ಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ. ಹೋಂಡಾ ಡ್ರೀಮ್ ಯುಗಾ ಎಕ್ಸ್ ಶೋ ರೂಂ ದರ 45,101 ರು.ಗಳಾಗಿವೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಹೋಂಡಾ ಡ್ರೀಮ್ ಯುಗಾ ಸೇರಿದಂತೆ, ಬಜಾಜ್ ಡಿಸ್ಕರ್, ಸುಜುಕಿ ಹಯಾಟೆ, ಹೀರೊ ಹಾಗೂ ಹೋಂಡಾ ಸ್ಪ್ಲೆಂಡರ್ ಆವೃತ್ತಿಗಳಿಗೆ ಸೆಂಚುರೊ ಸವಾಲಾಗಲಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ನೂತನ ಸೆಂಚುರೊ ರಿಮೋಟ್ ಲಾಕ್ ಸಿಸ್ಟಂ ಹೊಂದಿದ್ದು, ಇದರಿಂದ ವಾಹನ ದಟ್ಟಣೆಯಲ್ಲೂ ಪಾರ್ಕಿಂಗ್ ಮಾಡಿದ್ದರೂ ಸುಲಭವಾಗಿ ಬೈಕ್ ಗುರುತಿಸಿಕೊಳ್ಳಲು ನೆರವಾಗಲಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಇದು 4 ಸ್ಟ್ರೋಕ್ ಏರ್ ಕೂಲ್ಡ್ ಎಂಸಿಐ-5 ಎಂಜಿನ್ ಹೊಂದಿದ್ದು, 120 ಕೆ.ಜಿ ಭಾರವನ್ನು ಹೊಂದಿದೆ. ಹಾಗೆಯೇ ಎಲಕ್ಟ್ರಿಕ್ ಹಾಗೂ ಕಿಕ್ ಸ್ಟ್ರಾರ್ಟ್, ಎಲ್‌ಇಡಿ ಟೈಲ್ ಲ್ಯಾಂಪ್, ಅಲಾಯ್ ವೀಲ್ ಹಾಗೂ ಟ್ಯೂಬ್‌ಲೆಸ್ ಟೈರ್ ಹೊಂದಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಕಳೆದ ಕೆಲವು ವರ್ಷಗಳಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಸಾಧಿಸುವಲ್ಲಿ ವಿಫಲಗೊಂಡಿದ್ದ ಮಹೀಂದ್ರ ಟು ವಿಲ್ಹರ್ಸ್ ನೂತನ 110ಸಿಸಿ ಬೈಕ್‌ಗಳೊಂದಿಗೆ ಮತ್ತೆ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ. ಸ್ಟಾಲಿಯೊ ವೈಫಲ್ಯದ ಬಳಿಕವೀಗ ಮಹೀಂದ್ರ ಮಾರುಕಟ್ಟೆಗೆ ಮರು ಪ್ರವೇಶಿಸಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಪ್ರೀಮಿಯಂ 110ಸಿಸಿ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿರುವ ಸೆಂಚುರೊ ದೇಶದ ಪ್ರೀಮಿಯಂ ಸಗ್ಮೆಂಟ್‌ ಹೊಂದಿರದ ಅನೇಕ ಫೀಚರ್‌ಗಳನ್ನು ಹೊಂದಿದೆ. ಅಂದರೆ ಸೆಂಟ್ರಲ್ ಲಾಕಿಂಗ್, ಕಳ್ಳತನ ವಿರೋಧಿ ವ್ಯವಸ್ಥೆ ( anti-theft system), engine immobiliser, remote 128-bit encrypted flip-key ಜತೆ ಎಲ್‌ಇಡಿ ಲೈಟ್‌ ಹಾಗೂ ಗೈಡ್ ಲ್ಯಾಂಪ್‌ಗಳನ್ನು ಹೊಂದಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ನೂತನ 110ಸಿಸಿ ಸೆಂಚುರೊ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಸಿಐ-5 (Micro Chip ignited 5 curve) ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, 5,500 ಆರ್‌ಪಿಎಂನಲ್ಲಿ 8.5 ಎನ್‌ಎಂ ಪೀಕ್ ಟರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ನಿಮ್ಮ ಮಾಹಿತಿಗಾಗಿ ಮೊದಲ 10,000 ಯುನಿಟ್‌ಗಳು ಆಕರ್ಷಕ 44,000 ರು.ಗಳಿಗೆ ಮಾರಾಟವಾಗಲಿದ್ದು, ಇದರ ಪ್ರಯೋಜನ ಪಡೆಯಬಹುದಾಗಿದೆ. ಹಾಗೆಯೇ ಐದು ವರ್ಷಗಳ ವಾರಂಟಿ ಸೌಲಭ್ಯವಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮೈಲೇಜ್

ಇನ್ನು ಕಂಪನಿಯ ಪ್ರಕಾರ ಮಹೀಂದ್ರ ಸೆಂಚುರೊ ಪ್ರತಿ ಲೀಟರ್‌ಗೆ ಬರೋಬ್ಬರಿ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

English summary
Mahindra Centuro, launched today for a price of Rs 45,000, can be referred to as the most advanced commuter bike in India. The first 10,000 units will also be sold for an introductory price of Rs 44,000 and the bike comes with a 5 year warranty.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark