ಮಹೀಂದ್ರ ಸೆಂಚುರೊ ಆಗಮನಕ್ಕೆ ಮುಹೂರ್ತ ಫಿಕ್ಸ್
ದ್ವಿಚಕ್ರ ಪ್ರಯಾಣ ಸೆಗ್ಮೆಂಟ್‌ನಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ಕುದುರಿಸಿಕೊಳ್ಳುವ ಯೋಜನೆಯಲ್ಲಿರುವ ದೇಶದ ಮುಂಚೂಣಿಯ ಸಂಸ್ಥೆ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್, ಇನ್ನೊಂದು ಬೈಕ್ ಸದ್ಯದಲ್ಲೇ ಪರಿಚಯಿಸಲಿದೆ. ಮೂಲಗಳ ಪ್ರಕಾರ ಮಹೀಂದ್ರ ಸೆಂಚುರೊ 110ಸಿಸಿ ಭಾರತಕ್ಕೆ ಜುಲೈ 1 ಅಥವಾ 2ನೇ ದಿನಾಂಕದಲ್ಲಿ ಲಾಂಚ್ ಆಗಲಿದೆ.
ಇಲ್ಲಿ ಇನ್ನು ಆಸಕ್ತಿದಾಯಕ ವಿಷಯ ಏನೆಂದರೆ ಸೆಂಚುರೊ ಬೇಸ್ ವೆರಿಯಂಟ್ ದರ ಕೇವಲ 40,599 ರು.ಗಳಾಗಿರಲಿದೆ. ಇದು ಬೈಕ್ ಪ್ರಿಯರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಪ್ರಸ್ತುತ ಬೈಕ್ ಬಜಾಜ್ ಡಿಸ್ಕವರ್ ಹಾಗೂ ಟಿವಿಎಸ್ ದ್ವಿಚಕ್ರ ಪ್ರಯಾಣಿಕ ವಾಹನಗಳಿಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ನೂತನ ಸೆಂಚುರೊ ರಿಮೋಟ್ ಲಾಕ್ ಸಿಸ್ಟಂ ಹೊಂದಿದ್ದು, ಇದರಿಂದ ವಾಹನ ದಟ್ಟಣೆಯಲ್ಲೂ ಪಾರ್ಕಿಂಗ್ ಮಾಡಿದ್ದರೂ ಸುಲಭವಾಗಿ ಬೈಕ್ ಗುರುತಿಸಿಕೊಳ್ಳಲು ನೆರವಾಗಲಿದೆ. ಹಾಗೆಯೇ ಕಳ್ಳರಿಗೆ ಬೈಕ್ ಕದಿಯುವುದು ಸುಲಭ ವಿಚಾರವಲ್ಲ. ಯಾಕೆಂದರೆ ರಿಮೋಟ್ ಲಾಕ್ ಹೊಂದಿರದ ಹೊರತು ಬೈಕ್ ಸ್ಟಾರ್ಟ್ ಆಗಲು ಸಾಧ್ಯವಿಲ್ಲ.
ಇದು 4 ಸ್ಟ್ರೋಕ್ ಏರ್ ಕೂಲ್ಡ್ ಎಂಸಿಐ-5 ಎಂಜಿನ್ ಹೊಂದಿದ್ದು, 120 ಕೆ.ಜಿ ಭಾರವನ್ನು ಹೊಂದಿದೆ. ಹಾಗೆಯೇ ಎಲಕ್ಟ್ರಿಕ್ ಹಾಗೂ ಕಿಕ್ ಸ್ಟ್ರಾರ್ಟ್, ಎಲ್‌ಇಡಿ ಟೈಲ್ ಲ್ಯಾಂಪ್, ಅಲಾಯ್ ವೀಲ್ ಹಾಗೂ ಟ್ಯೂಬ್‌ಲೆಸ್ ಟೈರ್ ಹೊಂದಿದೆ.


Click it and Unblock the Notifications









