ರಸ್ತೆಗಳಲ್ಲಿ ಸೆಂಚುರೊ ಕಮಾಲ್; ಮಹೀಂದ್ರ ಸೇಲ್ಸ್ ಅಪ್

By Nagaraja

ಹೊಸ ತಂತ್ರಜ್ಞಾನವನ್ನು ಸ್ವೀಕರಿಸುವಲ್ಲಿ ಗ್ರಾಹಕರು ಎಂದೂ ಹಿಂದು ಮುಂದು ನೋಡುವುದಿಲ್ಲ ಎಂಬುದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಹೀಂದ್ರ ಸೆಂಚುರೊ ಉತ್ತಮ ಉದಾಹರಣೆಯಾಗಿದೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಪ್ಯಾಂಥರೊ ವೈಫಲ್ಯದ ಬಳಿಕ ಎದೆಗುಂದದ ಮಹೀಂದ್ರ ಟು ವೀಲರ್ಸ್ ಇತ್ತೀಚೆಗಷ್ಟೇ ಸೆಂಚುರೊ ದ್ವಿಚಕ್ರ ಪ್ರಯಾಣಿಕ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು.

ಇದುವರೆಗೆ ಕಾರಿನಲ್ಲಿ ಮಾತ್ರ ಲಭ್ಯವಾಗುತ್ತಿರುವ ಸುರಕ್ಷತಾ ಮಾನದಂಡಗಳನ್ನು ಬೈಕಿಗೂ ಆಳವಡಿಸಿರುವುದು ಸೆಂಚುರೊ ಯಶಸ್ಸಿಗೆ ಕಾರಣವಾಗಿತ್ತು. ಇದಕ್ಕೆ ಪೂರಕವೆಂಬಂತೆ ಜುಲೈ ತಿಂಗಳ ಮಾರಾಟದಲ್ಲೂ ಮಹೀಂದ್ರ ಭರ್ಜರಿ ಏರಿಕೆ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜುಲೈ ತಿಂಗಳಲ್ಲಿ ಮಹೀಂದ್ರ ಒಟ್ಟು 14,612 ಯುನಿಟ್‌ಗಳ ಮಾರಾಟವನ್ನು ದಾಖಲಿಸಿಕೊಂಡಿದೆ. ಈ ಮೂಲಕ ಮಾರಾಟದಲ್ಲಿ ಶೇಕಡಾ 46ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.


ಈ ಪೈಕಿ 10,158 ಯುನಿಟ್‌ಗಳ ಮಾರಾಟ ದಾಖಲಿಸಿರುವ ಸೆಂಚುರೊ ದೇಶದ ರಸ್ತೆಗಳಲ್ಲಿ ಧೂಳೆಬ್ಬಿಸಲು ಆರಂಭಿಸಿದೆ. ಜುಲೈ 1ರಂದು ಮಾರುಕಟ್ಟೆ ಪ್ರವೇಶಿಸಿದ್ದ ಮಹೀಂದ್ರ ಸೆಂಚುರೊ ದೆಹಲಿ ಎಕ್ಸ್ ಶೋ ರೂಂ ದರ 45,000 ರು.ಗಳಾಗಿವೆ.

ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಇದರ ಮೈಕ್ರೋ ಚಿಪ್ ಇಗ್ನೈಟೆಡ್ 5 ಕರ್ವ್ (MCi-5) ಎಂಜಿನ್ ಪ್ರಮುಖ ಆಕರ್ಷಣೆಯಾಗಿದೆ. ಹೋಂಡಾ ಡ್ರೀಮ್ ಯುಗಾ ಸೇರಿದಂತೆ, ಬಜಾಜ್ ಡಿಸ್ಕರ್, ಸುಜುಕಿ ಹಯಾಟೆ, ಹೀರೊ ಹಾಗೂ ಹೋಂಡಾ ಸ್ಪ್ಲೆಂಡರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಸೆಂಚುರೊ ರಿಮೋಟ್ ಲಾಕ್ ಸಿಸ್ಟಂ, ಎಲ್‌ಇಡಿ ಟೈಲ್ ಲ್ಯಾಂಪ್, ಟ್ಯೂಬ್ ಲೆಸ್ ಟೈರ್, ಸೆಂಟ್ರಲ್ ಲಾಂಕಿಂಗ್ ಸಿಸ್ಟಂ, ಆಂಟಿ ಥೆಫ್ಟ್ ಸಿಸ್ಟಂ, ಎಂಜಿನ್ ಇಂಮೊಬಿಲೈಸರ್ ಹಾಗೂ ಗೈಡ್ ಲ್ಯಾಂಪ್‌ಗಳನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿರಿ ಸ್ಪ್ಲೆಂಡರ್ ಪ್ರತಿಸ್ಪರ್ಧಿ ಮಹೀಂದ್ರ ಸೆಂಚುರೊ ರಸ್ತೆಗೆ

More from DriveSpark

Article Published On: Friday, August 2, 2013, 15:15 [IST]
English summary
Mahindra Two Wheelers, a part of the USD 16.2 billion Mahindra Group, has registered sales of 14,612 units during July 2013, an increase of 46% over the previous year. The company's innovative Centuro motorcycle has added to this sales momentum with 10,158 units being sold during the first month of its market launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+