ಪಾಕ್‌; ದ್ವಿಚಕ್ರ ಮೇಲೆ ವಿಧಿಸಲಾಗಿದ್ದ ನಿಷೇಧ ಹಿಂಪಡೆತ

By Nagaraja

ಪಾಕಿಸ್ತಾನದ ತಾಲಿಬಾನ್ ಪ್ರಾಬಲ್ಯದ ಬಜೌರ್ ಬುಡಕಟ್ಟ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳಿಗೆ ಹೇರಲಾಗಿದ್ದ ನಿಷೇಧವನ್ನು ಕೊನೆಗೂ ಹಿಂಪಡೆಯಲಾಗಿದೆ.

ಶಂಕಿತ ಉಗ್ರರಿಂದ ಬಾಂಬ್ ದಾಳಿ ಹೆಚ್ಚಾಗಿ ಕಂಡುಬಂದಿದ್ದರಿಂದ ಐದು ವರ್ಷಗಳ ಹಿಂದೆ 2008ನೇ ಇಸವಿಯಲ್ಲಿ ಈ ನಿರ್ದಿಷ್ಟ ಪ್ರದೇಶದಲ್ಲಿ ಮೋಟಾರ್ ಸೈಕಲ್ ಪಯಣಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಪ್ರದೇಶವು ಶಾಂತಿ ರೂಪಕ್ಕೆ ಮರಳಿರುವುದರಿಂದ ದ್ವಿಚಕ್ರ ಸವಾರರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.

ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ವ್ರತಾಚರಣೆ ಅಂಗವಾಗಿ ಪಾಕ್ ಭದ್ರತಾ ಪಡೆಗಳಿಂದ ಇಂತಹದೊಂದು ನಡೆ ಕಂಡುಬಂದಿದೆ.. ಇದು ಸ್ಥಳೀಯ ಬುಡಕಟ್ಟು ಜನರಲ್ಲಿ ನಿರಾಳತೆ ತರುವಂತಾಗಿದೆ.

ಮುಂದಿನ ದಿನಗಳಲ್ಲೂ ಉಗ್ರ ನಿರೋಧಿ ಭದ್ರತಾ ಪಡೆಗಳಿಗೆ ಸ್ಥಳೀಯರ ಬೆಂಬಲ ಇರುವುದನ್ನು ಖಾತ್ರಿಪಡಿಸಿರುವ ಬ್ರಿಗೇಡಿಯರ್ ಗುಲಂ ಹೈದರ್, ಸಾರಿಗೆ ವ್ಯವಸ್ಥೆ ಮಾಮೂಲಿಯಾಗಿ ಕಾರ್ಯಚರಿಸಲಿದೆ ಎಂದಿದ್ದಾರೆ.

Article Published On: Tuesday, July 16, 2013, 12:14 [IST]
English summary
A ban on motorcycle riding was levied in 2008 due to heightened Taliban activities in the Bajaur region. After about five years, this ban has been lifted in an announcement made by Brig. Ghulam Haidar, Sector Commander of Army in the region.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+