ತ್ವರೆ ಮಾಡಿರಿ; ವೆಸ್ಪಾ ದರದಲ್ಲಿ ಕಡಿತ

By Nagaraja

ಇಟಲಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ತನ್ನ ಜನಪ್ರಿಯ ಪ್ರೀಮಿಯಂ ಲೈಫ್‌ಸ್ಟೈಲ್ ಸ್ಕೂಟರ್ ಆದ ವೆಸ್ಪಾದ ಎಲ್‌ಎಕ್ಸ್ 125 ಮಾದರಿಯಲ್ಲಿ ರಿಯಾಯಿತಿ ದರ ಘೋಷಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಇದು ಎರಡನೇ ಬಾರಿ ವೆಸ್ಪಾ ದರಗಳಲ್ಲಿ ಕಡಿತವುಂಟಾಗಿದೆ. ವೆಸ್ಪಾ ಎಲ್‌ಎಕ್ಸ್ 125 ದರದಲ್ಲಿ 7000ದಷ್ಟು ಕಡಿತ ಘೋಷಿಸಲಾಗಿದೆ. ಇದರೊಂದಿಗೆ ವೆಸ್ಪಾ ಪುಣೆ ಎಕ್ಸ್ ಶೋ ದರ 59,990 ರುಪಾಯಿಗಳಗೆ ಇಳಿಕೆ ಕಂಡಿದೆ.

ತನ್ನ ನಿಕಟ ಪ್ರತಿಸ್ಪರ್ಧಿಗಳ ವಿರುದ್ಧ ಪೈಪೋಟಿ ನೀಡಲು ಅಥವಾ ಪ್ರೀಮಿಯಂ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ದರ ಕಡಿತಗೊಳಿಸಲಾಗಿಲ್ಲ. ಬದಲಾಗಿ ವೆಸ್ಪಾ ಸ್ಕೂಟರ್ ಕೆಲವು ಘಟಕಗಳ ಉತ್ಪಾದನೆಯನ್ನು ಸ್ಥಳೀಯವಾಗಿರಿಸಿದ್ದರಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಇದರ ಪ್ರಯೋಜನ ಗ್ರಾಹಕರು ಪಡೆಯಬಹುದಾಗಿದೆ.

2012ನೇ ಸಾಲಿನಲ್ಲಿ ಬಿಡುಗಡೆಗೊಂಡಿದ್ದ ವೆಸ್ಪಾ ಆವೃತ್ತಿಯ ಮಾರಾಟ ಈಗಾಗಲೇ 25 ಸಾವಿರದ ಗಡಿ ದಾಟಿದೆ. ಇದರ 124 ಸಿಸಿ ಎಂಜಿನ್ 10,500 ಆರ್‌ಪಿಎಂನಲ್ಲಿ 10.8 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ದರ ಕಡಿತದೊಂದಿಗೆ ಸುಜುಕಿ ಸ್ಕೂಟರ್‌ಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, January 9, 2013, 16:16 [IST]
English summary
Piaggio has announced a huge price cut of its premium lifestyle scooter- Vespa LX 125. This is the second time the Vespa's price has been cut in recent months. The Vespa LX 125's price has been cut by an incredible Rs.7,000. The Vespa will now be available with a price tag of Rs.59,990 (ex showroom, Pune).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+