ಭಾರತಕ್ಕೆ ಎನ್‌ಫೀಲ್ಡ್ ಕೆಫೆ ರೇಸರ್, 250 ಸಿಸಿ ಬೈಕ್
ಕ್ರೂಸರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್, ಭಾರತಕ್ಕೆ ಎರಡು ನೂತನ ಬೈಕ್‌ಗಳನ್ನು ಪರಿಚಯಿಸಲಿದೆ. ಈ ಪೈಕಿ 250 ಸಿಸಿ ಮೋಟಾರ್ ಸೈಕಲ್ ಆಗಮನ ಇನ್ನು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಎದುರಾಗಿರುವುದನ್ನು ಮನಗಂಡಿರುವ ಎನ್‌ಫೀಲ್ಡ್ ಎಚ್ಚರಿಕೆಯ ನಡೆ ಮುಂದುವರಿಸುವ ಸಾಧ್ಯತೆಯಿದೆ. ಜಪಾನ್ ವಾಹನ ತಯಾರಕರಾದ ಹೋಂಡಾ, ಸುಜುಕಿ ಹಾಗೂ ಯಮಹಾ ಕಂಪನಿಗಳಿಂದ 250 ಸಿಸಿ ವಿಭಾಗಗಳಲ್ಲಿ ನಿಕಟ ಪೈಪೋಟಿ ಎದುರಾಗುತ್ತಿದೆ.
ರಾಯಲ್ ಎನ್‌ಫೀಲ್ಡ್ 250ಸಿಸಿ ಬೈಕ್, ಬಜಾಜ್ ಅವೆಂಜರ್ 220 ಡಿಟಿಎಸ್-ಐ ಹಾಗೂ ಹೋಂಡಾ ಸಿಬಿಆರ್250ಆರ್ ಮಾದರಿಗಳಿಗೆ ಸೆಡ್ಡು ನೀಡುವ ನಿರೀಕ್ಷೆಯಿತ್ತು. ಆದರೆ ಬಿಡುಗಡೆ ಇನ್ನು ಅಧಿಕೃತಗೊಂಡಿಲ್ಲ.
ಮತ್ತೊಂದೆಡೆ ಕೆಫೆ ರೇಸರ್ ಅಭಿವೃದ್ಧಿಯಲ್ಲಿ ತೊಡಗಿರುವ ಎನ್‌ಫೀಲ್ಡ್, 2013 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ. ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535 ಸಿಸಿ ಯುಸಿಇ ಪವರ್ ಮಿಲ್ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ.
ಇನ್ನು ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಯಶಸ್ವಿಯಾದ್ದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಎಲ್ಲ ಸಾಧ್ಯತೆಗಳಿವೆ.


Click it and Unblock the Notifications
