ಇದೀಗ ಅಧಿಕೃತ; ಟ್ರಯಂಪ್ 'ಮೇಡ್ ಇನ್ ಇಂಡಿಯಾ'
ಬಹುಶ: ಕಳೆದ 71 ವರ್ಷಗಳ ಮಿಲಾನ್ ಮೋಟಾರ್ ಸೈಕಲ್ ಶೋ ಚರಿತ್ರೆಯಲ್ಲೇ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಇಷ್ಟೊಂದು ಪ್ರಾಮುಖ್ಯತೆ ಕೊಡಲಾಗುತ್ತಿರಬಹುದು. ಹೌದು, ಹರ್ಲಿ ಡೇವಿಡ್ಸನ್ ಸ್ಟ್ರೀಟ್ ಸಿರೀಸ್ ಬೆನ್ನಲ್ಲೇ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟ್ರಯಂಪ್ ಸಹ 'ಮೇಡ್ ಇನ್ ಇಂಡಿಯಾ' ಬೈಕ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ.
ಇನ್ನೊಂದೆಡೆ ಕೆಟಿಎಂ ಆರ್‌ಸಿ ಸೂಪರ್ ಸ್ಪೋರ್ಟ್ ಸಿರೀಸ್ ಮತ್ತು ಹೋಂಡಾ ಸಿಬಿಆರ್300ಆರ್ ಆಗಮನವಾಗುತ್ತಿರುವಂತೆಯೇ ಟ್ರಯಂಪ್ ಸುದ್ದಿಯು ಬೈಕ್ ಪ್ರೇಮಿಗಳಲ್ಲಿ ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ.

ಪ್ರತಿಷ್ಠಿತ ಇಐಸಿಎಂಎ ಆಟೋ ಶೋದಲ್ಲಿ ಡೇಟೋನಾ 250 ಬೈಕ್ ಪ್ರದರ್ಶನಗೊಳಿಸಿರುವ ಬ್ರಿಟನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಸದ್ಯದಲ್ಲೇ ಇದನ್ನು ಭಾರತಕ್ಕೆ ಪರಿಚಯಿಸುವುದಾಗಿ ತಿಳಿಸಿದೆ.
ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಇದರ ಜಾಗತಿಕ ವಿತರಣೆ 2015ರಲ್ಲಿ ನಡೆಯಲಿದೆ. ಆದರೆ ಮಹತ್ವದ ವಿಚಾರವೆಂದರೆ ಭಾರತದ ಘಟಕದಲ್ಲಿ ಟ್ರಯಂಪ್ ಬೈಕ್ ಉತ್ಪಾದನೆಯಾಗಲಿದೆ.


Click it and Unblock the Notifications








