ಟಿವಿಎಸ್-ಬಿಎಂಡಬ್ಲ್ಯು ಪಾಲುದಾರಿಕೆಯಲ್ಲಿ 500ಸಿಸಿ ಬೈಕ್
ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಎರಡು ಪ್ರಮುಖ ದ್ವಿಚಕ್ರ ಉತ್ಪಾದಕ ಕಂಪನಿಗಳು ಸದ್ಯದಲ್ಲೇ ನೂತನ 500ಸಿಸಿ ಬೈಕ್‌ಗಳನ್ನು ಅಭಿವೃದ್ದಿಪಡಿಸಲಿದೆ. ಹೌದು, ದೇಶದ ನಾಲ್ಕನೇ ಅತಿದೊಡ್ಡ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಸಂಸ್ಥೆಯು, ಯುರೋಪ್‌ನ ಎರಡನೇ ಅತಿದೊಡ್ಡ ದ್ವಿಚಕ್ರ ಉತ್ಪಾದಕರಾದ ಬಿಎಂಡಬ್ಲ್ಯು ಮೆಟೊರಾಡ್ ಪಾಲುದಾರಿಕೆಯೊಂದಿಗೆ ನೂತನ ಬೈಕ್ ಅಭಿವೃದ್ಧಿಪಡಿಸಲಿದೆ.
ಒಪ್ಪಂದ ಪ್ರಕಾರ ಎರಡು ಕಂಪನಿಗಳು 500ಸಿಸಿ ಹಾಗೂ ಸಬ್ 500ಸಿಸಿ ವಿಭಾಗದ ಬೈಕ್‌ಗಳನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದಕ್ಕಾಗಿ ಟಿವಿಎಸ್‌ಗೆ ಬಿಎಂಡಬ್ಲ್ಯು ತಾಂತ್ರಿಕ ತಜ್ಞರು ನೆರವು ಮಾಡಲಿದ್ದಾರೆ. ಈ ಮೂಲಕ ದೇಶದಲ್ಲಿ ಮಾರುಕಟ್ಟೆ ಕುದುರಿಸುವ ಇರಾದೆಯನ್ನು ಬಿಎಂಡಬ್ಲ್ಯು ಹೊಂದಿದೆ.
ಈ ವರೆಗೆ ಬಿಎಂಡಬ್ಲ್ಯು ಹೈ ಎಂಡ್ ಬೈಕ್‌ಗಳನ್ನು ಭಾರತಕ್ಕೆ ರಫ್ತು ಆಗುತ್ತಿದ್ದವು. ಆದರೆ ಹೊಸ ಪಾಲುದಾರಿಕೆಯೊಂದಿಗೆ ದೇಶದ ಮಾರುಕಟ್ಟೆಯಲ್ಲಿ ಇನ್ನಷ್ಟು ಆಕರ್ಷಕ ಬೈಕ್‌ಗಳ ಪಾದಾರ್ಪಣೆಯಾಗಲಿದೆ.
ಜಾಗತಿಕವಾಗಿ ಏಳನೇ ಅತಿದೊಡ್ಡ ವಾಹನ ಮಾರುಕಟ್ಟೆ ಹೊಂದಿರುವ ಭಾರತದತ್ತ ವಿಶ್ವದ ಮುಂಚೂಣಿಯ ಕಂಪನಿಗಳು ದೀರ್ಘಾವಧಿಯ ಯೋಜನೆಯನ್ನು ಹೊಂದಿದೆ. ಈ ಮೂಲಕ ಮಾರಾಟ ಪ್ರಗತಿ ಸಾಧಿಸುವತ್ತ ಕಣ್ಣಾಯಿಸಿದೆ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ


Click it and Unblock the Notifications









