ಯಮಹಾ 125 ಸಿಸಿ ಸ್ಕೂಟರ್; ನಿಮ್ಮ ನಿರೀಕ್ಷೆ ಏನು?
ದೇಶದ ಮಾರುಕಟ್ಟೆಯಲ್ಲಿ ಸ್ಕೂಟರ್ ಸೆಗ್ಮೆಂಟ್‌ಗಳನ್ನು ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿರುವ ಯಮಹಾ ಸದ್ಯದಲ್ಲೇ 125 ಸಿಸಿ ಸ್ಕೂಟರನ್ನು ಬಿಡುಗಡೆಗೊಳಿಸಲಿದೆ.
ಬಲ್ಲ ಮೂಲಗಳ ಪ್ರಕಾರ ಯಮಹಾ ರೇ ಸ್ಕೂಟರ್ ಆಟೋಮ್ಯಾಟಿಕ್ ತಂತ್ರಜ್ಞಾನ ಹೊಂದಿರಲಿದೆ. ಹಾಗೆಯೇ ಇದರ ದೆಹಲಿ ಎಕ್ಸ್ ಶೋರೂಂ ದರವು 50 ಸಾವಿರ ಅಸುಪಾಸಿನಲ್ಲಿರಲಿದೆ.
ಪ್ರಸ್ತುತ ರೇ ಸ್ಕೂಟರ್ 113ಸಿಸಿ ಏರ್-ಕೂಲ್ಡ್, 2 ವಾಲ್ವೆ, ಎಸ್‌ಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 62 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಪ್ರಮುಖವಾಗಿಯೂ ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿರುವ ಹೀರೊದ ಎವಿಯೇಟರ್, ಆಕ್ಟಿವಾ ಹಾಗೂ ಡಿಯೊ ಸ್ಕೂಟರ್‌ಗಳ ಪ್ರಬಲ ಪೈಪೋಟಿ ನೀಡಲು ಗುರಿಯಾಗಿರಿಸಿಕೊಳ್ಳಲಾಗುವುದು. ಅಂದ ಹಾಗೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 2013ರ ಮಧ್ಯಂತರ ಅವಧಿಯಲ್ಲಿ ಯಮಹಾದಿಂದ ಮತ್ತೊಂದು ಸ್ಕೂಟರ್ ಲೋಕಾರ್ಪಣೆಯಾಗಲಿದೆ.


Click it and Unblock the Notifications









