2014 ಹೀರೊ ಗ್ಲಾಮರ್ ಗ್ಲಾಮರಸ್ ಲಾಂಚ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಗ್ಲಾಮರ್ ಆವೃತ್ತಿಯ ಪರಿಷ್ಕೃತ ವರ್ಷನ್ ಲಾಂಚ್ ಮಾಡಿದೆ. ನೂತನ 2014 ಹೀರೊ ಗ್ಲಾಮರ್ ದೆಹಲಿ ಎಕ್ಸ್ ಶೋ ರೂಂ ಬೆಲೆ 53,375 ರು.ಗಳಾಗಿರಲಿದೆ.
ಇವನ್ನೂ ಓದಿ: ಲೆಟ್ಸ್ ಸ್ಕೂಟರ್ ಲಾಂಚ್
ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೈಕ್‌ಗಳಿಗೆ ಅತಿ ಹೆಚ್ಚು ಬೇಡಿಕೆ ಇರುವ ಹಿನ್ನಲೆಯಲ್ಲಿ, ಸ್ವತ: ಬೈಕ್ ಪ್ರೇಮಿಯೂ ಆಗಿರುವ ನಿಮ್ಮಲ್ಲಿ ನೂತನ 2014 ಹೀರೊ ಗ್ಲಾಮರ್ ವರ್ಷನ್‌ನಲ್ಲಿ ಏನೆಲ್ಲ ವೈಶಿಷ್ಟ್ಯಗಳಿವೆ ಎಂಬುದನ್ನು ತಿಳಿಯುವ ಕುತೂಹಲವಿರಬಹುದು. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಅಪ್‌ಗ್ರೇಡ್
ನೂತನ ಹೀರೊ 2014 ಗ್ಲಾಮರ್ ಆವೃತ್ತಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಇದರಲ್ಲಿ ಬಾಡಿ ಗ್ರಾಫಿಕ್ಸ್ ಜತೆಗೆ ಹೆಡ್‌ಲ್ಯಾಂಪ್ ಹಾಗೂ ಟೈಲ್ ಲ್ಯಾಂಪ್ ಸ್ಟೈಲ್ ಪ್ರಮುಖವಾಗಿದೆ.

ಗ್ಲಾಮರಸ್ ಬಣ್ಣಗಳು
ನೂತನ ಗ್ಲಾಮರಸ್ ಐದು ಹೊಸ ಬಣ್ಣಗಳಲ್ಲಿ ಆಗಮನವಾಗಲಿದೆ. ಅವುಗಳೆಂದರೆ
ಬ್ಲ್ಯಾಕ್,
ರೆಡ್
ಸಿಲ್ವರ್,
ಬ್ಲ್ಯಾಕ್ ಬ್ಲೂ,
ಬ್ಲ್ಯಾಕ್ ಗ್ರೇ

ಎಂಜಿನ್, ಟ್ರಾನ್ಸ್‌ಮಿಷನ್
ಹಾಗಿದ್ದರೂ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 124.7 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 9 ಬಿಎಚ್‌ಪಿ ಪವರ್ (10.35 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ಮೈಲೇಜ್
2014 ಹೀರೊ ಗ್ಲಾಮರ್ ಇಂಧನ ಕ್ಷಮತೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಆದರೆ ಹಿಂದಿನ ಫ್ಯೂಯಲ್ ಇಂಜೆಕ್ಟಡ್ ಮಾದರಿಯು ಪ್ರತಿ ಲೀಟರ್‌ಗೆ 70 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿತ್ತು. ಇದು 13.6 ಲೀಟರ್ ಇಂಧನ ಟ್ಯಾಂಕ್ ಸಹ ಪಡೆದುಕೊಂಡಿತ್ತು.

ವಿಶಿಷ್ಟತೆ
ನೂತನ 2014 ಹೀರೊ ಗ್ಲಾಮರ್, ಅನಾಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಲಿದ್ದು, ಓಡೋಮೀಟರ್, ಫ್ಯೂಯಲ್ ಗೇಜ್ ಜತೆಗೆ ಇಂಧನ ಕ್ಷಮತೆ ಮೀಟರ್ ಎಲ್ಲವೂ ಡಿಜಿಟಲ್‌ಮಯವಾಗಲಿದೆ.

ಸಸ್ಪೆಷನ್
ಮುಂದುಗಡೆ ಟೆಲಿಸ್ಕಾಪಿಕ್ ಸಸ್ಫೆಷನ್ ಇರಲಿದ್ದು, ಹಿಂದುಗಡೆ ಫೈವ್ ಸ್ಟೆಪ್ ಹೊಂದಾಣಿಸಬಹುದಾದ ಶಾಕ್ ಅಬ್ಸಾರ್ಬರ್ ಇರಲಿದೆ.

ಬ್ರೇಕ್
ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಐಚ್ಛಿಕವಾಗಿರಲಿದೆ. ಹಿಂದುಗಡೆ ಸಹ 130 ಎಂಎಂ ಡಿಸ್ಕ್ ಬ್ರೇಕ್ ಪಡೆಯಲಿದೆ.

ದರ ಮಾಹಿತಿ
ಗ್ಲಾಮರ್ (ಕಾರ್ಬ್ಯೂರೇಟರ್) - ರು. 53,375 (ಡ್ರಮ್), ರು. 55,375 (ಡಿಸ್ಕ್)
ಗ್ಲಾಮರ್ ಎಫ್‌ಐ (ಫ್ಯೂಯಲ್ ಇಂಜೆಕ್ಷನ್) - ರು. 58,700 (ಡ್ರಮ್), ರು. 62,750 (ಡಿಸ್ಕ್)


Click it and Unblock the Notifications








