ದೇಶದ ಶ್ರೇಷ್ಠ 125 ಸಿಸಿ ಮೈಲೇಜ್ ಬೈಕ್‌ಗಳು

Written By:

125 ಸಿಸಿ ಬೈಕ್‌ಗಳು ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವ ದ್ವಿಚಕ್ರ ವಾಹನಗಳ ವಿಭಾಗಕ್ಕೆ ಸೇರಿದ್ದಾಗಿವೆ. ಎಂಟ್ರಿ ಲೆವೆಲ್ ಹಾಗೂ ನಿರ್ವಹಣಾ ಸೆಗ್ಮೆಂಟ್ ದ್ವಿಚಕ್ರ ವಾಹನಗಳ ನಡುವೆ ಗುರುತಿಸಿಕೊಂಡಿರುವ 125 ಸಿಸಿ ಬೈಕ್‌ಗಳು, ದರದ ವಿಚಾರದಲ್ಲೂ ಗ್ರಾಹಕರ ಕೈಗೆಟಕುತ್ತದೆ. ಸುಲಭವಾಗಿ ಹೇಳಬೇಕೆಂದರೆ ಮೈಲೇಜ್ ಜತೆಗೆ ನಿರ್ವಹಣಾ ಬೈಕ್‌ಗಳ ನಡುವಣ ಸಮತೋಲನ ಕಾಪಾಡಿಕೊಂಡಿದೆ.

ದೇಶದ ಅಗ್ರ 125 ಸಿಸಿ ಸ್ಕೂಟರುಗಳು

ನಿರ್ವಹಣೆ, ಇಂಧನ ದಕ್ಷತೆ ಹಾಗೂ ವಿನ್ಯಾಸದ ವಿಚಾರದಲ್ಲಿ 125 ಸಿಸಿ ಬೈಕ್‌ಗಳು ದೇಶದ ದ್ವಿಚಕ್ರ ಪ್ರಯಾಣಿಕರಿಗೆ ಗರಿಷ್ಠ ಅನುಭವವನ್ನು ನೀಡುತ್ತದೆ. 110ಸಿಸಿಗಳಂತೆಯೇ 125 ಸಿಸಿ ವಿಭಾಗದ ಬೈಕ್‌ಗಳು ಸಹ ತನ್ನದೇ ಆದ ಪ್ಲಸ್ ಹಾಗೂ ಮೈನಸ್ ಪಾಯಿಂಟ್‌ಗಳನ್ನು ಹೊಂದಿದೆ. ಈ ಪೈಕಿ ಹೋಂಡಾ ಸಿಬಿ ಶೈನ್, ಬಜಾಜ್ 125ಎಂ, ಹೀರೊ ಗ್ಲಾಮರ್ ಎಫ್‌ಐ, ಟಿವಿಎಸ್ ಫೀನಿಕ್ಸ್, ಯಮಹಾ ಎಸ್‌ಎಸ್ ಮತ್ತು ಸುಜುಕಿ ಸ್ಲಿಂಗ್ ಶಾಟ್ ಬೈಕ್‌ಗಳು ಪ್ರಮುಖವಾಗಿದೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ವಿಸ್ತಾರವಾಗಿ ಚರ್ಚಿಸೋಣವೇ...

ದೇಶದ ಶ್ರೇಷ್ಠ 125 ಸಿಸಿ ಬೈಕ್‌ಗಳು

ಮುಂದಿನ ಒಂದೊಂದೇ ಸ್ಲೈಡರ್ ಮುಖಾಂತರ ದೇಶದ ಅತ್ಯುತ್ತಮ 125 ಸಿಸಿ ಬೈಕ್‌ಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಡೆಯೋಣ. ಹಾಗೆಯೇ ಈ ಎಲ್ಲ ಬೈಕ್‌ಗಳಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ತಿಳಿದುಕೊಳ್ಳಲು ಮರೆಯದಿರಿ...

ಹೋಂಡಾ ಸಿಬಿ ಶೈನ್

ಹೋಂಡಾ ಸಿಬಿ ಶೈನ್

125 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾದ ಬೈಕ್‌ಗಳಲ್ಲಿ ಹೋಂಡಾ ಸಿಬಿ ಶೈನ್ ಒಂದಾಗಿದೆ. ಸಿಬಿಎಫ್ ಸ್ಟನ್ನರ್‌ಗೆ ಹೋಲಿಸಿದರೆ ಎರಡು ವಿಚಾರಗಳಲ್ಲಿ ಸಿಬಿ ಶೈನ್ ಮಾದರಿಯನ್ನು ಪ್ರತ್ಯೇಕಿಸಬಹುದಾಗಿದೆ. ಸಿಬಿಎಫ್ ಸ್ಟನ್ನರ್ ಸ್ಟೈಲ್ ಹಾಗೂ ನಿರ್ವಹಣೆಗೆ ಹೆಚ್ಚು ಒತ್ತು ಕೊಡುವುದರಿಂದ ಇದು ಎಲ್ಲರಿಗೂ ಹೇಳಿ ಮಾಡಿಸಿದಂತಿಲ್ಲ. ಇನ್ನೊಂದೆಡೆ ಸಿಬಿ ಶೈನ್, ಈ ಎಲ್ಲ ಕೊರತೆಗಳನ್ನು ನೀಗಿಸುತ್ತದೆ. ಇದರ ನಯವಾದ ಹಾಗೂ ಸುಧಾರಿತ ಎಂಜಿನ್ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ನೀವು 30 ಲಕ್ಷದಷ್ಟು ಸಿಬಿ ಶೈನ್ ಮಾಲಿಕರ ವಿರುದ್ಧ ತಗಾದೆ ಎತ್ತುವಂತಿಲ್ಲ. ಇದೇ ಕಾರಣಕ್ಕಾಗಿ ದೇಶದ ನಂ.1 125 ಸಿಸಿ ಬೈಕ್ ಎನಿಸಿಕೊಂಡಿದೆ.

ಹೋಂಡಾ ಸಿಬಿ ಶೈನ್

ಹೋಂಡಾ ಸಿಬಿ ಶೈನ್

 • ಎಂಜಿನ್: 124.7ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್
 • ಪವರ್: 10.12 ಅಶ್ವಶಕ್ತಿ (7500 ಆರ್‌ಪಿಎಂ)
 • ಟಾರ್ಕ್: 10.54 ಎನ್‌ಎಂ (5500 ಆರ್‌ಪಿಎಂ)
 • ಗೇರ್ ಬಾಕ್ಸ್: 4 ಸ್ಪೀಡ್ (N-1-2-3-4)
 • ಮೈಲೇಜ್: ಪ್ರತಿ ಲೀಟರ್‌ಗೆ 65 ಕೀ.ಮೀ.
 • ಇಂಧನ ಟ್ಯಾಂಕ್: 10.5 ಲೀಟರ್
 • ಭಾರ: 120 ಕೆ.ಜಿ.
 • ಬೆಲೆ: 52,063 - 59,248 ರು. (ಆನ್ ರೋಡ್ ದೆಹಲಿ)
ಬಜಾಜ್ ಡಿಸ್ಕವರ್ 125ಎಂ

ಬಜಾಜ್ ಡಿಸ್ಕವರ್ 125ಎಂ

ಬಜಾಜ್ ಸಾಲಿನ ಬೈಕ್‌ಗಳ ಪೈಕಿ ಹೊಚ್ಚ ಹೊಸದಾಗಿರುವ ಡಿಸ್ಕವರ್ 125ಎಂ, ಸಂಪೂರ್ಣ ಹೊಸ ನೋಟ ಪಡೆದುಕೊಂಡಿದೆ. ಇದು ಡಿಸ್ಕವರ್ ಫ್ಯಾಮಿಲಿಗೆ ಸೇರ್ಪಡೆಯಾದ ಸಾಮಾನ್ಯ ಬೈಕಲ್ಲ. ಇದು ತನ್ನಿತರ ಡಿಸ್ಕವರ್ ಬೈಕ್‌ಗಳಿಗಿಂತ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿದೆ. ಅಷ್ಟೇ ಯಾಕೆ 125 ಸಿಸಿ ವಿಭಾಗದಲ್ಲಿ ಕಾಣಿಸಿಕೊಂಡಿರುವ ಅತ್ಯಂತ ಕಡಿಮೆ ಬೆಲೆಯ ಬೈಕಾಗಿದೆ. ಅಂದರೆ ನಿಮಗೆ ಬೆಲೆಗೆ ತಕ್ಕ ಮೌಲ್ಯ ಸಿಗುವುದು ಗ್ಯಾರಂಟಿ. ಹಾಗೆಯೇ ಸ್ಟೈಲಿಷ್ ಲುಕ್ ಜತೆಗೆ ಹಿಂದುಗಡೆಯ ಗ್ಯಾಸ್ ಚಾರ್ಜ್ಡ್ ರಿಯರ್ ಶಾಕ್ ಇದರ ಪ್ಲಸ್ ಪಾಯಿಂಟ್ ಆಗಿರುತ್ತದೆ.

ಬಜಾಜ್ ಡಿಸ್ಕವರ್ 125ಎಂ

ಬಜಾಜ್ ಡಿಸ್ಕವರ್ 125ಎಂ

 • ಎಂಜಿನ್: 124.6ಸಿಸಿ, ಸಿಂಗಲ್ ಸಿಲಿಂಡರ್, 4 ವಾಲ್ವೆ, ಡಿಟಿಎಸ್-ಐ ಜತೆಗೆ ಎಕ್ಸಾಸ್ಟ್‌ಟೆಕ್
 • ಪವರ್: 11.5 ಅಶ್ವಶಕ್ತಿ (8000 ಆರ್‌ಪಿಎಂ)
 • ಟಾರ್ಕ್: 10.8 ಎನ್‌ಎಂ (6000 ಆರ್‌ಪಿಎಂ)
 • ಗೇರ್ ಬಾಕ್ಸ್: 4 ಸ್ಪೀಡ್ (1-N-2-3-4)
 • ಮೈಲೇಜ್: ಪ್ರತಿ ಲೀಟರ್‌ಗೆ 76 ಕೀ.ಮೀ.
 • ಇಂಧನ ಟ್ಯಾಂಕ್: 9.5 ಲೀಟರ್
 • ಭಾರ: 118 ಕೆ.ಜಿ.
 • ಬೆಲೆ: 48,500 - 50,499 ರು. (ಎಕ್ಸ್ ಶೋ ರೂಂ ದೆಹಲಿ)
ಹೀರೊ ಗ್ಲಾಮರ್ ಎಫ್‌ಐ

ಹೀರೊ ಗ್ಲಾಮರ್ ಎಫ್‌ಐ

ನಿಜಕ್ಕೂ ಸ್ಟೈಲ್ ವಿಚಾರದಲ್ಲಿ, ಈ ಸೆಗ್ಮೆಂಟ್‌ನಲ್ಲಿ ಹೀರೊ ಗ್ಲಾಮರ್ ಸರಿಸಾಟಿ ಯಾರೂ ಇರಲಾರದು ಎಂದೇ ವ್ಯಾಖ್ಯಾನಿಸಬಹುದು. ಆದರೆ ಎಲ್ಲ ವಿಭಾಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ಗ್ಲಾಮರ್ ವೈಫಲ್ಯ ಅನುಭವಿಸಿದೆ. ನಿಸ್ಸಂಶವಾಗಿಯೂ 125 ಸಿಸಿ ವಿಭಾಗದ ಬೈಕ್‌ಗಳ ಪೈಕಿ ಗ್ಲಾಮರ್ ಅತಿ ದುಬಾರಿಯೆನಿಸಿದೆ. ಹಾಗಿದ್ದರೂ ಇದರ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಗರಿಷ್ಠ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

 ಹೀರೊ ಗ್ಲಾಮರ್ ಎಫ್‌ಐ

ಹೀರೊ ಗ್ಲಾಮರ್ ಎಫ್‌ಐ

 • ಎಂಜಿನ್: ಫ್ಯೂಯಲ್ ಇಂಜೆಕ್ಟಡ್, 124.8 ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್ ಎಚ್‌ಒಎಚ್‌ಸಿ
 • ಪವರ್: 9.1 ಅಶ್ವಶಕ್ತಿ (7000 ಆರ್‌ಪಿಎಂ)
 • ಟಾರ್ಕ್: 10.35 ಎನ್‌ಎಂ (4000 ಆರ್‌ಪಿಎಂ)
 • ಗೇರ್ ಬಾಕ್ಸ್: 4 ಸ್ಪೀಡ್ (N-1-2-3-4)
 • ಮೈಲೇಜ್: ಪ್ರತಿ ಲೀಟರ್‌ಗೆ 81.1 ಕೀ.ಮೀ.
 • ಇಂಧನ ಟ್ಯಾಂಕ್: 12 ಲೀಟರ್
 • ಭಾರ: 129 ಕೆ.ಜಿ.
 • ಬೆಲೆ: 58,700 - 62,750 ರು.
ಟಿವಿಎಸ್ ಫೀನಿಕ್ಸ್ 125

ಟಿವಿಎಸ್ ಫೀನಿಕ್ಸ್ 125

ಟಿವಿಎಸ್ ಪ್ರಕಾರ ಫೀನಿಕ್ಸ್ 125 ಒಂದು ಪ್ರೀಮಿಯಂ ಬೈಕಾಗಿದೆ. ಇಲ್ಲಿ ಪ್ರೀಮಿಯಂ ಅಂದರೆ ಅಪಾಚಿಯಿಂದ ಸ್ಪೂರ್ತಿ ಪಡೆದ ಎಲ್‌ಇಡಿ ಗೈಡ್ ಲ್ಯಾಂಪ್ ಹಾಗೂ ಎಲ್ಲ ಹೊಸತನದಿಂದ ಕೂಡಿದ ಸ್ಪೀಡೋಮೀಟರ್ ಆಳವಡಿಸಲಾಗಿದೆ. ಅಲ್ಲದೆ ಕಣ್ಣು ಕುಕ್ಕುವ ಬಾಡಿ ಗ್ರಾಫಿಕ್ಸ್ ಜತೆಗೆ ಸಮಕಾಲೀನ ವಿನ್ಯಾಸ ಕಾಪಾಡಿಕೊಂಡಿದೆ. ಇದರ ನಯವಾದ ಎಂಜಿನ್, ವಿಶ್ವಾಸಾರ್ಹತೆ ಹಾಗೂ ಅತ್ಯುತ್ತಮ ಮೈಲೇಜ್ ನೀಡಲಿದೆ.

ಟಿವಿಎಸ್ ಫೀನಿಕ್ಸ್ 125

ಟಿವಿಎಸ್ ಫೀನಿಕ್ಸ್ 125

 • ಎಂಜಿನ್: 124.5 ಸಿಸಿ ಇಕೊ ಥ್ರಸ್ಟ್ ಎಂಜಿನ್
 • ಪವರ್: 11 ಅಶ್ವಶಕ್ತಿ (8000 ಆರ್‌ಪಿಎಂ)
 • ಟಾರ್ಕ್: 10.8 ಎನ್‌ಎಂ (6000 ಆರ್‌ಪಿಎಂ)
 • ಗೇರ್ ಬಾಕ್ಸ್: 4 ಸ್ಪೀಡ್ (N-1-2-3-4)
 • ಮೈಲೇಜ್: ಪ್ರತಿ ಲೀಟರ್‌ಗೆ 67 ಕೀ.ಮೀ.
 • ಇಂಧನ ಟ್ಯಾಂಕ್: 12 ಲೀಟರ್
 • ಭಾರ: 116 ಕೆ.ಜಿ.
 • ಬೆಲೆ: 49,850 - 52190 ರು.
ಯಮಹಾ ಎಸ್‌ಎಸ್ 125

ಯಮಹಾ ಎಸ್‌ಎಸ್ 125

ಯಮಹಾ ನಿರ್ವಹಣಾ ಬೈಕ್‌ಗಳನ್ನು ಓಡಿಸಿದವರಿಗೆ ಎಸ್‌ಎಸ್ 125 ನೋಡಿದಾಗ ಅದೇ ಆಕರ್ಷಣೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದೆಯೇ ಎಂಬ ಸಂಶಯ ಮೂಡಬಹುದು. ಇದು ಹಿಂದೆ ಆರ್‌ಎಕ್ಸ್ ಸಿರೀಸ್ ಬೈಕ್ ಹೊಂದಿದವರಿಗೆ ಸರಿಯಾಗಿ ನೆನಪಿಗೆ ಬರಬಹುದು. ಹಾಗಿದ್ದರೂ 5 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಸಣ್ಣ ಗೇರ್ ಅನುಪಾತದ ಮೂಲಕ ಕ್ರೀಡಾತ್ಮಕ ನಿರ್ವಹಣೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದೆ. ಇದು ಇಂಧನ ಕ್ಷಮತೆಗೆ ಯಾವುದೇ ಧಕ್ಕೆಯನ್ನುಂಟು ಮಾಡದೇ ನಗರ ಪ್ರದೇಶದಲ್ಲೂ ತ್ವರಿತ ವೇಗವರ್ಧನೆ ನೀಡಲಿದೆ.

ಯಮಹಾ ಎಸ್‌ಎಸ್ 125

ಯಮಹಾ ಎಸ್‌ಎಸ್ 125

 • ಎಂಜಿನ್: 123 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ
 • ಪವರ್: 11 ಅಶ್ವಶಕ್ತಿ (7500 ಆರ್‌ಪಿಎಂ)
 • ಟಾರ್ಕ್: 10.4 ಎನ್‌ಎಂ (6500 ಆರ್‌ಪಿಎಂ)
 • ಗೇರ್ ಬಾಕ್ಸ್: 5 ಸ್ಪೀಡ್ (1-N-2-3-4-5)
 • ಮೈಲೇಜ್: ಪ್ರತಿ ಲೀಟರ್‌ಗೆ 75 ಕೀ.ಮೀ.
 • ಇಂಧನ ಟ್ಯಾಂಕ್: 13.6 ಲೀಟರ್
 • ಭಾರ: 125 ಕೆ.ಜಿ.
 • ಬೆಲೆ: 47,100 - 54,642 ರು.
ಸುಜುಕಿ ಸ್ಲಿಂಗ್‌ಶಾಟ್ ಪ್ಲಸ್ 125

ಸುಜುಕಿ ಸ್ಲಿಂಗ್‌ಶಾಟ್ ಪ್ಲಸ್ 125

ಸ್ಲಿಂಗ್‌ಶಾಟ್ ಮುಖಾಂತರ ಉತ್ತಮ ಮಾದರಿಯನ್ನು ಪರಿಚಯಿಸಿರುವ ಹೊರತಾಗಿಯೂ 125 ಸಿಸಿ ವಿಭಾಗದಲ್ಲಿ ನಿರೀಕ್ಷೆ ಮಾಡಿದಷ್ಟು ಯಶ ಸಾಧಿಸುವಲ್ಲಿ ಸುಜುಕಿ ವಿಫಲವಾಗಿದೆ. ಇದರ ಸುಧಾರಿತ ಎಂಜಿನ್ ನಯವಾಗಿ ಗೇರ್ ಬದಲಾಯಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಗೇರ್ ಬದಲಾವಣೆ ತೋರಿಸುವ ಇಂಡಿಕೇಟರ್ ಇನ್ನಷ್ಟು ಉಪಯುಕ್ತವೆನಿಸುತ್ತಿದೆ. ಇದು ಸ್ಟೈಲಿಷ್ ಹಾಗೂ ಕ್ರೀಡಾ ವಿನ್ಯಾಸ, ಗೂಡಿನಂತಹ ಇಂಧನ ಟ್ಯಾಂಕ್ ಜತೆಗೆ ಪ್ರತ್ಯೇಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ. ಆದರೆ ತನ್ನ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ನಿರ್ವಹಣೆಯ ಕೊರತೆ ಅನುಭವಿಸುತ್ತದೆ.

ಸುಜುಕಿ ಸ್ಲಿಂಗ್‌ಶಾಟ್ ಪ್ಲಸ್ 125

ಸುಜುಕಿ ಸ್ಲಿಂಗ್‌ಶಾಟ್ ಪ್ಲಸ್ 125

 • ಎಂಜಿನ್: 124 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ
 • ಪವರ್: 8.8 ಅಶ್ವಶಕ್ತಿ (7000 ಆರ್‌ಪಿಎಂ)
 • ಟಾರ್ಕ್: 10 ಎನ್‌ಎಂ
 • ಗೇರ್ ಬಾಕ್ಸ್: 5 ಸ್ಪೀಡ್ (1-N-2-3-4-5)
 • ಮೈಲೇಜ್: ಪ್ರತಿ ಲೀಟರ್‌ಗೆ 75 ಕೀ.ಮೀ.
 • ಇಂಧನ ಟ್ಯಾಂಕ್: 12 ಲೀಟರ್
 • ಭಾರ: 129 ಕೆ.ಜಿ.
 • ಬೆಲೆ: 56,352 - 58,077 ರು.
ಅಂತಿಮ ತೀರ್ಪು

ಅಂತಿಮ ತೀರ್ಪು

ಮೇಲೆ ತಿಳಿಸಲಾದ 125 ಸಿಸಿ ಬೈಕ್‌ಗಳು ತನ್ನದೇ ಆದ ವಿಚಾರದಲ್ಲಿ ವಿಶಿಷ್ಟತೆ ಕಾಪಾಡಿಕೊಂಡಿದೆ. ಇವೆಲ್ಲವೂ ಉತ್ತಮ ಇಂಧನ ಕ್ಷಮತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಶೈಲಿಯ ವಿಚಾರದಲ್ಲೂ ಬೇಸರಪಡಿಸುವುದಿಲ್ಲ. ಆದರೆ ಹಣಕ್ಕೆ ತಕ್ಕ ಮೌಲ್ಯ ನೀಡುತ್ತಿರುವ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಡಿಸ್ಕವರ್ 125ಎಂ ಸ್ವಲ್ಪ ಮುನ್ನಡೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.

ಕಾರಣ?

ಸ್ಟೈಲ್ ಹಾಗೂ ಆರಾಮದಾಯಕ ವಿಚಾರದಲ್ಲಿ ಬಜಾಜ್ ಡಿಸ್ಕವರ್ 125ಎಂ ಸಮತೋಲನವನ್ನು ಕಾಪಾಡಿಕೊಂಡಿದೆ. ಇದರ ಅಲಾಯ್ ವೀಲ್, ಸುಂದರ ಟ್ಯಾಂಕ್ ಜತೆಗೆ ಆಕರ್ಷಕ ಬಾಡಿ ಗ್ರಾಫಿಕ್ಸ್ ದೃಶ್ಯ ವಿಸ್ಮಯವಾಗಿರಲಿದೆ. ಅಲ್ಲದೆ ಫ್ಲ್ಯಾಟ್, ವಿಶಾಲ ಹಾಗೂ ನೇರವಾದ ಆಸನ ವ್ಯವಸ್ಥೆಯು ದಣಿವು ರಹಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಅಷ್ಟೇ ಅಲ್ಲದೆ ಡಿಸ್ಕವರ್‌ನಲ್ಲಿರುವ ಆಧುನಿಕ ಎಂಜಿನ್ ಗರಿಷ್ಠ ಮೈಲೇಜ್ ನೀಡುವಲ್ಲಿಯೂ ಸಕ್ಷಮವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಸ್ಮರ್ಧಾತ್ಮಕ ದರಗಳಲ್ಲಿ ಲಭ್ಯವಾಗುತ್ತಿರುವುದು ಬಜಾಜ್ ಡಿಸ್ಕವರ್ 125ಎಂ ಮುನ್ನಡೆಗೆ ಕಾರಣವಾಗಿದೆ.

ಇನ್ನೊಂದೆಡೆ ಎಲ್ಲ ವಿಚಾರದಲ್ಲೂ ಹೋಂಡಾ ಸಿಬಿ ಶೈನ್ ಸಹ ಅಷ್ಟೇ ಮಹತ್ವವನ್ನು ಕಾಪಾಡಿಕೊಂಡಿದೆ. ಆದರೆ ವಿನ್ಯಾಸ ಹಳೆಯದಾಗಿರುವುದು ಹಾಗೂ ಬಜೆಟ್ ದೃಷ್ಟಿಕೋನದಲ್ಲಿ ನಾವಿಲ್ಲಿ ಡಿಸ್ಕವರ್ ಆಯ್ಕೆ ಮಾಡಲು ಪ್ರೇರಣೆಯಾಗಿದೆ. ಇದು ಉದ್ದನೆಯ ಪ್ರಯಾಣಿಕರಿಗೂ ಹೆಚ್ಚು ಆರಾಮದಾಯಕ ರೈಡಿಂಗ್ ಪ್ರದಾನ ಮಾಡಲಿದೆ.

ದೇಶದ ಶ್ರೇಷ್ಠ 125 ಸಿಸಿ ಬೈಕ್‌ಗಳು

ನಮ್ಮ ಈ ಲೇಖನ ನಿಮಗೆ ಇಷ್ಟವಾಯಿತೇ? ಸದ್ಯ ಭಾರತ ಮಾರುಕಟ್ಟೆಯಲ್ಲಿ ಲಭ್ಯವಿರುವ 125 ಸಿಸಿ ಬೈಕ್‌ಗಳ ಅಥವಾ ನಿಮ್ಮ ಬಳಿಯಿರುವ ಬೈಕ್‌ಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮರೆಯದಿರಿ.

English summary
The following is a list of some of the best motorcycles belonging to the 125cc segment, one from each manufacturer.
Story first published: Monday, May 19, 2014, 4:01 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more