BGauss RUV350 Review: ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ವಿಮರ್ಶೆ.. ಹೇಗಿದೆ ಗೊತ್ತಾ?
ಭಾರತದ ಇವಿ (ಎಲೆಕ್ಟ್ರಿಕ್ ವೆಹಿಕಲ್) ಸ್ಟಾರ್ಟ್ಅಪ್ ಬಿಗಾಸ್ (BGauss), ಈಚೆಗೆ ನೂತನ ಆರ್‌ಯುವಿ350 (RUV350 - ರೈಡರ್ಸ್ ಯುಟಿಲಿಟಿ ವೆಹಿಕಲ್) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅನಾವರಣಗೊಳಿಸಿತ್ತು. ಇದು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ದೇಶದ ಯಾವುದೇ ರಸ್ತೆ ಅಥವಾ ಎಂತಹದ್ದೇ ಹವಾಮಾನ ಪರಿಸ್ಥಿತಿಯಲ್ಲಿ ಬೇಕಾದರೂ ಓಡಿಸಲು ಸಾಧ್ಯವಾಗುವಂತೆ ಈ 'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೆಲವೇ ದಿನಗಳ ಹಿಂದೆ, ಪುಣೆಯ ಚಕನ್‌ನಲ್ಲಿ ಹೊಸ ಬಿಗಾಸ್ ಆರ್‌ಯುವಿ350 ಇ-ಸ್ಕೂಟರ್‌ನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ದೊರೆಯಿತು. ಬನ್ನಿ.. ನೂತನ ಸ್ಕೂಟರ್‌ನ ವಿಶೇಷತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ & ವೈಶಿಷ್ಟ್ಯಗಳು: ದೇಶೀಯ ರಸ್ತೆಯಲ್ಲಿ ಪ್ರತಿನಿತ್ಯ ನೋಡಲು ಕಾಣಸಿಗುವ ಸ್ಕೂಟರ್‌ಗಳಿಗೆ ಹೋಲಿಸಿದರೆ, ನೂತನ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ವಿಭಿನ್ನವಾಗಿ ಕಾಣುತ್ತಿದೆ. ಅದರಲ್ಲೂ ಆಗ್ನೇಯ ಏಷ್ಯಾ ದೇಶವಾದ ಥೈಲ್ಯಾಂಡ್‌ನಲ್ಲಿ ಬಳಕೆ ಮಾಡುವ ಸ್ಕೂಟರ್‌ಗಳಂತೆ ಭಾಸವಾಗುತ್ತದೆ. ಜೊತೆಗೆ ಕಂಪನಿಯ 'ಡಿ15 ಪ್ರೋ' ಮಾದರಿಗೂ ಹೊಂದಾಣಿಕೆಯಾಗುತ್ತದೆ.

ಈ ಬಿಗಾಸ್ ಆರ್‌ಯುವಿ350 ಇ-ಸ್ಕೂಟರ್ ಮುಂಭಾಗ (ಫ್ರಂಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ಕ್ವೇರ್ ಹೆಡ್‌ಲೈಟ್‌ನ್ನು ಹೊಂದಿದೆ. ಇದು ಟರ್ನ್ ಸಿಗ್ನಲ್‌ಗಳಿಂದ ಎರಡು ಬದಿಯಲ್ಲಿ ಸುತ್ತುವರಿಯಲ್ಪಟ್ಟಿದೆ. ಆಕರ್ಷಕ 'ಬಿಗಾಸ್' ಲೋಗೋವನ್ನು ಪಡೆದಿದೆ. ವಿಶೇಷವಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್, 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ದೇಶೀಯವಾಗಿ ಲಭ್ಯವಿರುವ ಯಾವುದೇ ಸ್ಕೂಟರ್‌ಗಳು ಇಷ್ಟು ದೊಡ್ಡದಾಗಿರುವ ವೀಲ್‌ಗಳನ್ನು ಹೊಂದಿಲ್ಲ. ಈ ಅಲಾಯ್ ವೀಲ್‌ಗಳು ಗ್ರೇ, ಆರೆಂಜ್ ಹಾಗೂ ಯೆಲ್ಲೋ ಬಣ್ಣ (ಕಲರ್)ಗಳ ಆಯ್ಕೆಯನ್ನು ಪಡೆದಿವೆ.
ನೂತನ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ವಿಶಾಲವಾದ ಫ್ಲೋರ್‌ಬೋರ್ಡ್‌ನ್ನು ಹೊಂದಿದೆ. ಆಸನ (ಸೀಟ್)ಗಳು ಸಾಕಷ್ಟು ವೃದ್ದುವಾಗಿದ್ದು, ಸಿಂಗಲ್-ಪೀಸ್ ಗ್ರಾಬ್ ಹ್ಯಾಂಡಲ್‌ಗಳಿವೆ. ಹಿಂಭಾಗ (ರೇರ್)ದಲ್ಲಿರುವ ಟೈಲ್‌ಲೈಟ್ ಕೂಡ ಹೆಚ್ಚು ಅತ್ಯಾಧುನಿಕವಾಗಿದೆ. ಈ ಸ್ಕೂಟರ್ ಅತ್ಯುತ್ತಮವಾಗಿರುವ 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇ ಹೊಂದಿದ್ದು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ನೋಟಿಫಿಕೇಶನ್, ರೈಡಿಂಗ್ ಹಾಗೂ ಚಾರ್ಜಿಂಗ್ ಅಂಕಿಅಂಶಗಳನ್ನು ವೀಕ್ಷಿಸಬಹುದು.

ಈ ಡಿಸ್ಪ್ಲೇಯು ಸವಾರರಿಗೆ ಯಾವ ರೈಡಿಂಗ್ ಮೋಡ್‌ನಲ್ಲಿರುವಿರಿ ಎಂಬುದನ್ನು ತೋರಿಸುತ್ತದೆ. ಇದನ್ನು ಹ್ಯಾಂಡಲ್‌ಬಾರ್‌ನ ಬಲಭಾಗದಲ್ಲಿರುವ ಬಟನ್‌ಗಳನ್ನು ಬಳಸಿ ನಿಯಂತ್ರಣ (ಕಂಟ್ರೋಲ್) ಮಾಡಬಹುದು. ಸೀಟ್ ಕೆಳ ಭಾಗದಲ್ಲಿರುವ ಬೂಟ್ ಸ್ಪೇಸ್ (ಶೇಖರಣಾ ಪ್ರದೇಶ) ಪುಟ್ಟದಾಗಿದ್ದು, ಚಿಕ್ಕ ಗಾತ್ರದ ಹೆಲ್ಮೆಟ್ ಇಡಬಹುದು. ಹಾಗೆಯೇ ಚಾರ್ಜಿಂಗ್ ಪೋರ್ಟ್ ಹಾಗೂ ಪವರ್‌ಟ್ರೇನ್ ಆನ್/ಆಫ್ ಸ್ವಿಚ್ ಕೂಡ ಇಲ್ಲಿದೆ.
ಸ್ವಲ್ಪ ಹೆಚ್ಚು ಲಗೇಜ್ ಸಾಗಿಸಲು (ದಿನಸಿ ವಸ್ತು) ಮುಂಭಾಗದ ಏಪ್ರನ್‌ನಲ್ಲಿ ಹುಕ್‌ಗಳಿವೆ. ಫೋನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹಿಡಿದಿಟ್ಟುಕೊಳ್ಳಲು ಸಣ್ಣ ಪಾಕೆಟ್‌ಗಳಿವೆ. ನಾವು ರೈಡ್ ಮಾಡಿದ ಹೊಸ ಸ್ಕೂಟರ್ ಇನ್ನೂ ಉತ್ಪಾದನೆಯ ಹಂತದಲ್ಲಿತ್ತು. ಹಾಗಾಗಿ ಡಿಸ್ಪ್ಲೇ ಬಳಿ ಕೆಲವು ಸಮಸ್ಯೆಗಳನ್ನು ಹೊಂದಿತ್ತು. ಇದರಲ್ಲಿ ಬಳಕೆ ಮಾಡಿರುವ ಪ್ಲಾಸ್ಟಿಕ್ ಗುಣಮಟ್ಟವು ಅಷ್ಟು ಉತ್ತಮವಾಗಿರಲ್ಲ. ಮಾರಾಟಕ್ಕೆ ಬಂದ ನಂತರ, ಆ ಸಮಸ್ಯೆಗಳಿರುವುದಿಲ್ಲ ಎಂದು ಭಾವಿಸುತ್ತವೆ.

ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ ಹಾಗೂ ವಿಶೇಷತೆಗಳು: ಈ ಸ್ಕೂಟರ್ 3 ಕೆಡಬ್ಲ್ಯೂಹೆಚ್ (kWh) ಲಿಥಿಯಂ-ಐಯಾನ್ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಹೊಸದಾಗಿರುವ ಹೈಪರ್‌ಡ್ರೈವ್ ಇನ್-ವೀಲ್ ಮೋಟಾರ್‌ನಿಂದ ಕಾರ್ಯನಿರ್ವಹಿಸಲಿದ್ದು, 4.69 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 165 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 135 ಕಿ.ಮೀ (ARAI) ಕ್ರಮಿಸಲಿದೆ. ಅದು ರಸ್ತೆಯಲ್ಲಿ 120 ಕಿಲೋಮೀಟರ್ ಓಡಬಹುದು ಎನ್ನಲಾಗಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯು 35ಕೆಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್ ಬಳಕೆಯಲ್ಲಿ 0-80% ಚಾರ್ಜ್ ಆಗಲು 1 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತದೆ. ಅದು ಪೂರ್ತಿ ಚಾರ್ಜ್ ಆಗುವುದಕ್ಕೆ ಹೆಚ್ಚುವರಿಯಾಗಿ 55 ನಿಮಿಷಗಳು ಬೇಕಾಗುತ್ತದೆ. ಕಡಿಮೆ ಸಾಮರ್ಥ್ಯದ 840ಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ 100% ಚಾರ್ಜ್ ಆಗಲು 3 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 500ಡಬ್ಲ್ಯೂ ಚಾರ್ಜರ್ ಉಪಯೋಗಿಸಿದಾಗ 6 ಗಂಟೆ 50 ನಿಮಿಷಗಳಲ್ಲಿ ಭರ್ತಿ ಚಾರ್ಜ್ ಆಗಿಬಿಡುತ್ತದೆ.

ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಇಕೋ, ರೈಡ್ & ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಪಡೆದಿದೆ. ಇಕೋ ಮೋಡ್‌ನಲ್ಲಿ 45 ಕೆಎಂ/ಹೆಚ್, ರೈಡ್ ಮೋಡ್‌ನಲ್ಲಿ 60 ಕೆಎಂ/ಹೆಚ್ ಹಾಗೂ ಸ್ಪೋರ್ಟ್ಸ್ ಮೋಡ್‌ನಲ್ಲಿ 75 ಕೆಎಂ/ಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಅನ್ನು ಪಡೆದಿದೆ. ಕೇವಲ 5.4 ಸೆಕೆಂಡುಗಳಲ್ಲಿ 0-40 ಕೆಎಂ/ಹೆಚ್ ವೇಗವನ್ನು ಹೊಂದಲಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. 16-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಮುಂದೆ 80/80 ಮತ್ತು ಹಿಂದೆ 90/80 ಅಳತೆಯ ಟೈರ್‌ಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಎರಡು ತುದಿಗಳಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನ್ನು ಹೊಂದಿದ್ದು, ಕಾಂಬಿ-ಬ್ರೇಕಿಂಗ್ ಸಿಸ್ಟಮ್‌ನ್ನು ತನ್ನದಾಗಿಸಿಕೊಂಡಿದೆ.

ಬಿಗಾಸ್ ಆರ್‌ಯುವಿ350 ಇ-ಸ್ಕೂಟರ್ (BGauss RUV350 E-Scooter) 1,928 ಎಂಎಂ ಉದ್ದ, 697 ಎಂಎಂ ಅಗಲ ಹಾಗೂ 1,200 ಎಂಎಂ ಎತ್ತರವಿದೆ. ವೀಲ್‌ಬೇಸ್ 1,335 ಎಂಎಂ ಅಳತೆಯಲಿದ್ದು, ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಮತ್ತು ಸೀಟ್ ಹೈಟ್ 785 ಎಂಎಂ ಇದೆ.
ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಚಾಲನಾ ಅನುಭವ: ರಸ್ತೆಯಲ್ಲಿ ಈ ಸ್ಕೂಟರ್ ಓಡಿಸಿದಾಗ ನಮಗೆ ಸಾಮಾನ್ಯ ಸ್ಕೂಟರ್‌ನ್ನು ಓಡಿಸಿದ ಅನುಭವಾಗುತ್ತದೆ. ಆದಾಗ್ಯೂ ನೂತನ ಎಲೆಕ್ಟ್ರಿಕ್ ನೋಟ ದಾರಿಹೋಕರ ಕಣ್ಣುಕುಕ್ಕುತ್ತದೆ. ಸ್ಪೋರ್ಟ್ ಮೋಡ್ ಉತ್ತಮ ಆಯ್ಕೆಯಾಗಿದ್ದು, ರೈಡ್ ಹಾಗೂ ಇಕೋ ಮೋಡ್‌ನಲ್ಲಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲದು.

ಈ ಸ್ಕೂಟರ್ ತಿರುವುಗಳು, ಉಬ್ಬು-ತಗ್ಗು, ಹಳ್ಳ-ದಿಣ್ಣೆಯಿರುವ ರಸ್ತೆಯಲ್ಲಿ ಸುಲಭವಾಗಿ ಚಲಿಸಬಲ್ಲದು. ಆಸನವು ಆರಾಮದಾಯಕವಾಗಿದೆ. ಆದರೂ ಸಣ್ಣ - ಪುಟ್ಟ ಅಡಚಣೆಗಳು ಕಂಡುಬಂದವು. ಹಿಂಭಾಗದ ಬ್ರೇಕ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿತ್ತು. ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಕೂಡ ಸ್ಥಿರವಾಗಿತ್ತು. ಮುಂಭಾಗದ ಬ್ರೇಕ್‌ನಲ್ಲಿ ಕೆಲವೊಂದು ದೋಷಗಳನ್ನು ಗುರುತಿಸಿದೆವು.
ಒಟ್ಟಾರೆ ಅಭಿಪ್ರಾಯ: ಬಿಗಾಸ್ ಕಂಪನಿ ಹೊರತಂದಿರುವ 'ಆರ್‌ಯುವಿ350' ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಸ್ಕೂಟರ್‌ಗಳಿಗೆ ಹೋಲಿಸಿದರೆ ಕೊಂಚ ಭಿನ್ನವಾಗಿದ್ದು, ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ. ದಿನಬಳಕೆಗೂ ಹೆಚ್ಚು ಸೂಕ್ತವಾಗಿರಲಿದ್ದು, ಪುರುಷ ಹಾಗೂ ಮಹಿಳೆಯರು ಓಡಿಸಬಹುದು. ನೂತನ ಸ್ಕೂಟರ್‌ಗೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








