ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಮೋಟಾರ್ ಕಂಪನಿಯು 1980ರಲ್ಲಿ ಎಕ್ಸ್‌ಎಲ್ ಸರಣಿಯನ್ನು ಮೊದಲ ಬಾರಿಗೆ ಪರಿಚಯಿಸಿತು. ಎಕ್ಸ್‌ಎಲ್ ಸರಣಿಯಲ್ಲಿ ಮೊದಲ ಬಾರಿಗೆ ಟಿವಿಎಸ್ 50 ಸಿಸಿಯ ಮೊಪೆಡ್ ಅನ್ನು ಪರಿಚಯಿಸಿತು, ಈ ಟಿವಿಎಸ್ ಎಕ್ಸ್‌ಎಲ್ 50 ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆಯನು ಗಳಿಸಿತು. ಎಕ್ಸ್‌ಎಲ್ 50 ಭಾರತೀಯ ರೇಸಿಂಗ್ ದೃಶ್ಯಗಳಲ್ಲಿ ಟಿವಿಎಸ್ ಬಳಸಿದ ಮೊದಲ ಮಾದರಿಯಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಸಣ್ಣ 50 ಸಿಸಿ ಮೊಪೆಡ್ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಈ 50 ಸಿಸಿ ಮೊಪೆಡ್ ಆರಾಮದಾಯಕ, ಕಾರ್ಯಕ್ಷಮತೆ ಮತ್ತು ಲೋಡ್ ಸಾಗಿಸುವ ಸಾಮರ್ಥ್ಯ. ಹಗುರವಾದ ಮತ್ತು ಗೇರುಗಳಿಲ್ಲದ ಕಾರಣ, ಎಕ್ಸ್‌ಎಲ್ 50 ಸವಾರಿ ಮಾಡುವುದು ಸುಲಭವಾಗಿದೆ. ಈ ಮೊಪೆಡ್ ವನ್ನು ಮಹಿಳೆಯರು ಮತ್ತು ವಯಸ್ಕರು ಸುಲಭವಾಗಿ ಚಲಾಯಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಎಕ್ಸ್‌ಎಲ್ ದೇಶದಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಇನ್ನು ಇತ್ತೀಚೆಗೆ ಟಿವಿಎಸ್ 2020ರಲ್ಲಿ ಎಕ್ಸ್‌ಎಲ್ 100 ಮೊಪೆಡ್ ಅನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿತ್ತು. ಟಿವಿಎಸ್ ಎಕ್ಸ್‌ಎಲ್ 100 ಕೊನೆಯದಾಗಿ ಉಳಿದಿರುವ ಮೊಪೆಡ್‌ಗಳಲ್ಲಿ ಒಂದಾಗಿದೆ, ಇದು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಟಿವಿಎಸ್ ಎಕ್ಸ್‌ಎಲ್ 100 ನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ. ಕಳೆದ ನಲವತ್ತು ವರ್ಷಗಳಲ್ಲಿ ಎಕ್ಸ್‌ಎಲ್ 100 ವಿನ್ಯಾಸವು ಹೆಚ್ಚು ಬದಲಾಗಿಲ್ಲವಾದರೂ ಇದರ ಹೊಸ ಫೀಚರ್ ಮತ್ತು ತಂತ್ರಜ್ಞಾನವು ಪ್ರಸ್ತುತ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಎಕ್ಸ್‌ಎಲ್ 100 ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಅದೇ ಮಟ್ಟದ ಸೌಕರ್ಯ, ಪ್ರಾಯೋಗಿಕತೆ ಮತ್ತು ಅನುಕೂಲತೆಯನ್ನು ನೀಡಬಹುದೇ? ಇದರ ಫಿಚರ್ ಗಳು ಮತ್ತು ಹೊಸ ಅಪ್ಡೇಟ್ ಗಳ ಬಗ್ಗೆ ನಾವು ವಿವರವಾಗಿ ಇಲ್ಲಿ ಹೇಳುತ್ತೇವೆ.

ವಿನ್ಯಾಸ ಹಾಗೂ ಶೈಲಿ

ಮೊದಲೇ ಹೇಳಿದಂತೆ ಟಿವಿಎಸ್ ಎಕ್ಸ್‌ಎಲ್ 100 ಅದರ ಹಿಂದಿನ ಮಾದರಿಯಂತೆ ಹೆಚ್ಚಿನ ಸ್ಟೈಲಿಂಗ್ ಮತ್ತು ವಿನ್ಯಾಸವನ್ನು ಉಳಿಸಿಕೊಂಡಿದೆ. ವಿನ್ಯಾಸವು ಒಪ್ಪುವಷ್ಟು ಸರಳ ಮತ್ತು ಪ್ರಾಯೋಗಿಕವಾಗಿದೆ ಆದರೆ ಕೆಲವು ಅಂಶಗಳನ್ನು ಸೂಕ್ಷ ಬದಲಾವಣಿಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ಮುಂಭಾಗದಲ್ಲಿ ರೌಂಡ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಯುನಿಟ್ ಅನ್ನು ಹೊಂದಿದೆ. ಇದನ್ನು ಫೇರಿಂಗ್ ಮತ್ತು ಬ್ಲ್ಯಾಕ್ ವಿಸರ್ ಅನ್ನು ಒಳಗೊಂಡಿದೆ. ಟಿವಿಎಸ್ ಮೈನ್ ಹೆಡ್‌ಲ್ಯಾಂಪ್ ಯುನಿಟ್ ಕೆಳಗೆ ಸಣ್ಣ ಎಲ್‌ಇಡಿ ಸ್ಟ್ರಿಪ್ ಅನ್ನು ಕೂಡ ಸೇರಿಸಿದೆ, ಇದು ಮೊಪೆಡ್‌ನ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್‌ಎಲ್) ಆಗಿದೆ. ಹೆಡ್‌ಲ್ಯಾಂಪ್ ಫೇರಿಂಗ್ ಅನ್ನು ಎರಡೂ ಬದಿಯಲ್ಲಿ ಇಂಡೀಕೆಟರ್ ಅನ್ನು ನೀಡಲಾಗಿದೆ. ಇದು ಹ್ಯಾಲೊಜೆನ್ ಯುನಿಟ್ ಗಳಾಗಿವೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಇನ್ನು ಹೊಸ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ, ದೊಡ್ಡ ಫುಟ್‌ಬೋರ್ಡ್‌ನೊಂದಿಗೆ ಕಾಣಬಹುದು, ಇದನ್ನು ಲಗೇಜ್ ಲೋಡ್ ಮಾಡಲು ಮತ್ತು ಆರಾಮದಿಂದ ದೂರದವರೆಗೆ ಸಾಗಿಸಲು ಬಳಸಬಹುದು. ಎಕ್ಸ್‌ಎಲ್ ಎರಡೂ ಬದಿಯಲ್ಲಿ ಫುಟ್‌ಪೆಗ್‌ಗಳೊಂದಿಗೆ ಬರುತ್ತದೆ, ಇದು ಹೆಚ್ಚು ಆರಾಮದಾಯಕ ಸವಾರಿ ಅನುಭವ ನೀಡುತ್ತದೆ

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಸಿಂಗಲ್-ಪೀಸ್ ಡ್ಯುಯಲ್-ಟೋನ್ ಲೆಥೆರೆಟ್ ಸೀಟುಗಳು ಹೆಚ್ಚಿನ ಕಂಫರ್ಡ್ ಅನ್ನು ನೀಡುತ್ತದೆ. ಇದು ಸವಾರ ಮತ್ತು ಪ್ರಯಾಣಿಕರಿಗೆ ಉತ್ತಮ ಅನುಭವನ್ನು ನೀಡುತ್ತದೆ. ಎಕ್ಸ್‌ಎಲ್ 100 ಪಿಲಿಯನ್ ರೈಡರ್‌ಗೆ ಸಣ್ಣ ಬ್ಯಾಕ್‌ರೆಸ್ಟ್ ಅನ್ನು ಸಹ ನೀಡುತ್ತದೆ. ಮುಂಭಾಗದಲ್ಲಿ ಸಣ್ಣ 4-ಲೀಟರ್ ಟ್ಯಾಂಕ್ ಹೊಂದಿದೆ. ಟಿವಿಎಸ್ ಎಕ್ಸ್‌ಎಲ್ 100 ನಲ್ಲಿ ಸಾಕಷ್ಟು ಕ್ರೋಮ್ ಅನ್ನು ಕೂಡ ಸೇರಿಸಿದೆ, ಇದನ್ನು ಪ್ರೊಟೆಕ್ಟರ್ ಗಾರ್ಡ್, ಎಕ್ಸಾಸ್ಟ್ ಕವರ್ ಮತ್ತು ಸ್ಪೋಕ್ ರಿಮ್ಸ್‌ನಲ್ಲಿ ಕಾಣಬಹುದು. ಸಸ್ಪೆಂಕ್ಷನ್, ಹ್ಯಾಂಡಲ್‌ಬಾರ್‌ಗಳು ಮತ್ತು ಬ್ಯಾಕ್‌ರೆಸ್ಟ್‌ನ ಸುತ್ತಲೂ ಕ್ರೋಮ್ ಫಿನಿಶ್ ಅನ್ನು ಕಾಣಬಹುದು. ಹಿಂಭಾಗವನ್ನು ಮುಖ್ಯವಾಗಿ ಹ್ಯಾಲೊಜೆನ್ ಟೈಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ ಗಳನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಫೀಚರ್ಸ್‌ಗಳು

ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ನಲ್ಲಿ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಆದರೆ ಇತರ ಬೈಕುಗಳ ಫೀಚರ್ ಗಳಿಗೆ ಹೋಲಿಸಲಾಗುವುದಿಲ್ಲ. ಆದರೆ ಮೊಪೆಡ್ ಗಳಿಗೆ ಹೋಲಿಸಿದರೆ ಉತ್ತಮ ಫೀಚರ್ ಗಳನ್ನು ಹೊಂದಿದೆ. ಟಿವಿಎಸ್ ಎಕ್ಸ್‌ಎಲ್ 100 ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಅನಲಾಗ್ ಸ್ಪೀಡೋಮೀಟರ್ ಮತ್ತು ಓಡೋಮೀಟರ್ ಒಳಗೊಂಡಿದೆ. . ಕ್ಲಸ್ಟರ್ ಟ್ರನ್ ಇಂಡಿಕೇಟರ್ ಮತ್ತು ಟೇಲ್ ಲ್ಯಾಂಪ್ ಗಳನ್ನು ಸಹ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ದಲ್ಲಿ ಫ್ಯೂಯಲ್ ಗೇಜ್ ಇಲ್ಲದಿದ್ದರೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇಂಧನ ಕಡಿಮೆಯಾದ ಮತ್ತು ‘ಎಂಜಿನ್-ಚೆಕ್ ವಾರ್ನಿಂಗ್ ಅನ್ನು ನೀಡುತ್ತದೆ. ನಾವು ರಿವ್ಯೂ ಮಾಡಿರುವ ಟಿವಿಎಸ್ ಎಕ್ಸ್‌ಎಲ್ 100 ಕಂಫರ್ಟ್ ವೆರಿಯೆಂಟ್ ಯುಎಸ್ಬಿ ಫೋನ್ ಚಾರ್ಜಿಂಗ್ ಸಾಕೆಟ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ನಲ್ಲಿ ಹೊಸ ತಲೆಮಾರಿನ ‘ಐ-ಟಚ್ ಸ್ಟಾರ್ಟ್ ಸಿಸ್ಟಂ ಹೊಂದಿದ್ದು, ಇದು ಎಂಜಿನ್ ಕಿಲ್ ಸ್ವಿಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಎಡ ಹ್ಯಾಂಡಲ್‌ಬಾರ್‌ನಲ್ಲಿ ಸ್ವಿಚ್‌ಗಳಿವೆ, ಅದು ಹೆಡ್‌ಲ್ಯಾಂಪ್‌ಗಳು, ಹಾರ್ನ್ ಸ್ವಿಚ್ ಮತ್ತು ಟರ್ನ್ ಇಂಡಿಕೇಟರ್ ಕಂಟ್ರೋಲ್ ಗಳಿಗೆ ಹೈ ಮತ್ತು ಲೋ ಬೀಮ್ ಅನ್ನು ಕಂಟ್ರೋಲ್ ಮಾಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ಸಹ ಉದ್ದವಾದ ಸಿಂಗಲ್-ಪೀಸ್ ಸೀಟ್ ಅನ್ನು ಹೊಂದಿದೆ. ಇದು ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲ್ಸ್ಟರಿ ಫೀನಿಶಿಂಗ್ ಹೊಂದಿದೆ. ಪಿಲಿಯನ್ ಸವಾರ ಅಥವಾ ಹಿಂಬದಿ ಸವಾನಿಗೆ ಬ್ಯಾಕ್‌ರೆಸ್ಟ್ ಸಹ ಹೊಂದಿದ್ದು, ಇದು ಹೆಚ್ಚಿನ ಆರಾಮದಾಯಕ ಅನುಭವವನ್ನು ನೀಡುತ್ತದೆ. ಎಕ್ಸ್‌ಎಲ್ 100 ಮುಂಭಾಗದಲ್ಲಿ ದೊಡ್ಡದಾದ ಫುಟ್‌ಬೋರ್ಡ್ ಅನ್ನು ಸಹ ಹೊಂದಿದೆ, ಇದನ್ನು ಲಗೇಜ್ ಗಳನ್ನು ಸುಲಭವಾಗಿ ಲೋಡ್ ಮಾಡಲು ಮತ್ತು ದೂರದವರೆಗೆ ಸಾಗಿಸಲು ಬಳಸಬಹುದು.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಎಂಜಿನ್ ಮತ್ತು ಪರ್ಫಾಮೆನ್ಸ್

ಟಿವಿಎಸ್ ಎಕ್ಸ್‌ಎಲ್ 100 ಭಾರತೀಯ ಮಾರುಕಟ್ಟೆಯಲ್ಲಿನ ಚಿಕ್ಕ ಎಂಜಿನ್‌ಗಳನ್ನು ಹೊಂದಿರುವ ಮಾದರಿಗಳಲ್ಲಿ ಒಂದಾಗಿದೆ. ಈ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ನಲ್ಲಿ 99.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ .ಈ ಎಂಜಿನ್ 6000 ಆರ್‌ಪಿಎಂನಲ್ಲಿ 4.3 ಬಿಹೆಚ್‍ಪಿ ಪವರ್ ಮತ್ತು 3500 ಆರ್‌ಪಿಎಂನಲ್ಲಿ 6.0 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಈ ಎಂಜಿನ್ ನೊಂದಿಗೆ ಸಿಂಗಲ್-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಪ್ರತಿ ಲೀಟರ್ ಗೆ ಸುಮಾರು 65 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆದರೆ ನಾವು ರಿವ್ಯೂ ಮಾಡುವಾಗ 55 ಕಿ.ಮೀ ಮೈಲೇಜ್ ಅನ್ನು ನೀಡಿದೆ. ಫ್ಯೂಯಲ್ ಟ್ಯಾಂಕ್ ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬಿಸಿದಾಗ 220 ಕಿ,ಮೀ ಚಲಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಇದರ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಭಾರತೀಯ ಮಾರುಕಟ್ಟೆಯಲ್ಲಿನ ಯಾವುದೇ ದ್ವಿಚಕ್ರ ವಾಹನಗಳಿಂದ ಕನಿಷ್ಠವಾಗಿರಬಹುದು, ಆದರೆ ಈ ಮೊಪೆಡ್ ಇನ್ನೂ ಉತ್ಸಾಹಭರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮೊಪೆಡ್ ಪ್ರತಿ ಗಂಟೆಗೆ 60 ಕಿ.ಮೀ ಸ್ಪೀಡ್ ಅನ್ನು ಹೊಂದಿದೆ. ಮೊಪೆಡ್ ಕೇವಲ 89 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಇನ್ನು ಈ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ 130 ಕಿ.ಗ್ರಾಂ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಎಕ್ಸ್‌ಎಲ್ 100 ಅನ್ನು ಅದರ ಮಿತಿಗೆ ಲೋಡ್ ಮಾಡಿದ ನಂತರವೂ ಅದು ಹೆಣಗಾಡಲಿಲ್ಲ. ಎಂಜಿನ್ ಯಾವಾಗಲೂ ಸಾಕಷ್ಟು ಪವರ್ ಅನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ರೈಡಿಂಗ್ ಮತ್ತು ನಿರ್ವಹಣೆಯ ಬಗ್ಗೆ ಹೇಳುವುದಾದರೆ, ಟಿವಿಎಸ್ ಎಕ್ಸ್‌ಎಲ್ 100 ರೈಡರ್ ಸೌಕರ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಸೀಟಿನ ಸ್ಥಾನವು ನೇರವಾಗಿರುತ್ತದೆ, ಇದು ಎತ್ತರದ ಮತ್ತು ಸಣ್ಣ ಸವಾರರಿಗೆ ಸೂಕ್ತವಾಗಿರುತ್ತದೆ. ಹ್ಯಾಂಡಲ್‌ಬಾರ್‌ಗಳು ಮತ್ತು ಫುಟ್‌ಪೆಗ್‌ಗಳನ್ನು ಸಹ ಸಂಪೂರ್ಣವಾಗಿ ಹೊಂದಿಸಲಾಗಿದೆ, ಇದು ಉತ್ತಮ ಆರಾಮದಾಯಕ ಅನುಭವವನ್ನು ನೀಡುತ್ತದೆ. ಟಿವಿಎಸ್ ಎಕ್ಸ್‌ಎಲ್ 100 ಸಹ ಕಾಂಪ್ಯಾಕ್ಟ್ ಆಯಾಮಗಳೊಂದಿಗೆ ಬರುತ್ತದೆ, ಇದು ಹಗುರವಾದ ಜೊತೆಗೆ ನಗರದ ಸಂಚಾರ ಮಾಡಲು ಸುಲಭವಾಗಿದೆ. ಚಿಕ್ಕ ರಸ್ತೆಗಳಲ್ಲಿ ಸಂದಿಗಳಲ್ಲಿಯು ಕೂಡ ಸುಲಭವಾಗಿ ಚಲಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿದೆ. ಅಂಪ್ ಗಳಲ್ಲಿ ಮತ್ತು ಗುಂಡಿಗಳಲ್ಲಿ ಸುಲಭವಾಗಿ ಸಾಗುತ್ತದೆ. ಎಕ್ಸ್‌ಎಲ್ 100 ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಎಕ್ಸ್‌ಎಲ್ 100 ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಗಳ ಜೊತೆಯಲ್ಲಿ ಬ್ರ್ಯಾಂಡ್‌ನ ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂ ಕೂಡ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಅಷ್ಟು ಉತ್ತಮವಾಗಿಲ್ಲವಾದರೂ ಟಿವಿಎಸ್ ಎಕ್ಸ್‌ಎಲ್ 100ಗೆ ಇದು ಸರಿಯಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

2020ರ ಟಿವಿಎಸ್ ಎಕ್ಸ್‌ಎಲ್ 100 ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಕಂಫರ್ಟ್ ಐ-ಟಚ್ ಸ್ಟಾರ್ಟ್, ಹೆವಿ ಡ್ಯೂಟಿ ಐ-ಟಚ್ ಸ್ಟಾರ್ಟ್ ಮತ್ತು ಹೆವಿ ಡ್ಯೂಟಿ ಐ-ಟಚ್ ಸ್ಟಾರ್ಟ್ ಸ್ಪೆಷಲ್ ಎಡಿಷನ್ ಆಗಿದೆ. ಎಕ್ಸ್‌ಎಲ್ 100 ಬೆಲೆಯು ರೂ.39,990ಗಳಿಂದ ಪ್ರಾರಂಭವಾಗುತ್ತದೆ. ಟಾಪ್-ಸ್ಪೆಕ್ ಕಂಫರ್ಟ್ ಐ-ಟಚ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.48,839ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಟಿವಿಎಸ್ ಎಕ್ಸ್‌ಎಲ್ 100 ಕಂಫರ್ಟ್ ಐ-ಟಚ್‌ಸ್ಟಾರ್ಟ್ ರೂಪಾಂತರ ಬ್ಲೂ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಎಕ್ಸ್‌ಎಲ್ 100 ಹೆಚ್ಚಿನ ಫನ್ ರೈಡಿಂಗ್ ಅನುಭವವನ್ನು ನೀಡುವ ದ್ವಿಚಕ್ರ ವಾಹನವಾಗಿದೆ. ಈ ಮೊಪೆಡ್ ಉತ್ತಮ ಆರಾಮದಾಯಕ, ಹೆಚ್ಚಿನ ಲೋಡ್-ಸಾಗಿಸುವ ಸಾಮರ್ಥ್ಯ ಮತ್ತು ಉತಮ ಮೈಲೇಜ್ ನೀಡುತ್ತದೆ. ಈ ಮೊಪೆಡ್ ಇದು ಯೋಗ್ಯವಾದ ಕಾರ್ಯಕ್ಷಮತೆ ಮತ್ತು ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದೆ. ಈ ಟಿವಿಎಸ್ ಎಕ್ಸ್‌ಎಲ್ 100 ಹೆಚ್ಚಿನ ಲಗೇಜ್ ಗಳನ್ನು ಸಾಗಿಸಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್

ಮಧ್ಯಮ ಮತ್ತು ಕೆಳವರ್ಗದ ಜನರನ್ನು ಈ ಮೊಪೆಡ್ ಹೆಚ್ಚು ಖರೀದಿಸುತ್ತಾರೆ. ಅದರಲ್ಲಿಯು ರೈತರ ಬಂಡಿ ಎಂದೇ ಖ್ಯಾತಿಯನ್ನು ಪಡೆದಿದೆ. ರೈತರು ಮತ್ತು ವ್ಯಾಪರಿಗಳು ಈ ಮೊಪೆಡ್ ವನ್ನು ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಬಳುಸುತ್ತಾರೆ. ಯುವಕರು ಹೆಚ್ಚಾಗಿ ಮೊಪೆಡ್ ಗಳನ್ನು ಇಷ್ಟಪಡುವುದಿಲ್ಲ. ಆದರೆ ಮಧ್ಯಮ ವರ್ಗದ ವಯಸ್ಕರು ಹೆಚ್ಚಾಗಿ ಈ ರೀತಿಯ ಮೊಪೆಡ್ ಗಳನ್ನು ಇಷ್ಟಪಡುತ್ತಾರೆ. ಕೇವಲ ಪುರಷರು ಮಾತ್ರವಲ್ಲಿ ಸಾಮಾನ್ಯವಾಗಿ ಮಹಿಳೆಯರು ಕೂಡ ಆರಾಮದಾಯಕವಾಗಿ ಈ ಮೊಡೆಡ್ ಅನ್ನು ರೈಡ್ ಮಾಡಬಹುದಾಗಿದೆ.

Most Read Articles

Kannada
English summary
TVS XL100 Comfort BS6 Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X