ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈಗಾಗಲೇ ಹಲವಾರು ಬೈಕ್ ಮಾದರಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸಿರುವ ಟಿವಿಎಸ್ ಮೋಟಾರ್ ಇದೀಗ ಮತ್ತೊಂದು ವಿಭಿನ್ನವಾದ ಬೈಕ್ ಉತ್ಪನ್ನವೊಂದನ್ನು ಪರಿಚಯಿಸಿದೆ.

Recommended Video

TVS Ronin Detailed Kannada Review | ಎಂಜಿನ್ ಪರ್ಫಾರ್ಮೆನ್ಸ್, ರೈಡ್ ಕಂಫರ್ಟ್, ಫೀಚರ್ಸ್ |

ರೋನಿನ್ ಹೆಸರಿನಲ್ಲಿ ಬಿಡುಗಡೆಯಾಗಿರುವ ಹೊಸ ಬೈಕ್ ಮಾದರಿಯು ವಿಭಿನ್ನವಾದ ಚಾಲನಾ ಸೌಲಭ್ಯದೊಂದಿಗೆ ಅಭಿವೃದ್ದಿಗೊಂಡಿದ್ದು ಆಕರ್ಷಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಟಿವಿಎಸ್ ಮೋಟಾರ್ ಕಂಪನಿಯು ಹೊಸ ರೋನಿನ್ ಮಾದರಿಯ ಬಿಡುಗಡೆಯ ನಂತರ ವಿತರಣೆಗೂ ಮುನ್ನ ಬೈಕ್ ಕಾರ್ಯಕ್ಷಮತೆ ಕುರಿತಾಗಿ ಗೋವಾ ಫಸ್ಟ್ ರೈಡ್ ಆಯೋಜಿಸಿತ್ತು. ಹೊಸ ಬೈಕಿನ ಕಾರ್ಯಕ್ಷಮತೆಯ ರೈಡ್‌ನಲ್ಲಿ ಭಾಗಿಯಾಗಿದ್ದ ಡ್ರೈವ್‌ಸ್ಪಾರ್ಕ್ ತಂಡವು ವಿವಿಧ ಹಂತದ ರೈಡ್ ಕೈಗೊಳ್ಳುವ ಮೂಲಕ ಹೊಸ ಬೈಕಿನ ಕುರಿತಾದ ಮಾಹಿತಿಗಳನ್ನು ಈ ವಿಮರ್ಶೆ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಈ ವಿಮರ್ಶೆ ಲೇಖನದಲ್ಲಿ ಹೊಚ್ಚ ಹೊಸ ಟಿವಿಎಸ್ ರೋನಿನ್ ಮಾದರಿಯ ಸವಾರಿ ಅನುಭವಗಳನ್ನು ಹಂಚಿಕೊಳ್ಳಲಾಗಿದ್ದು, ಇದು ಸ್ಕ್ರಾಂಬ್ಲರ್, ಕ್ರೂಸರ್ ಅಥವಾ ರೋಡ್ಸ್ಟರ್ ಎನ್ನುವುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಜೊತೆಗೆ ಎಂಜಿನ್ ಕಾರ್ಯಕ್ಷಮತೆ ಮತ್ತು ಹೊಸ ಫೀಚರ್ಸ್‌ಗಳ ಕುರಿತಾಗಿ ಗ್ರಾಹಕರ ಮನದಲ್ಲಿ ಮೂಡಬಹುದಾದ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ವಿನ್ಯಾಸ ಮತ್ತು ಶೈಲಿ

ಮೊದಲ ನೋಟದಲ್ಲಿಯೇ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ದೊಡ್ಡ ಪ್ರಶ್ನೆಯೆಂದರೆ ಈ ಹೊಸ ಬೈಕ್ ಸ್ಕ್ರಾಂಬ್ಲರ್? ಕ್ರೂಸರ್ ಅಥವಾ ರೋಡ್‌ಸ್ಟರ್? ಯಾವುದು ಈ ಬೈಕ್ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತವಾಗಿಯೂ ಮೂಡುತ್ತದೆ. ಆದರೆ ಈ ಹೊಸ ಬೈಕ್ ಟಿವಿಎಸ್ ಪ್ರಕಾರ ಈ ಮೂರು ವಿಭಾಗದಲ್ಲಿ ಯಾವುದೇ ಒಂದು ವಿಭಾಗಕ್ಕೂ ಸೀಮಿತವಾಗಿಲ್ಲ ಎನ್ನುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಇದಕ್ಕೆ ಕಾರಣ ಟಿವಿಎಸ್ ಕಂಪನಿಯು ಹೊಸ ರೋನಿನ್ ಅನ್ನು ರಚಿಸಲು ಮೇಲೆ ತಿಳಿಸಲಾದ ಪ್ರತಿಯೊಂದು ವಿಭಾಗದಿಂದಲೂ ಕೆಲವು ವಿನ್ಯಾಸ ಅಂಶಗಳನ್ನು ಸೇರ್ಪಡೆಗೊಳಿಸಿದ್ದು, ಈ ಹಿನ್ನಲೆ ಗ್ರಾಹಕರು ಹೊಸ ಬೈಕ್ ಯಾವ ರೀತಿ ಬಯಸುತ್ತಾರೋ ಹಾಗೆ ಆಗಬಹುದಾದ ಮೋಟಾರ್‌ಸೈಕಲ್ ಇದಾಗಿದೆ ಎಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕಿನ ಹ್ಯಾಂಡಲ್‌ಬಾರ್, ದೊಡ್ಡ ಇಂಧನ ಟ್ಯಾಂಕ್, ಸೀಟ್ ಮತ್ತು ಫೆಂಡರ್‌ಗಳು ಕ್ರೂಸರ್‌ಗಳಲ್ಲಿ ಕಂಡುಬರಲಿದ್ದರೆ ಮಧ್ಯದ ಸೆಟ್ ಫುಟ್‌ಪೆಗ್‌ಗಳು, ಸ್ಟ್ಯಾಬಿ ಎಕ್ಸಾಸ್ಟ್ ಮತ್ತು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ರೋಡ್‌ಸ್ಟರ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿನ್ಯಾಸ ಅಂಶಗಳಾಗಿವೆ. ಅಂತಿಮವಾಗಿ ಟೈರ್‌ಗಳು ಮತ್ತು ಆಫ್‌ಸೆಟ್ ಇನ್‌ಸ್ಟ್ರುಮೆಂಟೇಶನ್‌ಗಳು ಸಾಮಾನ್ಯವಾಗಿ ಸ್ಕ್ರಾಂಬ್ಲರ್‌ಗಳಲ್ಲಿ ಕಂಡುಬರುವ ಅಂಶಗಳಾಗಿವೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಮುಂಭಾಗದಲ್ಲಿ ವಿಶಿಷ್ಟವಾದ T-ಆಕಾರದ ಎಲ್ಇಡಿ ಡಿಆರ್‌ಎಲ್ ಜೊತೆಗೆ ವೃತ್ತಾಕಾರದ LED ಹೆಡ್‌ಲ್ಯಾಂಪ್ ಇದೆ. ಟಿವಿಎಸ್ ಹೆಡ್‌ಲ್ಯಾಂಪ್ ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ ಮತ್ತು ಈ ವರ್ಗದಲ್ಲಿರುವ ಯಾವುದೇ ಮೋಟಾರ್‌ಸೈಕಲ್‌ಗಳಿಗಿಂತಲೂ ಅತ್ಯುತ್ತವಾಗಿವೆ ಎಂದು ಹೇಳುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕಿನ ಶೋವಾ ಬಿಗ್-ಪಿಸ್ಟನ್ ಡೌನ್ ಸೈಡ್ ಫೋರ್ಕ್ ಅನ್ನು ಗೋಲ್ಡ್ ಕಲರ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಸೌಲಭ್ಯವು ಮಿಡ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದ್ದು, ಆರಂಭಿಕ ಮಾದರಿಯಲ್ಲಿ ಕಪ್ಪು ಬಣ್ಣದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹಾಗೆಯೇ ಹೊಸ ಬೈಕಿನ ಮುಂಭಾಗದ ಮಡ್‌ಗಾರ್ಡ್ ಮೆಟಲ್‌ನಿಂದ ಮಾಡಲ್ಪಟ್ಟಿದ್ದು, ಇದು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿರುವ ಪ್ಲಾಸ್ಟಿಕ್ ಮಡ್‌ಗಾರ್ಡ್‌ಗಳಿಗೆ ಹೋಲಿಸಿದರೆ ಗುಣಮಟ್ಟದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎನ್ನಬಹುದು. ಇದಲ್ಲದೆ ಹೊಸ ಬೈಕಿನ ಇನ್ಸ್ಟ್ರುಮೆಂಟೇಶನ್ ಅನ್ನು ಸಿಂಗಲ್-ಪಾಡ್ ಡಿಜಿಟಲ್ ಯುನಿಟ್ ಮೂಲಕ ನಿರ್ವಹಿಸಲಿದ್ದು, ಇದು ಬಹಳಷ್ಟು ವಿಶಿಷ್ಟವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕಿನ ಇಂಧನ ಟ್ಯಾಂಕ್ ಕೂಡಾ ದೊಡ್ಡದಾಗಿದ್ದು, 14 ಲೀಟರ್ ಪೆಟ್ರೋಲ್ ಸಾಮರ್ಥ್ಯ ಹೊಂದಿದೆ. ಪೂರ್ತಿ ಟ್ಯಾಂಕ್ ನಂತರ ಇದು ಸುಲಭವಾಗಿ 400 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ತಲುಪಲಿದ್ದು, ಪೇಂಟ್ ಫಿನಿಶ್ ಉತ್ತಮವಾಗಿದೆ. ಇದರಲ್ಲಿ ವಿಶೇಷವಾಗಿ ಇಂಧನ ಟ್ಯಾಂಕ್‌ನಲ್ಲಿ ಬಣ್ಣಗಳ ಆಯ್ಕೆ ಗಮನಸೆಳೆಯಲಿದ್ದು, ಮೂಲ ರೂಪಾಂತರವು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾತ್ರ ಲಭ್ಯವಿದ್ದರೆ ಇಂಧನ ಟ್ಯಾಂಕ್‌ನಲ್ಲಿನ ಡಿಕಾಲ್‌ಗಳು ಮತ್ತು ಪಿನ್‌ಸ್ಟ್ರೈಪಿಂಗ್ ಬೇಸ್ ಎಸ್‌ಎಸ್ ರೂಪಾಂತರಗಳಲ್ಲಿ ಸಿಗುವುದಿಲ್ಲ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ನಾವು ಟಾಪ್-ಸ್ಪೆಕ್ ಟಿಡಿ ರೂಪಾಂತರವನ್ನು ಸವಾರಿ ಮಾಡಿದ್ದರಿಂದ ಇದು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿತ್ತು. ನಾವು ರೈಡ್ ಮಾಡಿದ ಮಾದರಿಯು ಬೂದುಬಣ್ಣದ ಈ ಛಾಯೆಯಲ್ಲಿ ಆಕರ್ಷಕವಾಗಿ ಕಾಣುತ್ತಿತ್ತು. ಸೈಡ್ ಪ್ಯಾನೆಲ್‌ಗಳು ರೋನಿನ್ ಬ್ಯಾಡ್ಜಿಂಗ್ ಅನ್ನು ಒಳಗೊಂಡಿದ್ದು, ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುವ ಪ್ರಮುಖ ಬಿಡಿಭಾಗಗಳು ಬೈಕಿನ ಅಂದವನ್ನು ಹೆಚ್ಚಿಸಿವೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಟಿವಿಎಸ್ ರೋನಿನ್ ಮಾದರಿಯು ಸಾಕಷ್ಟು ಪ್ರಭಾವಶಾಲಿ ಆದ ಆಸನವನ್ನು ಹೊಂದಿದೆ. ಆಸನದ ಒಂದು ನೋಟವು ನಿಮಗೆ ತುಂಬಾ ಆರಾಮದಾಯಕವಾಗಿದೆ ಎಂದು ಹೇಳಬಹದು. ಹಾಗೆಯೇ ಅಗಲವಾದ ಮಡ್ಗಾರ್ಡ್/ಫೆಂಡರ್ ಇದ್ದು, ಇದು ಕೂಡಾ ಮೆಟಲ್‌ನಿಂದ ನಿರ್ಮಾಣಗೊಂಡಿದ್ದು, ಹಿಂಭಾಗದಲ್ಲಿ ಎಲ್ಇಡಿ ಲೈಟಿಂಗ್ ಅನ್ನು ಸಹ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಒಟ್ಟಾರೆಯಾಗಿ ಹೇಳುವುದಾದರೆ ಟಿವಿಎಸ್ ಹೊಸ ರೋನಿನ್ ವಿನ್ಯಾಸವು ನಿಮ್ಮನ್ನು ಮೊದಲ ನೋಟದಲ್ಲಿಯೇ ಗಮನಸೆಳೆಯಲಿದ್ದು, ವಿನ್ಯಾಸಗಳ ಜೊತೆಗೆ ಬೈಕ್ ನಿರ್ಮಾಣ ಗುಣಮಟ್ಟವು ಹೊಸ ಬೈಕಿನ ಮೌಲ್ಯವನ್ನು ಹೆಚ್ಚಿಸಬಹುದಾದ ಪ್ರಮುಖ ಅಂಶಗಳಾಗಿವೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಬೈಕ್ ವೈಶಿಷ್ಟ್ಯಗಳು

ಟಿವಿಎಸ್ ಹೊಸ ರೋನಿನ್ ಪ್ರೀಮಿಯಂ ಮೋಟಾರ್ ಸೈಕಲ್ ಮಾದರಿ ಅಲ್ಲದಿದ್ದರೂ ಇದು ಸುಸಜ್ಜಿತವಾದ ವೈಶಿಷ್ಟ್ಯತೆಗಳನ್ನು ಹೊಂದಿರುವ ಪ್ರವೇಶ ಮಟ್ಟದ ಮೋಟಾರ್ ಸೈಕಲ್ ಆಗಿದೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಮಾದರಿಯಲ್ಲಿರುವ ಕೆಲವು ವೈಶಿಷ್ಟ್ಯಗಳು ಗ್ರಾಹಕರನ್ನು ಸೆಳೆಯಲಿದ್ದು, ಮೊದಲನೆಯದು ಎಲ್ಇಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್. ಇದು ಒಂದು ವೃತ್ತಾಕಾರದ ಘಟಕವಾಗಿದ್ದು, ಇದು ಗಾತ್ರದಲ್ಲಿ ತುಂಬಾ ದೊಡ್ಡದಾಗಿಲ್ಲವಾದರೂ ಹೊರ ಅಂಚಿನ ವಿವಿಧ ಕಾರ್ಯಗಳಿಗಾಗಿ ಹಲವಾರು ಟೆಲ್-ಟೇಲ್ ಲೈಟ್‌ಗಳನ್ನು ಒಳಗೊಂಡಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಇದರ ಒಳಗೆ ಸಾಕಷ್ಟು ಸಣ್ಣದಾದ ಎಲ್‌ಸಿಡಿ ಪರದೆಯಿದ್ದು, ಅದು ಸಾಕಷ್ಟು ಮಾಹಿತಿಯನ್ನು ಸವಾರರಿಗೆ ಒದಗಿಸುತ್ತದೆ. ಇದರಲ್ಲಿ ನೀವು ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಟ್ರಿಪ್ ಮೀಟರ್‌ಗಳು, ಫ್ಯೂಲ್ ಗೇಜ್ ಸೇರಿದಂತೆ ಇಂಧನ ದಕ್ಷತೆ, ಡಿಸ್ಟೆನ್ಸ್ ಟು ಎಂಟಿ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಅನ್ನು ಸಹ ಪಡೆಯುತ್ತೀರಿ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಇದನ್ನು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಬಹುದಾಗಿದ್ದು, ಇದು ಹೆಚ್ಚಿನ ವೈಶಿಷ್ಟ್ಯತೆಗಳಿಗೆ ಅನುಮತಿಸುತ್ತದೆ. ನೀವು ಇದರಲ್ಲಿ ಕರೆಗಳನ್ನು ಸ್ವೀಕರಿಸಬಹುದು/ತಿರಸ್ಕರಿಸಬಹುದು ಮತ್ತು ರೋನಿನ್‌ನ ಉಪಕರಣ ಕ್ಲಸ್ಟರ್ ಮೂಲಕ ನಿಮ್ಮ ಸಂಗೀತವನ್ನು ಸಹ ನಿಯಂತ್ರಿಸಬಹುದಾಗಿದ್ದು, ಎಲ್‌ಸಿಡಿಯಲ್ಲಿ ರೈನ್ ಮತ್ತು ಅರ್ಬನ್ ಮೋಡ್‌ಗಳ ಎಬಿಎಸ್ ವಿಧಾನಗಳನ್ನು ಸಹ ಪ್ರದರ್ಶಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಮೂರು-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳನ್ನು ನೀಡಿದ್ದು, ಇದು ಸವಾರನಿಗೆ ಹೆಚ್ಚು ಆರಾಮದಾಯಕ ಮತ್ತು ಆತ್ಮವಿಶ್ವಾಸದ ಸವಾರಿಗಾಗಿ ಸಹಕಾರಿಯಾಗಿದೆ. ಆದರೆ ಈ ವೈಶಿಷ್ಟ್ಯವು ಟಾಪ್-ಸ್ಪೆಕ್ ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದು, ಕಸ್ಟಮೈಜ್ಡ್ ಮೂಲಕ ಇತರೆ ಮಾದರಿಗಳಿಗೆ ಜೋಡಣೆ ಮಾಡಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಎಂಜಿನ್ ಕಾರ್ಯಕ್ಷಮತೆ ಮತ್ತು ರೈಡಿಂಗ್ ಅನಿಸಿಕೆ

ಟಿವಿಎಸ್ ಹೊಸ ರೋನಿನ್ ಮಾದರಿಯಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅಂಶವೆಂದರೆ ಅದರ ಎಂಜಿನ್ ಮತ್ತು ಅದನ್ನು ವಿನ್ಯಾಸಗೊಳಿಸಿದ ವಿಧಾನ ಎನ್ನಬಹುದು. ಇದು ಅಪಾಚೆ ಆರ್‌ಟಿಆರ್ 200 4V ಯಲ್ಲಿ ಕಂಡುಬರುವ ಎಂಜಿನ್‌ ಆಧಾರದ ಮೇಲೆ 225.9 ಸಿಸಿ ಆಯಿಲ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, ಹೊಸ ಮಾದರಿಗಾಗಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ವಾಸ್ತವವಾಗಿ ಟಿವಿಎಸ್ ಕಂಪನಿಯು ಹೊಸ ಬೈಕ್ ಮಾದರಿಯಲ್ಲಿ ಕಡಿಮೆ ಮತ್ತು ಮಧ್ಯಮ ಶ್ರೇಣಿಯ ಟ್ರಾಕ್‌ಬಿಲಿಟಿ ಮೇಲೆ ಕೇಂದ್ರೀಕರಿಸಿದ್ದು, ಬೋರ್ ಮತ್ತು ಸ್ಟ್ರೋಕ್ ಈಗ 66 ಮಿ.ಮೀ ಮೂಲಕ ಸ್ಕ್ವೇರ್ಡ್ ಎಂಜಿನ್‌ಗೆ ಸಮಾನ ಸಮತೋಲನವನ್ನು ಅನುಮತಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಆಯಿಲ್ ಕೂಲಿಂಗ್ ಸಿಸ್ಟಂ ಎಂಜಿನ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಿದ್ದು, ಇದು 7,750 ಆರ್‌ಪಿಎಂನಲ್ಲಿ 20.12 ಬಿಎಚ್‌ಪಿ ಉತ್ಪಾದಿಸಿದಲ್ಲಿ 3,750 ಆರ್‌ಪಿಎಂನಲ್ಲಿ 19.93 ಎನ್ಎಂ ಗರಿಷ್ಠ ಟಾರ್ಕ್ ಔಟ್‌ಪುಟ್ ಅನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕಿನ ಆಸನವು 795 ಎಂಎಂ ಎತ್ತರದೊಂದಿಗೆ ಉತ್ತಮ ಆಸನ ಸೌಲಭ್ಯ ಒದಗಿಸಲಿದ್ದು, ಫುಟ್‌ಪೆಗ್‌ಗಳು ಮಧ್ಯದಲ್ಲಿ ಹೊಂದಿಸಲ್ಪಟ್ಟಿವೆ. ಅದು ಹೆಚ್ಚು ಆರಾಮದಾಯಕವಾಗಿದ್ದು, ದೂರದ ಸವಾರಿಯಲ್ಲೂ ಇದು ನಿಮಗೆ ಆಯಾಸ ಉಂಟು ಮಾಡುವುದಿಲ್ಲ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕ್ ಮಾದರಿಯಲ್ಲಿ ಟಿವಿಎಸ್ ಅತ್ಯಂತ ಶಾಂತವಾದ ಇಂಟಿಗ್ರೇಟೆಡ್ ಸ್ಟಾರ್ಟರ್ ಮೋಟಾರ್ ಅನ್ನು ಬಳಸಿದ್ದು, ಟಿವಿಎಸ್ ಸ್ವಾಮ್ಯದ GTT (ಗ್ಲೈಡ್ ಥ್ರೂ ಟೆಕ್ನಾಲಜಿ) ಇದರಲ್ಲಿ ಬಳಕೆ ಮಾಡಲಾಗಿದೆ. ಇದು ಕಡಿಮೆ ವೇಗದ ಸ್ಥಗಿತವನ್ನು ತಡೆಯುವುದಲ್ಲದೇ ಸ್ಟಾಪ್-ಆಂಡ್-ಗೋ ಟ್ರಾಫಿಕ್‌ನಲ್ಲಿ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಜೊತೆಗೆ ಹೊಸ ಬೈಕಿನಲ್ಲಿ ಏರ್ ಬಾಕ್ಸ್, ಕ್ಯಾಮ್ ಡ್ಯಾಂಪನಿಂಗ್ ಮತ್ತು ಎಕ್ಸಾಸ್ಟ್ ಸಿಸ್ಟಮ್ ಅನ್ನು ಮರುವಿನ್ಯಾಸಗೊಳಿಸುವ ಮೂಲಕ ಎಕ್ಸಾಸ್ಟ್ ನೋಟ್‌ನಲ್ಲಿ ಉತ್ತಮ ವಿನ್ಯಾಸ ನೀಡಿದ್ದು, ಆದಾಗ್ಯೂ ಮೂರು ಅಂಕಿಯ ವೇಗದಲ್ಲಿ ಎಂಜಿನ್ ಸ್ವಲ್ಪ ಒತ್ತಡವನ್ನು ಅನುಭವಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಆದರೆ ಹೊಸ ಬೈಕ್ ಮಾದರಿಯು ಪ್ರತಿ ಗಂಟೆಗೆ 90 ಕಿ.ಮೀ ವೇಗದಲ್ಲಿ ತುಂಬಾ ಆರಾಮದಾಯಕವಾಗಿದ್ದು, ಗರಿಷ್ಠ ಟಾರ್ಕ್ ನಿಜವಾಗಿಯೂ 3,750 ಆರ್‌ಪಿಎಂನಲ್ಲಿ ಬರುತ್ತದೆ. ಇದು ಟಾರ್ಕ್ ಅಲೆಯ ಮೇಲೆ ಸವಾರಿ ಮಾಡಲು ತುಂಬಾ ಸುಲಭವಾಗಿದ್ದು, 7,750 ಆರ್‌ಪಿಎಂನಲ್ಲಿ ಬರುವ ಗರಿಷ್ಠ ವಿದ್ಯುತ್ ಉತ್ಪಾದನೆಯು ಕೇವಲ ಥ್ರೊಟಲ್‌ನ ಟ್ವಿಸ್ಟ್ ಮಾಡಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ವಿಶೇಷವಾಗಿ ಹೊಸ ಬೈಕ್ ಅನ್ನು 3,750 ಆರ್‌ಪಿಎಂ ಮತ್ತು 7,750 ಆರ್‌ಪಿಎಂ ನಡುವೆ ಉತ್ತಮ ಸವಾರಿಯನ್ನು ಅನುಭವಿಸಬಹುದಾಗಿದ್ದು, ಹಿಂಬದಿಯ ಸವಾರರ ಜೊತೆಗೆ ರೈಡ್ ಮಾಡುವಾಗಲೂ ಬೈಕ್ ಉತ್ತಮ ಕಾರ್ಯಕ್ಷಮತೆ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೀಗಾಗಿ ಇದು ದಿನನಿತ್ಯದ ಸವಾರಿಯ ಜೊತೆಗೆ ದೂರದ ಪ್ರಯಾಣಕ್ಕೂ ಉತ್ತಮವಾಗಿದ್ದು, ಶೋವಾ ಬಿಗ್-ಪಿಸ್ಟನ್ ಡೌನ್ ಸೈಡ್ ಫೋರ್ಕ್‌ನಿಂದ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಷೆಂಷನ್ ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಈ ಮೂಲಕ ಇದು ಖಂಡಿತವಾಗಿಯೂ ರೇಸ್‌ಟ್ರಾಕ್‌ಗೆ ತೆಗೆದುಕೊಳ್ಳಲು ಬಯಸುವ ರೀತಿಯ ಮೋಟಾರ್‌ಸೈಕಲ್ ಅಲ್ಲದ್ದಿದರೂ ನಿಮ್ಮ ದಿನನಿತ್ಯದ ಸವಾರಿಗೆ ಸಾಕಷ್ಟು ಅನುಕೂರವಾಗಿರಲಿದೆ ಎನ್ನಬಹುದಾಗಿದ್ದು, ಬ್ರೇಕಿಂಗ್ ಸೌಲಭ್ಯಕ್ಕಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ನಾವು ರೈಡ್ ಮಾಡಿದ ಟಾಪ್-ಸ್ಪೆಕ್ ಡ್ಯುಯಲ್-ಚಾನೆಲ್ ಎಬಿಎಸ್ ಸೇರಿದಂತೆ ಹಲವು ಉನ್ನತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ನೀವು ಎರಡು ರೀತಿಯ ಎಬಿಎಸ್ ಮೋಡ್‌ಗಳನ್ನು ಪಡೆಯುತ್ತೀರಿ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಸವಾರಿಗೆ ಅನುಕೂಲಕರವಾಗಿವ ರೈನ್ ಮತ್ತು ಅರ್ಬನ್ ಎಬಿಎಸ್ ಮೋಡ್‌ಗಳಿದ್ದು, ತುರ್ತು ಬ್ರೇಕಿಂಗ್ ಸೌಲಭ್ಯವು ಈ ಬೈಕಿನ ಮತ್ತೊಂದು ಉತ್ತಮ ತಾಂತ್ರಿಕ ಅಂಶವಾಗಿದೆ. ಹಾಗೆಯೇ ಟಿವಿಎಸ್ ರೋನಿನ್‌ಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಹೊಚ್ಚ ಹೊಸ ಟೈರ್‌‌ಗಳು ಉತ್ತಮ ಹಿಡಿತ ಹೊಂದಿವೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸದಾಗಿ ನೀಡಲಾಗಿರುವ ಯುರೋಗ್ರಿಪ್ ರೆಮೊರಾ ಟೈರ್‌ಗಳು ಅದ್ಭುತವಾಗಿದ್ದು, ಹೊಸ ಟೈರ್‌ಗಳು ಡ್ಯುಯಲ್-ಪರ್ಪಸ್ ಟೈರ್ ವೈಶಿಷ್ಟ್ಯತೆ ಹೊಂದಿದ್ದು, ಆರಾಮದಾಯಕ ಸವಾರಿಯೊಂದಿಗೆ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಹೊಸ ಬೈಕ್ ಯಶಸ್ವಿಯಾಗಿದೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ರೂಪಾಂತರಗಳು ಮತ್ತು ಬಣ್ಣ ಆಯ್ಕೆಗಳು

ಹೊಸ ರೋನಿನ್ ಮಾದರಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು ವಿವಿಧ ರೂಪಾಂತರಗಳನ್ನು ಪರಿಚಯಿಸಿದ್ದು, ಇದರಲ್ಲಿ ನೀವು ಆಯ್ಕೆಮಾಡುವ ರೂಪಾಂತರದ ಪ್ರಕಾರ ಮೋಟಾರ್‌ಸೈಕಲ್‌ನ ಬಣ್ಣ ಆಯ್ಕೆ ಬದಲಾಗುತ್ತದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಎಸ್ಎಸ್

ಹೊಸ ರೋನಿನ್ ಬೆಸ್ ವೆರಿಯೆಂಟ್ ಆಗಿರುವ ಎಸ್ಎಸ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.49 ಲಕ್ಷ ಬೆಲೆ ಹೊಂದಿದ್ದು, ಈ ರೂಪಾಂತರದಲ್ಲಿ ನೀವು ಎರಡು ಸಿಂಗಲ್-ಟೋನ್ ಬಣ್ಣದ ಆಯ್ಕೆಗಳನ್ನು ಮಾತ್ರ ಪಡೆಯುತ್ತೀರಿ. ಇದರಲ್ಲಿ ಮ್ಯಾಗ್ಮಾ ರೆಡ್ ಮತ್ತು ಲೈಟ್ನಿಂಗ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಿದ್ದು, ಇದರಲ್ಲಿ ಅಪ್ ಸೈಡ್ ಡೌನ್ ಫೋರ್ಕ್ ಅನ್ನು ಕಪ್ಪು ಬಣ್ಣ ಹೊಂದಿದ್ದು, ಈ ರೂಪಾಂತರದಲ್ಲಿ ಯಾವುದೇ ರೀತಿಯ ಸಂಪರ್ಕ ವೈಶಿಷ್ಟ್ಯಗಳನ್ನು ನೀಡಲಾಗಿಲ್ಲ. ಜೊತೆಗೆ ಹೊಸ ಬೈಕ್ ಸಿಗಲ್ ಚಾನೆಲ್ ಎಬಿಎಸ್ ಆಯ್ಕೆ ಮಾತ್ರ ನೀಡಲಾಗಿದ್ದು, ಇದರಲ್ಲಿ ಹೊಂದಾಣಿಕೆ ಮಾಡಬಹುದಾದ ಲೀವರ್ ಸೌಲಭ್ಯಗಳಿಲ್ಲ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಡಿಎಸ್

ಮಧ್ಯಮ ಕ್ರಮಾಂಕದ ಡಿಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.58 ಲಕ್ಷ ಬೆಲೆ ಹೊಂದಿದ್ದು, ಈ ರೂಪಾಂತರದಲ್ಲಿ ನೀವು ಮುಂಭಾಗದ ಫೋರ್ಕ್‌ಗೆ ಗೋಲ್ಡನ್ ಫಿನಿಶ್ ಕಲರ್ ಅನ್ನು ಪಡೆಯುತ್ತೀರಿ. ಹಾಗೆಯೇ ಹೊಸ ಮೋಟಾರ್‌ಸೈಕಲ್‌ನಲ್ಲಿ ಡೆಲ್ಟಾ ಬ್ಲೂ ಮತ್ತು ಸ್ಟಾರ್‌ಗೇಜ್ ಕಪ್ಪು ಬಣ್ಣದ ಆಯ್ಕೆಗಳು ಲಭ್ಯವಿದ್ದು, ಈ ರೂಪಾಂತರವು ಮಿಶ್ರಲೋಹದ ಚಕ್ರಗಳಲ್ಲಿ ಕೆಂಪು ಪಿನ್‌ಸ್ಟ್ರೈಪ್ ಸ್ಟಿಕ್ಕರ್‌ಗಳನ್ನು ಪಡೆಯುತ್ತಿರಿ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ರೋನಿನ್ ಟಿಡಿ

ಹೊಸ ಬೈಕಿನ ಟಾಪ್ ಸ್ಪೆಕ್ ರೂಪಾಂತರವು ಎಕ್ಸ್‌ಶೋರೂಂ ಪ್ರಕಾರ ರೂ. 1.69 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಹೊಂದಾಣಿಕೆ ಮಾಡಬಹುದಾದ ಲಿವರ್‌ ಸೌಲಭ್ಯಗಳಿವೆ. ಈ ರೂಪಾಂತರದಲ್ಲಿ ಗ್ಯಾಲಕ್ಟಿಕ್ ಗ್ರೇ ಮತ್ತು ಡಾನ್ ಆರೆಂಜ್ ಬಣ್ಣಗಳ ಆಯ್ಕೆಯಿದ್ದು, ಇದರಲ್ಲಿ ಸ್ಮಾರ್ಟ್‌ಎಕ್ಸ್‌ ಕನೆಕ್ಟೆ ಸೌಲಭ್ಯವಿದೆ.

ಫಸ್ಟ್ ರೈಡ್ ರಿವ್ಯೂ: ಸ್ಕ್ರಾಂಬ್ಲರ್ ವಿನ್ಯಾಸದಲ್ಲಿ ಮಿಂಚಿದ ಟಿವಿಎಸ್ ರೋನಿನ್!

ಹೊಸ ಬೈಕ್ ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

#Unscripted ಮತ್ತು #NewWayOfLife ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟಿವಿಎಸ್ ಕಂಪನಿಯು ಹೊಸ ರೋನಿನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ವಿಭಿನ್ನವಾದ ವಿನ್ಯಾಸದೊಂದಿಗೆ ಅತ್ಯುತ್ತಮ ಸವಾರಿ ಅನುಭವವನ್ನು ಖಾತ್ರಿಪಡಿಸುತ್ತದೆ. ಟಿವಿಎಸ್ ಮೋಟಾರ್ ಕಂಪನಿಯು ಈಗಾಗಲೇ ವಿವಿಧ ದ್ವಿಚಕ್ರ ವಾಹನಗಳ ಸರಣಿ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಹೊಸ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ ಎನ್ನಬಹುದು.

Most Read Articles

Kannada
English summary
Tvs ronin first ride review design specs performance features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X