ಫಸ್ಟ್ ರೈಡ್ ರಿವ್ಯೂ: ಪರ್ಫಾಮೆನ್ಸ್ ವಿಭಾಗದಲ್ಲಿ 2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಕಂಪನಿಗಳು ಹಲವಾರು ಪರ್ಫಾಮೆನ್ಸ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಎಂಟ್ರಿ ಲೆವಲ್ ವಿಭಾಗದಲ್ಲಿ ತೀವ್ರ ಬೆಳವಣಿಗೆಯು ಹೊಸ ಸಂಚಲನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸುತ್ತಿದ್ದು, ಹೊಸ ಆವೃತ್ತಿಯೊಂದಿಗೆ ಮತ್ತಷ್ಟು ಸುಧಾರಣೆ ಕಂಡಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಪರ್ಫಾರ್ಮೆನ್ಸ್ ಮೋಟಾರ್ ಸೈಕ್ಲಿಂಗ್ ವಿಭಾಗವು ಕಳೆದ ಒಂದು ದಶಕ ಅವಧಿಯಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಟಿವಿಎಸ್ ಕಂಪನಿಯ ಆರ್‌ಟಿಆರ್ ಸರಣಿಯು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಇತ್ತೀಚೆಗೆ ಕಂಪನಿಯು ಅಪಾಚೆ ಆರ್‌ಟಿಆರ್ 160 4ವಿ ಮಾದರಿಯ 2021ರ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಪರ್ಫಾಮೆನ್ಸ್ ಕುರಿತಾದ ಮಾಹಿತಿಯನ್ನು ಈ ವಿಮರ್ಶೆ ಲೇಖನದಲ್ಲಿ ತಿಳಿಯೋಣ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

2005ರಲ್ಲೇ ಪ್ರಾರಂಭವಾಗಿರುವ ಅಪಾಚೆ ಸರಣಿ ಬೈಕ್‌ಗಳು ಎಂಟ್ರಿ ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ಸಹ 2021ರ ಮಾದರಿಯೊಂದಿಗೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಆರಂಭದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು 147.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 13.5-ಬಿಹೆಚ್‌ಪಿ ಉತ್ಪಾದನಾ ಶಕ್ತಿ ಹೊಂದಿತ್ತು. ಇದೀಗ 160ಸಿಸಿ ಒಳಗಿನ ಬೈಕ್ ವಿಭಾಗದಲ್ಲೇ ಇದು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್ ಮಾದರಿಯಾಗಿ ಗುರುತಿಸಿಕೊಂಡಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಈ ಮೂಲಕ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ಈ ವಿಭಾಗದಲ್ಲಿನ ಉತ್ತಮ ಮಾದರಿಯಾಗಿ ಗುರುತಿಕೊಳ್ಳುತ್ತಿದೆ. ಹಾಗಾದರೆ ಹೊಸ ಮೋಟಾರ್‌ಸೈಕಲ್‌ನಲ್ಲಿ ಗ್ರಾಹಕರ ಇಷ್ಟಪಡುಬಹುದಾದ ಅಂಶಗಳು ಯಾವುವು? ಮತ್ತು ಇನ್ನು ಸುಧಾರಣೆ ಆಗಬಹುದಾಗಿದ್ದ ತಾಂತ್ರಿಕ ಮಾಹಿತಿಗಳನ್ನು ಈ ಲೇಖನದಲ್ಲಿ ನಾವು ಪಟ್ಟಿಮಾಡಿದ್ದೇವೆ. ಹೊಸ ಬೈಕ್ ಕಾರ್ಯಕ್ಷಮತೆ ತಿಳಿಯಲು ನಗರ ಪ್ರದೇಶದಲ್ಲಿ ಮಾತ್ರವಲ್ಲ ಹೈವೆಯಲ್ಲೂ ರೈಡಿಂಗ್ ಮಾಡಲಾಗಿದ್ದು, ಹೊಸ ಬೈಕ್ ಕುರಿತಾದ ಪ್ರಮುಖ ಮಾಹಿತಿಗಳನ್ನು ಇಲ್ಲಿ ಹಂತ-ಹಂತವಾಗಿ ಚರ್ಚಿಸಲಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಡಿಸೈನ್ ಮತ್ತು ಸ್ಟೈಲ್

ವಿನ್ಯಾಸ ಮತ್ತು ಸ್ಟೈಲಿಂಗ್ ವಿಷಯದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು 2019ರಲ್ಲಿ ಬಿಡುಗಡೆ ಮಾಡಲಾದ ಬಿಎಸ್ 6 ಮಾದರಿಯು ಬಹುತೇಕ ವಿನ್ಯಾಸಗಳನ್ನು 2021ರ ಮಾದರಿಯಲ್ಲೂ ಪಡೆದುಕೊಂಡಿದ್ದು, ಅಪ್ ಫ್ರಂಟ್ ಬೂಮರಾಂಗ್ ಆಕಾರದ ಎಲ್ಇಡಿ ಪೊಸಿಷನ್ ಲೈಟ್ಸ್‌ನೊಂದಿಗೆ ಲೋಮ್ ಬೀಮ್ ಹೆಡ್‌ಲ್ಯಾಂಪ್ ಮಾದರಿಗಳೇ ಡೇ ಲೈಟ್ ರನ್ನಿಂಗ್ ಲೈಟ್ ಮಾದರಿಯಾಗಿ ಬದಲಾಯಿಸಲಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೈ ಬೀಮ್‌ ಸಕ್ರಿಯಗೊಳಿಸಿದಾಗ ಹೆಡ್‌ಲ್ಯಾಂಪ್‌ನ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಏಕಕಾಲದಲ್ಲಿ ಆನ್ ಆಗಲಿದ್ದು, ಹೆಚ್ಚಿನ ಪ್ರಕಾಶಮಾನ ಹೊರಸೂಸುತ್ತವೆ. ಟಿವಿಎಸ್ ಅಪಾಚೆ ಆರ್‌ಆಕ್ 160 ರ ವಿನ್ಯಾಸ ಮತ್ತು ಶೈಲಿಯು ಮೋಟಾರ್‌ಸೈಕಲ್‌ನ ಬಹುತೇಕ ಕಡೆಗಳಲ್ಲಿ ಶಾರ್ಪ್ ಲೈನ್ ಮತ್ತು ಎಡ್ಜ್‌ಗಳನ್ನು ಪಡೆದುಕೊಂಡಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹಾಗೆಯೇ ಸೈಡ್ ಪ್ರೊಫೈಲ್‌ನಿಂದ ನೋಡಿದಾಗ ಪರ್ಫಾಮೆನ್ಸ್ ಪ್ರಿಯರ ಗಮನವು ಹೊಸ ಬೈಕಿನ ವಿನೂತನ ವಿನ್ಯಾಸದ ಇಂಧನ ಟ್ಯಾಂಕ್‌ನತ್ತ ಸೆಳೆಯಲ್ಪಡಲಿದ್ದು, ಬೈಕ್ ವಿನ್ಯಾಸಕರು ಹಲವಾರು ಸ್ಟೈಲಿನ್ ಅಂಶಗಳನ್ನು ಇಂಧನ ಟ್ಯಾಂಕ್‌ಗಾಗಿ ಸಿದ್ದಪಡಿಸಿದ್ದಾರೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೊಸ ವಿನ್ಯಾಸದೊಂದಿಗೆ ಉದ್ದವಾದ ಇಂಧನ ಟ್ಯಾಂಕ್ ನೋಟ, ಸವಾರರ ಮೊಣಕಾಲುಗಳ ಬಳಿ ಫ್ಲಕ್ಸ್ ವೆಂಟ್ಸ್ ಮತ್ತು ಬದಿಗಳಿಗೆ ರೇಸಿಂಗ್ ಫ್ಲ್ಯಾಗ್ ಗ್ರಾಫಿಕ್ಸ್ ಅನ್ನು ಪಡೆಯಲಿದ್ದು, ಕ್ಯಾಪ್ ಆಫ್‌ಸೆಟ್ ಆಗಿರುವ ಇಂಧನ ಫಿಲ್ಲರ್ ಮತ್ತು ಇಂಧನದ ಟ್ಯಾಂಕ್ ಮೇಲೆ ಬಿಳಿ ಬಣ್ಣದ ರೇಸಿಂಗ್ ಸ್ಟ್ರಿಪ್ ನೀಡಲಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಅಪಾಚೆ ಆರ್‌ಟಿಆರ್ 160 4ವಿ 2021ರ ಮಾದರಿಯಲ್ಲಿ ಟಿವಿಎಸ್ ಕಂಪನಿಯು 6-ಸ್ಪೋಕ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಿದ್ದು, ಇದು ಪೆಟಲ್ ಡಿಸ್ಕ್ ಸಂಜೋಸಿದಾಗ ಉತ್ತಮ ಶೈಲಿಯಿಂದ ಕೂಡಿರುವುದನ್ನು ಖಚಿತಪಡಿಸುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹಾಗೆಯೇ ಟಿವಿಎಸ್ ಕಂಪನಿಯು ಹೊಸ ಮೋಟಾರ್ಸೈಕಲ್‌ನಲ್ಲಿ ಡಬಲ್-ಬ್ಯಾರೆಲ್ ಎಕ್ಸಾಸ್ಟ್ ಜೋಡಣೆ ಮಾಡಿದ್ದು, ಇದು ಬೈಕ್ ವಿನ್ಯಾಸದ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂಭಾಗದ ತುದಿಯ ಮೇಲ್ಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಕೆಳಭಾಗದಲ್ಲಿ ಟೈಲ್ ಹಗ್ಗರ್ ಹೊಂದಿರುವ ಕೂಡಾ ಸರಳ ವಿನ್ಯಾಸವಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೊಸ ಬೈಕಿನ ವಿಮರ್ಶೆ ಸಂದರ್ಭದಲ್ಲಿ ನಾವು ಚಾಲನೆ ಮಾಡಿದ ರೇಸಿಂಗ್ ರೆಡ್ ಕಲರ್ ಮಾದರಿಯು ಅಪಾಚೆ ಆರ್‌ಟಿಆರ್ 160 4ವಿ ಬೈಕಿನಲ್ಲಿ ಹೆಚ್ಚು ಬೇಡಿಕೆಯ ಬಣ್ಣದ ಮಾದರಿಯಾಗಿದ್ದು, ರೇಸಿಂಗ್ ರೆಡ್ ಪೇಂಟ್ ಮತ್ತು ಬಿಳಿ ಮತ್ತು ಕಪ್ಪು ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಸೈಡ್ ಪ್ರೊಫೈಲ್ ಉತ್ತಮವಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಪ್ರಮುಖ ತಾಂತ್ರಿಕ ಲಕ್ಷಣಗಳು

ಪ್ರವೇಶ ಮಟ್ಟದ ಕಾರ್ಯಕ್ಷಮತೆಯ ಮೋಟಾರ್‌ಸೈಕಲ್ ಆಗಿರುವುದರಿಂದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಿಲ್ಲವಾದರೂ ಎಂಜಿನ್ ಸಾಮರ್ಥ್ಯ ಮತ್ತು ಬೆಲೆ ವಿಚಾರವಾಗಿ ಕೆಲವು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ ಎನ್ನಬಹುದು. ಹೊಸ ಬೈಕಿನಲ್ಲಿ ಕಂಪನಿಯು ರೇಸ್ ಟ್ಯೂನ್ಡ್ ಮಾಡುವ ಫ್ಯೂಲ್ ಇಂಜೆಕ್ಷನ್ ಟೆಕ್ನಾಲಜಿ ಬಳಕೆ ಮಾಡಿದ್ದು, ಇದು ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಅತ್ಯುತ್ತಮ ಥ್ರೊಟಲ್ ಪ್ರತಿಕ್ರಿಯೆಯನ್ನು ಖಾತ್ರಿಪಡಿಸುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೊಸ ಅಪಾಚೆ ಆರ್‌ಟಿಆರ್ 160 4ವಿ 2021ರ ಮಾದರಿಯಲ್ಲಿ ಕಂಪನಿಯು ಸಿಂಗಲ್-ಚಾನೆಲ್ ಎಬಿಎಸ್ ಜೋಡಣೆ ಮಾಡಿದ್ದು, ವಿಶೇಷವಾಗಿ ರೇಸ್ ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಈ ಬೈಕ್ ಸಿದ್ದಪಡಿಸಲಾಗಿದೆ. ಎಲ್‌ಸಿಡಿ ಪರದೆಯು ಮೂಲಕ ವಿವಿಧ ಸಲಕರಣೆಗಳ ಕಾರ್ಯನಿರ್ವಹಣೆಯನ್ನು ಸುಲಭವಾಗಿ ತಿಳಿಯಬಹುದಾಗಿದ್ದು, ಇದರಲ್ಲಿ ಟ್ಯಾಕೋಮೀಟರ್, ಸ್ಪೀಡೋಮೀಟರ್, ಫ್ಯೂಲ್ ಗೇಜ್, ಗೇರ್ ಪೊಸಿಷನ್, ಟೈಮ್ ಇಂಡಿಕೇಟರ್‌ಗಳನ್ನು ಪ್ರದರ್ಶಿಸುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಎಂಜಿನ್ ಮತ್ತು ಕಾರ್ಯಕ್ಷಮತೆ

ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಮಾದರಿಯು ಬಿಎಸ್ 6 ನಿಯಮಾನುಸಾರವಾಗಿ, ಏರ್ ಆ್ಯಂಡ್ ಆಯಿಲ್ ಕೂಲ್ಡ್ ಹೊಂದಿರುವ 159.7 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ 9,250 ಆರ್‌ಪಿಎಂನಲ್ಲಿ ಗರಿಷ್ಠ 17.38 ಬಿಹೆಚ್‌ಪಿ ಮತ್ತು 7,250 ಆರ್‌ಪಿಎಂನಲ್ಲಿ ಗರಿಷ್ಠ 14.73 ಎನ್ಎಂ ಟಾರ್ಕ್ ಉತ್ಪಾದನೆಯನ್ನು ಹೊಂದಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಮೇಲೆ ತಿಳಿಸಿದಂತೆ, ಹೊಸ ಮೋಟಾರ್ಸೈಕಲ್‌ನಲ್ಲಿ ರೇಸ್ ಟ್ಯೂನ್ಡ್ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆ ಮಾಡಿರುವುದರಿಂದ ಇದು ಉತ್ತಮ ಥ್ರೊಟಲ್ ಪ್ರತಿಕ್ರಿಯೆಯನ್ನು ಅನುಮತಿಸಲಿದ್ದು, ಕಂಪನಿಯ ಪ್ರಕಾರ, ಎಂಜಿನ್ ಅನ್ನು ಅದರ ಚಾಂಪಿಯನ್‌ಶಿಪ್ ವಿಜೇತ 160ಸಿಸಿ ಪ್ರೊ ಸ್ಟಾಕ್ ರೇಸ್ ಬೈಕ್‌ಗಳಿಂದ ಪಡೆಯಲಾಗಿದೆಯೆಂತೆ. ಈ ಮೂಲಕ ಹೊಸ ಬೈಕ್ ಮಾದರಿಯು ಪ್ರತಿ ಗಂಟೆಗೆ 114 ಕಿಮೀ ಗರಿಷ್ಠ ವೇಗದೊಂದಿಗೆ ಚಲಿಸಬಹುದಾಗಿದ್ದು, ರೈಡಿಂಗ್ ಸಂದರ್ಭದಲ್ಲಿ ನಾವು ಹೊಸ ಬೈಕ್ ಮಾದರಿಯನ್ನು ಗರಿಷ್ಠ 123 ಕಿ.ಮೀ ಪ್ರತಿ ಗಂಟೆ ತಲುಪಿಸಲು ಪಯತ್ನಿಸಲಾಯ್ತು.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

147 ಕಿಲೋಗ್ರಾಂಗಳಷ್ಟಿರುವ ಹೊಸ ಬೈಕ್ ಮಾದರಿಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಕೇವಲ 4.3 ಸೆಕೆಂಡುಗಳಲ್ಲಿ 0-60 ಕಿ.ಮೀ ಕ್ವಿಕ್ ಫಾಸ್ಟ್ ಚಾಲನೆ ಸಾಧ್ಯವಾಗಿದ್ದು, ‘ಒನ್-ಟಚ್' ಸ್ಟಾರ್ಟರ್ ಬಟನ್ ಅನ್ನು ಥಂಬ್ ಮಾಡಿದ ನಂತರ ಸವಾರನನ್ನು ಸ್ವಾಗತಿಸಲಿದ್ದು, ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಮಾದರಿಯು ಖಂಡಿತವಾಗಿಯೂ ಹೊಸ ಬೈಕ್ ಪರ್ಫಾಮೆನ್ಸ್‌ಗೆ ಉತ್ತಮ ಆಯ್ಕೆಯಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಈ ಮೂಲಕ ಬೈಕ್ ಚಾಲನೆಯಲ್ಲಿರುವಾಗ ಎಂಜಿನ್ ನಯವಾಗಿರಲಿದ್ದು, ಸುಮಾರು 4,500 ಆರ್‌ಪಿಎಂವರೆಗೆ ಒರಟಾದ ಶಬ್ದ ಉಂಟು ಮಾಡಲಿದ್ದು, 4,500 ಆರ್‌ಪಿಎಂ ಹೆಚ್ಚಾದಾಗ ಇನ್ನಷ್ಟು ಶಬ್ದ ಉತ್ಪಾದನೆ ಮಾಡಿದರೂ ಹೈವೆ ಮಾತ್ರವಲ್ಲ ನಗರಪ್ರದೇಶದಲ್ಲಿನ ಪ್ರಯಾಣದಲ್ಲೂ ನಯವಾಗಿರುವುದನ್ನು ಗುರುತಿಸಬಹುದು.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹಾಗೆಯೇ ಟಿವಿಎಸ್ ಅಪಾಚೆ ಆರ್ಟಿಆರ್ 160 4 ವಿ ನಿಧಾನವಾಗಿ ಚಲಿಸುವಾಗ ಅಥವಾ ಸಂಚಾರ ದಟ್ಟಣೆಯಲ್ಲಿ ಮುನ್ನುಗ್ಗುವಾಗ ಮೋಟಾರ್ಸೈಕಲ್‌ಗೆ ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ) ಸಹಕಾರಿಯಾಗಲಿದ್ದು ಇದು ಈ ಸೆಗ್ಮೆಂಟ್ನಲ್ಲಿರುವ ಹೊಸ ವೈಶಿಷ್ಟ್ಯವಾಗಿದೆ. ಜೊತೆಗೆ ಮೋಟಾರ್ಸೈಕಲ್ ಅನ್ನು ಚಾಲನೆ ಮಾಡಬೇಕಾದಾಗ ಅನಗತ್ಯವಾಗಿ ಥ್ರೊಟಲ್ ಅನ್ನು ತಿರುಚ ಬೇಕಿಲ್ಲ. ಕ್ಲಚ್ ಲಿವರ್ ಅನ್ನು ಸರಾಗವಾಗಿ ಬಿಡುಗಡೆಯಾಗಲು ಇದು ಬೇಕಾಗಲಿದ್ದು, ಎಂಜಿನ್ ಆರ್‌ಪಿಎಂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ ಮತ್ತು ಬೈಕ್ ಸರಾಗವಾಗಿ ಮುಂದೆ ಹೋಗುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಇದು ಮೊದಲ ಗೇರ್‌ನಲ್ಲಿ 7 ಕಿ.ಮೀ / ಗಂ, ಎರಡನೇ ಗೇರ್‌ನಲ್ಲಿ 12 ಕಿ.ಮೀ / ಗಂ ಮತ್ತು ಮೂರನೇ ಗೇರ್‌ನಲ್ಲಿ 17 ಕಿ.ಮೀ / ಗಂ ವರೆಗೆ ಮಾಡಬಹುದಾಗಿದ್ದು, ಎಲ್ಲೂ ಕೂಡಾ ಥ್ರೊಟಲ್ ಅನ್ನು ಬಳಸದೆ ಚಾಲನೆ ಮಾಡಬಹುದು. ನಿಧಾನವಾಗಿ ಚಲಿಸುವ ಟ್ರಾಫಿಕ್ ದಟ್ಟಣೆಯಲ್ಲಿ ಇದು ವರದಾನವಾಗಿದ್ದು, ಹೆದ್ದಾರಿಗಳಲ್ಲಿ ಟಿವಿಎಸ್ ಅಪಾಚೆ ಆರ್ಟಿಆರ್ 160 4 ವಿ ಉತ್ತಮ ಕ್ರೂಸಿಂಗ್ ಸಾಮರ್ಥ್ಯಗಳೊಂದಿಗೆ ಬರುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹಾಗೆಯೇ ಐದನೇ ಗೇರ್‌ನಲ್ಲಿ ಇದು 6,000 ಆರ್‌ಪಿಎಂಗಿಂತ ಹೆಚ್ಚಾದಾಗ 70 ಕಿ.ಮೀ / ಗಂ ವೇಗ ಪಡೆದುಕೊಳ್ಳಲಿದ್ದು, 80 ಕಿ.ಮೀ / ಗಂ ಸುಮಾರು 7,000 ಆರ್‌ಪಿಎಂನಲ್ಲಿ ಬರುತ್ತದೆ. ಇದು ಸುಮಾರು 8,000 ಆರ್‌ಪಿಎಂನಲ್ಲಿ 100 ಕಿಮೀ / ಗಂ ವೇಗ ಪಡೆದುಕೊಳ್ಳಬಹುದಾಗಿದ್ದು, ದೀರ್ಘಕಾಲದವರೆಗೆ ಅಲ್ಲಿಯೇ ಉಳಿಯುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಟ್ರಿಪಲ್ ಅಂಕಿಯ ವೇಗದಲ್ಲಿ ತುಸು ಎಚ್ಚರಿಕೆ ವಹಿಸಬೇಕಿದ್ದು, ಹಿಂದಿಕ್ಕುವ ಪ್ರಯತ್ನಗಳಲ್ಲಿ ಹೊಸ ಬೈಕಿಗೆ ಇನ್ನಷ್ಟು ಶಕ್ತಿ ಪೂರೈಕೆ ಸಾಮರ್ಥ್ಯ ಬೇಕಾಗಬಹುದು.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಚಾಲನೆ ಮತ್ತು ನಿರ್ವಹಣೆ

ಹೊಸ ಬೈಕಿನ ಚಾಲನೆ ಮತ್ತು ಹ್ಯಾಂಡ್ಲಿಂಗ್ ವಿಚಾರದಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಉತ್ತಮವಾಗಿದ್ದು, 2005ರಲ್ಲಿ ಮೊಟ್ಟಮೊದಲ ಬಾರಿಗೆ ಅಪಾಚೆ 150ರ ಚೊಚ್ಚಲ ಮಾದರಿಗಿಂತಲೂ ನಿರ್ವಹಣಾ ವಿಚಾರದಲ್ಲಿ ಉತ್ತಮವಾಗಿವೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಉತ್ತಮವಾಗಿ ವಿನ್ಯಾಸಗೊಳಿಸಲಾದ ಚಾಸಿಸ್ ಮತ್ತು ಸಸ್ಷೆಷನ್‌ಗಳ ಕಡಿಮೆ ತೂಕದೊಂದಿಗೆ ಸವಾರಿಯನ್ನು ಸರಳಗೊಳಿಸಲಿದ್ದು, ಇದು ಖಂಡಿತವಾಗಿಯೂ ಟ್ರ್ಯಾಕ್-ಫೋಕಸ್ಡ್ ಮೋಟಾರ್ಸೈಕಲ್ ಮಾತ್ರವಲ್ಲದೆ ಎಲ್ಲಾ ವಿಭಾಗದಲ್ಲೂ ಗಮನಸೆಳೆಯುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೊಸ ಬೈಕ್ ಟೆಲಿಸ್ಕೋಪಿಕ್ ಫೋರ್ಕ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊಶಾಕ್ ನಿರ್ವಹಿಸಲಿದ್ದು, ಪರ್ಫಾಮೆನ್ಸ್‌ಗೆ ಪೂರಕವಾಗಿದೆ ಅತ್ಯುತ್ತಮವಾಗಿ ಟ್ಯೂನ್ ಮಾಡಲಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಇದರೊಂದಿಗೆ ಹೊಸ ಮೋಟಾರ್ಸೈಕಲ್ ತ್ವರಿತಾಗಿ ದಿಕ್ಕುಗಳನ್ನು ಬದಲಿಸುವಲ್ಲಿ ಸಹ ಉತ್ತಮ ಪ್ರತಿಕ್ರಿಯೆ ಹೊಂದಿದ್ದು, ಇದು ನಗರಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲಿ ಚಾಲನೆ ಮಾಡುವಾಗ ಅನುಕೂಲಕರವಾಗಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ನಾವು ಸವಾರಿ ಮಾಡಿದ ಮೋಟಾರ್‌ಸೈಕಲ್ ಮಾದರಿಯು ಟಾಪ್-ಸ್ಪೆಕ್ ಡಿಸ್ಕ್ ಬ್ರೇಕ್ ಆವೃತ್ತಿಯಾಗಿದ್ದು, ಈ ಮಾದರಿಯ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ. ಅಪ್ ಫ್ರಂಟ್ 270 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 200 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹೊಂದಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹೊಸ ಬೈಕಿನ ಮುಂಭಾಗದ ಬ್ರೇಕ್ ಲಿವರ್ ಸ್ಪಂಜಿನಂತೆ ಭಾಸವಾಗಲಿದ್ದರೂ ಇದು ಉತ್ತಮ ಬೈಟ್ ಮತ್ತು ಶಕ್ತಿಯುತವಾದ ನಿಲುಗಡೆ ಸಾಮರ್ಥ್ಯಗಳನ್ನು ನೀಡುತ್ತದೆ ಮತ್ತು ಹಿಂಭಾಗದ ಬ್ರೇಕ್ ಲಿವರ್ ಕೂಡಾ ಉತ್ತಮವಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಬ್ರೇಕಿಂಗ್ ಅದ್ಭುತವಾಗಿದ್ದು, ಸವಾರನಿಗೆ ಉತ್ತಮ ವಿಶ್ವಾಸವನ್ನು ನೀಡುತ್ತದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಟಿವಿಎಸ್ ಕಂಪನಿಯು ಹೊಸ ಮೋಟಾರ್ಸೈಕಲ್‌ನಲ್ಲಿ ಸಿಂಗಲ್-ಚಾನೆಲ್ ಎಬಿಎಸ್ ಘಟಕವನ್ನು ಜೋಡಿಸಿದ್ದು, ಫ್ರಂಟ್-ಎಂಡ್ ಎಂದಿಗೂ ಜಾರಿಕೊಳ್ಳುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ. ಆದಾಗ್ಯೂ, ಹಿಂಭಾಗದ ತುದಿಯಲ್ಲಿರುವ ತುರ್ತು ಬ್ರೇಕಿಂಗ್ ಅಡಿಯಲ್ಲಿ ಇನ್ನೂ ಉತ್ತಮಗೊಳಿಸಬಹುದಾಗಿದ್ದು, ಟಾರ್ ಅಥವಾ ಕಾಂಕ್ರೀಟ್ ಮೇಲೆ ಅದ್ಭುತ ಮಟ್ಟದ ಹಿಡಿತವನ್ನು ನೀಡುತ್ತವೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ರೂಪಾಂತರಗಳು, ಬಣ್ಣಗಳು ಮತ್ತು ಬೆಲೆ

ಟಿವಿಎಸ್ ಅಪಾಚೆ ಆರ್ಟಿಆರ್ 160 4ವಿ ಮಾದರಿಯನ್ನು ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ಲೂ ಮತ್ತು ರೇಸಿಂಗ್ ರೆಡ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಎಲ್ಲಾ ಮೂರು ಬಣ್ಣಗಳಿಗೂ ಬೆಲೆಗಳು ಒಂದೇ ಆಗಿರುತ್ತವೆ. ಪ್ರವೇಶ ಮಟ್ಟದ ಕಾರ್ಯಕ್ಷಮತೆಯ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನೊಂದಿಗೆ ಬರುವ ಡ್ರಮ್ ಬ್ರೇಕ್ ರೂಪಾಂತರವು ಎಕ್ಸ್‌ಶೋರೂಂ ಪ್ರಕಾರ ರೂ. 1,06,215 ಹೊಂದಿದ್ದು, ಹಿಂಭಾಗದಲ್ಲಿ 200 ಎಂಎಂ ಪೆಟಲ್ ಡಿಸ್ಕ್ ಹೊಂದಿರುವ ಡಿಸ್ಕ್ ಬ್ರೇಕ್ ರೂಪಾಂತರವು ರೂ. 1,09,265 ಬೆಲೆ ಹೊಂದಿದೆ.

2021ರ ಟಿವಿಸ್ ಅಪಾಚೆ ಆರ್‌ಟಿಆರ್ 160 4ವಿ ಹೊಸ ಸಂಚಲನ!

ಇದರೊಂದಿಗೆ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಮಾದರಿಯಲ್ಲೇ ಉತ್ತಮ ಆವೃತ್ತಿಯಾಗಿ ಗುರುತಿಸಿಕೊಳ್ಳುವ ಅಪಾಚೆ ಆರ್ಟಿಆರ್ 160 4ವಿ ಆವೃತ್ತಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಉತ್ತಮ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ಕ್ವಿಕ್ ಸ್ಪೀಡ್‌ನಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗ ಪಡೆದುಕೊಳ್ಳುವಲ್ಲಿ ಹೊಸ ಬೈಕ್ ಎಂಜಿನ್ ಉತ್ತಮ ಆಯ್ಕೆಯಾಗಿರುವುದರ ಜೊತೆಗೆ ಗ್ಲೈಡ್ ಥ್ರೂ ಟೆಕ್ನಾಲಜಿ ಸಹ ನಗರಪ್ರದೇಶದಲ್ಲಿನ ಚಾಲನೆಯನ್ನು ಮತ್ತಷ್ಟು ಸರಳಗೊಳಿಸಿದೆ ಎನ್ನಬಹುದು.

Most Read Articles

Kannada
English summary
2021 TVS Apache RTR 160 4V Detailed Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X