Yezdi Adventure Review: ಯುವಕರ ನೆಚ್ಚಿನ ಯೆಜ್ಡಿ ಅಡ್ವೆಂಚರ್ ಬೈಕ್ ವಿಮರ್ಶೆ.. ಬಿರುಗಾಳಿ ಎಬ್ಬಿಸುವುದು ಪಕ್ಕಾ!

ಯೆಜ್ಡಿ ಮೋಟಾರ್‌ಸೈಕಲ್ಸ್ (Yezdi Motorcycles) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೀನ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರುವ ಹಲವು ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಕಂಪನಿಯು ಹೊಚ್ಚ ಹೊಸ 2024ರ 'ಅಡ್ವೆಂಚರ್' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದು ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ರೀತಿಯಲಿದ್ದು, ಸಾಮಾನ್ಯ ಹಾಗೂ ಕಚ್ಚಾ ರಸ್ತೆ ಎರಡರಲ್ಲೂ ಸುಲಭವಾಗಿ ಓಡಿಸಬಹುದು.

ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿಗೆ ಕೆಲವೇ ದಿನಗಳ ಹಿಂದೆ, ನೂತನ ಯೆಜ್ಡಿ ಅಡ್ವೆಂಚರ್ (Yezdi Adventure) ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ (ಪ್ರಾಯೋಗಿಕ ಸಂಚಾರ) ನಡೆಸಲು ಕಂಪನಿಯಿಂದ ಆಹ್ವಾನ ಬಂದಿತ್ತು. ಅವರು ನೇರವಾಗಿ ಪುಣೆಗೆ ತೆರಳಿ, ಈ ಬೈಕ್‌ನ್ನು ಯಶಸ್ವಿಯಾಗಿ ಓಡಿಸಿದರು. ಅಲ್ಲಿ ನೂತನ ಮೋಟಾರ್‌ಸೈಕಲ್‌ ಕುರಿತಂತೆ ಹಲವು ವಿಚಾರಗಳನ್ನು ಕಂಡುಕೊಂಡರು. ಬನ್ನಿ.. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.

ವಿನ್ಯಾಸ (Design): ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ ವಿನ್ಯಾಸ ಸಾಕಷ್ಟು ಹೊಸತನದಿಂದ ಕೂಡಿದೆ. ಎಂಜಿನ್ ಸುತ್ತಲೂ ಮೆಟಲ್ ಕೇಜ್ (ಲೋಹದ ರಕ್ಷಣಾ ಕವಚ) ಹೊಂದಿದೆ. ಇದನ್ನು ಹಲವರು ಬೈಕ್‌ಗೆ ವಿಭಿನ್ನ ನೋಟವನ್ನು ನೀಡಲು ಬಳಸಿರಬಹುದು ಅಂದುಕೊಳ್ಳುತ್ತಾರೆ. ಆದಾಗ್ಯೂ, ಈ ಮೆಟಲ್ ಕೇಜ್ ಮೋಟಾರ್‌ಸೈಕಲ್‌ನ ಎಂಜಿನ್‌ನ್ನು ಸುರಕ್ಷಿತವಾಗಿರಲು ನೆರವಾಗುತ್ತದೆ.

Yezdi Adventure Review Specs Riding Impressions Design Features Details

ಈ ಬೈಕ್ ಎತ್ತರವಾದ ವಿಂಡ್‌ಶೀಲ್ಡ್‌ ಪಡೆದಿದೆ. ಹೆಡ್‌ಲೈಟ್ ಸೆಟಪ್ ವೃತ್ತಾಕಾರದಲ್ಲಿದ್ದು, ಎಕ್ಸಾಸ್ಟ್ ಪೈಪ್ ಕೂಡ ಅತ್ಯುತ್ತಮವಾಗಿದೆ. ಟೊರ್ನಾಡೊ ಬ್ಲ್ಯಾಕ್, ಮ್ಯಾಗ್ನೈಟ್ ಮೆರೂನ್, ವುಲ್ಫ್ ಗ್ರೇ ಹಾಗೂ ಗ್ಲೇಸಿಯರ್ ವೈಟ್ ಎಂಬ 4 ಆಕರ್ಷಕ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದ್ದು, ನಿಮ್ಮಿಷ್ಟದ ಬಣ್ಣದ ಮೋಟಾರ್‌ಸೈಕಲ್‌ನ್ನು ಖರೀದಿಸಬಹುದು.

ಕಾರ್ಯಕ್ಷಮತೆ, ವಿಶೇಷತೆಗಳು (Specs, Dimensions): ಸಾಹಸಮಯ ಚಾಲನೆಗೆ ಬಳಕೆ ಮಾಡುವ ನಿಟ್ಟಿನಲ್ಲಿ, ಯೆಜ್ಡಿ ಅಡ್ವೆಂಚರ್ ಬೈಕ್‌ನಲ್ಲಿ ಹೊಸದಾದ ಶಕ್ತಿಯುತ ಆಲ್ಫಾ-2 ಆಧಾರಿತ 334 ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌‌ನ್ನು ಅಳವಡಿಕೆ ಮಾಡಲಾಗಿದೆ. ಇದು 30.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 29.9 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

Yezdi Adventure Review Specs Riding Impressions Design Features Details

ಈ ಆಲ್ಫಾ-2 ಎಂಜಿನ್‌‌ನ್ನು ಹೆಚ್ಚಿನ ಶಕ್ತಿ ಉತ್ಪಾದಿಸಲು ಸಾಧ್ಯವಾಗುವಂತೆ ಸಿದ್ದಪಡಿಸಲಾಗಿದೆ. ಜೊತೆಗೆ ಕಂಪನ (ವೈಬ್ರೇಶನ್) ಕಡಿಮೆ ಮಾಡಲು ಮತ್ತು ಇಂಧನ (ಫ್ಯುಯೆಲ್) ಬಳಕೆ ಹತೋಟಿಗೆ ತರುವಂತೆಯೂ ಅಭಿವೃದ್ಧಿಪಡಿಸಲಾಗಿದೆ. ಗ್ರೌಂಡ್ ಕ್ಲಿಯರೆನ್ಸ್ (ನೆಲದ ಎತ್ತರ) 220 ಎಂಎಂ ಇರುವುದರಿಂದ ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ನ್ನು ಕಚ್ಚಾ ರಸ್ತೆ (ಆಫ್-ರೋಡ್)ಯಲ್ಲಿ ಸಹ ಸುಲಭವಾಗಿ ಓಡಿಸಬಹುದು.

ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ 188 ಕೆಜಿ ತೂಕವಿದೆ. ದೊಡ್ಡದಾದ 15.5-ಲೀಟರ್ ಸಾಮರ್ಥ್ಯದ ಇಂಧನ (ಫ್ಯುಯೆಲ್) ಟ್ಯಾಂಕ್‌ನ್ನು ಪಡೆದಿದೆ. ಒಮ್ಮೆ ಪೂರ್ತಿ ಪೆಟ್ರೋಲ್ ತುಂಬಿಸಿದರೆ, ದೂರದ ಊರುಗಳಿಗೆ ನಿರ್ಭಿತರಾಗಿ ಪ್ರಯಾಣಿಸಬಹುದು. ಇಂಧನ ದಕ್ಷತೆ (ಫ್ಯುಯೆಲ್ ಎಫಿಷಿಯೆನ್ಸಿ) ವಿಚಾರವಾಗಿ ಹೇಳುವುದಾದರೆ, 30 ರಿಂದ 35 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

Yezdi Adventure Review Specs Riding Impressions Design Features Details

ಹೊಸ ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ನ ಚಾಸಿಸ್ ಬಹಳಷ್ಟು ಉತ್ತಮವಾಗಿದೆ. ಸಾಮಾನ್ಯ ಹಾಗೂ ಕಚ್ಚಾ ರಸ್ತೆಯಲ್ಲಿ ಸುಲಭವಾಗಿ ಬೈಕ್‌ನ್ನು ಚಲಾಯಿಸಲು ನೆರವಾಗುವಾಗುತ್ತದೆ. ಹಳ್ಳ-ದಿಣ್ಣೆದಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವಾಗ ಎಂಜಿನ್‌‌ಗೆ ಯಾವುದೇ ತರಹದಲ್ಲಿ ಹಾನಿಯಾಗುವುದನ್ನು ತಪ್ಪಿಸಲು ಹೊಸದಾದ ಸಂಪ್ ಗಾರ್ಡ್‌ನ್ನು ಉಪಯೋಗಿಸಲಾಗಿದೆ. ಇದು ಮೋಟಾರ್‌ಸೈಕಲ್‌ನ ಎಂಜಿನ್‌‌ ಕೆಟ್ಟು ಹೋಗುತ್ತದೆ ಎಂಬ ಭಯವನ್ನು ಸವಾರರಿಂದ ದೂರ ಮಾಡುತ್ತಿದೆ.

ಈ ಬೈಕ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಆನ್‌ಬೋರ್ಡ್ ಯುಎಸ್‌‍ಬಿ ಚಾರ್ಜರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸೀಟ್ ಹೈಟ್ (ಆಸನ ಎತ್ತರ) 815 ಎಂಎಂ ಇದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆ ಸಲುವಾಗಿ ಡಬಲ್ ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ.

Yezdi Adventure Review Specs Riding Impressions Design Features Details

ಸವಾರಿಯ ಅನುಭವ (Riding Impressions): ಯೆಜ್ಡಿ ಅಡ್ವೆಂಚರ್ ಬೈಕ್‌ನ್ನು ಎಲ್ಲ ವಿಧವಾದ ರಸ್ತೆಯಲ್ಲಿಯೂ ಲೀಲಾಜಾಲವಾಗಿ ಚಲಾಯಿಸಬಹುದು. ಆಸನವು ಹೆಚ್ಚು ಆರಾಮದಾಯಕವಾಗಿದೆ. ಇದರ ಟೈರ್‌ಗಳು ರಸ್ತೆಯಲ್ಲಿ ಬಿಗಿಯಾದ ಹಿಡಿತ ಒದಗಿಸುತ್ತವೆ. 6-ಸ್ಪೀಡ್ ಗೇರ್‌ಬಾಕ್ಸ್‌ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ. ನೂತನ ಮೋಟಾರ್‌ಸೈಕಲ್‌ಗೆ ಅಸಿಸ್ಟ್ & ಸ್ಲಿಪ್ ಕ್ಲಚ್, 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ವರದಾನವಾಗಿದ್ದು, ಎಂಜಿನ್‌‌ ಶಬ್ದವು ಜೋರಾಗಿದೆ. ಬ್ರೇಕ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ ಸಾಕಷ್ಟು ಅತ್ಯಾಧುನಿಕವಾಗಿದ್ದು, ನೋಡಿದ ಕೂಡಲೇ ಯುವಕರನ್ನು ಸೆಳೆದು ಬಿಡುತ್ತದೆ. ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ಇದರ ವಿಂಡ್‌ಶೀಲ್ಡ್‌ ಮತ್ತಷ್ಟು ಎತ್ತರವಾಗಿದ್ದರೆ, ತುಂಬಾ ಚೆನ್ನಾಗಿರುತ್ತಿತ್ತು ಎಂಬ ಅಂಶವನ್ನು ಗುರುತಿಸಲಾಗಿತು. ಅದು ಬಿಟ್ಟರೆ, ಯಾವುದೇ ಸಣ್ಣ ದೋಷಗಳು ಕಾಣಿಸಲಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್ ರೂಪಾಂತರ (ವೇರಿಯೆಂಟ್)ಗಳಿಗೆ ಅನುಗುಣವಾಗಿ ರೂ.2.10 ಲಕ್ಷದಿಂದ ರೂ.2.23 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

Yezdi Adventure Review Specs Riding Impressions Design Features Details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 5, 2024, 11:00 [IST]
English summary
Yezdi adventure review specs riding impressions design features details
Read more on yezdi india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+