Hero Xpulse 210 Review: ಹೀರೋ ಎಕ್ಸ್‌ಪಲ್ಸ್ 210 ರಿವ್ಯೂ.. ರಸ್ತೆ ಮೇಲಿನ 'ರಾಜ' ಆಗುತ್ತಾ?
ಹೀರೋ ಮೋಟೋಕಾರ್ಪ್ (Hero MotoCorp), ಜನಪ್ರಿಯ ಸ್ವದೇಶಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ಕೈಗೆಟುಳುವ ಬೆಲೆಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುವ ಹೆಚ್ಚು ಜನ್ನಮನ್ನಣೆ ಗಳಿಸಿದೆ. ಸದ್ಯ, ಭಾರೀ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯಲು ಕಂಪನಿಯು ಮುಂದಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಇಟಲಿಯಲ್ಲಿ ಜರುಗಿನಿಂದ ಮಿಲನ್ ಮೋಟಾರ್‌ಸೈಕಲ್ ಶೋನಲ್ಲಿ ಹೊಚ್ಚ ಹೊಸ ಎಕ್ಸ್‌ಪಲ್ಸ್ 210 (Xpulse 210) ಬೈಕ್‌ನ್ನು ಪರಿಚಯಿಸಿತ್ತು.
ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿಗೆ ನೂತನ 'ಹೀರೋ ಎಕ್ಸ್‌ಪಲ್ಸ್ 210' ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ ಮಾಡಲು ಕಂಪನಿ ಕಡೆಯಿಂದ ಆಹ್ವಾನ ಬಂದಿತ್ತು. ಅವರು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದರು.. ಅಲ್ಲಿ ಈ ಬೈಕ್‌ನ್ನು ಪರೀಕ್ಷಿಸಿದ್ದಾರೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ವಿನ್ಯಾಸವೇನು.. ಕಾರ್ಯಕ್ಷಮತೆ ಹೇಗಿದೆ.. ವೈಶಿಷ್ಟ್ಯಗಳು ಏನೆಂಬುದನ್ನು ತಿಳಿಯೋಣ.

ವಿನ್ಯಾಸ & ವೈಶಿಷ್ಟ್ಯಗಳು (Design & Features): ಹೊಸ ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಮೋಟಾರ್‌ಸೈಕಲ್ ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಇದು ನೋಡುಗರನ್ನು ಸೆಳೆಯುತ್ತದೆ. ಅದರಲ್ಲೂ ಈ ಬೈಕ್ ಯುವಕರು ಮೆಚ್ಚುವ ರೀತಿಯಲ್ಲಿದ್ದು, ಆಫ್-ರೋಡಿಂಗ್ ಚಾಲನೆಗೆ ಹೇಳಿ ಮಾಡಿಸಿದಂತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ನೂತನ ಎಕ್ಸ್‌ಪಲ್ಸ್ 210 ಮೋಟಾರ್‌ಸೈಕಲ್ ವಿನ್ಯಾಸದ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಹಕ್ಕಿಯ ಕೊಕ್ಕಿನಂತಹ ಫೆಂಡರ್, ಎತ್ತರವಿರುವ ವಿಂಡ್‌ಸ್ಕ್ರೀನ್, ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಮುಸ್ಕ್ಯುಲರ್ ಫ್ಯುಯೆಲ್ ಟ್ಯಾಂಕ್, ಸಿಂಗಲ್ - ಪೀಸ್ ಸೀಟ್, ವೈರ್-ಸ್ಪೋಕ್ಡ್ ವೀಲ್‌ಗಳು, ಟ್ಯೂಬ್ಯುಲರ್ ಹ್ಯಾಂಡಲ್‌ಬಾರ್‌ನ್ನು ಹೊಂದಿದೆ. ಇದರೊಟ್ಟಿಗೆ ಹಿಂಭಾಗ (ರೇರ್) ಗ್ರಾಬ್ ಹ್ಯಾಂಡಲ್‌ಗಳು ಹಾಗೂ ಕ್ಯಾರಿಯರ್‌ನ್ನು ಪಡೆದಿದೆ.

ಈ ಬೈಕ್‌ನಲ್ಲಿರುವ ಸೀಟ್ ಸಾಕಷ್ಟು ಅತ್ಯತ್ತಮವಾಗಿದ್ದು, ಸುಲಭ ಚಾಲನೆಗೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ ಕಾಲುಗಳನ್ನು ಆರಾಮದಾಯಕವಾಗಿ ನೆಲದ ಮೇಲು ಕೂಡ ಉರಬಹುದು. ವಿಶೇಷವಾಗಿ ಮುಚ್ಚಿದ 'ಎಕ್ಸಾಸ್ಟ್'ನ್ನು ಒಳಗೊಂಡಿದೆ. ಇದು ಹಿಂಬದಿ ಕುಳಿತಿರುವ ಸವಾರನಿಗೆ ಹೆಚ್ಚು ಶಾಖ ತಗುಲದಂತೆ ತಡೆಯುತ್ತದೆ.
ಹೊಸ ಹೀರೋ ಎಕ್ಸ್‌ಪಲ್ಸ್ 210 ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್-ಎಂಡ್ ವೇರಿಯೆಂಟ್), 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ನಕಲ್ ಗಾರ್ಡ್‌ಗಳು ಹಾಗೂ ಡುಯಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿದೆ. ಜೊತೆಗೆ ರೋಡ್, ಟ್ರಯಲ್ & ಆಫ್-ರೋಡ್ ಎಂಬ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.

ನೂತನ ಹೀರೋ ಎಕ್ಸ್‌ಪಲ್ಸ್ 210 ಮೋಟಾರ್‌ಸೈಕಲ್‌ನ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ-ಲೆವೆಲ್ ವೇರಿಯೆಂಟ್), ಎಲ್‌ಸಿಡಿ ಇನ್ಸ್ಟ್ರುಮೆಂಟ್ ಸೆಟಪ್, ಪುಟ್ಟದಾದ ಫ್ಲೈಸ್ಕ್ರೀನ್ ಹಾಗೂ ಸಿಂಗಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿದೆ. ಇದು ಬಿಟ್ಟರೆ, ಎರಡು ರೂಪಾಂತರಗಳಲ್ಲಿ ಬಹುತೇಕ ವೈಶಿಷ್ಟ್ಯಗಳು ಒಂದೇಯಾಗಿವೆ.
ಕಾರ್ಯಕ್ಷಮತೆ (Performance): ಈ ಬೈಕ್ ಶಕ್ತಿಯುತವಾದ ಪವರ್‌ಟ್ರೇನ್‍ನ್ನು ಹೊಂದಿದೆ. ಇದು 210 ಸಿಸಿ ಲಿಕ್ವಿಡ್-ಕೂಲ್ಡ್, 4-ವಾಲ್ವ್, ಡಿಒಹೆಚ್‌ಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 9,250 ಆರ್‌ಪಿಎಂನಲ್ಲಿ 24.2 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 7,250 ಆರ್‌ಪಿಎಂನಲ್ಲಿ 20.7 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ಆಯ್ಕೆಯೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಹೊಸ ಹೀರೋ ಎಕ್ಸ್‌ಪಲ್ಸ್ 210 ಮೋಟಾರ್‌ಸೈಕಲ್, ಮುಂಭಾಗ (ಟೆಲಿಸ್ಕೋಪಿಕ್ ಫೋರ್ಕ್), ಹಿಂಭಾಗ (ರೇರ್) 10-ಸ್ಟೆಪ್ ಅಡ್ಜಸ್ಟಬಲ್ ಗ್ಯಾಸ್-ಚಾರ್ಜ್ಡ್ ಮಾನೋಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಹಾಗೆಯೇ ಮುಂದೆ 21-ಇಂಚು & ಹಿಂದೆ 18-ಇಂಚಿನ ಸ್ಪೋಕ್ಡ್ ವೀಲ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಟೈರ್‌ಗಳನ್ನು ಪಡೆದಿದೆ.
ಚಾಲನಾ ಅನುಭವ: ಹೊಸ ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಮೋಟಾರ್‌ಸೈಕಲ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ ಮೇಲೆ ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಸಬಹುದು. ಸಾಮಾನ್ಯ ಡಾಂಬರು ಹಾಗೂ ಬೆಟ್ಟ - ಗುಡ್ಡದ ರಸ್ತೆಯಲ್ಲಿ ಅದ್ಬುತವಾಗಿ ಕಾರ್ಯನಿರ್ವಹಿಸಿತು.

ಈ ಬೈಕ್‌ನ್ನು ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಕೂಡ ರಸ್ತೆಯ ಸೂಕ್ಷ್ಮವಾದ ತಿರುವುಗಳಲ್ಲಿ ಅದ್ಬುತವಾಗಿ ಕೆಲಸ ಮಾಡಿತು. ಇದರಲ್ಲಿ ಬಳಕೆ ಮಾಡಿರುವ ಯೂರೋಗ್ರಿಪ್ ಟೈರ್‌ಗಳು ರಸ್ತೆಯ ಮೇಲೆ ಹೆಚ್ಚಿನ ಬಲವಾದ ಹಿಡಿತವನ್ನು ಒದಗಿಸಿತು. ಈ ಮೋಟಾರ್‌ಸೈಕಲ್ ಹೊಂದಿರುವ ಎಬಿಎಸ್ ಸಿಸ್ಟಮ್ ಸಹ ಚೆನ್ನಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೂತನ ಹೀರೋ ಎಕ್ಸ್‌ಪಲ್ಸ್ 210 ಬೈಕ್, ರೂ.1.76 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಹೆಚ್ಚು ಆಕರ್ಷಕವಾಗಿರುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರ ಆಯ್ಕೆಯ ದ್ವಿಚಕ್ರ ವಾಹನವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








