Ather 450S Review: ಬೆಂಗಳೂರಿನ ಎಥರ್ 450ಎಸ್ ವಿಮರ್ಶೆ, ಹೇಗಿದೆ ಗೊತ್ತಾ?
ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಬರುವ ಮುನ್ನ, ಇ-ಸ್ಕೂಟರ್‌ಗಳಿಗೆ ಬೆಂಗಳೂರಿನ ಎಥರ್ ಎನರ್ಜಿ (Ather Energy) ಪರ್ಯಾಯ ಪದವಾಗಿ ಜನಜನಿತವಾಗಿತ್ತು. ಕಂಪನಿಯ 450 ಸರಣಿ ಸ್ಕೂಟರ್‌ಗಳು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿತ್ತು. ಇದೀಗ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ.
ನೂತನ ಎಥರ್ 450ಎಸ್ ಇ-ಸ್ಕೂಟರ್ ಬಹುತೇಕ 450ಎಕ್ಸ್ ಮಾದರಿಗೆ ಹೋಲಿಕೆಯಾಗಿತ್ತದೆ. ಆದರೆ, ರೇಂಜ್ ಕೊಂಚ ಮಟ್ಟಿಗೆ ಕಡಿಮೆಯಿದ್ದು, ರೂ. 1.30 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ದರಕ್ಕೆ ತಕ್ಕಂತೆ ವೈಶಿಷ್ಟ್ಯಗಳನ್ನು ಹೊಂದಿದೆಯೇ.. ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ನಮ್ಮ ತಂಡಕ್ಕೆ ಈ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡಲು ಬೆಂಗಳೂರಿನಲ್ಲಿ ಅವಕಾಶ ದೊರೆಯಿತು ಬನ್ನಿ ಹೇಗಿದೆ ಎಂಬುದನ್ನು ತಿಳಿಯೋಣ.

ಎಥರ್ 450ಎಸ್ ವಿನ್ಯಾಸ & ವೈಶಿಷ್ಟ್ಯ: ಹೊಸ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ನೋಡಿದ ತಕ್ಷಣ, ಸದ್ಯ, ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 450ಎಕ್ಸ್ ಇ-ಸ್ಕೂಟರ್‌ನಂತೆ ಕಾಣುತ್ತದೆ. ಇವೆರಡು ಒಂದೇ ತರಹ ಹೋಲಿಕೆಯಾಗುವಂತಹ ವಿನ್ಯಾಸವನ್ನು ಹೊಂದಿವೆ. ಹೊರಭಾಗದ ಬಾಡಿ ಪ್ಯಾನೆಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಗುರುತಿಸುವುದು ಕಷ್ಟ. ತೀಕ್ಷವಾಗಿ ಗಮನಿಸಿದರೆ, ಈ 450ಎಸ್ ಸ್ಕೂಟರ್, ಸೈಡ್ ಭಾಗದಲ್ಲಿ ಸಣ್ಣ ಸ್ಟಿಕ್ಕರ್‌ಗಳಂತಹ ಬ್ಯಾಡ್ಜ್‌ಗಳಿವೆ.
ಅದರಲ್ಲೂ ಡಿಸ್ಪ್ಲೇ ಹಾಗೂ ಹ್ಯಾಂಡಲ್‌ಬಾರ್ ಗಳನ್ನು ನೋಡಿದರೆ, ಒಂದಷ್ಟು ಬದಲಾವಣೆಗಳು ಕಾಣಸಿಗಲಿದ್ದು, ಇದರಿಂದ 450ಎಸ್ ಹಾಗೂ 450ಎಕ್ಸ್ ಸ್ಕೂಟರ್‌ಗಳು ವಿನ್ಯಾಸದ ವಿಚಾರದಲ್ಲಿ ಬೇರೆಯಾಗಿವೆ ಎಂಬುದನ್ನು ತಿಳಿಯಬಹುದು. ಈ 450ಎಸ್ ಎಲೆಕ್ಟ್ರಿಕ್ ಸ್ಕೂಟರ್, ಜಾಯ್‌ಸ್ಟಿಕ್‌ನಿಂದ ಕಂಟ್ರೋಲ್ ಮಾಡಬಹುದಾದ TFT ತಂತ್ರಜ್ಞಾನವನ್ನು ಪಡೆದಿರುವ LCD ನಾನ್-ಟಚ್ ಡಿಸ್ಪ್ಲೇಯನ್ನು ಹೊಂದಿದೆ. 450ಎಕ್ಸ್ ಸ್ಕೂಟರ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಪಡೆದಿದೆ.

ಟಚ್‌ಸ್ಕ್ರೀನ್ ಇಲ್ಲದ ಕಾರಣ, ಹ್ಯಾಂಡಲ್‌ಬಾರ್‌ನಲ್ಲಿ ಹೊಸದಾದ ಸ್ವಿಚ್‌ಗೇರ್‌ಗಳನ್ನು 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಒಳಗೊಂಡಿದೆ. ರಿವರ್ಸ್ ಮೋಡ್ ಅನ್ನು ಬಲಭಾಗದ ಸ್ವಿಚ್ ಮೂಲಕ ಅಕ್ಟಿವ್ ಮಾಡಬಹುದು. ಇನ್ನೂ ಅನೇಕ ಕೆಲಸಗಳಿಗೆ ಈ ಸ್ವಿಚ್‌ಗೇರ್‌ಗಳು ನೆರವಾಗುತ್ತವೆ. ಹೊಸ 450ಎಸ್ ಡಿಸ್‌ಪ್ಲೇಯು 450ಎಕ್ಸ್ (7 ಇಂಚು) ಸ್ಕೂಟರ್‌ನ ಗಾತ್ರಕ್ಕೆ ಹೋಲಿಕೆಯಾಗಿದ್ದರೂ, ಡೇಟಾವನ್ನು ವಿಭಿನ್ನವಾಗಿ ತೋರಿಸುತ್ತದೆ.
ಸ್ಕ್ರೀನ್ ಮಧ್ಯಭಾಗದಲ್ಲಿ ಟೈಮ್ ತೋರಿಸಲಾಗುತ್ತದೆ. ಅದರ ಕೆಳಗಡೆ ಸ್ಪೀಡೋಮೀಟರ್, ಈ ಚಾರ್ಜ್ ನಲ್ಲಿ ಎಷ್ಟು ದೂರ ಸ್ಕೂಟರ್ ಓಡುತ್ತದೆ ಎಂಬುದನ್ನು ನೋಡಬಹುದು. ಬಲಭಾಗದಲ್ಲಿ ರೈಡಿಂಗ್ ಮೋಡ್ ಕಾಣಬಹುದು. ಸ್ಕ್ರೀನ್ ಎಡಭಾಗದಲ್ಲಿ ರೈಡ್ ಡೇಟಾ, ಕಾಲ್ ಹಾಗೂ ಮೆಸೇಜ್ ಬಗ್ಗೆ ಮಾಹಿತಿ ಸಿಗುತ್ತದೆ. ಇದರೊಟ್ಟಿಗೆ ಮ್ಯೂಸಿಕ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಬಲಭಾಗ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅಲರ್ಟ್ ಇರುತ್ತದೆ.

ಹೆಚ್ಚುವರಿಯಾಗಿ, 'ಪ್ರೊ ಪ್ಯಾಕ್' ಪಡೆದರೆ, ಬ್ಲೂಟೂತ್ ಆಕ್ಟಿವ್ ಮಾಡಬಹುದಾದ ಎಲ್ಲ ಫೀಚರ್ಸ್ ದೊರೆಯುತ್ತದೆ. ಆಗ, ಈ 450ಎಸ್ ಇ-ಸ್ಕೂಟರ್ ಎಕ್ಸ್ ಶೋರೂಂ ಬೆಲೆ ರೂ.1.43 ಲಕ್ಷವಾಗಲಿದೆ. ವಿಶೇಷವಾಗಿ, ಈ ಸ್ಕೂಟರ್, 'ಡೀಪ್-ವ್ಯೂ' ಡಿಸ್‌ಪ್ಲೇ ಹೊಂದಿದೆ. ಅದು, ಆಟೋ ಬ್ರೈಟ್ನೆಸ್ ಫೀಚರ್ ಆಗಿದ್ದು, ಎಂತಹ ಸನಿವೇಶದಲ್ಲೂ ಸ್ಕ್ರೀನ್ ಅನ್ನು ಪ್ರಕಾಶಮಾನವಾಗಿಡುತ್ತದೆ. ಜೊತೆಗೆ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡುವಾಗ ಕೊಂಚ ಮಳೆಯಿತ್ತು. ಆಗಲು ಸ್ವಿಚ್‌ಗೇರ್‌ಗಳನ್ನು ಸುಲಭವಾಗಿ ಉಪಯೋಗಿಸಲು ಸಾಧ್ಯವಾಯಿತು.
ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ & ಸವಾರಿ ಅನುಭವ: ನೂತನ 450ಎಸ್ ಇ-ಸ್ಕೂಟರ್ 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಶೀಘ್ರದಲ್ಲಿಯೇ 450ಎಕ್ಸ್ ಇ-ಸ್ಕೂಟರ್ ನಂತೆ ದೊಡ್ಡದಾದ ಬ್ಯಾಟರಿ ಪ್ಯಾಕ್ ಹೊಂದಲಿದೆ. ಸದ್ಯ, 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 115 ಕಿಲೋಮೀಟರ್ ರೇಂಜ್ ನೀಡುತ್ತದೆ. ಆದರೆ, ಸ್ಮಾರ್ಟ್ಇಕೋ ಮೋಡ್‌ನಲ್ಲಿ ಗರಿಷ್ಠ 90 ಕಿಮೀ ರೇಂಜ್ ಕೊಡುವ ಸಾಮರ್ಥ್ಯ ಹೊಂದಿದೆ.

ಇಕೋ ಮೋಡ್‌ನಲ್ಲಿ 85 ಕಿಮೀ, ರೈಡ್ ಮೋಡ್‌ನಲ್ಲಿ 75 ಕಿಮೀ ಹಾಗೂ ಸ್ಪೋರ್ಟ್ ಮೋಡ್‌ನಲ್ಲಿ 70 ಕಿಮೀ ರೇಂಜ್ ಕೊಡುತ್ತದೆ. ಆದರೆ, ನಮ್ಮ ತಂಡಕ್ಕೆ ಎಲ್ಲ ಮೋಡ್‌ನಲ್ಲಿ ಪರೀಕ್ಷಿಸಲು ಅವಕಾಶ ಸಿಗಲಿಲ್ಲ. ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ, ಮನೆ ವಿದ್ಯುತ್ ಬಳಕೆಯಲ್ಲಿ ಈ ಸ್ಕೂಟರ್ ಬ್ಯಾಟರಿ, ಶೇಕಡ 0 - 80% ಚಾರ್ಜ್ ಆಗಲು 6 ಗಂಟೆ 36 ನಿಮಿಷಬೇಕು.
ಅದೇ ಶೇಕಡ 0 - 100% ಚಾರ್ಜ್ ಆಗಲು ಮತ್ತೆರಡು ಗಂಟೆ ಹೆಚ್ಚುವರಿಯಾಗಿ ಬೇಕಾಗುತ್ತದೆ. ಈ ಸ್ಕೂಟರ್ ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟರ್ 7.24 bhp ಗರಿಷ್ಠ ಪವರ್ ಹಾಗೂ 22 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಕೇವಲ 3.9 ಸೆಕೆಂಡ್‌ಗಳಲ್ಲಿ 0 - 40 km/h ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಲಿಸಿದರೆ, 450ಎಸ್ ಇ-ಸ್ಕೂಟರ್ ಇಕೋ ಹಾಗೂ ರೈಡ್ ಎಂಬ ಮೋಡ್‌ಗಳು ವಿಭಿನ್ನ ಥ್ರೊಟಲ್ ಮ್ಯಾಪ್ ಸೆಟಪ್‌ನ್ನು ಹೊಂದಿವೆ ಎಂದು ಎಥರ್ ಕಂಪನಿ ಹೇಳಿಕೊಂಡಿದೆ. ಇವೆರೆಡು ಮೋಡ್‌ಗಳು ನಗರದಲ್ಲಿ ಸಂಚರಿಸುವಾಗ ಸವಾರರಿಗೆ ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ. ಸ್ಪೋರ್ಟ್ ಮೋಡ್ ಎಂದಿನಂತೆ ತೀಕ್ಷ್ಣವಾಗಿದ್ದು, ಈ ಮೋಡ್‌ನಲ್ಲಿ ಬೇಗನೇ ಬ್ಯಾಟರಿ ಖಾಲಿಯಾಗುತ್ತದೆ. ಸವಾರರು, ಈ ರೈಡ್ ಮೋಡ್ ಬಳಸದಿರುವುದು ಉತ್ತಮ.
ಈ ಸ್ಕೂಟರ್, ಉತ್ತಮವಾದ ಟೈಯರ್ ಆಯ್ಕೆಯನ್ನು ಹೊಂದಿದ್ದು, ಉತ್ತಮವಾಗಿ ಸ್ಕೂಟರ್ ಓಡಿಸಲು ಸಹಾಯಕವಾಗಿದೆ. ಅದರಲ್ಲೂ, ಸಸ್ಪೆನ್ಷನ್ ಸೆಟಪ್ ಅತ್ಯುತ್ತಮವಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಸುಲಭವಾಗಿ 450ಎಸ್ ಇ-ಸ್ಕೂಟರ್‌ನ್ನು ಓಡಿಸಬಹುದು. ಒಂದಷ್ಟು ಸಣ್ಣಪುಟ್ಟ ಸಮಸ್ಯೆಗಳಿವೆ. ಆದರೂ, ಸವಾರರಿಗೆ ಉತ್ತಮವಾದ ರೈಡಿಂಗ್ ಅನುಭವನ್ನು ನೀಡುತ್ತದೆ. ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಇದ್ದು, ಬ್ರೇಕ್ ಹಾಕಿದೊಡನೆ ಸ್ಕೂಟರ್ ನಿಲ್ಲುತ್ತದೆ.

ಡ್ರೈವ್ ಸ್ಮಾರ್ಕ್ ಅಭಿಪ್ರಾಯ: ಎಥರ್ ಎನರ್ಜಿಯ ಸ್ಕೂಟರ್ 450 ಸರಣಿಯ ಹೊಸ ಸ್ಕೂಟರ್ ಇದಾಗಿದ್ದು, ನೀವು ಎಂಟ್ರಿ ಲೆವೆಲ್ ಸ್ಕೂಟರ್ ಹುಡುಕುತ್ತಿದ್ದಾರೆ, ಈ 450ಎಸ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ನಗರ ಸಂಚಾರಕ್ಕೆ ಸೂಕ್ತವಾಗಿದೆ. ಬೆಲೆಯು ಕೈಗೆಟುಕುವಂತಿದ್ದು, ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದ್ದು, ನಿಮ್ಮ ಆಯ್ಕೆಯ ದ್ವಿಚಕ್ರ ವಾಹನವಾಗಿ ಪರಿಗಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications