ಪರ್ಫೆಕ್ಟ್‌ ಫ್ಯಾಮಿಲಿಗೆ ಪರ್ಫೆಕ್ಟ್‌ ಸ್ಕೂಟರ್‌: ಏಥರ್‌ ರಿಜ್ಟಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿವ್ಯೂ ವಿಡಿಯೋ!

ಭಾರತದ ಪ್ರಖ್ಯಾತ ಎಲೆಕ್ಟ್ರಿಕ್‌ ದ್ವಿಚಕ್ರ ನಿರ್ಮಾಣ ಕಂಪನಿ ಏಥರ್‌, ತನ್ನ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ತಂದಿದೆ. ತನ್ನ ಇತರ ಮಾದರಿಗಳಿಗಿಂತ ವಿಭಿನ್ನವಾಗಿರುವ ಈ ಸ್ಕೂಟರ್‌, ಒಂದು ಕುಟುಂಬದ ದಿನಂಪ್ರತಿ ಉಪಯೋಗಕ್ಕೆ ಹೇಳಿ ಮಾಡಿಸಿದಂತಿದೆ. ಈ ಸ್ಕೂಟರ್‌ ಅನ್ನು ನಾವು ರೈಡ್‌ ಮಾಡಿದ್ದು ನಮ್ಮ ಅನುಭವವನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ವಿನ್ಯಾಸ: ಈ ಸ್ಕೂಟರ್‌ನ ವಿನ್ಯಾಸ ಈ ಹಿಂದೆ ಹೇಳಿದಂತೆ ಒಂದು ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ. ರಿಜ್ಟಾ ಮಾರುಕಟ್ಟೆಗೆ ಬರುವ ವರೆಗೆ, ಏಥರ್‌ ಸ್ಕೂಟರ್‌ಗಳೆಂದರೆ ಗಾತ್ರದಲ್ಲಿ ಚಿಕ್ಕದು ಎಂಬ ರೀತಿಯಲ್ಲಿತ್ತು. ಆದರೆ ರಿಜ್ಟಾ ಸ್ಕೂಟರ್‌ ಮಾರುಕಟ್ಟೆಗೆ ಲಾಂಚ್ ಆಗುವ ಮೂಲಕ ಈ ಮಾತಿಗೆ ತೆರೆ ಬಿದ್ದಿದೆ. ಈ ಬಾರಿ ಏಥರ್‌ ತನ್ನ ರಿಜ್ಟಾ ಸ್ಕೂಟರ್‌ ಅನ್ನು ತನ್ನ 450 ಸರಣಿಯ ಸ್ಕೂಟರ್‌ಗಳಿಗಿಂತಲೂ ದೊಡ್ಡದಾಗಿ ನಿರ್ಮಿಸಿದ್ದು, ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಸೆಗ್ಮೆಂಟ್‌ನಲ್ಲಿಯೇ ದೊಡ್ಡದಾದ ಸೀಟ್‌ಗಳನ್ನು ನೀಡಿದೆ.

ಫೀಚರ್‌ಗಳು: ರಿಜ್ಟಾ (Ather Rizta) ಫ್ಯಾಮಿಲಿ ಸ್ಕೂಟರ್‌ ಆಗಿದ್ದರೂ, ಏಥರ್‌ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್‌ ಎಂದರೆ 7 ಇಂಚ್‌ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್‌ ಆವೃತ್ತಿಯಲ್ಲಿ‌ 450S ನಿಂದ ಎರವಲು ಪಡೆದ ಡೀಪ್‌ ವ್ಯೂವ್‌ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.

ಫೀಚರ್‌ಗಳು: ರಿಜ್ಟಾ ಫ್ಯಾಮಿಲಿ ಸ್ಕೂಟರ್‌ ಆಗಿದ್ದರೂ, ಏಥರ್‌ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್‌ ಎಂದರೆ 7 ಇಂಚ್‌ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್‌ ಆವೃತ್ತಿಯಲ್ಲಿ‌ 450S ನಿಂದ ಎರವಲು ಪಡೆದ ಡೀಪ್‌ ವ್ಯೂವ್‌ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.

Ather Rizta

ಈ ಪರದೆಯ ಸಹಾಯದಿಂದ ನೀವು ಸಾಕಷ್ಟು ಉಪಯೋಗಗಳನ್ನು ಪಡೆಯಬಹುದಾಗಿದೆ. ಇರದಲ್ಲಿ ನಾವಿಗೇಷನ್‌, ಫೈಂಡ್‌ ಮೈ ಸ್ಕೂಟರ್‌, ಟೋ ಮತ್ತು ತೆಫ್ಟ್‌ ನೋಟಿಫಿಕೇಷನ್‌ ಅಲೆಕ್ಸಾ ಮತ್ತು ಇನ್ನೂ ಹಲವು ಪ್ರಮುಖವಾದವು. ಆದರೆ ಇದರ Z ಆವೃತ್ತಿಯಲ್ಲಿ ಗೂಗಲ್‌ ಮ್ಯಾಪ್‌ ಮತ್ತು ವಾಟ್ಸ್ಯಾಪ್‌ ಫೀಚರ್‌ಗಳು ಸಹ ಲಭ್ಯವಿದೆ.

ಇದರ ಎರಡನೇ ಬ್ಯಾಟರಿ ಆಯ್ಕೆಯನ್ನು ನೋಡುವುದಾದರೆ, ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 159 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಪ್ರತಿಶತದಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಈ ರಿಜ್ಟಾ ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ ವಾರಂಟಿ ಬಗ್ಗೆ ನೊಡುವುದಾದರೆ, ಏಥರ್‌ ಈ ಸ್ಕೂಟರ್‌ಗೆ ಐದು ವರ್ಷ ಅಥವಾ 60,000km ವಾರಂಟಿಯನ್ನು ನೀಡುತ್ತಿದೆ. ಈ ಸ್ಕೂಟರ್‌ಗೆ ಅಳವಡಿಸಲಾದ ಎಲೆಕ್ಟ್ರಿಕ್‌ ಮೋಟಾರ್ ಸಹಾಯದಿಂದ .76 bhp ಪವರ್‌ ಮತ್ತು 22 Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. 40km/h ವೇಗವನ್ನು 4.7 ಸೆಕೆಂಡ್‌ಗಳಲ್ಲಿ ತಲುಪುತ್ತದೆ.

More from DriveSpark

Article Published On: Friday, May 24, 2024, 10:37 [IST]
English summary
A perfect electric family scooter ather rizta review video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+