BMW CE 02 Review: ಕಾರಿನಂತೆ ಫೀಚರ್‌ಗಳನ್ನು ಹೊಂದಿರುವ ಬಿಎಂಡಬ್ಲ್ಯೂ ಸಿಇ 02 ಇ-ಸ್ಕೂಟರ್ ರಿವ್ಯೂ.. ಹೇಗಿದೆ?

ಜರ್ಮನಿ ಮೂಲದ ಬಿಎಂಡಬ್ಲ್ಯೂ (BMW), ಐಷಾರಾಮಿ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಅದರ ಅಂಗಸಂಸ್ಥೆಯಾಗಿರುವ ಬಿಎಂಡಬ್ಲ್ಯೂ ಮೊಟೊರಾಡ್ (BMW Motorrad), ಭಾರತದ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಪ್ರೀಮಿಯಂ ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಅವುಗಳಲ್ಲಿ ಸಿಇ 04 (CE 04) ದುಬಾರಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ.14.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಸದ್ಯ, ವಿಶಾಲವಾಗಿರುವ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ-ವಾಹನ (Electric Two-Wheeler) ಮಾರುಕಟ್ಟೆ ಮೇಲೆ ಬಿಎಂಡಬ್ಲ್ಯೂ ಮೊಟೊರಾಡ್ ಕಣ್ಣಿಟ್ಟಿದೆ. ಇಂದು (ಅಕ್ಟೋಬರ್ 1) ನಗರವಾಸಿಗಳಿಗೆ ಹೆಚ್ಚು ಸೂಕ್ತವಾಗಲಿರುವ ಹೊಚ್ಚ ಹೊಸ ಸಿಇ 02 (CE 02) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಾರಾಟಕ್ಕೆ ತರಲಿದೆ. ಇತ್ತೀಚೆಗೆ, ನಮಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಟೆಸ್ಟ್ ರೈಡ್ (ಪರೀಕ್ಷಾರ್ಥ ಸವಾರಿ) ಮಾಡಲು ಕಂಪನಿಯು ದೆಹಲಿಗೆ ಆಹ್ವಾನಿಸಿತ್ತು. ಬನ್ನಿ.. ನೂತನ ಸ್ಕೂಟರ್ ಹೇಗಿದೆ ಎಂಬುದನ್ನು ತಿಳಿಯೋಣ.

BMW CE 02 Electric Scooter Review Specs Riding Impressions Design Features Details

ಬಿಎಂಡಬ್ಲ್ಯೂ ಸಿಇ 02 ವಿನ್ಯಾಸ & ವೈಶಿಷ್ಟ್ಯಗಳು: ಹೊಸ ಬಿಎಂಡಬ್ಲ್ಯೂ ಸಿಇ 02 (BMW CE 02) ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕವಾದ ವಿನ್ಯಾಸವನ್ನು (ಡಿಸೈನ್) ಹೊಂದಿದೆ. ಒಂದಷ್ಟು ಭಾಗ 'ಸಿಇ 04' ಎಲೆಕ್ಟ್ರಿಕ್ ಸ್ಕೂಟರ್‌ಗೂ ಹೋಲಿಕೆಯಾಗುತ್ತದೆ. ಇದನ್ನು ಮೊದಲ ಬಾರಿಗೆ ನೋಡಿದವರೂ ಬೈಕ್ ಅಂದುಕೊಳ್ಳುತ್ತಾರೆ. ಆಮೇಲೆ ಇದೊಂದು ಸ್ಕೂಟರ್ ಎಂದು ತಿಳಿದು ಅಚ್ಚರಿಗೆ ಒಳಗಾಗುತ್ತಾರೆ.

ನೂತನ ಬಿಎಂಡಬ್ಲ್ಯೂ ಸಿಇ 02 ಸ್ಕೂಟರ್, ಫೋಟೋಗಳಲ್ಲಿ ನೋಡಲು ಚಿಕ್ಕದಾಗಿ ಕಂಡರೂ ಬಹಳಷ್ಟು ದೊಡ್ಡದಾಗಿದೆ. ಮುಂಭಾಗ (ಫ್ರಂಟ್) ರೆಕ್ಟ್ಯಾಂಗುಲರ್ ಅಂದರೆ ಆಯತಾಕಾರದ ಎಲ್ಇಡಿ ಹೆಡ್‌ಲೈಟ್ ಹೊಂದಿದೆ. ಅದರ ಮೇಲ್ಭಾಗದಲ್ಲಿ ವಿಂಡ್‌ಸ್ಕ್ರೀನ್ ಇದ್ದು, ಎಲ್ಇಡಿ ಡಿಆರ್‌ಎಲ್‌ಗಳು, ಗೋಲ್ಡ್ ಫಿನಿಷ್ಡ್ ಅಪ್‌ಸೈಡ್‌-ಡೌನ್ ಫೋರ್ಕ್‌ಗಳು, 14-ಇಂಚಿನ ಕವರ್ಡ್ ವೀಲ್‌ನ್ನು ಒಳಗೊಂಡಿದೆ. ಜೊತೆಗೆ ಫ್ಲಾಟ್ ಸೀಟ್‌ನ್ನು ಪಡೆದಿದೆ.

BMW CE 02 Electric Scooter Review Specs Riding Impressions Design Features Details

ಮುಂದಿನ ಸೀಟ್‌ನ ಕೆಳಭಾಗದಲ್ಲಿ ಬ್ಯಾಟರಿ ಪ್ಯಾಕ್ ಇರಿಸಲಾಗಿದೆ. ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಇರುವುದನ್ನು ಗುರುತಿಸಬಹುದು. ಹಾಗೆಯೇ ಅಚ್ಚುಕಟ್ಟಾದ ಎಲ್ಇಡಿ ಲೈಟಿಂಗ್ ಸೆಟಪ್‌ನ್ನು ಹೊಂದಿದೆ. ಹಿಂಭಾಗದ ಸವಾರರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ. ಮುಂಭಾಗದಂತೆಯೇ ಹಿಂದೆಯೂ ಸಹ 14-ಇಂಚಿನ ವೀಲ್‌ನ್ನು ಹೊಂದಿದೆ.

ಈ ಬಿಎಂಡಬ್ಲ್ಯೂ ಸಿಇ 02 (BMW CE 02) ಎಲೆಕ್ಟ್ರಿಕ್ ಸ್ಕೂಟರ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು (ಫೀಚರ್) ಪಡೆದಿದೆ. 3.5-ಇಂಚಿನ ಮೈಕ್ರೋ-ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಪೀಡ್, ರೇಂಜ್ & ರೈಡಿಂಗ್ ಮೋಡ್ ಸೇರಿದಂತೆ ಹಲವು ವಿವರಗಳನ್ನು ಒದಗಿಸುತ್ತದೆ. ಜೊತೆಗೆ ಬೇಸಿಕ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಆಯ್ಕೆಯನ್ನು ಒಳಗೊಂಡಿದೆ.

BMW CE 02 Electric Scooter Review Specs Riding Impressions Design Features Details

ಬಿಎಂಡಬ್ಲ್ಯೂ ಸಿಇ 02 ಅಳತೆ & ಕಾರ್ಯಕ್ಷಮತೆ: ಈ ಎಲೆಕ್ಟ್ರಿಕ್ ಸ್ಕೂಟರ್ 970 ಎಂಎಂ ಉದ್ದ, 876 ಎಂಎಂ ಅಗಲ, 1,140 ಎಂಎಂ ಎತ್ತರ (ವಿಂಡ್‌ಸ್ಕ್ರೀನ್‌ನೊಂದಿಗೆ) ಮತ್ತು ಬರೋಬ್ಬರಿ 1,350 ಎಂಎಂ ಉದ್ದದ ವೀಲ್‌ಬೇಸ್ (ಚಕ್ರಗಳ ನಡುವಿನ ಅಂತರ) ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) 239 ಎಂಎಂ ಹಾಗೂ ಹಿಂಭಾಗ (ರೇರ್) ಡಿಸ್ಕ್ ಬ್ರೇಕ್‌ನ್ನು ಹೊಂದಿದೆ. ಇದರೊಟ್ಟಿಗೆ ಸಿಂಗಲ್-ಸೈಡೆಡ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕೂಡ ಇದೆ. ಮುಂದೆ 120/80-ಆರ್14 ಹಾಗೂ ಹಿಂದೆ 150/70-ಆರ್14 ಅಳತೆಯ ಟೈರ್‌ಗಳನ್ನು ಪಡೆದಿದೆ.

BMW CE 02 Electric Scooter Review Specs Riding Impressions Design Features Details

ಹೊಚ್ಚ ಹೊಸ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ 3.92 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿರುವ ಸಿಂಗಲ್-ಎಲೆಕ್ಟ್ರಿಕ್ ಮೋಟಾರ್ 14.7 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 55 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಸಂಪೂರ್ಣ ಚಾರ್ಜ್‌ನಲ್ಲಿ 108 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ನೂತನ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದ್ದು, ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಫ್ಲೋ, ಸರ್ಫ್ ಹಾಗೂ ಫ್ಲ್ಯಾಶ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

BMW CE 02 Electric Scooter Review Specs Riding Impressions Design Features Details

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್ 0.9 ಕೆಡಬ್ಲ್ಯೂ ಎಸಿ ಚಾರ್ಜರ್ ಬಳಕೆಯಲ್ಲಿ 20 ರಿಂದ 80% ಚಾರ್ಜ್ ಆಗುವುದಕ್ಕೆ 2 ಗಂಟೆ 48 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 5 ಗಂಟೆ 12 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿಬಿಡುತ್ತದೆ. 1.5 ಕೆಡಬ್ಲ್ಯೂ ಚಾರ್ಜರ್ ಉಪಯೋಗ ಮಾಡಿದಾಗ 1 ಗಂಟೆ 42 ನಿಮಿಷಗಳಲ್ಲಿ 20 ರಿಂದ 80% ಹಾಗೂ ಮೂರುವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ಚಾಲನಾ ಅನುಭವ: ನಮಗೆ ಹೊಸ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಅದ್ಬುತವಾದ ಚಾಲನಾ ಅನುಭವವನ್ನು ಒದಗಿಸಿತು. ಅದರಲ್ಲೂ ಈ ಸ್ಕೂಟರ್ ಮೇಲೆ ಹೋಗುವುದು ಕಾರಿನಲ್ಲಿ ಪ್ರಯಾಣಿಸಿದಂತೆ ಭಾಸವಾಗುತ್ತಿತ್ತು. ಸರ್ಫ್ & ಫ್ಲ್ಯಾಶ್ ರೈಡಿಂಗ್ ಮೋಡ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದವು. ವಿಶೇಷವಾಗಿ ಸಂಚಾರ ದಟ್ಟಣೆಯಿರುವ ಮಹಾನಗರಗಳ ರಸ್ತೆಗೆ ಫ್ಲೋ ರೈಡಿಂಗ್ ಮೋಡ್ ಹೆಚ್ಚು ಸೂಕ್ತವಾಗುತ್ತದೆ ಅನ್ನಿಸಿತು.

BMW CE 02 Electric Scooter Review Specs Riding Impressions Design Features Details

ಈ ಸ್ಕೂಟರ್ ಮೇಲೆ ಅಜಾನುಬಾಹು ವ್ಯಕ್ತಿಯಾಗಿದ್ದರೆ, ಒಬ್ಬರು ಪ್ರಯಾಣಿಸಬಹುದು. ಸಾಧಾರಣ ಗಾತ್ರದ ಇಬ್ಬರು ವ್ಯಕ್ತಿಗಳು ಸುಲಭವಾಗಿ ಓಡಾಟ ನಡೆಸಬಹುದು. ಇದರಲ್ಲಿರುವ ಸಸ್ಪೆಷನ್ ಸೆಟಪ್ ಸಾಕಷ್ಟು ಉತ್ತಮವಾಗಿದ್ದು, ಎಲ್ಲ ವಿಧದ ರಸ್ತೆಗಳಲ್ಲಿಯೂ ಚೆನ್ನಾಗಿ ಕೆಲಸ ನಿರ್ವಹಿಸುತ್ತದೆ ಎಂಬ ವಿಶ್ವಾಸ ಮೂಡಿಸಿತು. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ನೀಡಲಾಗಿರುವ ಡಿಸ್ಕ್ ಬ್ರೇಕ್‌ಗಳು ಕೂಡ ಸರಿಯಾಗಿ ಕೆಲಸ ಮಾಡಿದವು.

ಕೊನೆ ಮಾತು: ನೂತನ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್‌ನ್ನು ತಮಿಳುನಾಡಿನ ಟಿವಿಎಸ್ ಮೋಟಾರ್ (TVS Motor) ತಯಾರಿಕಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಮೊಟೊರಾಡ್ ಹಾಗೂ ಟಿವಿಎಸ್ ಮೋಟಾರ್ ಕಂಪನಿಗಳು ವ್ಯಾಪಾರ ಪಾಲುದಾರಿಕೆ ಹೊಂದಿವೆ. ಈ ಸ್ಕೂಟರ್, ಕೊಂಚ ಹೆಚ್ಚಿನ ಬೆಲೆಯೊಂದಿಗೆ ಮಾರಾಟಕ್ಕೆ ಬಂದರೂ, ಬಹುತೇಕ ನಗರವಾಸಿಗಳ ಆಯ್ಕೆಯ ದ್ವಿಚಕ್ರ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, October 1, 2024, 12:30 [IST]
English summary
Bmw ce 02 electric scooter review specs riding impressions design features details
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+