ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಸರಣಿಯ ಪ್ರಮುಖ ಬೈಕ್ ಆದ ಅಪಾಚೆ ಆರ್‍ಆರ್ 310 ಅನ್ನು 2017ರ ಕೊನೆಯ ಭಾಗದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಬಿಡುಗಡೆಯಾದ ನಂತರ ತನ್ನ ಲುಕ್‍‍ನಿಂದಾಗಿ ಈ ಬೈಕ್ ಹೆಚ್ಚು ಜನಪ್ರಿಯವಾಗಿತ್ತು. ಟಿವಿಎಸ್ ಕಂಪನಿಯ ಈ ಬೈಕ್ ತನ್ನ ಅದ್ಭುತ ಲುಕ್, ಅತ್ಯುತ್ತಮವಾದ ಪರ್ಫಾಮೆನ್ಸ್, ಹ್ಯಾಂಡ್ಲಿಂಗ್ ಹಾಗೂ ಸವಾರಿಯ ಗುಣಲಕ್ಷಣಗಳೊಂದಿಗೆ ಯಶಸ್ವಿಯಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

2018ರಲ್ಲಿ, ಈ ಬೈಕ್ ಅನ್ನು ಅಪ್‍‍ಡೇಟ್ ಮಾಡಿ ಕೆಲವು ಹೊಸ ಫೀಚರ್‍‍ಗಳನ್ನು ಅಳವಡಿಸಲಾಯಿತು. ಇವುಗಳಲ್ಲಿ ಸ್ಲಿಪರ್ ಕ್ಲಚ್ ಹಾಗೂ ಹೊಸ ಬಣ್ಣಗಳು ಸೇರಿವೆ. ಒಟ್ಟಾರೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಹೊಸದಾಗಿ ಅಳವಡಿಸಲಾದ ಕ್ಲಚ್ ಹಾಗೂ ಹೊಸ ಗ್ಲಾಸ್ ಬ್ಲ್ಯಾಕ್ ಬಣ್ಣದಿಂದಾಗಿ ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಆಕರ್ಷಿಸಿತು. 2020ರಲ್ಲಿ ಮತ್ತೊಮ್ಮೆ ಟಿವಿ‍ಎಸ್ ಕಂಪನಿಯು ಈ ಬೈಕ್ ಅನ್ನು ಅಪ್‍‍ಡೇಟ್‍‍ಗೊಳಿಸಿದೆ. ಈ ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಟಿವಿ‍ಎಸ್ ಕಂಪನಿಯು ಈ ಬೈಕ್ ಅನ್ನು ಚಾಲನೆ ಮಾಡಲು ನಮ್ಮನ್ನು ಚೆನ್ನೈಗೆ ಕರೆದೊಯ್ದಿತ್ತು. ಈ ಬೈಕ್ ಅನ್ನು ಮದ್ರಾಸ್ ಮೋಟಾರ್ ರೇಸ್ ಟ್ರಾಕ್‍‍ನಲ್ಲಿ ಚಲಾಯಿಸಲಾಯಿತು. ರೈಡ್ ಮಾಡಿದ ನಂತರ ಈ ಬೈಕಿನ ವಿಮರ್ಶೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಡಿಸೈನ್ ಹಾಗೂ ಸ್ಟೈಲಿಂಗ್

ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಈ ಸೆಗ್‍‍ಮೆಂಟಿನಲ್ಲಿರುವ ಬೆಸ್ಟ್ ಲುಕಿಂಗ್ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿರುವ ಶಾರ್ಪ್ ಲೈನ್ ಹಾಗೂ ಸ್ಪೋರ್ಟಿ ಬಾಡಿ ಪ್ಯಾನೆಲ್‌ಗಳು ಈ ಬೈಕಿಗೆ ಅಗ್ರೆಸಿವ್ ಸ್ಟೈಲಿಂಗ್ ನೀಡುತ್ತವೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಟಿವಿಎಸ್ ಕಂಪನಿಯು ಹೊಸ 2020 ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಅದೇ ವಿನ್ಯಾಸವನ್ನು ಉಳಿಸಿಕೊಂಡಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕ್ ಸಂಪೂರ್ಣವಾದ ವಿನ್ಯಾಸ, ಮುಂಭಾಗದಲ್ಲಿ ಬೈ-ಎಲ್ಇಡಿ ಹೆಡ್‌ಲ್ಯಾಂಪ್‌ ಹಾಗೂ ಅದರ ಕೆಳಗೆ ಫಾಕ್ಸ್ ರಾಮ್-ಏರ್ ಇಂಟೆಕ್‌ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಅಪಾಚೆ ಆರ್‍ಆರ್ 310 ಬೈಕಿನಲ್ಲಿರುವ ಸೈಡ್ ಫೇರಿಂಗ್ ಶಾರ್ಪ್ ಕಟ್ ಹಾಗೂ ವೆಂಟ್‍‍ಗಳನ್ನು ಹೊಂದಿದೆ. ಸವಾರರ ಕಾಲುಗಳಿಗೆ ಎಂಜಿನ್‌ನಿಂದ ಉಂಟಾಗುವ ಬಿಸಿ ಗಾಳಿಯನ್ನು ತೆಗೆದುಹಾಕಲು ವಿಶೇಷವಾದ ವೆಂಟ್‍‍ಗಳಿವೆ. ಟಿವಿಎಸ್ ಅಪಾಚೆ ಆರ್‍ಆರ್ 310 ಕೆಂಪು ಬಣ್ಣದ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಸವಾರನ ಸೀಟ್ ಕೆಳಗಡೆ ಇರುವ ಇದು ಬೈಕಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಹಿಂಭಾಗದಲ್ಲಿ ಹೈ ರೇಕ್ ಆಂಗಲ್‍‍ಗಳಿವೆ. ಬೈಕ್ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಹಳೆಯ ಬೈಕ್ ಹಾಗೂ ಹೊಸ ಬೈಕಿನ ವಿನ್ಯಾಸವು ಒಂದೇ ಆಗಿದ್ದರೂ, ಬಿ‍ಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಹೊಸ ಅಪಾಚೆ ಬೈಕಿನ ಬಣ್ಣಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಹೊಸ ಬೈಕಿನಲ್ಲಿ ಟಿಟಾನಿಯಂ ಬ್ಲಾಕ್ ಎಂಬ ಹೊಸ ಡ್ಯುಯಲ್ ಟೋನ್ ಗ್ರೇ ಹಾಗೂ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಈ ಹೊಸ ಬಣ್ಣವನ್ನು 2019ರಲ್ಲಿ ಸ್ಲಿಪರ್ ಕ್ಲಚ್ ಅಪ್‍‍ಡೇಟ್‍‍ನೊಂದಿಗೆ ನೀಡಲಾದ ಗ್ಲಾಸ್ ಬ್ಲ್ಯಾಕ್ ಬಣ್ಣದ ಬದಲಿಗೆ ನೀಡಲಾಗಿದೆ. ಟಿವಿಎಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ರೇಸಿಂಗ್ ರೆಡ್ ಬಣ್ಣವನ್ನು ಮುಂದುವರೆಸಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಫೀಚರ್‍‍ಗಳು

ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬಿಎಸ್ 6 ಬೈಕಿನಲ್ಲಿ ಹಲವಾರು ಫೀಚರ್ ಹಾಗೂ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಅತಿ ಮುಖ್ಯವಾದುದೆಂದರೆ ಪೂರ್ಣ ಪ್ರಮಾಣದ ಡಿಜಿಟಲ್ ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಟಿವಿ‍ಎಸ್ ಕಂಪನಿಯು ಕಾಂಟಿನೆಂಟಲ್ ಅಭಿವೃದ್ಧಿಪಡಿಸಿರುವ ಹೊಸ ಯುಐ ಹೊಂದಿರುವ ಹೊಸ 5 ಇಂಚಿನ ಟಿಎಫ್‍‍ಟಿ ಡಿಸ್‍‍ಪ್ಲೇಯನ್ನು ಈ ಬೈಕಿನಲ್ಲಿ ಅಳವಡಿಸಿದೆ. ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮೊದಲಿಗಿಂತ ಹೆಚ್ಚು ಆಧುನಿಕವಾಗಿ, ಉತ್ತಮವಾಗಿ ಸಜ್ಜುಗೊಂಡಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಇದು ಹಲವಾರು ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಹೊಸ ಟಿವಿಎಸ್ ಅಪಾಚೆ ಆರ್ ಆರ್ 310 ಬೈಕ್ ರೇನ್, ಅರ್ಬನ್, ಸ್ಪೋರ್ಟ್ ಹಾಗೂ ಟ್ರಾಕ್ ಎಂಬ ನಾಲ್ಕು ವಿಭಿನ್ನವಾದ ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಸ್ಪೋರ್ಟ್ ಹಾಗೂ ಟ್ರ್ಯಾಕ್ ಮೋಡ್‌ಗಳಿಗೆ ಹೋಲಿಸಿದರೆ ರೇನ್ ಹಾಗೂ ಅರ್ಬನ್ ಮೋಡ್‍‍ಗಳು ವಿಭಿನ್ನವಾದ ಎಂಜಿನ್ ಮ್ಯಾಪಿಂಗ್ ಅನ್ನು ನೀಡುತ್ತವೆ. ರೇನ್ ಹಾಗೂ ಅರ್ಬನ್ ಮೋಡ್‌ನಲ್ಲಿ ಎಂಜಿನ್‍‍ನ ಪವರ್ 26 ಬಿ‍‍ಹೆಚ್‍‍ಪಿ ಸೀಮಿತವಾಗಿದ್ದರೆ, ಸ್ಪೋರ್ಟ್ಸ್ ಹಾಗೂ ಟ್ರ್ಯಾಕ್ ಮೋಡ್‌ಗಳಲ್ಲಿ ಈ ಪವರ್ 34 ಬಿಹೆಚ್‌ಪಿಯಾಗಿರುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಈ ಎಲ್ಲಾ ನಾಲ್ಕು ಮೋಡ್‍ಗಳು ವಿಭಿನ್ನ ಮಟ್ಟದ ಥ್ರೊಟಲ್ ಇನ್‌ಪುಟ್‌ಗಳ ಜೊತೆಗೆ ವಿವಿಧ ಹಂತದ ಎಬಿಎಸ್ ಇಂಟ್ರೂಷನ್‍‍ಗಳನ್ನು ಹೊಂದಿವೆ. ಎಡಭಾಗದ ಹ್ಯಾಂಡಲ್‌ಬಾರ್‌ಗಳಲ್ಲಿರುವ ಹೊಸ ಸ್ವಿಚ್‌ಗೇರ್ ಮೂಲಕ ಈ ನಾಲ್ಕು ಮೋಡ್‍‍ಗಳನ್ನು ಕಂಟ್ರೋಲ್ ಮಾಡಬಹುದು.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಟಿವಿಎಸ್ ಹೊಸ ಆರ್‍‍ಆರ್ 310 ಬಿಎಸ್ 6 ಬೈಕಿನಲ್ಲಿ ಹೊಸ ಥ್ರೊಟಲ್-ಬೈ-ವೈರ್ ಸಿಸ್ಟಂ ಹಾಗೂ ಟಿವಿ‍ಎಸ್ ಕಂಪನಿಯ ಗ್ಲೈಡ್ ಥ್ರೂ ಪ್ಲಸ್ ತಂತ್ರಜ್ಞಾನದಂತಹ ಹಲವಾರು ಎಲೆಕ್ಟ್ರಾನಿಕ್ಸ್‌ಗಳಿವೆ. ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಟಿವಿ‍ಎಸ್ ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಈ ಕನೆಕ್ಟೆಡ್ ಟೆಕ್ನಾಲಜಿ ರೇಸ್ ಟೆಲಿಮೆಟ್ರಿ, ಪೋಸ್ಟ್-ರೈಡ್ ಅನಾಲಿಸಿಸ್, ಪರ್ಫಾಮೆನ್ಸ್ ಇಂಡಿಕೇಟರ್, ನೈಜ-ಸಮಯದ ಇಂಧನ ಬಳಕೆ, ಲೈವ್ ಟ್ರ್ಯಾಕಿಂಗ್ ಹಾಗೂ ಸರ್ವಿಸ್ ರಿಮ್ಯಾಂಡರ್‍‍ಗಳಂತಹ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ನಲ್ಲಿನ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡುತ್ತದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಎಂಜಿನ್ ಹಾಗೂ ಪರ್ಫಾಮೆನ್ಸ್

2020 ಟಿವಿಎಸ್ ಅಪಾಚೆ ಆರ್‍ಆರ್ 310ಬೈಕಿನಲ್ಲಿ 312 ಸಿಸಿಯ ರಿವರ್ಸ್ ಇನ್‍‍ಕ್ಲೈನ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಆರು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್‌ಪಿ ಪವರ್ ಹಾಗೂ 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಅಪ್‍‍ಡೇಟ್ ಮಾಡಲಾದ ಎಂಜಿನ್ ಈಗ ಗಮನಾರ್ಹವಾಗಿ ಹೆಚ್ಚು ಪರಿಷ್ಕರಿಸಲ್ಪಟ್ಟಿದೆ. ಹೆಚ್ಚಿನ ಥ್ರೊಟಲ್ ರೆಸ್ಪಾನ್ಸ್ ಹಾಗೂ ಸ್ಮೂಥ್ ಆಕ್ಸೆಲರೇಷನ್ ಹೊಂದಿದೆ. ಮೊದಲ ತಲೆಮಾರಿನ ಮಾದರಿಗಳಲ್ಲಿದ್ದ ವೈಬ್ರೆಷನ್‍‍ಗಳನ್ನು 2020ರ ಹೊಸ ಬೈಕಿನಲ್ಲಿ ಕಡಿಮೆಗೊಳಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಸ್ಲಿಪ್ಪರ್ ಕ್ಲಚ್ ಹಾಗೂ ಹೊಸ ಎಲೆಕ್ಟ್ರಾನಿಕ್ಸ್ ಸಿಸ್ಟಂ ಸವಾರರಿಗೆ ಬೈಕ್ ಸವಾರಿ ಮಾಡಲು ಹೆಚ್ಚು ಅಗ್ರೆಸಿವ್ ಆಗಿ ಅವಕಾಶ ನೀಡುತ್ತದೆ. ಕ್ವಿಕ್ ಡೌನ್‌ಶಿಫ್ಟ್‌ಗಳು ಹಾಗೂ ಕ್ಲಚ್‌ಲೆಸ್ ಅಪ್‌ಶಿಫ್ಟ್‌ಗಳು ಮೊದಲಿಗಿಂತ ಈಗ ಹೆಚ್ಚು ಆರಾಮದಾಯಕವಾಗಿವೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಹೊಸ ಮಿಚೆಲಿನ್ ರೋಡ್ 5 ಸ್ಟಿಕ್ಕಿ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಹೊಸ ಟಯರ್‌ಗಳು ಒಳ್ಳೆಯ ಗ್ರಿಪ್ ಅನ್ನು ಹೊಂದಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ಆತ್ಮವಿಶ್ವಾಸದಿಂದ ಬೈಕ್ ಸವಾರಿ ಮಾಡಲು ನೆರವಾಗಲಿವೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ತೇವ ಅಥವಾ ಒಣಗಿರುವ ಸಂದರ್ಭಗಳಲ್ಲಿಯೂ ಗ್ರಿಪ್ ಸಿಗುವಂತೆ ಟಯರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ನರಿಂಗ್‍‍ಗಳಲ್ಲಿಯೂ ಸಹ ಬೈಕ್‌ ಅನ್ನು ಹೆಚ್ಚು ಆತ್ಮವಿಶ್ವಾಸದಿಂದ ಚಲಾಯಿಸಲು ಟಯರ್‍‍ಗಳು ಅವಕಾಶ ನೀಡುತ್ತವೆ. ಎಲ್ಲಾ ಅಪ್‍‍ಡೇಟ್‍ಗಳ ನಂತರ ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಹಳೆಯ ಬೈಕಿಗಿಂತ 8 ಕೆ.ಜಿಗಳಷ್ಟು ಹೆಚ್ಚು ತೂಕವನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2020ರ ಅಪಾಚೆ ಆರ್‍ಆರ್ 310 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.40 ಲಕ್ಷಗಳಾಗಿದೆ. ಹಳೆಯ ಬೈಕಿಗಿಂತ ರೂ.15,000 ಹೆಚ್ಚು ಬೆಲೆಯನ್ನು ಹೊಂದಿದೆ. ಬೈಕಿನಲ್ಲಿ ಮಾಡಲಾಗಿರುವ ಬದಲಾವಣೆ ಹಾಗೂ ಅಪ್‍‍ಡೇಟ್‍‍ಗಳನ್ನು ಗಮನಿಸಿದರೆ ಈ ಬೆಲೆ ಹೆಚ್ಚು ಎನಿಸುವುದಿಲ್ಲ.

ಫಸ್ಟ್ ರೈಡ್ ರಿವ್ಯೂ: ಹೊಸ ಫೀಚರ್‍‍ಗಳೊಂದಿಗೆ ರಸ್ತೆಗಿಳಿದ ಬಿ‍ಎಸ್ 6 ಅಪಾಚೆ ಆರ್‍ಆರ್ 310

2020ರ ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಹೆಚ್ಚಿನ ಪ್ರಮಾಣದ ಅಪ್‍‍ಡೇಟ್‍‍ಗಳನ್ನು ಪಡೆದಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಅಪಾಚೆ ಆರ್‍ಆರ್ 310 ಈ ಸೆಗ್‍‍ಮೆಂಟಿನಲ್ಲಿರುವ ಅತ್ಯುತ್ತಮ ಬೈಕ್‍‍ಗಳಲ್ಲಿ ಒಂದಾಗಿದೆ.

Most Read Articles

Kannada
English summary
2020 TVS Apache RR310 BS6 (First Ride) Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X