2023 Bajaj Pulsar NS160 & NS200 Review: ಈ ಹೊಸ ಬಜಾಜ್ ಪಲ್ಸರ್ ಬೈಕ್‌ಗಳ ರಿವ್ಯೂ

ಭಾರತದಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಫೇವರೆಟ್ ಮತ್ತು ಕನಸಿನ ಬೈಕ್ ಆಗಿತ್ತು. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುತ್ತಿದೆ.

20 ವರ್ಷಗಳ ಹಿಂದೆ ಮೊದಲ ಬಜಾಜ್ ಪಲ್ಸರ್ ಆಗಮನದ ನಂತರ, ಹೆಚ್ಚಿನ ಭಾರತೀಯರಿಗೆ 'ಸ್ಪೋರ್ಟಿ' ದೈನಂದಿನ ಬೈಕಿನ ಕುರಿತು ಯೋಚಿಸಿದಾಗ, ಪಲ್ಸರ್ ಬೈಕ್ ಹೆಚ್ಚು ಮನಸ್ಸಿಗೆ ಬರುತ್ತದೆ. ಆ ಎರಡು ದಶಕಗಳಲ್ಲಿ, ಪಲ್ಸರ್ ಲೈನ್‌ಅಪ್ ಅನ್ನು ಕೆಲವು ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಪಲ್ಸರ್‌ನೊಂದಿಗಿನ ಬಜಾಜ್‌ನ ಪ್ರಸ್ತುತ ಮಾರ್ಗವು ಹೊಸ 250cc ಫ್ಲ್ಯಾಗ್‌ಶಿಪ್‌ಗಳನ್ನು ಮತ್ತು ಕಡಿಮೆ ಸಾಮರ್ಥ್ಯದ ವಿಭಾಗಗಳಲ್ಲಿ ಹೊಸ ಬೈಕುಗಳನ್ನು ಹೊರತಂದಿದೆ.

Bajaj Pulsar NS 160 & NS 200

ಬಜಾಜ್ ತನ್ನ ಕೆಲವು ಹಳೆಯ ಜನರೇಷನ್ ಬೈಕ್‌ಗಳನ್ನು ಇಟ್ಟುಕೊಂಡಿದೆ. ಇಂದಿನಂತೆ, ನಮ್ಮ ರಸ್ತೆಗಳಲ್ಲಿ 11 ವಿಭಿನ್ನ ಪಲ್ಸರ್‌ಗಳು ಬೈಕ್‌ಗಳು ಸಂಚರಿಸುತ್ತಿವೆ. ಎರಡು ಹಳೆಯ ಬೈಕುಗಳನ್ನು ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ನವೀಕರಿಸಿದೆ. ಬಜಾಜ್ ಆಟೋ ಕಂಪನಿಯು NS160 ಮತ್ತು NS200 ಬೈಕ್‌ಗಳು ಪ್ರಮುಖ ಫೀಚರ್ ಅಪ್‌ಗ್ರೇಡ್‌ಗಳು ಮತ್ತು ನವೀಕರಿಸಿದ ಎಂಜಿನ್‌ಗಳನ್ನು ಒಳಗೊಂಡಿವೆ.

2023ರ ಬಜಾಜ್ ಪಲ್ಸರ್ NS160 & NS200 ಬೈಕ್‌ಗಳು ನವೀಕರಣ ಪಡೆದುಕೊಂಡ ಬಳಿಕ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ, ಈ ಬೈಕ್‌ಗಳು ಹೊಸ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡಿದೆ. ಈ ಬೈಕ್‌ಗಳ ನಾವು ಬೆಂಗಳೂರಿನಲ್ಲಿ ರೈಡ್ ಮಾಡಿದ್ದೇವೆ. ನಮ್ಮ ರೈಡಿಂಗ್ ಅನುಭವ ಮತ್ತು ಇದರ ಏನು ಬದಲಾವಣೆಗಳು ಮಾಡಿದೆ? ಹಾಗೂ ಈ ಬೈಕ್‌ಗಳ ಕುರಿತು ಹೆಚ್ಚಿನ ಮಾಹಿತಿಗಳು ಇಲ್ಲಿದೆ.

Bajaj Pulsar NS 160 & NS 200

2023ರ ಬಜಾಜ್ ಪಲ್ಸರ್ NS160 & NS200 ಬೈಕ್‌ಗಳಲ್ಲಿ ಏನು ಬದಲಾಗಿದೆ? ಬಜಾಜ್ ಪಲ್ಸರ್ NS160 ಮತ್ತು NS200 ಎರಡೂ ಈಗ ನವೀಕರಿಸಿದ ಎಂಜಿನ್‌ಗಳನ್ನು ಹೊಂದಿದ್ದು ಅದು ಏಪ್ರಿಲ್‌ನಲ್ಲಿ ಜಾರಿಗೆ ಬರುವ ಹೊಸ BS-VI OBD 2 ಮಾನದಂಡಗಳಿಗೆ ಅನುಗುಣವಾಗಿದೆ. ಎರಡೂ ಎಂಜಿನ್‌ಗಳು ಈಗ E20 ಮಿಶ್ರಿತ ಇಂಧನದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ.

2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ.

Bajaj Pulsar NS 160 & NS 200

ಹೊಸ ಬಜಾಜ್ ಪಲ್ಸರ್ NS160 & NS200 ಬೈಕ್‌ಗಳ ಸಸ್ಪೆಕ್ಷನ್ ವಿಭಾಗದಲ್ಲಿ ಹೊಚ್ಚ ಹೊಸ ಅಪ್ ಸೈಡ್-ಡೌನ್ ಫೋರ್ಕ್ ಸೆಟಪ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬಜಾಜ್ ಪಲ್ಸರ್ ಬೈಕ್‌ಗಳಲ್ಲಿ, NS ಸರಣಿಯ ಪಲ್ಸರ್‌ಗಳು ಪ್ರಮುಖ N250 ಮತ್ತು 250F ನಿಂದ ಎರವಲು ಪಡೆದ ಹೊಸ ಗ್ರಿಮೆಕಾ ಬ್ರೇಕ್‌ಗಳನ್ನು ಸಹ ಹೊಂದಿವೆ.

ಇನ್ನು 2023ರ ಬಜಾಜ್ ಪಲ್ಸರ್ NS 160 & NS 200 ಬೈಕ್‌ಗಳಲ್ಲಿ ಮುಂಭಾಗದಲ್ಲಿ 300 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಬ್ರೇಕ್ ಗಳನ್ನು ಹೊಂದಿವೆ ಇನ್ನು ಈ ಎರಡೂ ಬೈಕ್ ಗಳಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ನೀಡಲಾಗಿದೆ.

ಎರಡೂ ಬೈಕ್‌ಗಳು ಫ್ಲಾಗ್‌ಶಿಪ್ ಪಲ್ಸರ್ 250s ನಿಂದ ಹಗುರವಾದ ವ್ಹೀಲ್ ಗಳನ್ನು ಎರವಲು ಪಡೆಯುತ್ತವೆ ಅಂದರೆ ಹೊಸ 2023 NS 160 ಹಿಂಭಾಗದಲ್ಲಿ 130/70-17 ಟೈರ್ ಅನ್ನು ಹೊಂದಿದೆ. ಈ ಬೈಕ್‌ಗಳಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳೂ ಇವೆ. ಎರಡೂ ಬೈಕ್‌ಗಳು ಹೊಸ ಸ್ಟಿಕ್ಕರಿಂಗ್ ಅನ್ನು ಒಳಗೊಂಡಿದೆ.

ಈ ಹೊಸ NS ಪಲ್ಸರ್ ಬೈಕ್‌ಗಳಲ್ಲಿ ಮಸ್ಕಲರ್ ನೋಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಒಂದೇ ರೀತಿ ಕಾಣಿಸಬಹುದು.ಇದು ಗೇರ್ ಸ್ಥಾನವನ್ನು ತಿಳಿಸುತ್ತದೆ. ಉತ್ತಮ ಟ್ರ್ಯಾಕ್‌ಬಿಲಿಟಿಗಾಗಿ NS 200 ಬೈಕ್ ನಲ್ಲಿನ ಸೆಂಟರ್ ಸ್ಟ್ಯಾಂಡ್ ಅನ್ನು ಬದಲಿಸಿದೆ.

2023ರ ಬಜಾಜ್ ಪಲ್ಸರ್ NS160: 2023ರ ಬಜಾಜ್ ಪಲ್ಸರ್ NS160 ಬೈಕಿನಲ್ಲಿ ಉತ್ತಮವಾದ ಆಲ್‌ರೌಂಡರ್ ಆಗಿ ಮುಂದುವರೆದಿದೆ ಮತ್ತು ಉತ್ತಮವಾದ ಪವರ್ ಮತ್ತು ಮೈಲೇಜ್ ಅನ್ನು ನೀಡಲು ಟ್ಯೂನ್ ಮಾಡಲಾಗಿದೆ. ಹೆಚ್ಚು ಎರಡು ಅಂಕಿಗಳಿಗೆ ಹೋದಂತೆ ಈ ಎಂಜಿನ್ ಜೊತೆಗೆ ಸ್ಪಷ್ಟವಾದ ಕಂಪನಗಳು ಉಂಟಾಗುತ್ತದೆ.

2023ರ ಬಜಾಜ್ ಪಲ್ಸರ್ NS160 ಬೈಕ್ ನಿಯಮಿತ ನಗರ ವೇಗವನ್ನು ಪಡೆದಾಗ ಬೈಕ್ ನಿಜವಾಗಿಯೂ ಉತ್ತಮವಾಗಿ ಚಲಿಸುತ್ತದೆ. ಮತ್ತೊಂದೆಡೆ, ಸವಾರಿಯ ಗುಣಮಟ್ಟವು ಸ್ವಲ್ಪ ದೃಢವಾಗಿದೆ. NS 160 ಬೈಕ್ ಉಬ್ಬುಗಳಲ್ಲಿ ಮತ್ತು ಗುಂಡಿಗಳಲ್ಲಿ ಉತ್ತಮವಾಗಿ ಚಲಿಸುತ್ತದೆ. ಈ ಬೈಕಿನಲ್ಲಿ ಏಕಾಂಗಿಯಾಗಿ ಸವಾರಿ ಮಾಡುವಾಗ, ಹಿಂಭಾಗದ ಸ್ವಲ್ಪಮಟ್ಟಿಗೆ ಜಿಗಿಯುತ್ತದೆ.

More from DriveSpark

2023ರ ಬಜಾಜ್ ಪಲ್ಸರ್ NS200: ಈ 2023ರ ಬಜಾಜ್ ಪಲ್ಸರ್ NS200 ಹೊಸ OBD 2 ಮತ್ತು ಫ್ಲೆಕ್ಸ್-ಇಂಧನ ನಿಯಮಗಳಿಗೆ ನವೀಕರಿಸಿದ ಎಂಜಿನ್ ಅನ್ನು ಒಳಗೊಂಡಿದೆ. ಆದರೆ ಹೊಸ ನಿಯಮಗಳು ಪವರ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. NS200 ಬೈಕ್ ಎಂಜಿನ್ ಇನ್ನೂ ಎಂದಿನಂತೆ ಫಲಪ್ರದವಾಗಿದೆ, ಎಂಜಿನ್ ರೆವ್ ಕೌಂಟರ್‌ಗೆ ಏರುವ ಮತ್ತು 9,000rpm ವರೆಗೆ ಉತ್ತಮವಾಗಿ ಚಲಿಸುತ್ತದೆ.

ಬೆಂಗಳೂರಿನ ಮೆಕೊ ಕಾರ್ಟೋಪಿಯಾದಲ್ಲಿನ ಟ್ರ್ಯಾಕ್‌ನಲ್ಲಿ, ಗೋ-ಕಾರ್ಟ್ ಸೌಲಭ್ಯದ ಪ್ರಾರಂಭ-ಮುಕ್ತಾಯದಲ್ಲಿ ನಾವು 4 ನೇ ಗೇರ್‌ನಲ್ಲಿ ಟ್ರಿಪಲ್ ಅಂಕೆಗಳನ್ನು ರೈಡ್ ಮಾಡುವಾಗ NS200 ಎಂಜಿನ್ ತನ್ನ ರೇಸಿ ಸ್ವಭಾವವನ್ನು ಪ್ರದರ್ಶಿಸಿತು. ದೊಡ್ಡ ಬದಲಾವಣೆಯು ಹೊಸ USD ಫೋರ್ಕ್‌ಗಳ ರೂಪದಲ್ಲಿ ಬರುತ್ತದೆ ಮತ್ತು ಇದು ಬೈಕನ್ನು ಹೆಚ್ಚು ಸ್ಥಿರಗೊಳಿಸಿದೆ. 2023ರ NS200 ಬೈಕ್ ಮೊದಲಿಗಿಂತ ಕರ್ನಾರ್ ಬದಲಾಯಿಸಲು ಹೆಚ್ಚು ಉತ್ಸುಕವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಸ ಬಜಾಜ್ ಪಲ್ಸರ್ NS 160 ಮತ್ತು NS 200 ಬೈಕ್‌ಗಳ ಸಸ್ಪೆನ್ಶನ್ ಸೆಟಪ್ ಜೊತೆಗೆ ಕೆಲವು ಇತರ ನವೀಕರಣಗಳ ವಿಷಯದಲ್ಲಿ ಸಾಕಷ್ಟು ದೊಡ್ಡ ಅಪ್‌ಗ್ರೇಡ್ ಅನ್ನು ನೀಡುತ್ತವೆ, ಆದರೂ ಒಟ್ಟಾರೆ ನೋಟ ಮತ್ತು ಹೆಚ್ಚಿನ ತಂತ್ರಜ್ಞಾನವು ಒಂದೇ ಆಗಿರುತ್ತದೆ. ಎರಡು ಹೊಸ NS ಮಾಡೆಲ್‌ಗಳಲ್ಲಿ, ಪಲ್ಸರ್ NS 200 ಅನ್ನು ನಾವು ಅದರ ಹೆಚ್ಚು ಆಧುನಿಕ ಎಂಜಿನ್ ಮತ್ತು ಉತ್ತಮ ನಿರ್ವಹಣೆಯನ್ನು ಹೊಂದಿದೆ,

Article Published On: Thursday, March 30, 2023, 13:56 [IST]
English summary
2023 bajaj pulsar ns 160 ns 200 first ride review riding impressions specs upgrades details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+