Numeros n-First: ನ್ಯೂಮೆರೋಸ್ ಎನ್-ಫಸ್ಟ್ ರಿವ್ಯೂ.. ಬೆಂಗಳೂರಿನ ಸ್ಕೂಟರ್‌ಯಿದು, ಬೆಲೆಯೂ ಅಗ್ಗ!

ಬೆಂಗಳೂರು ಮೂಲದ ನ್ಯೂಮೆರೋಸ್ ಮೋಟಾರ್ಸ್ (Numeros Motors), ಈಗಷ್ಟೇ ಅಂಬೆಗಾಲಿಡುತ್ತಿರುವ ಇವಿ (ಎಲೆಕ್ಟ್ರಿಕ್ ವೆಹಿಕಲ್) ಸ್ಟಾರ್ಟ್ಅಪ್ ಕಂಪನಿಯಾಗಿ ಹೊರಹೊಮ್ಮಿದೆ. 'ಡಿಪ್ಲೋಸ್ ಮ್ಯಾಕ್ಸ್' ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇತ್ತೀಚೆಗೆ 'ಎನ್-ಫಸ್ಟ್' ಎಂಬ ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ವಿಶೇಷವಾಗಿ ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಹಿಳಾ ಖರೀದಿದಾರರು ಹಾಗೂ ನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ.

ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೂ ಹೊಚ್ಚ ಹೊಸ ನ್ಯೂಮೆರೋಸ್ ಎನ್-ಫಸ್ಟ್ (Numeros n-First) ಇ-ಸ್ಕೂಟರ್, ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ಸ್ಕೂಟರ್‌ನ ಬೆಲೆ ಎಷ್ಟು, ವಿನ್ಯಾಸವೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ.. ವೈಶಿಷ್ಟ್ಯಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Numeros n-First Review Design Specs Features And Riding Impressions Details

ಬೆಲೆ & ರೂಪಾಂತರಗಳು (Price & Variants):

ಈ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.64,999 (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದ್ದು, ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಮ್ಯಾಕ್ಸ್, ಐ-ಮ್ಯಾಕ್ಸ್ ಮತ್ತು ಐ-ಮ್ಯಾಕ್ಸ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಕೂಡ ದೊರೆಯುತ್ತದೆ.

ವಿನ್ಯಾಸ & ಬಣ್ಣಗಳು (Design & Colors):

ಇದು ತುಂಬಾ ಸರಳವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಕಾಂಪ್ಯಾಕ್ಟ್ ಬಾಡಿಯನ್ನು ಪಡೆದಿದೆ. ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳು ಹಾಗೂ ಟು-ಪೀಸ್ ಸೀಟ್‌ನ್ನು ಹೊಂದಿದೆ. ಟ್ರಾಫಿಕ್ ರೆಡ್ ಹಾಗೂ ಪ್ಯೂರ್ ವೈಟ್ ಎಂಬ 2 ಅತ್ಯಾಕರ್ಷಕವಾದ ಬಣ್ಣಗಳೊಂದಿಗೂ ದೊರೆಯುತ್ತದೆ.

Numeros n-First Review Design Specs Features And Riding Impressions Details

ಸುತ್ತಳತೆ (Dimensions):

ನೂತನ 'ನ್ಯೂಮೆರೋಸ್ ಎನ್-ಫಸ್ಟ್' ಇ-ಸ್ಕೂಟರ್ ಪುಟ್ಟ ಗಾತ್ರದಲ್ಲಿದ್ದರೂ ಹೆಚ್ಚು ವಿಶಾಲವಾಗಿದೆ. 1,979 ಎಂಎಂ ಉದ್ದ, 686 ಎಂಎಂ ಅಗಲ ಮತ್ತು ಎಂಎಂ ಎತ್ತರವಿದೆ. ಜೊತೆಗಿದು 159 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,341 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 112 ಕೆಜಿ ತೂಕವಿದೆ.

ಕಾರ್ಯಕ್ಷಮತೆ (Performance):

ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ ಆರಂಭಿಕ ಶ್ರೇಣಿ ರೂಪಾಂತರ (ಬೇಸ್ ವೇರಿಯೆಂಟ್) 'ಮ್ಯಾಕ್ಸ್' ಮತ್ತು ಮಧ್ಯಮ ಶ್ರೇಣಿ ರೂಪಾಂತರ (ಮಿಡ್ ವೇರಿಯೆಂಟ್) 'ಐ-ಮ್ಯಾಕ್ಸ್'ಗಳು, 2.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿವೆ. ಭರ್ತಿ ಚಾರ್ಜ್‌ನಲ್ಲಿ 91 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತವೆ. 1.8 ಕೆಡಬ್ಲ್ಯೂ ಮೋಟಾರ್‌ನ್ನು ಹೊಂದಿವೆ.

Numeros n-First Review Design Specs Features And Riding Impressions Details

ಇವೆರೆಡು ರೂಪಾಂತರಗಳಲ್ಲಿರುವ ಬ್ಯಾಟರಿ ಪ್ಯಾಕ್, ಬರೀ 5 ರಿಂದ 6 ಗಂಟೆಗಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಬಿಡುತ್ತದೆ. ಅದೇ ರೀತಿಯಲ್ಲಿ 55 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿವೆ. ಇಕೋ ಹಾಗೂ ನಾರ್ಮಲ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ಪಡೆದಿವೆ.

ಗರಿಷ್ಠ ಶ್ರೇಣಿ ರೂಪಾಂತರವಾದ (ಟಾಪ್ ವೇರಿಯೆಂಟ್) 'ಐ-ಮ್ಯಾಕ್ಸ್ ಪ್ಲಸ್' ಹೆಚ್ಚು ಬಲಿಷ್ಠವಾದ 3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ ಪೂರ್ತಿ ಚಾರ್ಜ್‌ನಲ್ಲಿ 109 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 2.5 ಕೆಡಬ್ಲ್ಯೂ ಸಾಮರ್ಥ್ಯದ ಮೋಟಾರ್‌ನ್ನು ಪಡೆದಿದೆ.

Numeros n-First Review Design Specs Features And Riding Impressions Details

ಈ ರೂಪಾಂತರದಲ್ಲಿರುವ ಬ್ಯಾಟರಿ ಪ್ಯಾಕ್, ಶೇಕಡ 0 ರಿಂದ 100% ಚಾರ್ಜ್ ಆಗುವುದಕ್ಕೆ 7 ರಿಂದ 8 ಗಂಟೆ ತೆಗೆದುಕೊಳ್ಳುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.

ವೈಶಿಷ್ಟ್ಯಗಳು (Features):

ಹೊಸ 'ನ್ಯೂಮೆರೋಸ್ ಎನ್-ಫಸ್ಟ್' ಎಲೆಕ್ಟ್ರಿಕ್ ಸ್ಕೂಟರ್ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರನ್ನು ಆಕರ್ಷಿಸುವಂತಿದೆ. ಎಲ್‌ಸಿಡಿ ಕನ್ಸೋಲ್, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್, ಇಮೊಬಿಲೈಸೇಶನ್, ಮೊಬೈಲ್ ಫೋನ್ ಹೋಲ್ಡರ್‌, ಏಪ್ರನ್ ಮೌಂಟೆಡ್ ಮೊಬೈಲ್ ಚಾರ್ಜರ್, ಥೆಫ್ಟ್ & ಟೋ ಅಲರ್ಟ್‌ಗಳನ್ನು ಹೊಂದಿದೆ.

Numeros n-First Review Design Specs Features And Riding Impressions Details

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಇದು ಸವಾರರ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಹೈಡ್ರಾಲಿಕ್ ಡ್ಯಾಂಪರ್‌ಗಳೊಂದಿಗೆ ಡುಯಲ್-ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಚಾಲನಾ ಅನುಭವ (Riding Impressions):

ನೂತನ 'ನ್ಯೂಮೆರೋಸ್ ಎನ್-ಫಸ್ಟ್' ಇ-ಸ್ಕೂಟರ್ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಎಲ್ಲ ವಿಧವಾದ ರಸ್ತೆಗಳಲ್ಲೂ ಸುಲಭವಾಗಿ ಚಲಿಸಬಲ್ಲದು. ಇದರ ಸೀಟ್‌ಗಳನ್ನು ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಫೂಟ್‌ಬೋರ್ಡ್‌ನಲ್ಲಿ ತುಂಬಾ ಸ್ಥಳಾವಕಾಶವಿದೆ. ಚಿಕ್ಕದಾದ ಅಂಡರ್ ಸೀಟ್ ಸ್ಟೋರೇಜ್‌ನ್ನು ಒಳಗೊಂಡಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 16 ಇಂಚಿನ ವೀಲ್‌ಗಳು ಹಾಗೂ ಅತ್ಯುತ್ತಮವಾದ ಟೈರ್‌ಗಳನ್ನು ಪಡೆದಿದೆ. ಸಸ್ಪೆನ್ಷನ್ ಸೆಟಪ್‌ ಮತ್ತು ಬ್ರೇಕ್‌ಗಳು ಸಹ ಉತ್ತಮವಾಗಿ ಕೆಲಸ ಮಾಡಬಲ್ಲವು. ರೂಪಾಂತರಗಳಿಗೆ ಅನುಗುಣವಾಗಿ 55 ರಿಂದ 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದ್ದು, ಓವರ್‌ಟೇಕಿಂಗ್ ಮಾಡುವಾಗ ಕಷ್ಟವಾಗಬಹುದು.

ಒಟ್ಟಾರೆ ಅಭಿಪ್ರಾಯ (Overall Opinion):

ನೀವು ಬಜೆಟ್ ಬೆಲೆಯಲ್ಲಿ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಹುಡುಕಾಟ ನಡೆಸುತ್ತಿದ್ದರೆ, 'ನ್ಯೂಮೆರೋಸ್ ಎನ್-ಫಸ್ಟ್' ಒಳ್ಳೆಯ ಆಯ್ಕೆಯಾಗಲಿದೆ. ಬಹುಮುಖ್ಯವಾಗಿ ಮೊದಲ 1000 ಗ್ರಾಹಕರು, ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.499 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಬಹುದು. 2026ರ ಜನವರಿಯಿಂದ ವಿತರಣೆಗಳು ಶುರುವಾಗಲಿವೆ.

More from DriveSpark

Article Published On: Wednesday, November 12, 2025, 12:00 [IST]
English summary
Numeros n first review design specs features and riding impressions details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+