ಜಬರ್ದಸ್ತ್ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಬೈಕ್ ರಿವ್ಯೂ: ಹೇಗಿದೆ ಗೊತ್ತಾ?

ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯ ಮಿಡ್-ಸೈಜ್ ಮೋಟಾರ್‌ಸೈಕಲ್ ಸೆಗ್ಮೆಂಟ್‌ಗೆ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ (Triumph Scrambler 400 XC) ಹೊಸ ಸೇರ್ಪಡೆಯಾಗಿದೆ. ಇದು ರೂ.2.95 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದ್ದು, ರೆಟ್ರೊ ಶೈಲಿಯ ವಿನ್ಯಾಸವನ್ನು ಪಡೆದಿದೆ. ಬಜಾಜ್ ಸಹಯೋಗದೊಂದಿಗೆ ಈ 'ಸ್ಕ್ರಾಂಬ್ಲರ್ 400 ಎಕ್ಸ್‌ಸಿ' ಬೈಕ್‌ನ್ನು ಅಭಿವೃದ್ಧಿಪಡಿಸಲಾಗಿದ್ದು, ಅತ್ಯಾಧುನಿಕ ಸಸ್ಪೆನ್ಷನ್ ಸೆಟಪ್ ಹಾಗೂ ಹಾರ್ಡ್‌ವೇರ್‌ನ್ನು ಪಡೆದಿದ್ದು, ಆಫ್-ರೋಡ್ ಚಾಲನೆಗೆ ಹೇಳಿ ಮಾಡಿದ ರೀತಿಯಲ್ಲಿದೆ.

ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ನೂತನ 'ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ' ಮೋಟಾರ್‌ಸೈಕಲ್‌ ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಹೊಸ ಬೈಕ್ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Triumph Scrambler 400 XC Review Specs Raiding Impressions Design And Features Details

ವಿನ್ಯಾಸ:

ಹೊಸ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಟ್ಯಾಂಡರ್ಡ್ ಆಗಿ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲೈಟ್ ಹಾಗೂ ಇಂಡಿಕೇಟರ್‌ಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಹೆಚ್ಚು ಎತ್ತರವಿರುವ ಫೆಂಡರ್ & ವಿಂಡ್ ಸ್ಕ್ರೀನ್‌ನ್ನು ಹೊಂದಿದೆ.

ಇದರೊಂದಿಗೆ ಟ್ಯೂಬ್‌ಲೆಸ್ ಸ್ಪೋಕ್ಡ್ ವೀಲ್‌ಗಳನ್ನು ಪಡೆದಿದ್ದು, ಬೆಟ್ಟ-ಗುಡ್ಡದಿಂದ ಕೂಡಿದ ಆಫ್-ರೋಡ್‌ನಲ್ಲಿ ಸವಾರರಿಗೆ ನೆರವಾಗಲಿದೆ. ಈ ಬೈಕ್‌ಗೆ ಗೋಲ್ಡ್ ಕಲರ್ ಅಪ್‌ಸೈಡ್-ಡೌನ್ ಫ್ರಂಟ್ ಫೋರ್ಕ್‌ಗಳು ಪ್ರೀಮಿಯಂ ಲುಕ್ ನೀಡಲಿದ್ದು, ಮಡ್‌ಗಾರ್ಡ್‌ಗಳು & ಎಂಜಿನ್ ಗಾರ್ಡ್ ಯುವ ಗ್ರಾಹಕರನ್ನು ಒಮ್ಮೆಲೇ ಆಕರ್ಷಿಸಿ ಬಿಡುತ್ತವೆ. ಜೊತೆಗೆ ಸ್ಪ್ಲಿಟ್-ಸೀಟ್ ಹೊಂದಿದೆ. ಅದರ ಎತ್ತರವು 835 ಎಂಎಂ ಇದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸಬಲ್ಲದು.

Triumph Scrambler 400 XC Review Specs Raiding Impressions Design And Features Details

ವೈಶಿಷ್ಟ್ಯಗಳು:

ಹೊಸ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಮೋಟಾರ್‌ಸೈಕಲ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಆಯ್ಕೆಯನ್ನು ಪಡೆದಿದೆ. ಇದು ಟ್ರಿಪ್, ಫ್ಯುಯೆಲ್ ಹಾಗೂ ಗೇರ್ ಡೇಟಾ ಕುರಿತ ಮಾಹಿತಿಯನ್ನು ತೋರಿಸುತ್ತದೆ. ಕಿಲ್ ಸ್ವಿಚ್ & ಹಝರ್ಡ್ ಲೈಟ್‌ಗಳನ್ನು ಸುಲಭವಾಗಿ ಚಾಲು ಮಾಡಲು ಬಟನ್‌ಗಳನ್ನು ಹೊಂದಿದೆ. ಅಗಲವಾದ ಹ್ಯಾಂಡಲ್‌ಬಾರ್‌ಗಳನ್ನು ತನ್ನದಾಗಿಸಿಕೊಂಡಿದೆ.

ಈ ಬೈಕ್‌ನಲ್ಲಿ ಸುರಕ್ಷತೆಗೂ ದೊಡ್ಡ ಮಟ್ಟದಲ್ಲಿ ಆದ್ಯತೆ ನೀಡಲಾಗಿದ್ದು, ಮುಂಭಾಗ (ಫ್ರಂಟ್) ಅಪ್‌ಸೈಡ್-ಡೌನ್ ಫೋರ್ಕ್‌ಗಳು ಹಾಗೂ ಹಿಂಭಾಗ (ರೇರ್) ಪ್ರಿಲೋಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟ್ರಾಕ್ಷನ್ ಕಂಟ್ರೋಲ್ ಆಯ್ಕೆಯನ್ನು ಹೊಂದಿದೆ.

Triumph Scrambler 400 XC Review Specs Raiding Impressions Design And Features Details

ಕಾರ್ಯಕ್ಷಮತೆ:

ಹೊಸ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಮೋಟಾರ್‌ಸೈಕಲ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 398 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 8,000 ಆರ್‌ಪಿಎಂನಲ್ಲಿ 40 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,500 ಆರ್‌ಪಿಎಂನಲ್ಲಿ 37.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಈ ಬೈಕ್ 27 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ದೂರದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗುವಂತೆ 13-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. ಮುಂಭಾಗ (ಫ್ರಂಟ್) 19-ಇಂಚಿರುವ ವೀಲ್‌ಗಳು ಹಾಗೂ ಹಿಂಭಾಗ (ರೇರ್) 17-ಇಂಚಿರುವ ವೀಲ್‌ಗಳನ್ನು ಒಳಗೊಂಡಿದೆ. ಎಂಆರ್‌ಎಫ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

Triumph Scrambler 400 XC Review Specs Raiding Impressions Design And Features Details

ಚಾಲನಾ ಅನುಭವ:

ಹೊಸ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಮೋಟಾರ್‌ಸೈಕಲ್ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಇದರ ಮೇಲೆ ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಇದು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದ್ದು, ನಗರ ಪ್ರಯಾಣ ಹಾಗೂ ಆಫ್-ರೋಡ್ ಚಾಲನೆಗೆ ತುಂಬಾ ಉಪಯುತ್ತವಾಗಿದೆ. ಹೆದ್ದಾರಿಯಲ್ಲಿ 100 ರಿಂದ 120 ಕೆಎಂಪಿಹೆಚ್ ವೇಗದಲ್ಲಿರುವಾಗಲು ಸುಲಭವಾಗಿ ಓಡಿಸಬಹುದು.

ಡುಯಲ್ - ಚಾನೆಲ್ ಎಬಿಎಸ್‌ನೊಂದಿಗೆ ಡಿಸ್ಕ್ ಬ್ರೇಕ್‌ಗಳು ತುಂಬಾ ಚೆನ್ನಾಗಿ ಕೆಲಸ ಮಾಡಬಲ್ಲವು. ಈ ಬೈಕ್ ಬೆಟ್ಟ-ಗುಡ್ಡ ಹಾಗೂ ಹಳ್ಳ-ದಿಣ್ಣೆಗಳಿರುವ ಎಲ್ಲ ವಿಧದ ರಸ್ತೆಯಲ್ಲಿಯೂ ಲೀಲಾಜಾಲವಾಗಿ ಚಲಿಸಿತು. ಹ್ಯಾಂಡಲ್‌ಬಾರ್‌ಗಳು ಉತ್ತಮವಾಗಿದ್ದು, ರಸ್ತೆ ಮೇಲೆ ಬಿಗಿಯಾಗದ ಹಿಡಿತವನ್ನು ಒದಗಿಸಬಲ್ಲವು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:

ಈ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್‌ಸಿ ಮೋಟಾರ್‌ಸೈಕಲ್ ಯುವ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ಇದರೊಂದಿಗೆ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ನೂತನ ಬೈಕ್‌ಗೆ ಮುಂಬರುವ ದಿನಗಳಲ್ಲಿ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Tuesday, July 15, 2025, 10:00 [IST]
English summary
Triumph scrambler 400 xc review specs raiding impressions design and features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+