KTM Duke 160 Review: ಕೆಟಿಎಂ ಡ್ಯೂಕ್ 160 ರಿವ್ಯೂ: ಬಂಗಾರದಂತಹ ಬೈಕ್‌ಯಿದು.. ಯಾರು ಹೇಳದ ವಿಚಾರಗಳಿವು!

ಇತ್ತೀಚೆಗೆ ಹೊಚ್ಚ ಹೊಸ ಕೆಟಿಎಂ ಡ್ಯೂಕ್ 160 (KTM Duke 160) ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 160 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಬೈಕ್‌ವೊಂದನ್ನು ಖರೀದಿ ಮಾಡಬೇಕೆಂದು ಪ್ಲ್ಯಾನ್ ಮಾಡಿರುವ ಗ್ರಾಹಕರಿಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಸುಲಭವಾಗಿಯೂ ಕೊಂಡುಕೊಳ್ಳಬಹುದು.

ಕೆಲವೇ ದಿನಗಳ ಹಿಂದೆಯಷ್ಟೇ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ನೂತನ 'ಕೆಟಿಎಂ ಡ್ಯೂಕ್ 160' ಮೋಟಾರ್‌ಸೈಕಲ್‌ ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಹೊಸ ಬೈಕ್ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

KTM Duke 160 Review Design Specs Features Raiding Impressions Details

ವಿನ್ಯಾಸ & ಬಣ್ಣಗಳು (Design & Colors):

ಹೊಸ ಕೆಟಿಎಂ ಡ್ಯೂಕ್ 160 ಮೋಟಾರ್‌ಸೈಕಲ್‌ ಅಗ್ರೆಸಿವ್ ಸ್ಟ್ರೀಟ್‌ಫೈಟರ್ ಲುಕ್ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಪಿಲಿಯನ್ ಗ್ರಾಬ್ ರೈಲ್ ಹಾಗೂ ಎಲ್ಇಡಿ ಟೈಲ್-ಲ್ಯಾಂಪ್‌ಗಳನ್ನು ಪಡೆದಿದೆ. ಎಲೆಕ್ಟ್ರಾನಿಕ್ ಆರೆಂಜ್, ಅಟ್ಲಾಂಟಿಕ್ ಬ್ಲೂ ಹಾಗೂ ಸಿಲ್ವರ್ ಮೆಟಾಲಿಕ್ ಮ್ಯಾಟ್ ಎಂಬ ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲೂ ಸಿಗುತ್ತದೆ.

ಸುತ್ತಳತೆ (Dimensions):

ಇದು ಕೊಂಚ ದೊಡ್ಡ ಗಾತ್ರದ ಬೈಕ್ ಆಗಿದೆ. 174 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1357 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. 147 ಕೆಜಿ ತೂಕವಿದೆ. 10.1 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಸೀಟ್ ಎತ್ತರವು 815 ಎಂಎಂ ಇದೆ.

KTM Duke 160 Review Design Specs Features Raiding Impressions Details

ಕಾರ್ಯಕ್ಷಮತೆ (Performance):

ಹೊಸ ಕೆಟಿಎಂ ಡ್ಯೂಕ್ 160 ಮೋಟಾರ್‌ಸೈಕಲ್‌ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 164.2 ಸಿಸಿ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 9,500 ಆರ್‌ಪಿಎಂನಲ್ಲಿ 19 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,500 ಆರ್‌ಪಿಎಂನಲ್ಲಿ 15.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸ್ಲಿಪ್ & ಅಸಿಸ್ಟ್ ಕ್ಲಚ್ ಹೊಂದಿರುವ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಈ ಬೈಕ್ ಯಾವುದೇ ಸಾಮಾನ್ಯ ಟೂ ವೀಲರ್‌ಗಳಿಗೆ ಕಮ್ಮಿಯಿಲ್ಲದ ರೀತಿಯಲ್ಲಿ 40 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

KTM Duke 160 Review Design Specs Features Raiding Impressions Details

ವೈಶಿಷ್ಟ್ಯಗಳು (Features):

ನೂತನ ಕೆಟಿಎಂ ಡ್ಯೂಕ್ 160 ಮೋಟಾರ್‌ಸೈಕಲ್‌ 5-ಇಂಚಿರುವ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಹೊಂದಿದೆ. ಇದು ರಿಯಲ್ ಟೈಮ್ ರೈಡಿಂಗ್ ಡೇಟಾವನ್ನು ಒದಗಿಸುತ್ತದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್/ಎಸ್ಎಂಎಸ್ ಅಲರ್ಟ್, ಮ್ಯೂಸಿಕ್ ಪ್ಲೇಬ್ಯಾಕ್‌ಗಾಗಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಇದು ಸವಾರರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 43 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಹಿಂಭಾಗದ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

KTM Duke 160 Review Design Specs Features Raiding Impressions Details

ಚಾಲನಾ ಅನುಭವ (Raiding Impressions):

ಹೊಸ ಕೆಟಿಎಂ ಡ್ಯೂಕ್ 160 ಮೋಟಾರ್‌ಸೈಕಲ್‌ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಇದರ ವಿನ್ಯಾಸಕ್ಕೆ ಬಹುತೇಕರು ಮೊದಲ ನೋಟದಲ್ಲೇ ಆಕರ್ಷಿತರಾಗುವುದರಲ್ಲಿ ಎರಡು ಮಾತಿಲ್ಲ. ಈ ಬೈಕ್ ಎಂತಹ ರಸ್ತೆಯಲ್ಲಿ ಬೇಕಾದರೂ ಚಲಿಸಬಲ್ಲದು. ಅದಕ್ಕೆ ತಕ್ಕಂತೆ ಸಸ್ಪೆನ್ಷನ್ ಸೆಟಪ್‌ ಮತ್ತು ಬ್ರೇಕಿಂಗ್ ಸಿಸ್ಟಮ್‌ಗಳು ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಬಲ್ಲವು. ಜೊತೆಗೆ ಟೈರ್‌ಗಳು ಸಹ ಉತ್ತಮವಾಗಿವೆ.

ಇದು ಸ್ಟೆಪ್-ಅಪ್ ಸೀಟ್ ಹೊಂದಿದ್ದು, ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ನಗರ ಪ್ರಯಾಣಕ್ಕೂ ಹೆಚ್ಚು ಸೂಕ್ತವಾಗಿದೆ. ಅದೇ ರೀತಿಯಲ್ಲಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೂ ಓಡಾಟ ನಡೆಸಬಹುದು. ಹೊಸ ಹಾಗೂ ಅನುಭವಿ ಸವಾರರಿಬ್ಬರಿಗೂ ಒಳ್ಳೆಯ ಬೈಕ್ ಆಗಿದೆ. ಬಾಡಿಯು ಹಗುರವಾಗಿದ್ದು, ಹೆಚ್ಚಿನ ಇಂಧನ ದಕ್ಷತೆಯನ್ನು ಹಿಂದಿರುಗಿಸುವ ಎಲ್ಲ ಲಕ್ಷಣಗಳಿವೆ.

KTM Duke 160 Review Design Specs Features Raiding Impressions Details

ಬೆಲೆ & ಪ್ರತಿಸ್ಪರ್ಧಿ ಬೈಕ್‌ಗಳು (Price & Rival bikes):

ಈ ಬೈಕ್ ರೂ.1,84,998 (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಹೊಂದಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ಸಮೀಪದ ಡೀಲರ್‌ಶಿಪ್‌ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ. ಇದಕ್ಕೆ ಯಮಹಾ ಎಂಟಿ-15, ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್160 ಮತ್ತು ಹೋಂಡಾ ಹಾರ್ನೆಟ್ 2.0 ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, August 27, 2025, 10:10 [IST]
English summary
Ktm duke 160 review design specs features raiding impressions details
Read more on ktm india review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+