Just In
- 25 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 25 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- News
ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಡ್ವೆಂಚರ್ ವಿಭಾಗದಲ್ಲಿ ಮಿಂಚಲು ಸಜ್ಜಾದ ಹೋಂಡಾ ಸಿಬಿ500ಎಕ್ಸ್ ವಿಶೇಷತೆ ಏನು?
ಹೋಂಡಾ ಸಿಬಿ 500 ಎಕ್ಸ್ ಬೈಕ್ ಅನ್ನು ಮೊದಲ ಬಾರಿಗೆ 2013ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಬೈಕ್ ತನ್ನ ವಿನ್ಯಾಸ ಹಾಗೂ ರೈಡಿಂಗ್'ನಿಂದಾಗಿ ಜನರನ್ನು ತನ್ನತ್ತ ಆಕರ್ಷಿಸಿತು. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 2016ರಲ್ಲಿ ಈ ಬೈಕ್ ನವೀಕರಿಸಿತು.

2019ರಲ್ಲಿ ಈ ಬೈಕಿನಲ್ಲಿ ಹಲವು ಅಪ್ ಡೇಟ್'ಗಳನ್ನು ಮಾಡಲಾಯಿತು. ಹಲವು ವರ್ಷಗಳ ನಿರೀಕ್ಷೆಯ ನಂತರ ಹೋಂಡಾ ಸಿಬಿ 500 ಎಕ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಇತ್ತೀಚಿಗೆ ನಾವು ಈ ಬೈಕ್ ಅನ್ನು ಚಾಲನೆ ಮಾಡಿದೆವು. ಹೋಂಡಾ ಸಿಬಿ 500 ಎಕ್ಸ್ ಹೆದ್ದಾರಿಗಳಲ್ಲಿ ಹಾಗೂ ಸಿಟಿಯೊಳಗೆ ಹೇಗೆ ಚಲಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಡಿಸೈನ್ ಹಾಗೂ ಸ್ಟೈಲಿಂಗ್
ಹೋಂಡಾ ಸಿಬಿ 500 ಎಕ್ಸ್ ಬೈಕ್ ಲೇಯರ್ಡ್ ವಿನ್ಯಾಸದ ಆಂಗ್ಯುಲರ್ ಬಾಡಿವರ್ಕ್ ಹೊಂದಿದೆ. ಈ ಬೈಕ್ ಆಫ್ರಿಕಾ ಟ್ವಿನ್ ಬೈಕಿನಂತೆಯೇ ಫ್ಲೋವಿಂಗ್ ಪ್ಯಾನೆಲ್ ಹೊಂದಿರುವ ಶಾರ್ಪ್ ಆದ ವಿನ್ಯಾಸ ರೇಖೆಗಳನ್ನು ಹೊಂದಿದೆ.

ಈ ಬೈಕಿನ ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್ ಹೊಂದಿರುವ ಎಲ್ಇಡಿ ಹೆಡ್ ಲ್ಯಾಂಪ್ ಅದರ ಮೇಲೆ ಎತ್ತರವಾಗಿರುವ ಅಡ್ಜಸ್ಟಬಲ್ ವಿಂಡ್‌ಸ್ಕ್ರೀನ್ ನೀಡಲಾಗಿದೆ. ಈ ಬೈಕ್ ಎಕ್ಸ್ ಟೆಂಡೆಡ್ ರೇಡಿಯೇಟರ್ ಶ್ರೌಡ್ ಹಾಗೂ ದೊಡ್ಡ ಫ್ಯೂಯಲ್ ಟ್ಯಾಂಕ್ ಹೊಂದಿದೆ.

ಸಿಬಿ 500 ಎಕ್ಸ್ ಬೈಕಿನ ಹಿಂಭಾಗವು ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಆಕರ್ಷಕವಾದ ಎಂಜಿನ್ ಹಾಗೂ ಎಕ್ಸಾಸ್ಟ್ ಡೌನ್‌ಪೈಪ್‌ಗಳನ್ನು ನೀಡಲಾಗಿದೆ. ಹೋಂಡಾ ಸಿಬಿ 500 ಎಕ್ಸ್ ಬೈಕ್ ಅನ್ನು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಹಾಗೂ ಗ್ರ್ಯಾಂಡ್ ಪ್ರಿಕ್ಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಎಂಜಿನ್ ಹಾಗೂ ಪರ್ಫಾಮೆನ್ಸ್
ಹೋಂಡಾ ಸಿಬಿ 500 ಎಕ್ಸ್ ಬೈಕಿನಲ್ಲಿ ಲಿಕ್ವಿಡ್ ಕೂಲ್ 471 ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 46.93 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಬೈಕಿನಲ್ಲಿರುವ ಆರು ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಅನ್ನು ಸ್ಲಿಪ್ ಹಾಗೂ ಕ್ಲಚ್ ಮೂಲಕ ಚಾಲನೆ ಮಾಡುತ್ತದೆ. ಈ ಬೈಕ್ ಅನ್ನು ಸ್ಟಾರ್ಟ್ ಮಾಡಿದಾಗ ಮೆಲ್ಲನೆಯ ಶಬ್ದ ಕೇಳಿಸುತ್ತದೆಯಾದರೂ ಥ್ರೊಟಲ್ ಅನ್ನು ಟ್ವಿಸ್ಟ್ ಮಾಡಿದಾಗ ಹೆಚ್ಚು ಶಬ್ದ ಕೇಳಿಸುತ್ತದೆ.

ಬೈಕಿನ ವೇಗವು ಹೆಚ್ಚಿದಂತೆಲ್ಲಾ ಶಬ್ದವು ಹೆಚ್ಚು ಕೇಳಿಸುತ್ತದೆ. ಬೈಕಿನ ವೇಗವು ಹೆಚ್ಚಾಗುವವರೆಗೂ ಆಕ್ಸಲರೇಷನ್ ಲಿನಿಯರ್ ಹಾಗೂ ಎಫರ್ಟ್ ಲೆಸ್ ಆಗಿರುತ್ತದೆ. ಈ ಎಂಜಿನ್'ನ ಟಾರ್ಕ್ ಸಾಮರ್ಥ್ಯವು 2,500 ಆರ್‌ಪಿಎಂನಿಂದ 6,500 ಆರ್‌ಪಿಎಂವರೆಗೆ ಚಲಿಸಿದಾಗ ಅತ್ಯುತ್ತಮವಾಗಿದೆ.

ರೋಲ್-ಆನ್ ಆಕ್ಸಲರೇಷನ್'ಗಳನ್ನು ಸುಲಭವಾಗಿ ನಿರ್ವಹಿಸಲಾಗಿದೆ. 6ನೇ ಗೇರ್‌ನಲ್ಲಿ 70-100 ಕಿ.ಮೀ ವೇಗವನ್ನು ಕೇವಲ ಐದು ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡಬಹುದು. ಟಾಪ್ ಗೇರ್‌ನಲ್ಲಿ 70-120 ಕಿ.ಮೀ ವೇಗವನ್ನು ಕೇವಲ 7 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡಬಹುದು. ಹೋಂಡಾ ಸಿಬಿ 500 ಎಕ್ಸ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 170 ಕಿ.ಮೀಗಳಾಗಿದೆ.

ರೈಡ್ ಹಾಗೂ ಹ್ಯಾಂಡ್ಲಿಂಗ್
ಈ ಬೈಕಿನಲ್ಲಿ ಆರಾಮದಾಯಕವಾದ ಸವಾರಿಗಾಗಿ ಸಾಫ್ಟ್ ಆಗಿರುವ ಸೀಟುಗಳನ್ನು ಹಾಗೂ ಸಸ್ಪೆಂಷನ್ ನೀಡಲಾಗಿದೆ. ಈ ಸಸ್ಪೆಂಷನ್ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಸರಾಗವಾಗಿ ಚಲಿಸುತ್ತದೆ.

ಹೆದ್ದಾರಿಯಲ್ಲಿ ಈ ಬೈಕ್ ಸವಾರರಿಗೆ ವರದಾನವಾಗಿದೆ. ಟ್ವಿಸ್ಟಿಯಾಗಿರುವ ರಸ್ತೆಗಳಲ್ಲಿಯೂ ಈ ಬೈಕ್ 4,500 ಆರ್‌ಪಿಎಂನಲ್ಲಿ ಸಾಗುತ್ತದೆ. ಈ ಬೈಕಿನಲ್ಲಿರುವ ಸಸ್ಪೆಂಷನ್'ಗಳು ಆಫ್-ರೋಡ್'ಗೆ ನೆರವಾಗುತ್ತವೆ.

ಹೋಂಡಾ ಸಿಬಿ 500 ಎಕ್ಸ್ ಬೈಕ್ ಹಾರ್ಡ್‌ಕೋರ್ ಆಫ್ ರೋಡ್ ಬೈಕ್ ಅಲ್ಲ, ಬದಲಿಗೆ ಸಾಫ್ಟ್ ರೋಡರ್ ಆಗಿದೆ. ಹೋಂಡಾ ಸಿಬಿ 500 ಎಕ್ಸ್ ಬೈಕ್ ಸವಾರ ಹಾಗೂ ಹಿಂಬದಿಯ ಸವಾರರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ.

ಈ ಬೈಕಿನಲ್ಲಿ ಅಳವಡಿಸಿರುವ ಡನ್‌ಲಾಪ್ ಟ್ರೈಲ್‌ಮ್ಯಾಕ್ಸ್ ಟಯರ್‌ಗಳು ಆಫ್-ರೋಡಿಂಗ್'ಗೆ ಸೂಕ್ತವಾಗಿದ್ದರೂ ರಸ್ತೆಯ ಮೇಲೆ ಸಾಕಷ್ಟು ಗ್ರಿಪ್ ಹೊಂದಿವೆ. ಮರಳಿನ ವ್ಹೀಲ್'ಗಳು ತಿರುಗಿದರೂ ಗಟ್ಟಿಯಾದ ನೆಲದ ಮೇಲೆ ಗಟ್ಟಿಯಾಗಿರುತ್ತವೆ.

ಈ ಬೈಕಿನ ಮುಂಭಾಗದಲ್ಲಿ ಸಾಂಪ್ರದಾಯಿಕವಾದ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ 9-ಹಂತದ ಅಡ್ಜಸ್ಟಬಲ್ ಮೊನೊಶಾಕ್ ನೀಡಲಾಗಿದೆ. ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಸಸ್ಪೆಂಷನ್ ಹೆಚ್ಚು ಫ್ಲೆಕ್ಸಿಬಲ್ ಆಗಿದೆ.

ಈ ಬೈಕಿನ ಮುಂಭಾಗದಲ್ಲಿರುವ 19 ಇಂಚಿನ ಹಾಗೂ ಹಿಂಬದಿಯಲ್ಲಿರುವ 17 ಇಂಚಿನ ವ್ಹೀಲ್'ಗಳು ಆಫ್ ರೋಡ್'ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.ಬ್ರೇಕಿಂಗ್'ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 310 ಎಂಎಂ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ನೀಡಲಾಗಿದೆ.

ಈ ಬ್ರೇಕ್‌ಗಳು ಸವಾರರಿಗೆ ಯೋಗ್ಯವಾದ ರೀತಿಯಲ್ಲಿ ನೆರವಾಗುತ್ತವೆ. 830 ಎಂಎಂ ಎತ್ತರವಿರುವ ಸೀಟ್ ಈ ಸೆಗ್'ಮೆಂಟಿನಲ್ಲಿರುವ ಇತರ ಅಡ್ವೆಂಚರ್ ಟೂರಿಂಗ್ ಬೈಕ್'ಗಳಿಗೆ ಸಮನಾಗಿದೆ.

199 ಕೆ,ಜಿ ತೂಕವನ್ನು ಹೊಂದಿರುವ ಹೋಂಡಾ ಸಿಬಿ 500 ಎಕ್ಸ್ ತನ್ನ ಪ್ರತಿಸ್ಪರ್ಧಿ ಬೈಕುಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ.

ಪ್ರಮುಖ ಫೀಚರ್'ಗಳು:
ಹೋಂಡಾ ಸಿಬಿ 500 ಎಕ್ಸ್ ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್, ಇಮೋಬೈಲೈಸರ್ ಹೊಂದಿರುವ ಹೋಂಡಾ ಇಗ್ನಿಷನ್ ಸೆಕ್ಯುರಿಟಿ ಸಿಸ್ಟಮ್ (ಎಚ್ಐಎಸ್ಎಸ್), ಪೂರ್ಣ ಪ್ರಮಾಣದ ಎಲ್ಇಡಿ ಲೈಟಿಂಗ್, ಅನಲಾಗ್-ಡಿಜಿಟಲ್ ಇನ್ಸ್'ಟ್ರೂಮೆಂಟೇಶನ್ ಸೇರಿದಂತೆ ಹಲವಾರು ಪ್ರಮುಖ ಫೀಚರ್'ಗಳನ್ನು ಹೊಂದಿದೆ.

ಈ ಬೈಕಿನಲ್ಲಿರುವ ಅನಲಾಗ್ ಟ್ಯಾಕೋಮೀಟರ್ ಸ್ಪೀಡೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್, ಕ್ಲಾಕ್, ಗೇರ್ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಮಾಹಿತಿಯನ್ನು ನೀಡುತ್ತದೆ.

ಎಲ್‌ಸಿಡಿ ಸ್ಕ್ರೀನ್ ಕೆಳಗಿನ ಬಲಭಾಗದಲ್ಲಿ ಡಿಜಿಟಲ್ ರೆವ್-ಕೌಂಟರ್ ನೀಡಲಾಗಿದೆ. ಹೋಂಡಾ ಸಿಬಿ 500 ಎಕ್ಸ್ ಬೈಕ್ ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಫಂಕ್ಷನ್ ಹೊಂದಿರುವ ಡೆಡಿಕೇಟೆಡ್ ಹಜಾರ್ಡಸ್ ಲೈಟ್ ಸ್ವಿಚ್'ಗಳನ್ನು ಹೊಂದಿದೆ.

ರೈಡರ್ ಗಟ್ಟಿಯಾಗಿ ಬ್ರೇಕ್ ಹಾಕಿದಾಗ ಬೈಕ್ ತುರ್ತು ಪರಿಸ್ಥಿತಿಯನ್ನು ಅರಿತು ಹಜಾರ್ಡಸ್ ಲೈಟ್'ಗಳನ್ನು ಆನ್ ಮಾಡುತ್ತದೆ. ಹೀಗಾಗಿ ಇದನ್ನು ಸೂಕ್ತವಾದ ಫೀಚರ್ ಎಂದು ಪರಿಗಣಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಹೋಂಡಾ ಸಿಬಿ 500 ಎಕ್ಸ್ ಅದ್ಭುತವಾದ ಬೈಕ್ ಆಗಿದ್ದು ದೂರದ ಪ್ರಯಾಣವನ್ನು ಆರಾಮದಾಯಕವಾಗಿಸುತ್ತದೆ. ರೂ.6.87 ಲಕ್ಷಗಳ ಎಕ್ಸ್‌ಶೋರೂಂ ದರವನ್ನು ಹೊಂದಿರುವ ಹೋಂಡಾ ಸಿಬಿ 500 ಎಕ್ಸ್ ಬೈಕ್ ಬೆನೆಲ್ಲಿ ಟಿಆರ್‌ಕೆ 502 ಹಾಗೂ ಸುಜುಕಿ ವಿ-ಸ್ಟ್ರೋಮ್ 650 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಈ ಬೈಕ್ ಹಲವು ಟಾಪ್ ಫೀಚರ್'ಗಳನ್ನು ಹೊಂದದೇ ಇದ್ದರೂ ತನ್ನ ಅದ್ಭುತ ಎಂಜಿನ್ ಹಾಗೂ ರೈಡಿಂಗ್ ಡೈನಾಮಿಕ್ಸ್‌ನಿಂದಾಗಿ ಖರೀದಿದಾರರು ನೀಡುವ ಹಣಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತದೆ.

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಸಿಬಿ 500 ಎಫ್ ಹಾಗೂ ಸಿಬಿಆರ್ 500 ಆರ್ ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಈ ಬೈಕುಗಳು ಸ್ಥಳೀಯವಾಗಿ ಉತ್ಪಾದನೆಯಾಗುವ ಕಾರಣಕ್ಕೆ ಈ ಬೈಕುಗಳ ಬೆಲೆಗಳು ಕಡಿಮೆಯಾಗುವ ಸಾಧ್ಯತೆಗಳಿವೆ.