ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ರಿವ್ಯೂ: ಯುವಕರು ಮೆಚ್ಚುವುದು ಗ್ಯಾರಂಟಿ!
ದೇಶದ ಯುವಕರಿಗೆ ನಿಮ್ಮ ನೆಚ್ಚಿನ ಮೋಟಾರ್‌ಸೈಕಲ್ ಯಾವುದು ಎಂದು ಕೇಳಿದರೆ.. ತಕ್ಷಣ ಬರುವ ಒಂದೇ ಒಂದು ಉತ್ತರ ರಾಯಲ್ ಎನ್‌ಫೀಲ್ಡ್ ಬೈಕ್ ಎಂದು. ಅಷ್ಟರಮಟ್ಟಿಗೆ ಕಂಪನಿಯ ಮೋಟಾರ್‌ಸೈಕಲ್‌ಗಳು ಜನಪ್ರಿಯತೆ ಗಳಿಸಿವೆ. ಸದ್ಯ, ಗೋವಾದಲ್ಲಿ ಅದ್ದೂರಿಯಾಗಿ ಏರ್ಪಡಿಸಿರುವ 'ಮೋಟೋವರ್ಸ್ 2024' ಕಾರ್ಯಕ್ರಮದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಚ್ಚ ಹೊಸ ಗೋವಾನ್ ಕ್ಲಾಸಿಕ್ 350 (Goan Classic 350) ಬೈಕ್‌ನ್ನು ಪರಿಚಯಿಸಿದೆ. ನಮಗೆ ಈ ಮೋಟಾರ್‌ಸೈಕಲ್‌ನ್ನು ಟೆಸ್ಟ್ ಡ್ರೈವ್ ನಡೆಸಲು ಅವಕಾಶ ದೊರೆಯಿತು. ಬನ್ನಿ.. ನೂತನ ಬೈಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ.
ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ವಿನ್ಯಾಸ & ವೈಶಿಷ್ಟ್ಯಗಳು: ಈ ಹೊಸ ಬೈಕ್ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಅದು ಬಹುತೇಕ 1930ರ ದಶಕದಲ್ಲಿ ಮಾರಾಟಕ್ಕೆ ಬಂದಿದ್ದ 'ಬಾಬರ್' ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗಲಿದ್ದು, ಯುವ ಜನರನ್ನು ಆಕರ್ಷಿಸುವ ರೆಟ್ರೋ ಲುಕ್‌ನ್ನು ಹೊಂದಿದೆ.

ನೂತನ ಬೈಕ್ ಉತ್ತಮವಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಅಡ್ಜೆಸ್ಟೇಬಲ್ ಕ್ಲಚ್ ಹಾಗೂ ಬ್ರೇಕ್ ಲಿವರ್‌ಗಳನ್ನು ಒಳಗೊಂಡಿದೆ. 'ಟಿಯರ್ ಡ್ರಾಪ್' ರೀತಿಯಲ್ಲಿರುವ ಫ್ಯುಯೆಲ್ (ಇಂಧನ) ಟ್ಯಾಂಕ್, ಕರ್ವ್ ಫೆಂಡರ್‌ಗಳು, 'ಏಪ್-ಹ್ಯಾಂಗರ್'ಗೆ ಹೋಲಿಕೆಯಾಗಬಲ್ಲ ಹ್ಯಾಂಡಲ್‌ಬಾರ್‌ಗಳು, ಫ್ಲೋಟಿಂಗ್ ಸೀಟ್ & ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಪಡೆದಿದೆ.
ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಮೋಟಾರ್‌ಸೈಕಲ್, ಟ್ಯೂಬ್‌ಲೆಸ್ ವೈಟ್‌ವಾಲ್ ಟೈರ್‌ನೊಂದಿಗೆ ಸ್ಪೋಕ್ಡ್ - ಫ್ರಂಟ್ ವೀಲ್ ಶಾಡ್‌ನ್ನು ಹೊಂದಿದೆ. ಜೊತೆಗೆ ಈ ಬೈಕ್, 4 ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ಸೆಮಿ-ಡಿಜಿಟಲ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಕಾರ್ಯಕ್ಷಮತೆ: ಈ ನೂತನ ಬೈಕ್ 'ಕ್ಲಾಸಿಕ್' ಮೋಟಾರ್‌ಸೈಕಲ್‌ನಂತೆ ಶಕ್ರಿಯುವವಾಗಿರುವ ಪವರ್‌ಟ್ರೇನ್ ಹೊಂದಿದೆ. ಇದು 349 ಸಿಸಿ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 6,100 ಆರ್‌ಪಿಎಂನಲ್ಲಿ 20.2 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4,000 ಆರ್‌ಪಿಎಂನಲ್ಲಿ 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 36.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ನೂತನ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕ್, ಮುಂಭಾಗ (ಫ್ರಂಟ್) 41 ಎಂಎಂ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) 6-ಸ್ಟೆಪ್ಸ್ ಪ್ರಿಲೋಡ್ ಅಡ್ಜೆಸ್ಟೇಬಲ್ ಟ್ವಿನ್ ಶಾಕ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇದು ರಸ್ತೆಯ ಮೇಲೆ ಸವಾರರಿಗೆ ಬಿಗಿಹಿಡಿತ ಒದಗಿಸುತ್ತದೆ.

ಈ ಹೊಚ್ಚ ಹೊಸ ಗೋವಾನ್ ಕ್ಲಾಸಿಕ್ 350 ಮೋಟಾರ್‌ಸೈಕಲ್ ಸುರಕ್ಷತೆಗೂ ಹೆಸರುವಾಗಿದೆ. ಮುಂದೆ (ಫ್ರಂಟ್) 300 ಎಂಎಂ ಹಾಗೂ ಹಿಂದೆ (ರೇರ್) 270 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಜೊತೆಗೆ ಡುಯಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕ್ 2,130 ಎಂಎಂ ಉದ್ದ, 825 ಎಂಎಂ ಅಗಲ ಮತ್ತು 1,200 ಎಂಎಂ ಎತ್ತರವಿದೆ. 1,400 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ. ಆದರೆ, 'ಕ್ಲಾಸಿಕ್' ಮೋಟಾರ್‌ಸೈಕಲ್‌ಗೆ ಹೋಲಿಕೆ ಮಾಡಿದರೆ 15 ಎಂಎಂ ಚಿಕ್ಕದಾಗಿದ್ದು, 40 ಎಂಎಂ ಅಗಲ & 110 ಎಂಎಂ ಎತ್ತರವಿದೆ. ಹೆಚ್ಚುವರಿಯಾಗಿ 10 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ.

ಈ ಮೋಟಾರ್‌ಸೈಕಲ್‌ನ ಮುಂಭಾಗ (ಫ್ರಂಟ್) 19-ಇಂಚಿನ ವೀಲ್ ಹಾಗೂ 100/90-1 ಅಳತೆಯ ಟೈರ್‌ನ್ನು ಹೊಂದಿದೆ. ಹಿಂಭಾಗ (ರೇರ್) 16-ಇಂಚಿನ ವೀಲ್ ಮತ್ತು 30/90-16 ಅಳತೆಯ ಟೈರ್‌ನ್ನು ಒಳಗೊಂಡಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದ್ದು, ಬರೋಬ್ಬರಿ 197 ಕೆಜಿ ತೂಕವಿದೆ ಹಿಂಭಾಗದ ಸೀಟ್ (ಆಸನ) ಅಳವಡಿಕೆ ಮಾಡಿದರೆ, 9 ಕೆಜಿ ತೂಕ ಅಧಿಕಗೊಳ್ಳುತ್ತದೆ.
ಚಾಲನಾ ಅನುಭವ: ನಮಗೆ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 (Royal Enfield Goan Classic 350) ಬೈಕ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದರ ಮೇಲೆ ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಗೋವಾದ ರಸ್ತೆಯಲ್ಲಿ ಈ ಬೈಕ್ ಬೇರೆ ಯಾವುದೇ ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೂ ಸರಿ ಸಾಟಿಯಿಲ್ಲದ ರೀತಿಯಲ್ಲಿ ಸಂಚರಿಸಿತು.

ಇದನ್ನು ತಿರುವು ಸೇರಿದಂತೆ ಎಲ್ಲ ವಿವಿಧ ರಸ್ತೆಯಲ್ಲಿ ಸುಲಭವಾಗಿ ಓಡಿಸಬಹುದು ಎಂಬುದನ್ನು ಕಂಡುಕೊಂಡೆವು. ಎಂಜಿನ್ ಅತ್ಯುತ್ತಮವಾಗಿ ಶಕ್ತಿ (ಪವರ್) ಹೊರಹಾಕುತ್ತಿತ್ತು. ಗೇರ್‌ಬಾಕ್ಸ್ ಕೂಡ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಿತು. ವಿಶಿಷ್ಟ ವಿನ್ಯಾಸದ ಈ ಬೈಕ್‌ನ ಹ್ಯಾಂಡಲ್‌ಬಾರ್‌ಗಳು ರಸ್ತೆ ಮೇಲೆ ಗಟ್ಟಿಯಾಗಿ ಹಿಡಿತ ಸಾಧಿಸಲು ನೆರೆವಾಯಿತು. ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್‌ಗಳು ಕೂಡ ಹೆಚ್ಚು ಉತ್ತಮವಾಗಿವೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕ್ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿದೆ. ಅದರಲ್ಲೂ ಯುವತಿಯರು ಈ ಬೈಕ್ ಖರೀದಿಸಲು ಮನಸ್ಸು ಮಾಡಬಹುದು. ಇದರ ಕಾರ್ಯಕ್ಷಮತೆಯೂ ಅದ್ಬುತವಾಗಿರುವುದರಿಂದ ಮುಂಬರುವ ದಿನಗಳಲ್ಲಿ ನೂತನ ಮೋಟಾರ್‌ಸೈಕಲ್‌ಗೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








