ಲಾಂಗ್ ಟರ್ಮ್ ರಿವ್ಯೂ: ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಯುವ ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನ ವಿಭಾಗವು ವೇಗವಾಗಿ ಬೆಳೆಯುತ್ತಿದ್ದು, ಕಳೆದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹಲವಾರು ಹೊಸ ವಾಹನ ತಯಾರಕರು ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇವುಗಳಲ್ಲಿ ಇವೆ ಇಂಡಿಯಾ ಕಂಪನಿಯು ಕೂಡಾ ಒಂದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

2018ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಆರಂಭಿಸಿರುವ ಒಡಿಶಾ ಮೂಲದ ಇವೆ ಇಂಡಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಇವೆ ನಿರ್ಮಾಣದ ಪ್ರಮುಖ ಇವಿ ಸ್ಕೂಟರ್ ಮಾದರಿಯಾಗಿರುವ ಕ್ಸೆನಿಯಾ ಆವೃತ್ತಿಯು ಬ್ರಾಂಡ್‌ನ ಮೊದಲ ಇವಿ ಸ್ಕೂಟರ್ ಆವೃತ್ತಿಯಾಗಿದ್ದು, ಸಣ್ಣ ಎಲೆಕ್ಟ್ರಿಕ್ ಮೋಟಾರ್ ಪ್ಯಾಕ್ ಹೊಂದಿರುವ ಇವೆ ಕ್ಸೆನಿಯಾವನ್ನು ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಪ್ರಯಾಣಿಕ ಸ್ಕೂಟರ್ ಎಂದು ಸುಲಭವಾಗಿ ವರ್ಗೀಕರಿಸಬಹುದು.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಫ್ಲ್ಯಾಗ್‌ಶಿಪ್ ಇವಿ ಸ್ಕೂಟರ್ ಮಾದರಿಯಾಗಿರುವ ಕ್ಸೆನಿಯಾ ಮಾದರಿಯು ಕಡಿಮೆ ವೇಗದ ಇ-ಸ್ಕೂಟರ್ ಮಾದರಿಯಾಗಿರುವ ಹಿನ್ನಲೆಯಲ್ಲಿ ಚಾಲನೆಗೆ ಯಾವುದೇ ನೋಂದಣಿ ಫಲಕದ ಅಗತ್ಯವಿರುವುದಿಲ್ಲ. ಹಾಗಾದ್ರೆ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗ್ರಾಹಕರನ್ನು ಕ್ಸೆನಿಯಾ ಇವಿ ವಾಹನದಲ್ಲಿ ಪ್ರಮುಖ ಅಂಶಗಳು ಯಾವವು ಎನ್ನುವುದನ್ನು ಈ ವಿಮರ್ಶೆ ಲೇಖನದಲ್ಲಿ ತಿಳಿಯೋಣ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಹೊಸ ಇವಿ ಸ್ಕೂಟರ್ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಸುಮಾರು ಒಂದು ವಾರಗಳ ಕಾಲ ಕ್ಸೆನಿಯಾ ಇ-ಸ್ಕೂಟರ್ ಮಾದರಿಯನ್ನು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಹಸ್ತಾಂತರಿಸಿದ್ದ ಇವೆ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಸ್ಕೂಟರ್ ಮಾರಾಟವನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ ಮಾಡುವ ತವಕದಲ್ಲಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ವಿನ್ಯಾಸ ಮತ್ತು ಡಿಸೈನ್

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಹೊಸ ಮಾದರಿಯ ವಿನ್ಯಾಸ ಮತ್ತು ತೀಕ್ಷ್ಣವಾದ ನೋಟದೊಂದಿಗೆ ರಸ್ತೆಗಳಲ್ಲಿ ಇತರೆ ವಾಹನ ಸವಾರರನ್ನು ತನ್ನತ್ತ ಗಮನಸೆಳೆದಿದ್ದು ಸುಳ್ಳಲ್ಲ. ಹೊಸ ಸ್ಕೂಟರ್ ಟೆಸ್ಟ್ ರೈಡ್ ವೇಳೆ ಸುಮಾರು ಜನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗೆಗೆ ವಿಚಾರಿಸಿದ್ದು ಸ್ಕೂಟರ್ ನೋಟವು ಆಕರ್ಷಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಕ್ಸೆನಿಯಾ ಸ್ಕೂಟರ್ ಮುಂಭಾಗದಲ್ಲಿ ಎಲ್‌ಇಡಿ ಯುನಿಟ್ ಒಳಗೊಂಡ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್‌ಅಪ್, ಫ್ರಂಟ್ ಅಪ್ರನ್‌ನೊಂದಿಗೆ ಎಲ್‌ಇಡಿ ಡಿಆರ್‌ಎಲ್‌‌ಗಳನ್ನು ಸಂಯೋಜಿಸಲ್ಪಟ್ಟಿರುವ ಹೆಡ್‌ಲ್ಯಾಂಪ್ ಮತ್ತು ಸ್ಕೂಟರ್ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತರಲು ಮೇಲ್ಭಾಗದಲ್ಲಿ ಹೆಚ್ಚುವರಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ನೀಡಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಇವೆ ಕಂಪನಿಯು ಸ್ಕೂಟರ್ ಸೈಡ್ ಪ್ರೋಫೈಲ್‌ನಲ್ಲೂ ಕೂಡಾ ಆಕರ್ಷಕ ವಿನ್ಯಾಸಗಳನ್ನು ನೀಡಿದ್ದು, ಬಿಳಿ ಬಣ್ಣದ ಆಯ್ಕೆ ಹೊಂದಿದ್ದ ಟೆಸ್ಟ್ ರೈಡ್ ಸ್ಕೂಟರ್ ಮಾದರಿಯಲ್ಲಿ ಕಪ್ಪು ಬಣ್ಣದಲ್ಲಿದ್ದ ಇತರೆ ತಾಂತ್ರಿಕ ಅಂಶಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಸ್ಕೂಟರ್ ಆಕರ್ಷಣೆಗಾಗಿ ಕ್ಸೆನಿಯಾ ಸ್ಟಿಕರ್ಸ್, ಕಪ್ಪು ಬಣ್ಣದಿಂದ ಕೂಡಿರುವ ಪಿಲಿಯನ್ ಸೀಟ್ ಗ್ರ್ಯಾಬ್ ಕೂಡಾ ಆಕರ್ಷಕವಾಗಿದ್ದು, ದೊಡ್ಡ ಗಾತ್ರದ ಟೈಲ್ ಲೈಟ್, ಟರ್ನ್ ಸಿಗ್ನಲ್ ಇಂಡಿಕೇಟರ್ ಗಮನಸೆಳೆಯುತ್ತವೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ರೈಡ್ ಮತ್ತು ಕಂಫರ್ಟ್

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಆರಾಮದಾಯಕ ಸವಾರಿಗೆ ಪೂರಕವಾದ ಆಸನಗಳನ್ನು ಪಡೆದುಕೊಂಡಿದ್ದು, ರೈಡರ್ ಮತ್ತು ಪಿಲಿಯನ್ ಎರಡು ಬದಿಯಲ್ಲೂ ಉತ್ತಮ ಪ್ರಮಾಣದ ಆಸನ ಒದಗಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಯಾಟರಿ ಪ್ಯಾಕ್ ಆಸನದ ಕೆಳಗಿನ ಬೂಟ್ ಸ್ಪೆಸ್‌ನಲ್ಲಿದ್ದು, ರೈಡಿಂಗ್ ಸುಧಾರಿಸಲು ಇದು ಸಹಕಾರಿಯಾಗುತ್ತದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಆದರೆ ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಅನ್ನು ಬೂಟ್ ಸ್ಪೆಸ್‌ನಲ್ಲಿ ಜೋಡಣೆ ಮಾಡಿರುವ ಹಿನ್ನಲೆಯಲ್ಲಿ ಬೂಟ್ ಸ್ಪೆಸ್‌ನಲ್ಲಿ ಯಾವುದೇ ವಸ್ತುಗಳನ್ನು ಶೇಖರಿಸಲು ಸಾಧ್ಯವಿಲ್ಲ. ಹೀಗಾಗಿ ಸ್ಕೂಟರ್ ಸವಾರರು ಫುಟ್‌ಬೋರ್ಡ್‌ನಲ್ಲಿ ನೀಡಲಾದ ಸ್ಥಳಾವಕಾಶದಲ್ಲೇ ಸಣ್ಣಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಬಹುದಾಗಿದ್ದು, ಅಪ್ರಾನ್ ಹಿಂಭಾಗದಲ್ಲೇ ಯುಎಸ್‌ಬಿ ಚಾರ್ಜಿಂಗ್ ಫೋರ್ಟ್ ನೀಡಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಹೊಸ ಸ್ಕೂಟರ್‌ನಲ್ಲಿ ನೀಡಿರುವ ಸಸ್ಪೆಷನ್ ಸೆಟ್ಅಪ್ ಸೌಲಭ್ಯವು ಅತ್ಯುತ್ತಮ ರೈಡಿಂಗ್‌ಗೆ ಪೂರಕವಾಗಿದ್ದು, ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಫಿಕ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಬಳಸಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಮತ್ತೊಂದು ಆಶ್ಚರ್ಯದಾಯಕ ಅಂಶವೆಂದರೆ ಹೊಸ ಕ್ಸೆನಿಯಾ ಇವಿ ಸ್ಕೂಟರ್‌ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೂ ಎರಡು ಬದಿಯ ಚಕ್ರದಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದ್ದು, ಉತ್ತಮವಾದ ಹಿಡಿತಕ್ಕೆ ಪೂರಕವಾಗಿವೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಕ್ಸೆನಿಯಾ ಫೀಚರ್ಸ್‌ಗಳು

ಇವೆ ಬ್ರಾಂಡ್‌ನ ಪ್ರಮುಖ ಸ್ಕೂಟರ್ ಮಾದರಿಯಾಗಿರುವ ಕ್ಸೆನಿಯಾದಲ್ಲಿ ಹಲವು ಹೊಸ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೋಡಿಸಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಸ್ಕೂಟರ್ ಸವಾರರು ವೇಗ, ಬ್ಯಾಟರಿ ಚಾರ್ಜ್ ಲಭ್ಯತೆ, ಓಡೋಮೀಟರ್ ಮತ್ತು ಟ್ರಿಪ್‌ಮೀಟರ್‌ನಂತಹ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಪ್ರಮುಖ ಮೂರು ಮಾದರಿಯ ರೈಡಿಂಗ್ ಮೋಡ್ ನೀಡಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಹೊಸ ಸ್ಕೂಟರ್‌ನಲ್ಲಿ ಇವೆ ಕಂಪನಿಯು ಪಾರ್ಕ್ ಮೋಡ್ ನೀಡಿರುವುದು ಹೆಚ್ಚು ಸುರಕ್ಷಾ ವೈಶಿಷ್ಟ್ಯತೆಗಳಲ್ಲಿ ಒಂದಾಗಿದ್ದು, ರೈಡಿಂಗ್‌ಗೆ ಪೂರಕವಾಗಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿನ ವಿವಿಧ ಕಾರ್ಯಗಳಿಗಾಗಿ ಸ್ವಿಚ್‌ಗಳನ್ನು ಉತ್ತಮವಾಗಿ ಸ್ಥಾನಗಳಲ್ಲಿ ಇರಿಸಲಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಹಾಗೆಯೇ ಹೊಸ ಇ-ಸ್ಕೂಟರ್‌ನಲ್ಲಿ ಸ್ಟೈಲಿಶ್ ಅಯಾಲ್ ವೀಲ್ಹ್, ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್, ಕೀ ಲೆಸ್ ಎಂಟ್ರಿ, ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ನೀಡಲಾಗಿದೆ. 60 ವೊಲ್ಟೊ 20ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿ ಮಾದರಿಯನ್ನು ಸ್ಕೂಟರಿನಿಂಗ ಬೇರ್ಪಡಿಸಿ ಪ್ರತ್ಯೇಕವಾಗಿ ಚಾರ್ಜ್ ಮಾಡಬಹುದಲ್ಲದೆ ಫ್ರಂಟ್ ಸೀಟ್ ಮುಂಭಾದಲ್ಲಿರುವ ಚಾರ್ಜಿಂಗ್ ಫೋರ್ಟ್ ಮೂಲಕವು ನೇರವಾಗಿ ಚಾರ್ಜ್ ಮಾಡಬಹುದು.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

60 ವೊಲ್ಟೊ 20ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿ ಮಾದರಿಯು ಹೋಂ ಚಾರ್ಜರ್ ಮೂಲಕ ಸಂಪೂರ್ಣವಾಗಿ ಚಾರ್ಜ್‌ಗೊಳ್ಳಲು ಗರಿಷ್ಠ 4 ಗಂಟೆಗಳ ಕಾಲ ತೆಗೆದುಕೊಂಡಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ 1 ಗಂಟೆಯೊಳಗೆ ಚಾರ್ಜಿಂಗ್ ಮಾಡಬಹುದು.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಈ ಮೂಲಕ ಒಂದು ಬಾರಿ ಚಾರ್ಜ್ ಮೂಲಕ ಗರಿಷ್ಠ 65 ಕಿ.ಮೀ ಮೈಲೇಜ್ ಹಿಂದಿರುಗಿಸುವ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕಡಿಮೆ ಟಾಪ್ ಸ್ಪೀಡ್ ಹೊಂದಿರುವ ಉತ್ತಮ ಫೀಚರ್ಸ್‌ಗಳ ಮೂಲಕ ಸಿಟಿ ರೈಡಿಂಗ್‌ಗೆ ಅತ್ಯುತ್ತಮ ಆಯ್ಕೆ ಎನ್ನಬಹುದು.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಇವೆ ಇಂಡಿಯಾ ಕಂಪನಿಯು ಸದ್ಯ ಭಾರತದಲ್ಲಿ ಕ್ಸೆನಿಯಾ, ಯುಆರ್, ವಿಂಡ್, 4ಯು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 52 ಸಾವಿರದಿಂದ ರೂ. 74 ಸಾವಿರ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ. ಇದರಲ್ಲಿ ಕ್ಸೆನಿಯಾ ಮಾದರಿಯೇ ಆರಂಭಿಕ ಮಾದರಿಯಾಗಿದ್ದು, ಸ್ಕೂಟರ್ ಚಾಲನೆಗೆ ನೋಂದಣಿ ಅವಶ್ಯಕತೆ ಇಲ್ಲದಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಡ್ರೈವ್‌ಸ್ಪಾಕ್ ಅಭಿಪ್ರಾಯ

ಹಗುರವಾಗಿರುವ ಕ್ಸೆನಿಯಾ ಸ್ಕೂಟರ್ ಮಾದರಿಯು ಉತ್ತಮ ರೈಡಿಂಗ್‌ಗೆ ಪೂರಕವಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದೆ. ಜೊತೆಗೆ ಬೆಲೆಯಲ್ಲೂ ಗ್ರಾಹಕರನ್ನು ಸೆಳೆಯುವ ಹೊಸ ಸ್ಕೂಟರ್ ನಗರ ಪ್ರದೇಶಗಳಲ್ಲಿನ ದಿನನಿತ್ಯದ ಸವಾರಿಗೆ ಉತ್ತಮವಾಗಿದೆ.

ಕಡಿಮೆ ವೇಗದಲ್ಲೂ ಗ್ರಾಹಕರನ್ನು ಸೆಳೆಬಲ್ಲದು ಇವೆ ಕ್ಸೆನಿಯಾ

ಡ್ರೈವ್‌ಸ್ಪಾರ್ಕ್ ತಂಡವು ಹೊಸ ಸ್ಕೂಟರ್ ಮಾದರಿಯನ್ನು ಸುಮಾರು ಒಂದು ವಾರಗಳ ಕಾಲ ವಿವಿಧ ಹಂತದ ರೈಡಿಂಗ್‌ಗಳನ್ನು ಕೈಗೊಂಡಿತ್ತು. ಇದೀಗ ಇದು ಫಸ್ಟ್ ರೈಡ್ ಕುರಿತಾದ ಮೊದಲ ಹಂತದ ಮಾಹಿತಿಯಾಗಿದ್ದು, ಅಂತಿಮ ಹಂತದ ವರದಿಯನ್ನು ಕೂಡಾ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಅಂತಿಮ ವರದಿಯಲ್ಲಿ ಇವೆ ಸ್ಕೂಟರ್ ಫರ್ಪಾಮೆನ್ಸ್, ರೈಡಿಂಗ್ ಕಾಸ್ಟ್ ಮತ್ತು ಪ್ರತಿಸ್ಪರ್ಧಿ ಮಾದರಿಗಳಿಂತ ಕ್ಸೆನಿಯಾ ಹೇಗೆ ಉತ್ತಮ ಎನ್ನುವ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ.

Most Read Articles

Kannada
English summary
Eeve Xeniaa Long-Term Review (First Report). Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X