ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಭಾರತದಲ್ಲಿರುವ ಹಲವು ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಇವೆ ಸಹ ಸೇರಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಇವೆ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ನಾವು ಇತ್ತೀಚಿಗೆ ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾಲನೆ ಮಾಡಿದೆವು. ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ಚಾಲನೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಡಿಸೈನ್ ಅಂಡ್ ಸ್ಟೈಲಿಂಗ್

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುವ ಜನತೆಯನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಎಲ್ಲಾ ಕಡೆ ಶಾರ್ಪ್ ಲೈನ್ ಹಾಗೂ ಆಂಗ್ಯುಲರ್ ಶೈಲಿಯನ್ನು ನೀಡಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರಿನ ಮುಂಭಾಗದಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಹೊಂದಿರುವ ಎಲ್ಇಡಿ ಡಿ‌ಆರ್‌ಎಲ್'ಗಳನ್ನು ನೀಡಲಾಗಿದೆ. ಹೆಡ್‌ಲ್ಯಾಂಪ್‌ಗಳು ಹೈ ಬೀಮ್ ಹಾಗೂ ಲೋ ಬೀಮ್'ಗಾಗಿ ಪ್ರತ್ಯೇಕ ಎಲ್‌ಇಡಿ ಪಾಡ್‌ಗಳನ್ನು ನೀಡಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಟ್ವಿನ್ ಹೆಡ್‌ಲ್ಯಾಂಪ್ ಸೆಟಪ್ ಮುಂಭಾಗದ ಏಪ್ರನ್‌ನಲ್ಲಿ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಂಡಿದೆ. ಏಪ್ರನ್ ಮೇಲ್ಭಾಗದಲ್ಲಿರುವ ಫಾಕ್ಸ್ ಏರ್ ಇನ್ ಟೇಕ್ ಈ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇದರ ಮೇಲೆ ಇವೆ ಬ್ಯಾಡ್ಜಿಂಗ್ ಹಾಗೂ ಹ್ಯಾಂಡಲ್‌ಬಾರ್ ಕೌಲಿಂಗ್‌ನಲ್ಲಿ ಟರ್ನ್ ಸಿಗ್ನಲ್ ಇಂಡಿಕೇಟರ್'ಗಳನ್ನು ನೀಡಲಾಗಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಆಕರ್ಷಕವಾದ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಈ ಸ್ಕೂಟರ್‌ನ ಬಾಡಿ ಮೇಲೆ ಸ್ಪೋರ್ಟಿ ಗ್ರಾಫಿಕ್ಸ್ ನೀಡಲಾಗಿದೆ. ಸ್ಕೂಟರ್‌ನ ಹಿಂಭಾಗದಲ್ಲಿ, ಡ್ಯುಯಲ್-ಟೋನ್ ಸ್ವಿಂಗಾರ್ಮ್ ಕವರ್‌ಗಳನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ. ಇದು ಕ್ರಿಯಾತ್ಮಕವಾಗಿಲ್ಲವಾದರೂ ಸ್ಕೂಟರ್‌ನ ಸ್ಟೈಲಿಂಗ್‌ ಹೆಚ್ಚಿಸುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇದು ಸ್ವಿಂಗಾರ್ಮ್, ಸಸ್ಪೆಂಷನ್ ಹಾಗೂ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದೆ. ಈ ಸ್ಕೂಟರ್ ಪ್ಲಾಸ್ಟಿಕ್ ಡ್ಯುಯಲ್ ಟೋನ್ ಅಂಶಗಳೊಂದಿಗೆ ದೊಡ್ಡ ಗ್ರಾಬ್ ರೇಲ್ ಅನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಹಿಂಭಾಗದಲ್ಲಿ ಸೆಂಟ್ರಲ್ ಟೇಲ್ ಲ್ಯಾಂಪ್'ನಲ್ಲಿ ಟರ್ನ್ ಸಿಗ್ನಲ್ ಇಂಡಿಕೇಟರ್'ಗಳನ್ನು ಹೊಂದಿರುವ ದೊಡ್ಡ ಟೇಲ್ ಲ್ಯಾಂಪ್ ನೀಡಲಾಗಿದೆ. ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಮಡ್‌ಗಾರ್ಡ್‌ನಲ್ಲಿ ಅಳವಡಿಸಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಗಮನಿಸಬೇಕಾದ ಸಂಗತಿಯೆಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೋಂದಾಯಿಸುವ ಅಗತ್ಯವಿಲ್ಲ. ಈ ಕಾರಣಕ್ಕೆ ರಿಜಿಸ್ಟ್ರೇಷನ್ ನಂಬರ್ ಇವೆ ಎಂದು ಬರೆಯಲಾದ ಪ್ಲೇಟ್ ಅನ್ನು ಮಾತ್ರ ಕಾಣಬಹುದು.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಕಂಪನಿಯು ಇವೆ ಆಟ್ರಿಯೋವನ್ನು ಕೆಂಪು - ಕಪ್ಪು ಹಾಗೂ ನೀಲಿ - ಕಪ್ಪು ಎಂಬ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಫೀಚರ್ ಹಾಗೂ ವಿಶೇಷತೆಗಳು

ಇವೆ ಆಟ್ರಿಯೋ ಸರಳವಾದ ಪ್ರಾಕ್ಟಿಕಲ್ ಸ್ಕೂಟರ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಫೀಚರ್'ಗಳ ಸಂಖ್ಯೆ ಹೆಚ್ಚಿಲ್ಲವಾದರೂ ಈ ಸೆಗ್ ಮೆಂಟಿನಲ್ಲಿರುವ ಸ್ಕೂಟರ್‌ಗಳಲ್ಲಿ ಉತ್ತಮವಾಗಿದೆ. ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಫೀಚರ್'ಗಳೆಂದರೆ:

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

- ಎಲ್ಇಡಿ ದೀಪಗಳು

- ಐಒಟಿ ಎನೆಬಲ್ಡ್

- ಜಿಯೋ ಫೆನ್ಸಿಂಗ್ ಹಾಗೂ ಜಿಯೋ ಟ್ಯಾಗಿಂಗ್

- ಯುಎಸ್‌ಬಿ ಮೊಬೈಲ್ ಫೋನ್ ಚಾರ್ಜರ್

- ಆ್ಯಂಟಿ ಥೆಫ್ಟ್ ಲಾಕ್

- ಕೀ ಲೆಸ್ ಎಂಟ್ರಿ

- ರಿಮೋಟ್ ಲಾಕ್ / ಅನ್ ಲಾಕ್ ಹಾಗೂ ಸ್ಟಾರ್ಟ್

- ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್

- ಮೂರು ರೈಡಿಂಗ್ ಮೋಡ್'ಗಳು

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇವೆ ಆಟ್ರಿಯೋ ಸರ್ಕ್ಯುಲರ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಇದರ ಡಯಲ್ ಚಿಕ್ಕದಾಗಿದ್ದು, ಹಲವು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಈ ಕ್ಲಸ್ಟರ್ ಸ್ಪೀಡ್, ರೈಡಿಂಗ್ ಮೋಡ್, ಬ್ಯಾಟರಿ ವೋಲ್ಟೇಜ್, ಮೋಟಾರ್ ಸ್ಪೀಡ್ ಹಾಗೂ ಕೊನೆಯದಾಗಿ ಚಾರ್ಜ್ ಮಾಡಿದ ನಂತರ ಸ್ಕೂಟರ್ ಚಲಿಸಿದ ದೂರವನ್ನು ತೋರಿಸುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಪವರ್‌ಟ್ರೇನ್, ಪರ್ಫಾಮೆನ್ಸ್ ಹಾಗೂ ಹ್ಯಾಡ್ಲಿಂಗ್

ಇವೆ ಆಟ್ರಿಯೋ ಸ್ಕೂಟರಿನಲ್ಲಿ 250 ವ್ಯಾ ಹಬ್ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ 27 ಎಹೆಚ್ 72ವೊ ಲೆಡ್ ಆಸಿಡ್ ಬ್ಯಾಟರಿಗೆ ಸಂಪರ್ಕ ಹೊಂದಿದೆ. ಈ ಬ್ಯಾಟರಿಯನ್ನು 7-8 ಗಂಟೆಗಳಲ್ಲಿ 0-100%ವರೆಗೆ ಚಾರ್ಜ್ ಮಾಡಬಹುದು.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಈ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 75 - 85 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಇವೆ ಕಂಪನಿ ಹೇಳಿಕೊಂಡಿದೆ. ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಸಮತಟ್ಟಾದ ರಸ್ತೆಯಲ್ಲಿ ಗರಿಷ್ಠ 45 ಕಿ.ಮೀ ವೇಗದಲ್ಲಿ ಚಲಿಸಿದರೆ, ಇಳಿಜಾರು ರಸ್ತೆಯಲ್ಲಿ 49 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಈ ಎಲೆಕ್ಟ್ರಿಕ್ ಸ್ಕೂಟರ್ ಏರು ರಸ್ತೆಗಳಲ್ಲಿ ಸಾಗುವಾಗ ನಿಧಾನವಾಗುತ್ತದೆ. ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ 8 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ 1, 2, 3 ಎಂಬ ಮೂರು ರೈಡಿಂಗ್ ಮೋಡ್'ಗಳನ್ನು ಹೊಂದಿದೆ. ಈ ಸ್ಕೂಟರಿನ ಆಕ್ಸಲರೇಷನ್ ಎಲ್ಲಾ ಮೋಡ್'ಗಳಲ್ಲಿಯೂ ಒಂದೇ ಆಗಿರುತ್ತದೆ. ಮೋಡ್ 1 ರಲ್ಲಿ ಇವೆ ಆಟ್ರಿಯೋ ಗಂಟೆಗೆ 33 ಕಿ.ಮೀ ವೇಗವನ್ನು ಅಕ್ಸಲರೇಟ್ ಮಾಡಿ ಗರಿಷ್ಠ 35 ಕಿ.ಮೀ ವೇಗವನ್ನು ತಲುಪುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಮೋಡ್ 2 ರಲ್ಲಿ ಗಂಟೆಗೆ 40 ಕಿ.ಮೀ ವೇಗವನ್ನು ಅಕ್ಸಲರೇಟ್ ಮಾಡಿದರೆ, ಮೋಡ್ 3 ರಲ್ಲಿ ಗಂಟೆಗೆ 45 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಎಲ್ಲಾ ರೈಡ್ ಮೋಡ್'ಗಳಲ್ಲಿ ಥ್ರೊಟಲ್ ರೆಸ್ಪಾನ್ಸ್ ಒಂದೇ ಆಗಿರುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ನಾವು ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿ ಚಾಲನೆ ಮಾಡಿದ ನಂತರ ಈ ಸ್ಕೂಟರ್ 55 ಕಿ.ಮೀಗಳವರೆಗೆ ಚಲಿಸಿತು. ಈ ವ್ಯಾಪ್ತಿಯು ಕಂಪನಿಯು ಹೇಳುತ್ತಿರುವ ವ್ಯಾಪ್ತಿಗಿಂತ ಕಡಿಮೆಯಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ನಾವು ಮೋಡ್ 3 ರಲ್ಲಿ ಸುಮಾರು 55 ಕಿ.ಮೀ ದೂರವನ್ನು ಕ್ರಮಿಸಿದೆವು. ಈ ವ್ಯಾಪ್ತಿಯು ಸ್ಕೂಟರ್ ಹಾಗೂ ಗ್ರೇಡಿಯಂಟ್'ನಲ್ಲಿ ಇಳಿಜಾರಿನ ಸವಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಸ್ಕೂಟರ್ ಪರೀಕ್ಷಿಸುವ ವೇಳೆ ಚಾರ್ಜ್ ಮುಗಿದರೂ ಅದರಲ್ಲಿದ್ದ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಎರಡು ಯೂನಿಟ್ ಬ್ಯಾಟರಿ ಪವರ್ ತೋರಿಸುತ್ತಿತ್ತು. ಇವೆ ಆಟ್ರಿಯೋ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸರ್ವರ್'ಗಳನ್ನು ಅಳವಡಿಸಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಶಾಫ್ಟ್ ಸೈಡ್'ನಲ್ಲಿರುವ ಸಸ್ಪೆಂಷನ್ ಈ ಸ್ಕೂಟರ್ ಅನ್ನು ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಬ್ರೇಕಿಂಗ್'ಗಳಿಗಾಗಿ ಇವೆ ಆಟ್ರಿಯೋ ಸ್ಕೂಟರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಬ್ಯಾಟರಿ ಪ್ಯಾಕ್ ಅನ್ನು ಫ್ಲೋರ್‌ಬೋರ್ಡ್ ಅಡಿಯಲ್ಲಿ ಇರಿಸಲಾಗಿರುವುದರಿಂದ ಸ್ಕೂಟರ್ ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ಸಾಧಿಸಲು ನೆರವಾಗುತ್ತದೆ. ಫುಟ್‌ಬೋರ್ಡ್ ಅನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇದರಿಂದ ರೈಡಿಂಗ್ ಪೊಸಿಷನ್ ಸ್ವಲ್ಪ ವಿಚಿತ್ರವಾಗಿದೆ. ಸವಾರನ ಮೊಣಕಾಲುಗಳು ಸೊಂಟಕ್ಕಿಂತ ಮೇಲೆ ಬರುತ್ತವೆ. ನಾವು ಈ ಸ್ಕೂಟರ್ ಅನ್ನು ಯು-ಟರ್ನ್ ತೆಗೆದುಕೊಳ್ಳುವ ಮೂಲಕ ಹಾಗೂ ಬಿಗಿಯಾದ ಸ್ಥಳಗಳಲ್ಲಿ ಚಾಲನೆ ಮಾಡಿದೆವು.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಈ ವೇಳೆ ಸ್ಕೂಟರಿನ ಹ್ಯಾಂಡಲ್‌ಬಾರ್‌ ಮೊಣಕಾಲಿಗೆ ತಾಗುತ್ತಿತ್ತು. ಈ ಸ್ಕೂಟರ್ ಚಾಲನೆ ಎತ್ತರಕ್ಕೆ ಇರುವ ಸವಾರರಿಗೆ ತುಸು ಕಷ್ಟವೆನಿಸಬಹುದು. ಇದರ ಹೊರತಾಗಿ ಇವೆ ಆಟ್ರಿಯೋ ಸವಾರಿ ಆಹ್ಲಾದಕರ ಅನುಭವ ನೀಡುತ್ತದೆ. ಸೀಟುಗಳು ಆರಾಮದಾಯಕವಾಗಿದ್ದು, ಮೆತ್ತನೆಯ ಅನುಭವವನ್ನು ನೀಡುತ್ತವೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಬೆಲೆ, ಪ್ರತಿಸ್ಪರ್ಧಿಗಳು ಹಾಗೂ ವಾರಂಟಿ

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ರೂ.64,900ಗಳಾಗಿದೆ. ಈ ಬೆಲೆ ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ತುಸು ಹೆಚ್ಚಾಗಿದೆ. ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಎಟ್ರಿಯೊ ಒಕಿನಾವಾ ಆರ್ 30, ಒಕಿನಾವಾ ಲೈಟ್, ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಎಲ್ಎಕ್ಸ್, ಪ್ಯೂರ್ ಇವೆ ಇಟ್ರಾನ್ಸ್ ಪ್ಲಸ್, ಆಂಪಿಯರ್ ರಿಯೊ ಪ್ಲಸ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇವೆ ಆಟ್ರಿಯೋ ಸ್ಕೂಟರ್ ಅನ್ನು 2 ವರ್ಷ ಅಥವಾ 20,000 ಕಿ.ಮೀ ವಾರಂಟಿಯೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಎಲ್ಲಾ ವಾರಂಟಿಗಳನ್ನು ಪಡೆಯಲು ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಾಲ ಕಾಲಕ್ಕೆ ಸರ್ವೀಸ್ ಮಾಡಿಸಬೇಕಾಗುತ್ತದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೆಗ್ ಮೆಂಟ್ ಅನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಮೇಲ್ಭಾಗದಲ್ಲಿ ಪ್ರೀಮಿಯಂ ಹೈ ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಇವುಗಳ ಬೆಲೆ ರೂ.1 ಲಕ್ಷಗಳಾಗಿದೆ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಕೆಳಗಿನ ವಿಭಾಗದಲ್ಲಿ ಬೇರ್-ಬೇಸಿಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಇವುಗಳ ಸವಾರಿ ತೀರಾ ನಿಧಾನವಾಗಿವೆ. ಇವೆರಡರ ನಡುವೆ ಇವೆ ಆಟ್ರಿಯೋ ರೀತಿಯ ಸ್ಕೂಟರ್‌ಗಳಿವೆ. ಇವು ಬೇಸಿಕ್ ಅಥವಾ ಪ್ರೀಮಿಯಂ ಸ್ಕೂಟರ್‌ಗಳಲ್ಲ.

ಇವೆ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ: ತನ್ನ ಸೆಗ್ ಮೆಂಟಿನಲ್ಲಿ ಮೋಡಿ ಮಾಡಲಿದೆಯೇ ಆಟ್ರಿಯೋ?

ಇವೆ ಆಟ್ರಿಯೋ ಈ ಸೆಗ್ ಮೆಂಟಿನಲ್ಲಿರುವ ಉತ್ತಮವಾಗಿ ಕಾಣುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಒಟ್ಟಾರೆಯಾಗಿ, ಇವೆ ಆಟ್ರಿಯೋ ಸವಾರನಿಗೆ ಆಹ್ಲಾದಕರ ಅನುಭವವನ್ನು ನೀಡುತ್ತದೆ.

Most Read Articles

Kannada
Read more on ಇವೆ eeve
English summary
Eeve Atreo electric scooter review. Read in Kannada.
Story first published: Thursday, July 8, 2021, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X