ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಕ್ಲಾಸಿಕ್ ಬೈಕ್ ಮಾರಾಟ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವಾರು ಬೈಕ್ ಮಾದರಿಗಳೊಂದಿಗೆ ಮುಂಚೂಣಿ ಸಾಧಿಸಿದ್ದು, ಗ್ರಾಹಕರ ಬೇಡಿಕೆಗೆ ಹೊಸ ಬೈಕ್ ಉತ್ಪನ್ನಗಳ ಮಾರಾಟದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತ ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿಭಿನ್ನ ಬೈಕ್ ಮಾದರಿಯಾಗಿ ಗುರುತಿಸಿಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬೈಕ್ ವಿವಿಧ ಬೈಕ್ ಮಾದರಿಗಳಲ್ಲಿ ಇತ್ತೀಚೆಗೆ ಸ್ಥಗಿತಗೊಳಿಸಲಾದ ಥಂಡರ್‌ಬರ್ಡ್ ಕ್ರೂಸರ್ ಬೈಕ್ ಮಾದರಿ ಕೂಡಾ ಒಂದಾಗಿತ್ತು. 2002ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಥಂಡರ್‌ಬರ್ಡ್ ಬೈಕ್ ಮಾದರಿಯು ಕಳೆದ ಏಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್‌ ನಿಯಮ ಅನುಸಾರವಾಗಿ ಸ್ಥಗಿತಗೊಂಡಿತು. ಥಂಡರ್‌ಬರ್ಡ್ ಮಾರಾಟ ಸ್ಥಗಿತ ನಂತರ ಹೊಸ ತಂತ್ರಜ್ಞಾನ ಪ್ರೇರಿತ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಥಂಡರ್‌ಬರ್ಡ್ ಸ್ಥಾನಕ್ಕೆ ಮಿಟಿಯೊರ್ 350 ಕ್ರೂಸರ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಸುಮಾರು 18 ವರ್ಷಗಳ ಕಾಲ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಮಾರಾಟದಲ್ಲಿ ಮುಂದುವರಿದ್ದ ಥಂಡರ್‌ಬರ್ಡ್ ಮಾದರಿಗೆ ಗುಡ್‌ಬೈ ಹೇಳಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮತ್ತು ಹೊಸ ಎಂಜಿನ್ ಪ್ರೇರಿತ ಮಿಟಿಯೊರ್ 350 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಸುಧಾರಿತ ತಂತ್ರಜ್ಞಾನ ಪ್ರೇರಣೆ ಮತ್ತು ನವೀಕೃತ ವಿನ್ಯಾಸ ಹೊಂದಿರುವ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಆಕರ್ಷಕವಾಗಿದ್ದು, ಹೊಸ ಬೈಕ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಭಾರತ ಸೇರಿ ವಿಶ್ವದ ಪ್ರಮುಖ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಎಮಿಷನ್ ಜಾರಿ ನಂತರ ವಿವಿಧ ಬೈಕ್ ಉತ್ಪನ್ನ ಎಂಜಿನ್ ವಿಭಾಗದಲ್ಲಿ ಭಾರೀ ಬದಲಾವಣೆ ತಂದಿರುವುದಲ್ಲದೆ ಹೊಸ ಎಮಿಷನ್ ಪಾಲನೆ ಮಾಡಲು ಸಾಧ್ಯವಿಲ್ಲದ ಥಂಡರ್‌ಬರ್ಡ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಥಂಡರ್‌ಬರ್ಡ್ ಸ್ಥಗಿತಗೊಳಿಸಿದ ಕೆಲವೇ ದಿನಗಳಲ್ಲಿ ಹೊಸ ಮಿಟಿಯೊರ್ 350 ಅಭಿವೃದ್ದಿಗೆ ಚಾಲನೆ ನೀಡಿದ ರಾಯಲ್ ಎನ್‌ಫೀಲ್ಡ್ ಕಂಪನಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕ ಮತ್ತು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಹೊಸ ಬೈಕ್ ಮಾದರಿಯನ್ನು ಸಿದ್ದಪಡಿಸಿದ್ದು, ಕಳೆದ ವಾರವಷ್ಟೇ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಾಯ್ತು. ಹೊಸ ಬೈಕ್ ಬಿಡುಗಡೆಯ ನಂತರ ಮಿಟಿಯೊರ್ 350 ರೈಡಿಂಗ್‌ಗಾಗಿ ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನಿಸಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕಿನ ಟಾಪ್ ಎಂಡ್ ಮಾದರಿಯ ಸೂಪರ್‌ನೊವಾ ಮಾದರಿಯನ್ನು ಹಸ್ತಾಂತರಿಸಿತ್ತು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹೊಸ ಮಿಟಿಯೊರ್ 350 ಬೈಕ್ ಮೂಲಕ ಸುಮಾರು 1 ಸಾವಿರ ಕಿ.ಮೀ ಚಾಲನೆ ಮಾಡಿದ ನಮಗೆ ಅದ್ಭುತ ರೈಡಿಂಗ್ ಅನುಭವ ನೀಡಿದ ಹೊಸ ಬೈಕ್ ಮಾದರಿಯು ವಿಶೇಷವಾಗಿ ದೀರ್ಘಾವಧಿಯ ಪ್ರಯಾಣಕ್ಕೆ ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಕ್ರೂಸರ್‌ನಲ್ಲಿ ವಿಶೇಷತೆಗಳು ಮತ್ತು ಅತ್ಯುತ್ತಮ ರೈಡಿಂಗ್‌ಗಾಗಿ ಹೊಸ ಬೈಕಿನಲ್ಲಿ ಫೀಚರ್ಸ್ ಯಾವುವು ಎನ್ನುವುದನ್ನು ಈ ವಿಮರ್ಶೆ ಲೇಖನದಲ್ಲಿ ಹಂತ ಹಂತವಾಗಿ ಚರ್ಚಿಸಿದ್ದೇವೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಡಿಸೈನ್ ಮತ್ತು ಸ್ಟೈಲ್

ಹೊಚ್ಚ ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಮೇಲೆ ಹೇಳಿದ ಹಾಗೆ ಅರ್ಬನ್ ಸ್ಟೈಲ್ ಹೊಂದಿರುವ ಕ್ರೂಸರ್ ಮಾದರಿಯಾಗಿದ್ದು, ಹೊಸ ಬೈಕ್ ನೋಡಿದ ತಕ್ಷಣವೇ ದೀರ್ಘಾವಧಿಯ ಬೈಕ್ ರೈಡಿಂಗ್‌ಗೆ ಅತ್ಯುತ್ತಮ ಬೈಕ್ ಮಾದರಿಯಾಗಿದೆ ಎನ್ನುವ ಭಾವನೆ ಉಂಟು ಮಾಡುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ದೀರ್ಘಾವಧಿಯ ಪ್ರಯಾಣಕ್ಕೆ ಪೂರಕವಾಗಿ ಇಂಧನ ಟ್ಯಾಂಕ್ ವಿನ್ಯಾಸ, ಕಂಟೌರ್ಡ್ ಬಾಡಿ ಪ್ಯಾನೆಲ್‌ಗಳು, ರೌಂಡ್ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಟರ್ನ್-ಸಿಗ್ನಲ್ ಇಂಡಿಕೇಟರ್‌ಗಳು ಮತ್ತು ಮೋಟಾರ್‌ಸೈಕಲ್ ಸುತ್ತಲೂ ಕ್ರೋಮ್‌ನ ಸೂಕ್ಷ್ಮ ಬಳಕೆಯು ಬೈಕಿನ ರೆಟ್ರೊ ನೋಟವನ್ನು ನೀಡುವಲ್ಲಿ ಪ್ರಮುಖವಾಗಿವೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಮಿಟಿಯೊರ್ 350 ಬೈಕಿನ ಹೈ ಎಂಡ್ ಮಾದರಿಯಾಗಿರುವ ಸೂಪರ್‌ನೊವಾದಲ್ಲಿ ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್‌ನೊಂದಿಗೆ ಹಾಲೋಜೆನ್ ಹೆಡ್‌ಲ್ಯಾಂಪ್ ಒಳಗೊಂಡಿದ್ದು, ಹೈಬೀಮ್ ಮತ್ತು ಲೋಬೀಮ್‌ನಲ್ಲೂ ಹೆಡ್‌ಲ್ಯಾಂಪ್ ಅತ್ಯುತ್ತಮ ಬೆಳಕು ಹೊರಸೂಸುತ್ತವೆ. ಆದರೆ ಎಲ್ಇಡಿ ಡಿಆರ್‌ಎಲ್ಎಸ್‌‌ಗಳ ಬೆಳಕು ತುಸು ಮಂದ ಎನ್ನಿಸಲಿದ್ದು, ನಗರಪ್ರದೇಶಗಳಲ್ಲಿ ಹೊರತುಪಡಿಸಿ ದೂರದ ಪ್ರಯಾಣದ ವೇಳೆ ಇನ್ನು ತುಸು ಬೆಳಕಿನ ಅವಶ್ಯಕತೆಯಿದೆ ಎನ್ನಿಸದೆ ಇರಲಾರದು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇನ್ನು ಹೊಸ ಬೈಕಿನಲ್ಲಿ ಲಾಂಗ್ ರೈಡಿಂಗ್‌ಗೆ ಅನುಕೂಲಕರವಾದ 13.6 ಇಂಚಿನ ದೊಡ್ಡದಾದ ವಿಂಡ್‌ಸ್ಕ್ರೀನ್ ಜೋಡಿಸಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಇದನ್ನು ಟೂರಿಂಗ್ ವಿಸರ್ ಎಂದು ಕರೆಯುತ್ತದೆ. ಬೈಕ್ ರೈಡಿಂಗ್ ವೇಳೆ ಸವಾರನ ಅನುಕೂಲಕ್ಕೆ ತಕ್ಕಂತೆ ವಿಂಡ್‌ಸ್ಕ್ರೀನ್ ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಅಲೆನ್ ಕೀ ಟೂಲ್ ಕಿಟ್ ಅಗತ್ಯವಾಗಿರುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇದರೊಂದಿಗೆ ಬೈಕಿನ ಮುಂಭಾಗದಲ್ಲಿರುವ ಇತರೆ ಕ್ರೂಸರ್ ಮೋಟರ್‌ಸೈಕಲ್‌ಗಳಲ್ಲಿ ಕಂಡುಬರುವಂತೆ ಮುಂಭಾಗದ ಚಕ್ರಗಳಲ್ಲಿ ಕಂಟೌರ್ಡ್ ಫ್ರಂಟ್ ಫೆಂಡರ್ ಅನ್ನು ಜೋಡಣೆ ಮಾಡಲಾಗಿದ್ದು, ಬೈಕಿನ ಸೈಡ್ ಪ್ರೊಫೈಲ್ ಕೂಡಾ ಆಕರ್ಷಕವಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಬ್ರೌನ್ ಪೆಂಟಿಂಗ್ ಸೌಲಭ್ಯ ಹೊಂದಿರುವ ಮಿಟಿಯೊರ್ 350 ಸೂಪರ್‌ನೊವಾ ಮಾದರಿಯಲ್ಲಿ ಹಲವಾರು ಆಕರ್ಷಕ ವೈಶಿಷ್ಟ್ಯತೆಗಳಿದ್ದು, ಡ್ಯುಯಲ್ ಟೋನ್ ಹೊಂದಿರುವ 15-ಲೀಟರ್ ಸಾಮರ್ಥ್ಯ ಫ್ಯೂಲ್ ಟ್ಯಾಂಕ್, ಎಂಜಿನ್ ಸಿಲಿಂಡರ್ ಮೇಲೆ ಅಲ್ಯುಮಿನಿಯಂ ಕೊಟಿಂಗ್ ಪಡೆದುಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹಾಗೆಯೇ ಹೊಸ ಬೈಕಿನಲ್ಲಿ ಸೈಡ್ ಕವರ್‌ಗಳ ಮೇಲೆ ಮಿಟಿಯೊರ್ 350 ಬ್ಯಾಡ್ಜ್, ರೈಡರ್ ಮತ್ತು ಪಿಲಿಯನ್‌ಗೆ ಕಾಂಟೌರ್ಡ್ ಆಸನಗಳ ಜೊತೆಗೆ ಬ್ಯಾಕ್‌ರೆಸ್ಟ್ ನೀಡಲಾಗಿದ್ದು, ಫ್ಯೂಲ್ ಟ್ಯಾಂಕ್ ಮೇಲೆ ನೀಡಲಾದ ಕಪ್ಪು ಮತ್ತು ಕ್ರೋಮ್‌ ಸಂಯೋಜನೆಯೊಂದಿಗಿನ ಡ್ಯುಯಲ್-ಟೋನ್ ರಾಯಲ್ ಎನ್‌ಫೀಲ್ಡ್ ಬ್ಯಾಡ್ಜ್ ಜೊತೆಗೆ ಆಕರ್ಷಕ ಎಕ್ಸಾಸ್ಟ್ ಜೋಡಣೆ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹಾಗೆಯೇ ಭಾರತೀಯ ರಸ್ತೆ ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ ಹೊಸ ಬೈಕಿನಲ್ಲಿ ಸ್ಯಾರಿ ಗಾರ್ಡ್ ಸೇರಿಸಲಾಗಿದ್ದು, ಹಿಂಬದಿಯ ಸವಾರನ ಅನುಕೂಲಕ್ಕಾಗಿ ಗ್ರಾಬ್ ಹ್ಯಾಂಡಲ್ ಸೌಲಭ್ಯವು ಲಾಂಗ್ ರೂಟ್‌ನಲ್ಲಿ ಸಾಕಷ್ಟು ಸಹಕಾರಿಯಾಗಲಿವೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹೊಸ ಬೈಕಿನಲ್ಲಿ ಹಿಂಭಾಗದ ತಾಂತ್ರಿಕ ಅಂಶಗಳು ಕೂಡಾ ಕ್ರೂಸರ್ ಬೈಕ್ ಪ್ರಿಯರ ಗಮನಸೆಳೆಯಲಿದ್ದು, ರೌಂಡ್ ಶೇಫ್ ಹೊಂದಿರುವ ಟೈಲ್ ಲ್ಯಾಂಪ್, ಲೋವರ್‌ನಲ್ಲಿರುವ ಟರ್ನ್-ಸಿಗ್ನಲ್ ಇಂಡಿಕೇಟರ್ ಮತ್ತು ನಂಬರ್ ಪ್ಲೇಟ್ ಮೇಲೆ ಇಲ್ಯುಮೇಷನ್ ಲೈಟ್ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಮಿಟಿಯೊರ್ 350 ಫೀಚರ್ಸ್‌ಗಳು

ಹೊಚ್ಚ ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್‌ಗೇರ್ ಸೌಲಭ್ಯವು ಪ್ರಮುಖ ಫೀಚರ್ಸ್‌ಗಳಾಗಿವೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ರೌಂಡ್ ಶೇಫ್ ಹೊಂದಿರುವ ಸ್ವಿಚ್‌ಗೇರ್ ಸೌಲಭ್ಯವು ಬಲ ಭಾಗದ ಹ್ಯಾಂಡಲ್‌ಬಾರ್ ಪಕ್ಕದಲ್ಲೇ ನೀಡಲಾಗಿದ್ದು, ಇಂಟಿಗ್ರೇಟೆಡ್ ಸ್ಟಾರ್ಟರ್ ಸ್ವಿಚ್‌ನಲ್ಲಿ ಎಂಜಿನ್ ಕಾರ್ಯಾಚರಣೆಗೆ ಬಲಭಾಗದಲ್ಲಿರುವ ಡಯಲ್ ಅನ್ನು ಬಳಸಲಾಗುತ್ತದೆ. ಹಾಗೆಯೇ ಇಂಟಿಗ್ರೇಟೆಡ್ ಪಾಸ್ ಸ್ವಿಚ್‌ನೊಂದಿಗೆ ಎಡಭಾಗದಲ್ಲಿರುವ ಡಯಲ್ ಅನ್ನು ಹೆಡ್‌ಲ್ಯಾಂಪ್ ಕಾರ್ಯಾಚರಣೆಗೆ ಬಳಸಲಾಗುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇದರೊಂದಿಗೆ ಹೊಸ ಬೈಕಿನಲ್ಲಿ ಹಜಾರ್ಡ್ ಫಂಕ್ಷನ್ ಸೌಲಭ್ಯವನ್ನು ಹೊಂದಿದ್ದು, ಇದನ್ನು ಹ್ಯಾಂಡಲ್‌ಬಾರ್‌ನ ಬಲಭಾಗದಲ್ಲಿರುವ ಸ್ವಿಚ್ ಬಳಸಿ ಟಾಗಲ್ ಮಾಡಬಹುದು. ಹೊಸ ಬೈಕಿನಲ್ಲಿ ಸ್ವಿಚ್‌ಗೇರ್ ಸೌಲಭ್ಯವು ಬಳಕೆಯು ಸಾಕಷ್ಟು ಸುಲಭವಾಗಿದ್ದು, ಬಿಡಿಭಾಗಗಳ ಪಾಸ್ಟಿಕ್ ಗುಣಮಟ್ಟವು ಇನ್ನಷ್ಟು ಉತ್ತಮವಾಗಬೇಕಿತ್ತು ಎನ್ನಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇದರೊಂದಿಗೆ ಮಿಟಿಯೊರ್ 350 ಮಾದರಿಯಲ್ಲಿ ಪ್ರತಿಯೊಬ್ಬ ಅವಶ್ಯವಾಗಿ ಬೇಕಿರುವ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಯುಎಸ್‌ಬಿ ಸ್ಲಾಟ್ ನೀಡಲಾಗಿದ್ದು, ಈ ಸೌಲಭ್ಯವನ್ನು ಬೈಕ್ ಚಾಲನೆಯಲ್ಲಿರುವಾಗ ಮಾತ್ರವೇ ಬಳಕೆ ಮಾಡಿಕೊಳ್ಳಬಹುದು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹೊಚ್ಚ ಹೊಸ ಮಿಟಿಯೊರ್ 350 ಬೈಕ್ ಮಾದರಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯತೆ ಎಂದರೆ ಅದು ಹೊಸ ಫೀಚರ್ಸ್‌ವುಳ್ಳ ಇನ್‌ಸ್ಟ್ರುಮೆಂಟ್ ಕ್ಲಸ್ಟರ್. ಡಬಲ್ ಪಾಡ್ ಕ್ಲಸ್ಟರ್ ಹೊಂದಿರುವ ಹೊಸ ಬೈಕಿನಲ್ಲಿ ನ್ಯಾವಿಗೇಷನ್ ಸೌಲಭ್ಯಕ್ಕಾಗಿ ಟಿಪ್ಪರ್ ಮೀಟರ್ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಡಬಲ್ ಪಾಡ್ ಕ್ಲಸ್ಟರ್ ಮುಖ್ಯ ಕ್ಲಸ್ಟರ್‌ನಲ್ಲಿ ಅನ್‌ಲಾಗ್ ಸ್ಪೀಡೋ ಮೀಟರ್, ಪ್ರಮುಖ ಮಾಹಿತಿಗಳನ್ನು ಒದಗಿಸುವ ಸಣ್ಣದಾದ ಡಿಜಿಟಲ್ ಡಿಸ್‌ಪ್ಲೇ ನೀಡಲಾಗಿದೆ. ಇದರಲ್ಲಿ ಟ್ರಿಪ್ ರೀಡಿಂಗ್, ಕ್ಲಾಕ್, ಫ್ಯೂಲ್ ಇಂಡಿಕೇಟರ್, ಸರ್ವಿಸ್ ರಿಮೆಂಡರ್ ಮತ್ತು ಇಕೋ ಇಂಡಿಕೇಟರ್ ಒಳಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇದರ ಜೊತೆಯಲ್ಲಿ ಮುಖ್ಯ ಕ್ಲಸ್ಟರ್‌ನಲ್ಲಿ ಹೈಬೀಮ್, ಟರ್ನ್ ಇಂಡಿಕೇಟರ್, ಎಬಿಎಸ್ ಕಾರ್ಯನಿರ್ವಹಣೆಯ ಅಡಚಣೆ, ಎಂಜಿನ್ ಚೆಕ್ ಲೈಟ್, ಇಂಧನ ಲಭ್ಯತೆ ಮಾಹಿತಿ, ಬ್ಯಾಟರಿ ಲಭ್ಯತೆ ಇಂಡಿಕೇಟರ್ ಸೂಚಿಸಲಿದ್ದು, ಹೊಸ ಬೈಕಿನಲ್ಲಿ ಮೈಲೇಜ್ ಲಭ್ಯತೆ ಬಗೆಗೂ ಮಾಹಿತಿ ನೀಡುವ ಅವಶ್ಯಕತೆಯಿತ್ತು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಎಕಾನಮಿ ರೈಡಿಂಗ್‌ನಲ್ಲಿ ಇಂಧನ ಲಭ್ಯತೆಗೆ ಅನುಗುಣವಾಗಿ ಮೈಲೇಜ್ ಮಾಹಿತಿ ನೀಡಿದ್ದರೆ ದೀರ್ಘಕಾಲದ ಬೈಕ್ ರೈಡಿಂಗ್ ವೇಳೆ ಸವಾರರಿಗೆ ಮತ್ತಷ್ಟು ಅನುಕೂಲಕರವಾಗುತ್ತಿತ್ತು. ಆದರೆ ಹೊಸ ಬೈಕಿನಲ್ಲಿ ಮೈಲೇಜ್ ಇಂಡಿಕೇಟರ್ ಬಳಕೆ ಮಾಡಿಲ್ಲ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಸ್ಮಾರ್ಟ್‌ಫೋನ್ ಮೂಲಕ ಹೊಸ ಟಿಪ್ಪರ್ ನ್ಯಾವಿಗೇಷನ್ ಅನ್ನು ಸಕ್ರಿಯಗೊಳಿಸಬಹುದಾಗಿದ್ದು, ಇದಕ್ಕಾಗಿ ಆಂಡ್ರಾಯ್ಡ್ ಅಥವಾ ಐಒಎಸ್ ಎರಡಕ್ಕೂ ಪೂರಕವಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಅಪ್ಲಿಕೇಶನ್ ಮೂಲಕ ಟಿಪ್ಪರ್ ಮೀಟರ್‌ಗೆ ಸಂಪರ್ಕದ ನಂತರ ತಲುಪಬೇಕಾದ ಸ್ಥಳಗಳನ್ನು ಗುರುತಿಸಿದರೆ ಸಾಕು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪ್ರದರ್ಶಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಎಂಜಿನ್ ಮತ್ತು ಪರ್ಫಾಮೆನ್ಸ್

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಹೊಸ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಪ್ರೇರಿತ 349 ಸಿಸಿ (ಎಸ್‌ಒಹೆಚ್‌ಸಿ) ಸಿಂಗಲ್ ಓವರ್-ಹೆಡ್ ಕ್ಯಾಮ್‌ಶಾಫ್ಟ್ ಎಂಜಿನ್‌ ಜೋಡಿಸಲಾಗಿದ್ದು, ಐದು ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಇದು 6100ಆರ್‌ಪಿಎಂನಲ್ಲಿ ಗರಿಷ್ಠ 20.2-ಬಿಎಚ್‌ಪಿ ಮತ್ತು 4000ಆರ್‌ಪಿಎಂನಲ್ಲಿ 27-ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹೊಸ ಮಿಟಿಯೊರ್ 350 ಬಗೆಗೆ ನಮ್ಮ ಅಭಿಪ್ರಾಯದಂತೆ ಈ ಹಿಂದಿನ ಯುಸಿಇ ಎಂಜಿನ್ ಮಾದರಿಗಳಿಂತಲೂ ಹೆಚ್ಚು ಬಲಿಷ್ಠವಾಗುವುದರ ಜೊತೆಗೆ ಮೃದವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ. ಜೊತೆಗೆ ಪ್ರಸ್ತುತವಾಗಿ ನೀಡಲಾಗಿರುವ ಎಸ್‌ಒಹೆಚ್‌ಸಿ ತಂತ್ರಜ್ಞಾನವು ಈ ಹಿಂದಿನ ಯುಸಿಇ ಮಾದರಿಗಿಂತಲೂ ಅತಿ ಕಡಿಮೆ ಬಿಡಿಭಾಗಗಳನ್ನು ಹೊಂದಿದ್ದು, ಕ್ಯಾಮ್‌ಗಳನ್ನು ಇದೀಗ ಎಂಜಿನ್ ಮೇಲ್ಬಾಗದಲ್ಲಿ ಇರಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಈ ಮೂಲಕ ಹೊಸ ಎಂಜಿನ್ ಮಾದರಿಯು ಈ ಹಿಂದಿನ ಎಂಜಿನ್‌ಗಿಂತಲೂ 0.4-ಬಿಎಚ್‌ಪಿ ಹೆಚ್ಚಳವಾಗಿದ್ದರೆ ಸುಗಮ ಬೈಕ್ ಸವಾರಿಯೊಂದಿಗೆ 1-ಎನ್ಎಂ ಟಾರ್ಕ್ ಕಡಿತಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಚಾಸಿಸ್ ಮತ್ತು ರೈಡರ್ ಎರ್ಗೊನೊಮಿಕ್ಸ್

350 ಸಿಸಿ ಸೆಗ್ಮೆಂಟ್‌ ವಿಭಾಗದಲ್ಲೇ ಅತ್ಯಂತ ವಿನ್ಯಾಸ ಮತ್ತು ಎಂಜಿನ್ ಸೌಲಭ್ಯ ಹೊಂದಿರುವ ಮಿಟಿಯೊರ್ 350 ಬೈಕ್ ಮಾದರಿಯು ಈ ಹಿಂದಿನ ಸಿಂಗಲ್ ಕ್ರೆಡಲ್ ಫ್ರೇಮ್ ಬದಲಾಗಿ ಹೊಸ ಡಬಲ್ ಕ್ರೆಡಲ್ ಫ್ರೇಮ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಚಾಸಿಸ್ ಸೌಲಭ್ಯವು ಕ್ರೂಸರ್ ಬೈಕ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಡಬಲ್ ಕ್ರೆಡಲ್ ಫೇಮ್‌ನಿಂದಾಗಿ ಎಂಜಿನ್‌ನಿಂದ ಬರುವ ಕಂಪನವನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಬೈಕಿನಲ್ಲಿ ಸಸ್ಷೆಷನ್ ಸೆಟ್ಅಪ್ ಕೂಡಾ ಅತ್ಯುತ್ತಮವಾಗಿದೆ. ಹೊಸ ಬೈಕಿನ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೊಪಿಕ್ ಯುನಿಟ್ ಮತ್ತು ಮತ್ತು ಹಿಂಭಾಗದಲ್ಲಿ 130-ಎಂಎಂ ಟ್ರಾವೆಲ್ ಟ್ವಿನ್ ಶಾರ್ಕ್ ಸೆಟ್ಅಪ್ ಜೋಡಿಸಲಾಗಿದ್ದು, 6-ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಸುರಕ್ಷತೆಗಾಗಿ ಹೊಸ ಬೈಕಿನಲ್ಲಿ ಟು ಪಿಸ್ಟನ್ ಕ್ಯಾಲಿಪರ್ ಹೊಂದಿರುವ 300ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಹೊಂದಿರುವ 260-ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಮಿಟಿಯೊರ್ 350 ಬೈಕ್ ಮಾದರಿಯಲ್ಲಿ ಟ್ಯೂಬ್‌ಲೆಸ್ ವೈಶಿಷ್ಟ್ಯತೆಯ 19-ಇಂಚಿನ 100/90 ಫ್ರಂಟ್ ಟೈರ್ ಮತ್ತು 17-ಇಂಚಿನ 140/70 ಟೈರ್ ಮಾದರಿಗಳನ್ನು ನೀಡಲಾಗಿದ್ದು, 765 ಎಂಎಂ ಎತ್ತರ ಹೊಂದಿದೆ. ಇದನ್ನು ಬ್ರಾಂಡ್‌ನಿಂದ ಅಧಿಕೃತ ಪರಿಕರ ಆಸನದೊಂದಿಗೆ 20 ಎಂಎಂ ಕಡಿಮೆ ಮಾಡಬಹುದಾಗಿದ್ದು, ಕಡಿಮೆ ಆಸನ ಎತ್ತರದ ಹೊರತಾಗಿಯೂ ಹೊಸ ಕ್ರೂಸರ್ ಮೋಟಾರ್ಸೈಕಲ್ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹಾಗೆಯೇ ಹೊಸ ಬೈಕಿನಲ್ಲಿರವ ಸೆಟ್ಅಪ್‌ನಿಂದಾಗಿ ಸಮತಟ್ಟಾದ ರಸ್ತೆಗಳಲ್ಲಿ ಮಾತ್ರವಲ್ಲ ಒರಟಾಗಿರುವ ಭೂಪ್ರದೇಶಗಳಲ್ಲೂ ಸುಲಭವಾಗಿ ರೈಡಿಂಗ್ ಮಾಡಬಹುದಾಗಿದ್ದು, ಫಾರ್ವಡ್ ಪುಟ್‌ಪೆಗ್, ಚಪ್ಪಟೆಯಾಗಿರುವ ಹಿಂಭಾಗದ ಬ್ರೇಕ್ ಸೌಲಭ್ಯವು ಅರಾಮದಾಯಕ ಚಾಲನೆಗೆ ಸಹಕಾರಿಯಾಗಿವೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಬೈಕ್ ರೈಡ್ ಮತ್ತು ನಿರ್ವಹಣೆ

ದೂರದ ಬೈಕ್ ಸವಾರಿಯನ್ನು ಕೂಡಾ ಸರಳಗೊಳಿಸುವ ಮಿಟಿಯೊರ್ 350 ಮಾದರಿಯು ನಯವಾದ ಆಸನಗಳೊಂದಿಗೆ ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳು ಮತ್ತು ಅಗಲವಾದ ಹ್ಯಾಂಡಲ್‌ಬಾರ್ ಸೌಲಭ್ಯಗಳು ರೈಡಿಂಗ್‌ಗೆ ಮತ್ತಷ್ಟು ಸಹಕಾರಿಯಾಗಿದ್ದು, ವೇಗದ ಸವಾರಿಯಲ್ಲೂ ಯಾವುದೇ ಎಂಜಿನ್ ಒತ್ತಡವಿರುವುದಿಲ್ಲ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಮತ್ತೊಂದು ಪ್ರಮುಖ ಅಂಶವೆಂದರೆ ಹೊಸ ಫ್ರೇಮ್‌ನಿಂದ ಮೋಟಾರ್‌ಸೈಕಲ್ ನಿರ್ವಹಣೆಯು ಗಣನೀಯವಾಗಿ ಸುಧಾರಣೆಗೊಂಡಿದ್ದು, ಮೃದವಾದ ಗೇರ್‌ಬಾಕ್ಸ್‌ನಿಂದಾಗಿ ಗೇರ್‌ ಸ್ಟಾರ್ಟ್ ಮಾಡಲು ಸವಾರನಿಗೆ ಯಾವುದೇ ತೊಂದರೆಯಿಲ್ಲ. ಈ ಮೂಲಕ ಕಾರ್ನರ್‌ಗಳಲ್ಲೂ ಖಚಿತವಾದ ರೈಡಿಂಗ್ ಒದಗಿಸುವ ಹೊಸ ಬೈಕ್ ಮಾದರಿಯು ರಸ್ತೆ ಗುಂಡಿಗಳಲ್ಲೂ ಅತ್ಯುತ್ತಮ ಸಸ್ಷೆಷನ್‌ನೊಂದಿಗೆ ಉತ್ತಮ ರೈಡಿಂಗ್ ಅನುಭವ ಒದಗಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

191 ಕೆ.ಜಿ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯಲ್ಲಿ ಮೋಟಾರ್‌ಸೈಕಲ್ ಅನ್ನು ನಿಭಾಯಿಸಲು ಉತ್ತಮ ಕಾರ್ಯಕ್ಷಮತೆಯ ಬ್ರೇಕಿಂಗ್ ಸೌಲಭ್ಯವನ್ನು ಜೋಡಿಸಲಾಗಿದ್ದು, ಹಿಂಬದಿಯ ಚಕ್ರದಲ್ಲಿರುವ ದೊಡ್ಡದಾದ ಟೈರ್ ಕೂಡಾ ಬೈಕ್ ಸವಾರಿಯನ್ನು ಸುಲಭಗೊಳಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಪ್ರತಿಸ್ಪರ್ಧಿ ಮಾದರಿಗಳು

ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಬೈಕ್ ಮಾದರಿಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಪ್ರವೇಶ ಮಟ್ಟದ ಕ್ರೂಸರ್ ಮೋಟಾರ್‌ಸೈಕಲ್ ಮಾದರಿಯಾಗಿದ್ದು, ಹೊಸ ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾದ ಹೋಂಡಾ ಹೈನೆಸ್ ಸಿಬಿ350, ಬೆನೆಲ್ಲಿ ಇಂಪೀರಿಯೇಲ್ 400 ಮತ್ತು ಜಾವಾ 300 ಟ್ವಿನ್ ಬೈಕ್‌‌ಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಪ್ರತಿಸ್ಪರ್ಧಿ ಬೈಕ್‌ಗಳಿಂತಲೂ ಮಿಟಿಯೊರ್ 350 ಹೇಗೆ ವಿಭಿನ್ನ?

ಬೈಕ್ ಮಾದರಿಗಳು ಮತ್ತು ಎಂಜಿನ್ ವೈಶಿಷ್ಟ್ಯತೆ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಹೋಂಡಾ ಹೈನೆಸ್ ಸಿಬಿ 350 ಜಾವಾ 42 ಬೆನೆಲ್ಲಿ ಇಂಪಿರೀಯಲ್ 400
ಎಂಜಿ 349ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 348ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 293ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ 374ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್
ಪವರ್ 20.2ಬಿಎಚ್‌ಪಿ 20.7ಬಿಎಚ್‌ಪಿ 26.1ಬಿಎಚ್‌ಪಿ 20.7ಬಿಎಚ್‌ಪಿ
ಟಾರ್ಕ್ 27ಎನ್ಎಂ 30ಎನ್ಎಂ 27.05ಎನ್ಎಂ 29ಎನ್ಎಂ
ಗೇರ್‌ಬಾಕ್ಸ್ 5-ಸ್ಪೀಡ್ 5-ಸ್ಪೀಡ್+ ಸ್ಲಿಪರ್ ಕ್ಲಚ್ 6-ಸ್ಪೀಡ್ 5-ಸ್ಪೀಡ್
ತೂಕ 191ಕೆಜಿ 181ಕೆಜಿ 172ಕೆಜಿ 205ಕೆಜಿ
ಫ್ಯೂಲ್ ಟ್ಯಾಂಕ್ ಸಾಮರ್ಥ್ಯ 15-ಲೀಟರ್ 15-ಲೀಟರ್ 14-ಲೀಟರ್ 12-ಲೀಟರ್
ಆರಂಭಿಕ ಬೆಲೆ (ಎಕ್ಸ್‌ಶೋರೂಂ) ರೂ. 1.75 ಲಕ್ಷ ರೂ. 1.85 ಲಕ್ಷ ರೂ. 1.74 ಲಕ್ಷ ರೂ. 1.99 ಲಕ್ಷ
ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಮಿಟಿಯೊರ್ 350 ಕುರಿತಾದ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಿಟಿಯೊರ್ 350 ಬೈಕ್ ಮಾದರಿಯನ್ನು ಸಹ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಬ್ರಾಂಡ್ ವಿಶೇಷ ವಿನ್ಯಾಸ ಮತ್ತು ಎಕ್ಸಾಸ್ಟ್ ಸೌಲಭ್ಯವು ಆಕರ್ಷಕ ನೋಟ ಹೊಂದಿದೆ. ಈ ಮೂಲಕ ದೂರದ ಪ್ರಯಾಣದಲ್ಲಿ ಮಾತ್ರವಲ್ಲ ಟ್ರಾಫಿಕ್ ದಟ್ಟಣೆಯಿರುವ ಪ್ರದೇಶಗಳಲ್ಲೂ ಸುಲಭವಾಗಿ ಬೈಕ್ ಚಾಲನೆ ಮಾಡಬಹುದಾಗಿದ್ದು, ಹೊಸ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯಲ್ಲಿ ಗಮನಸೆಳೆಯುತ್ತದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಇದರ ಹೊರತಾಗಿಯೂ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ ಮಾದರಿಯು ಬಿಡಿಭಾಗಗಳ ಗುಣಮಟ್ಟದಲ್ಲಿ ಇನ್ನುಷ್ಟು ಸುಧಾರಣೆಗೊಳ್ಳುವ ಅವಕಾಶವಿದ್ದು, ಹೊಸ ಬೈಕ್ ಮಾದರಿಯನ್ನ ಗ್ರಾಹಕರು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ವೆರಿಯೆಂಟ್‌ಗಳಲ್ಲಿ ಖರೀದಿಸಬಹುದು.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಮಿಟಿಯೊರ್ 350 ಬೈಕ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ.2.18 ಲಕ್ಷ (ಫೈರ್‌ಬಾಲ್), ರೂ. 2.36 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.25 ಲಕ್ಷ ಬೆಲೆ ಹೊಂದಿದ್ದು, ಹೊಸ ಬೈಕಿನಲ್ಲಿ ಮತ್ತಷ್ಟು ಪ್ರೀಮಿಯಂ ಫೀಚರ್ಸ್‌ಗಳಿಗಾಗಿ ಮೇಕ್-ಇಟ್-ಯುವರ್ಸ್ ಕಸ್ಟಮೈಜ್ಡ್ ಆಯ್ಕೆಯನ್ನು ಸಹ ನೀಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ರೂಸರ್ ಮಿಟಿಯೊರ್ 350 ಫಸ್ಟ್ ರೈಡ್ ರಿವ್ಯೂ

ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಗ್ರಾಹಕರು ಮತ್ತಷ್ಟು ಫೀಚರ್ಸ್‌ಗಳನ್ನು ಆನ್‌ಲೈನ್ ಮೂಲಕಲೇ ಕಸ್ಟಮೈಜ್ಡ್ ಮಾಡಬಹುದಾಗಿದ್ದು, ಬಿಡಿಭಾಗಗಳ ಮೇಲೆ ರಾಯಲ್ ಎನ್‌ಫೀಲ್ಡ್ ಕಂಪನಿಯು 3 ವರ್ಷಗಳ ಗರಿಷ್ಠ ಖಾತರಿ ನೀಡುತ್ತದೆ.

Most Read Articles

Kannada
English summary
Royal Enfield Meteor 350 Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X