Numeros Diplos Max Review: ಬೆಂಗಳೂರಿನ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಇ-ಸ್ಕೂಟರ್ ರಿವ್ಯೂ.. ಹೇಗಿದೆ?
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್ ಹಾಗೂ ಎಥರ್ ಎನರ್ಜಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ನಗರದಲ್ಲಿಯೇ ಪ್ರಧಾನ ಕಚೇರಿ ಹೊಂದಿರುವ ನ್ಯೂಮೆರೋಸ್ ಮೋಟಾರ್ಸ್ (Numeros Motors) ಕೂಡ 2024ರ ಮಾರ್ಚ್ ತಿಂಗಳಲ್ಲಿ ಹೊಚ್ಚ ಹೊಸ ಡಿಪ್ಲೋಸ್ ಪ್ರೊ (Diplos Pro) ಹೆಸರಿನ ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಇದನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸಲು ಯೋಗ್ಯವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಹಿಂಭಾಗ ಕ್ಯಾರಿಯರ್ ಮತ್ತು ದೊಡ್ಡ ಗಾತ್ರದ ಫ್ಲೋರ್‌ಬೋರ್ಡ್‌ನ್ನು ಒಳಗೊಂಡಿದೆ. ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ.
ಸದ್ಯ 'ಆಟೋ ಎಕ್ಸ್‌ಪೋ 2025' ಸಮೀಪದಲ್ಲಿದೆ. ನ್ಯೂಮೆರೋಸ್ ಮೋಟಾರ್ಸ್, ಡಿಪ್ಲೋಸ್ ಮ್ಯಾಕ್ಸ್ (Diplos Max) ಹೆಸರಿನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಇದು ಪ್ರಯಾಣಿಕ ದ್ವಿಚಕ್ರ ವಾಹನವಾಗಿದೆ. ಕೆಲವೇ ದಿನಗಳ ಹಿಂದೆ, ನಮ್ಮ ತಂಡಕ್ಕೆ ಈ ನೂತನ ಇ-ಸ್ಕೂಟರ್‌ನ್ನು ಟೆಸ್ಟ್ ರೈಡ್ ಮಾಡಲು ಅವಕಾಶ ದೊರೆಯಿತು. ಬನ್ನಿ.. ಹೊಚ್ಚ ಹೊಸ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ ಮತ್ತು ವಿಶೇಷತೆ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ವಿನ್ಯಾಸ & ವೈಶಿಷ್ಟ್ಯಗಳು: ಈ ನೂತನ ಸ್ಕೂಟರ್ ಆಕರ್ಷಕವಾದ ವಿನ್ಯಾಸ (ಡಿಸೈನ್) ಒಳಗೊಂಡಿದೆ. ಆದರೆ, ಬಹುತೇಕ ವಾಣಿಜ್ಯ ಬಳಕೆಯ 'ಡಿಪ್ಲೋಸ್ ಪ್ರೊ'ಗೆ ಹೋಲಿಕೆಯಾಗಬಲ್ಲದು. ಹಿಂಭಾಗ (ರೇರ್) ಕ್ಯಾರಿಯರ್ ಬದಲಾಗಿ ಸೀಟನ್ನು ಅಳವಡಿಕೆ ಮಾಡಲಾಗಿದೆ. ಅದು ಬಿಟ್ಟರೆ ಬೇರೆ ಯಾವುದೇ ಬದಲಾವಣಿಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ನೂತನ ಡಿಪ್ಲೋಸ್ ಮ್ಯಾಕ್ಸ್ ಇ-ಸ್ಕೂಟರ್‌ನ ಮುಂಭಾಗದ (ಫ್ರಂಟ್) ಹ್ಯಾಂಡಲ್‌ಬಾರ್‌ಗಳ ಮೇಲಿರುವ ಬ್ಲ್ಯಾಕ್ಡ್ ಔಟ್ ಸೆಕ್ಷನ್, ಡುಯಲ್ ಟೋನ್ ಲುಕ್ ಹೊಂದಿರುವ 'ಡಿಪ್ಲೋಸ್' ನೇಮ್‌ಪ್ಲೇಟ್ ಹಾಗೂ ಎಲ್ಇಡಿ ಡಿಆರ್‌ಎಲ್‌ನ್ನು ಪಡೆದಿದೆ. ಜೊತೆಗೆ ಆಕರ್ಷಕವಾದ ರೌಂಡ್ - ಹೆಡ್‌ಲೈಟ್ ಹಾಗೂ ಟರ್ನ್ ಸಿಗ್ನಲ್‌ಗಳನ್ನು ಒಳಗೊಂಡಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್ ಹೆಚ್ಚು ಸಮತಟ್ಟಾಗಿದೆ. ಇದು ಮಾತ್ರವಲ್ಲದೆ ಸಾಕಷ್ಟು ಉದ್ದವಾಗಿಯೂ ಇದೆ. ಬಾಡಿ ಪ್ಯಾನೆಲ್‌ಗಳು ಗಟ್ಟಿಮುಟ್ಟಾಗಿವೆ. ಇದರಿಂದ ನೂತನ ಸ್ಕೂಟರ್ ಸುದೀರ್ಘವಾಗಿ ಬಾಳಿಕೆ ಬರಬಹುದೆಂಬ ವಿಶ್ವಾಸವಿದೆ. ಸೀಟುಗಳು ವಿಶಾಲವಾಗಿದ್ದು, ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಇದರೊಟ್ಟಿಗೆ ತೆಗೆದು ಹಾಕಬಹುದಾದ ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ.
ಹೊಸ ಇ-ಸ್ಕೂಟರ್‌ನ ಸೈಡ್ ಪ್ಯಾನೆಲ್‌ಗಳು ಕಾಂಟ್ರಾಸ್ಟ್ ಸ್ಟ್ರೈಪ್ ಒಳಗೊಂಡಿವೆ. ಹಿಂಭಾಗದಲ್ಲಿ ಓವಲ್ ಎಲ್ಇಡಿ ಬ್ರೇಕ್ ಲೈಟಿಂಗ್ ಇದೆ. ಇದರಲ್ಲಿ ಬಳಕೆ ಮಾಡಿರುವ ಇನ್ಸ್ಟ್ರುಮೆಂಟ್ ಸ್ಕ್ರೀನ್ ತುಂಬಾ ಚಿಕ್ಕದಾಗಿದೆ. ಸ್ವಿಚ್‌ಗಿಯರ್ ಸಹ ಪುಟ್ಟದಾಗಿದ್ದು, ಮೋಡ್‌ಗಳನ್ನು ಬದಲಾಯಿಸಲು ಪರದಾಡಬೇಕಾಗುತ್ತದೆ. ಇದರೊಟ್ಟಿಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನ್ನು ಒಳಗೊಂಡಿದ್ದು, ಪ್ರಯಾಣಿಸುವಾಗ ಫೋನನ್ನು ಚಾರ್ಜ್ ಮಾಡಬಹುದು.

ಡಿಪ್ಲೋಸ್ ಮ್ಯಾಕ್ಸ್ ಇ-ಸ್ಕೂಟರ್ ಕಾರ್ಯಕ್ಷಮತೆ: ಇದು 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ತೆಗೆದು ಹಾಕಬಹುದಾದ ಡುಯಲ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ನೂತನ ಸ್ಕೂಟರ್‌ನ್ನು 1.2 ಕೆಡಬ್ಲ್ಯೂ ಚಾರ್ಜರ್‌ಗೆ ಪ್ಲಗ್ ಮಾಡುವುದರೊಂದಿಗೂ ಸುಲಭವಾಗಿ ಚಾರ್ಜ್ ಮಾಡಬಹುದು. ಅದು ಸಾಧ್ಯವಾಗದಿದ್ದರೆ, ಬ್ಯಾಟರಿ ಪ್ಯಾಕ್‌ಗಳನ್ನು ಹೊರ ತೆಗೆದು ಪ್ಲಗ್ ಪಾಯಿಂಟ್ ಇರುವಲ್ಲಿ ಇಟ್ಟು ಚಾರ್ಜಿಂಗ್ ಗೆ ಹಾಕಬಹುದು. ಸಂಪೂರ್ಣವಾಗಿ ಚಾರ್ಜ್ ಆಗುವುದಕ್ಕೆ 3 ರಿಂದ 4 ಗಂಟೆ ತೆಗೆದುಕೊಳ್ಳುತ್ತದೆ.
ನೂತನ ಸ್ಕೂಟರ್‌ನಲ್ಲಿ 'ಹಬ್' ಎಲೆಕ್ಟ್ರಿಕ್ ಮೋಟರ್ ಬಳಕೆ ಮಾಡಲಾಗಿದೆ. ಇದು 3.58 ಬಿಹೆಚ್‍ಪಿ (2.67 ಕೆಡಬ್ಲ್ಯೂ) ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 138 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆಯಲಿದೆ.

ಈ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಅಡ್ಜೆಸ್ಟೇಬಲ್ ಡುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಮುಂದೆ 220 ಎಂಎಂ ಹಾಗೂ ಹಿಂದೆ 180 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. 12-ಇಂಚಿನ ವೀಲ್‌ಗಳು ಹಾಗೂ 90/90 ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ 1,960 ಎಂಎಂ ಉದ್ದ, 720 ಎಂಎಂ ಅಗಲ ಹಾಗೂ 1,125 ಎಂಎಂ ಎತ್ತರವಿದೆ. 1,430 ಎಂಎಂ ಉದ್ದದ ವೀಲ್‌ಬೇಸ್ ಹಾಗೂ 150 ಎಂಎಂ ಇರುವ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 137 ಕೆಜಿ ತೂಕ ಸಹ ಇದೆ.

ಚಾಲನಾ ಅನುಭವ: ನಮಗೆ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ (Numeros Diplos Max) ಎಲೆಕ್ಟ್ರಿಕ್ ಸ್ಕೂಟರ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು ಎಂದು ಹೇಳಬಹುದು. ಇದರ ಮೇಲೆ ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಹೋಗಬಹುದು. ಆದರೂ ಒಂದಷ್ಟು ಎಡರು ತೊಡರುಗಳು ಇದ್ದೆ ಇದೆ.
ಈ ಸ್ಕೂಟರ್ ರಸ್ತೆಯಲ್ಲಿ ನೋಡುಗರನ್ನು ಸೆಳೆಯಲು ಸೋನಿಕ್ ಸಿಲ್ವರ್ & ಕಾಸ್ಮೋಸ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಈ ಸ್ಕೂಟರ್‌ನ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿದವು. ಇವೆಲ್ಲ ಒಂದು ಕಡೆಯಾದರೆ, ಈ ಸ್ಕೂಟರ್ ನಮ್ಮ ಕೆಲವೊಂದು ನಿರೀಕ್ಷೆಗಳನ್ನು ಹುಸಿಗೊಳಿಸಿತು ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಚ್ಚ ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಒಂದಷ್ಟು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೆ, ರೂ.1 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಬೇರೆ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಕೆ ಮಾಡಿದರೆ, ಇದು ಕೊಂಚ ದುಬಾರಿ ದರವಾಗಿದೆ. ಇದರೊಟ್ಟಿಗೆ ನೂತನ ಸ್ಕೂಟರ್, ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಲಿದೆ ಎಂದು ತಿಳಿದುಬಂದಿದ್ದು, ಒಳ್ಳೆಯ ವಿಚಾರವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








