Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಸ್ಟ್ ರೈಡ್ ರಿವ್ಯೂ: ಹೊಸ ಸೌಲಭ್ಯಗಳೊಂದಿಗೆ ಮೋಡಿ ಮಾಡುತ್ತಾ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್?
ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಅಡ್ವೆಂಚರ್ ಬೈಕ್ ಹಿಮಾಲಯನ್ ಮಾದರಿಯನ್ನು ಇತ್ತೀಚೆಗಷ್ಟೇ 2021ರ ಆವೃತ್ತಿಯೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ವಿತರಣೆಗೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಯು ಈ ಹಿಂದಿನ ಮಾದರಿಗಳಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕಿನ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ಈ ವಿಮರ್ಶೆ ಲೇಖನದಲ್ಲಿ ತಿಳಿಯೋಣ.

ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿಯಾದ ಹಿಮಾಲಯನ್ ಆವೃತ್ತಿಯು ಬಿಡುಗಡೆಯ ನಂತರ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ತನ್ನ ಜನಪ್ರಿಯ ಬೈಕ್ ಆವೃತ್ತಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ. ಕಳೆದ ವರ್ಷದ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬಾರಿ ಹೊಸ ಫೀಚರ್ಸ್ ಮತ್ತು ಟೆಕ್ನಾಲಜಿ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದೆ.

ಹೊಸ ಹಿಮಾಲಯನ್ ಬೈಕ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಸದ್ಯ ಆರಂಭಿಕವಾಗಿ ರೂ.2.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.58 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಈ ಬಾರಿ ಹಲವು ಹೊಸ ಫೀಚರ್ಸ್ ಜೊತೆಗೆ ಹೆಚ್ಚುವರಿಯಾಗಿ ಮೂರು ಹೊಸ ಬಣ್ಣ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದೆ.

ಹಾಗಾದ್ರೆ 2020ರ ಬಿಎಸ್-6 ಮಾದರಿಗಿಂತಲೂ 2021ರ ಹಿಮಾಲಯನ್ ಮಾದರಿಯಲ್ಲಿ ಯಾವೆಲ್ಲಾ ವಿಶೇಷತೆಗಳನ್ನು ಸೇರಿಸಲಾಗಿದೆ ಮತ್ತು ಅಡ್ವೆಂಚರ್ ಬೈಕ್ ಚಾಲನೆಗೆ ಪೂರಕವಾದ ಹೊಸ ಫೀಚರ್ಸ್‌ಗಳು ಯಾವವು? ಎನ್ನುವ ಬಗೆಗೆ ಈ ವಿಮರ್ಶೆ ಲೇಖನದಲ್ಲಿ ತಿಳಿಯೋಣ.

ಡಿಸೈನ್ ಮತ್ತು ಸ್ಟೈಲ್
2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಮಾದರಿಯು ಈ ಮೊದಲಿನಂತೆಯೇ ಹಲವಾರು ವಿನ್ಯಾಸಗಳನ್ನು ಹೊಂದಿದ್ದರೂ ಕೂಡಾ ಕೆಲವು ಸೂಕ್ಷ್ಮ ಬದಲಾವಣೆಗಳು ಹಳೆಯ ಮಾದರಿಗಿಂತಲೂ ಹೊಸ ಮಾದರಿಯನ್ನು ಭಿನ್ನವಾಗಿರುವಂತೆ ಮಾಡಲು ಸಹಕಾರಿಯಾಗಿವೆ. ಹೊಸ ಬೈಕ್ ಮಾದರಿಯು ಇದೀಗ ಪ್ರಮುಖ ಮೂರು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವುದು ಗ್ರಾಹಕರ ಆಯ್ಕೆ ಹೆಚ್ಚಿಸಿದ್ದು, ಹೊಸ ಬೈಕ್ ಮಾದರಿಯನ್ನು ಪೈನ್ ಗ್ರೀನ್, ಗ್ರಾನೈಟ್ ಬ್ಲ್ಯಾಕ್ ಮತ್ತು ಮಿರಾಜ್ ಸಿಲ್ವರ್ ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ.

ನವೀಕರಿಸಿದ ಹಿಮಾಲಯನ್‌ನಲ್ಲಿ ಈ ಹಿಂದಿನಂತೆಯೇ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ವಿಂಡ್‌ಸ್ಕ್ರೀನ್ ಸೌಲಭ್ಯಗಳನ್ನು ಮುಂದುವರೆಸಲಾಗಿದ್ದು, ಮುಂಭಾಗದ ವಿನ್ಯಾಸವು ಸ್ವಲ್ಪಮಟ್ಟಿಗೆ ಬದಲಾವಣೆ ಪಡೆದುಕೊಂಡಿರುವುದು ಬೈಕಿನ ನೋಟಕ್ಕೆ ಮೆರಗು ತುಂಬಿದೆ. ಹೊಸ ಬೈಕಿನಲ್ಲಿರುವ ಹೊಸ ವಿನ್ಯಾಸದ ವಿಂಡ್‌ಸ್ಕ್ರೀನ್ ಸೌಲಭ್ಯವು ಹೆಚ್ಚಿನ ವೇಗದಲ್ಲೂ ಸವಾರರಿಗೆ ಸಾಕಷ್ಟು ಅನುಕೂಲಕವಾಗುವುದರೊಂದಿಗೆ ಅತಿಯಾದ ಗಾಳಿಯಿಂದ ರಕ್ಷಣೆ ನೀಡುತ್ತದೆ.

ಇತರೆ ತಾಂತ್ರಿಕ ಅಂಶಗಳ ನವೀಕರಣಗಳಲ್ಲಿ ಮರುವಿನ್ಯಾಸಗೊಳಿಸಲಾದ ಟ್ಯಾಂಕ್ ಗಾರ್ಡ್ ಕೂಡಾ ಪ್ರಮುಖವಾಗಿದ್ದು, ಎತ್ತರದ ಬೈಕ್ ಸವಾರರಿಗೆ ಈ ಬಾರಿ ಅರಾಮದಾಯಕವಾಗಿ ರೈಡಿಂಗ್‌ಗೆ ಸಹಕಾರಿಯಾಗುವಂತೆ ಪ್ರಮುಖ ಬದಲಾವಣೆಗಳೊಂದಿಗೆ ಹಿಂಬದಿಯ ಸವಾರಿಗೂ ಉತ್ತಮ ಸ್ಥಳಾವಕಾಶದೊಂದಿಗೆ ಟೈಲ್ ರ‍್ಯಾಕ್ ನೀಡಲಾಗಿದೆ.

ಲಗೇಜ್ ರ‍್ಯಾಕ್ ಅನ್ನು ಮೆಟಲ್ ಪ್ಲೇಟ್‌ನೊಂದಿಗೆ ಜೋಡಿಸಲಾಗಿದ್ದು, 7 ಕೆ.ಜಿ ತನಕ ಲಗೇಜ್ ಪ್ಯಾಕ್ ಮಾಡಬಹುದಾಗಿದೆ. ಈ ಹಿಂದಿನ 5 ಕೆ.ಜಿ ಸಾಮರ್ಥ್ಯದ ರ‍್ಯಾಕ್‌ಗಿಂತಲೂ ಹೊಸ ಲಗೇಜ್ ರ‍್ಯಾಕ್ ಅಗಲವಾಗಿದ್ದು, ಲಗೇಜ್ ನಂತರವು ಹಿಂಬದಿಯ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ರ‍್ಯಾಕ್ ಜೋಡಿಸಲಾಗಿದೆ. ಇದನ್ನು ಹೊರತುಪಡಿಸಿ 2021ರ ಹಿಮಾಲಯನ್ ಬೈಕ್ ಮಾದರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಯಾವುದೇ ವಿನ್ಯಾಸಗಳನ್ನು ಗುರುತರವಾಗಿ ಬದಲಾವಣೆ ಮಾಡಿಲ್ಲ.

ಹಿಮಾಲಯನ್ ಫೀಚರ್ಸ್
ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಯು ಬ್ರಾಂಡ್ ನ್ಯೂ ಟ್ರಿಪ್ಪರ್ ನ್ಯಾವಿಗೇಷನ್ ಅನ್ನು ಸಹ ಒಳಗೊಂಡಿದ್ದು, ಹೊಸ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಪ್ರತ್ಯೇಕವಾಗಿ ಜೋಡಣೆ ಮಾಡಲಾಗಿದೆ.

ಟ್ರಿಪ್ಪರ್ ನ್ಯಾವಿಗೇಷನ್ ಸೌಲಭ್ಯವನ್ನು ಮೊದಲ ಬಾರಿಗೆ ಮಿಟಯೊರ್ 350 ಮಾದರಿಯಲ್ಲಿ ಅಳವಡಿಸಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು ಇದೀಗ 2021 ಹಿಮಾಲಯನ್ ಮಾದರಿಯಲ್ಲಿ ಅಳವಡಿಸಿದ್ದು, ಇದು ನೇರವಾಗಿ ಗೂಗಲ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಹೊಸ ಟ್ರಿಪ್ಪರ್ ನ್ಯಾನಿಗೇಶಷನ್ ಸೌಲಭ್ಯವನ್ನು ನಿಯಂತ್ರಿಸಲು ಪ್ರತ್ಯೇಕವಾದ ಮೊಬೈಲ್ ಅಪ್ಲಿಕೇಷನ್ ಕೂಡಾ ಲಭ್ಯವಿದ್ದು, ಬೈಕ್ ಸವಾರಿಗೂ ಮುನ್ನ ಒಂದು ಬಾರಿ ನಿಗದಿತ ಪ್ರದೇಶವನ್ನು ಗುರುತಿಸುವ ಮೂಲಕ ಅರಾಮವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಪಡೆದುಕೊಳ್ಳಬಹುದು.

ಪ್ರತ್ಯೇಕವಾಗಿ ಪಾಡ್‌ಗಳಲ್ಲಿ ಒಂದು ಬದಿಯಲ್ಲಿ ಈ ಹಿಂದಿನಂತೆ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮತ್ತೊಂದು ಬದಿಯಲ್ಲಿ ಟ್ಪಿಪ್ಲರ್ ನ್ಯಾವಿಗೇಷನ್ ಹೊಂದಿರುವುದರಿಂದ ಬೈಕ್ ಸವಾರನಿಗೆ ಯಾವುದೇ ಗೊಂದಲ ಉಂಟಾಗುವುದಿಲ್ಲ. ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ವೇಳೆ ಫೋನ್ ಕರೆಗಳು ಮತ್ತು ಸಂದೇಶಗಳ ಯಾವುದೇ ಮಾಹಿತಿ ನೀಡದಿರುವುದು ಕೆಲವು ಬೈಕ್ ಸವಾರರಿಗೆ ಅಸಮಾಧಾನ ಎನ್ನಿಸಿದರೂ ಬೈಕ್ ಚಾಲನೆ ವೇಳೆ ಮೊಬೈಲ್ ಬಳಕೆಯನ್ನು ತಗ್ಗಿಸಲು ಹೊಸ ಟ್ರಿಪ್ಪರ್ ನ್ಯಾವಿಗೇಷನ್‌ನಲ್ಲಿ ಕಾಲ್ ಮತ್ತು ಮೆಸೇಜ್ ಅಲರ್ಟ್ ತೆಗೆದುಹಾಕಲಾಗಿದೆ.

ಇನ್ನು 2021 ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಈಗ ನವೀಕರಿಸಿದ ಆಸನಗಳು ಕೂಡಾ ಊತ್ತಮ ಬೈಕ್ ಸವಾರಿಗೆ ಪೂರಕವಾಗಿದ್ದು, ಉತ್ತಮ ಕುಶನ್ ಹೊಂದಿರುವುದರಿಂದ ಲಾಂಗ್ ರೈಡ್‌ನಲ್ಲೂ ಯಾವುದೇ ಕಿರಿಕಿರಿ ಉಂಟುಮಾಡದೆ ಕಂಫರ್ಟ್ ಅನುಭವ ನೀಡುತ್ತದೆ.

ಒಟ್ಟಾರೆ 2021 ರ ಹಿಮಾಲಯನ್ ಮಾದರಿಯು ಈ ಹಿಂದಿನ ಬಿಎಸ್ 4 ಮಾದರಿಗಿಂತಲೂ ಸಾಕಷ್ಟು ಸುಧಾರಣೆಗೊಳ್ಳುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, ಹೊಸ ಬೈಕ್‌ನಲ್ಲಿ ಈ ಹಿಂದಿನಂತೆಯೇ ಫ್ರೇಮ್, ಸಸ್ಷೆಂಷನ್ ಸೆಟಪ್, ಬ್ರೇಕ್ ಮತ್ತು ಟಯರ್ ಸೌಲಭ್ಯಗಳನ್ನು ಮುಂದುವರಿಸಲಾಗಿದೆ.

ಹೊಸ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಅನ್ನು 200 ಎಂಎಂ ಟ್ರಾವೆಲ್ ಹೊಂದಿದ್ದರೆ ಹಿಂಭಾಗದ ಮೊನೊ-ಶಾಕ್ ಸೆಟಪ್ 180 ಎಂಎಂ ಟ್ರಾವೆಲ್‌ನೊಂದಿಗೆ ಬರಲಿದ್ದು, ಮುಂಭಾಗ ಮತ್ತು ಹಿಂಭಾಗ ಚಕ್ರಗಳಲ್ಲಿ ಕ್ರಮವಾಗಿ 300 ಎಂಎಂ ಮತ್ತು 240 ಎಂಎಂ ಡಿಸ್ಕ್ ಬ್ರೇಕ್‌ನೊಂದಿಗೆ ಉತ್ತಮ ಬ್ರೇಕಿಂಗ್ ಅನ್ನು ನಿರ್ವಹಿಸಲಾಗುತ್ತದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು 2020 ಬಿಎಸ್ 6 ಹಿಮಾಲಯನ್ ಮಾದರಿಯಲ್ಲಿ ನೀಡಲಾಗಿದ್ದ ಸ್ವಿಚ್ ಮಾಡಬಹುದಾದ ಎಬಿಎಸ್ ಸೌಲಭ್ಯವನ್ನು 2021ರ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಮುಂಭಾಗದಲ್ಲಿ 21 ಇಂಚಿನ ಚಕ್ರಗಳು ಮತ್ತು ಹಿಂಭಾಗದಲ್ಲಿ 17 ಇಂಚಿನ ಚಕ್ರಗಳನ್ನು ಪಡೆದುಕೊಂಡಿದೆ.

ಇನ್ನು ಹೊಸ ಬೈಕಿನಲ್ಲಿ 90/90 ಮತ್ತು 120/90 ಪ್ರೊಫೈಲ್ ಹೊಂದಿರುವ ಟೈರ್ ನೀಡಲಾಗಿದ್ದು, ಟ್ಯೂಬ್ ಟೈರ್ ಹೊಂದಿರುವ ಸ್ಪೋಕ್ಡ್ ರಿಮ್ ವೈಶಿಷ್ಟ್ಯತೆಯು ಆಫ್-ರೋಡಿಂಗ್ ಸಾಮರ್ಥ್ಯಗಳಿಗೆ ಸಹಾಯ ಮಾಡುತ್ತದೆ.

ಹೊಸ ಬೈಕಿನ 220 ಎಂಎಂ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಸಹ ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿದ್ದು, 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಸೌಲಭ್ಯವು ದೂರದ ಪ್ರಯಾಣಕ್ಕೆ ಪೂರಕವಾಗಿದೆ. ಹೊಸ ಬೈಕ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 28 ಕಿ.ಮೀ ಇಂಧನ ದಕ್ಷತೆ ಹೊಂದಿದ್ದು, ಹೊಸ ಬೈಕ್ ಒಟ್ಟಾರೆ 199 ಕಿ.ಮೀ ತೂಕವನ್ನು ಹೊಂದಿರುತ್ತದೆ.

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
2021 ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಯಲ್ಲಿ ಕಳೆದ ವರ್ಷ ಉನ್ನತೀಕರಿಸಲಾದ ಬಿಎಸ್ 6 ವೈಶಿಷ್ಟ್ಯತೆಯ 411 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್ ಪಡೆದುಕೊಂಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.3 ಬಿಎಚ್‌ಪಿ ಮತ್ತು 32 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತಿದೆ.

ಹೊಸ ಎಂಜಿನ್ ಮಾದರಿಯು ಕಳೆದ ವರ್ಷದ ಆವೃತ್ತಿಯಲ್ಲಿನ ಎಂಜಿನ್‌ಗಿಂತಲೂ ಉತ್ತಮವಾಗಿ ಪರಿಷ್ಕರಣೆಗೊಂಡಿದ್ದು, ಲಾಂಗ್-ಸ್ಟ್ರೋಕ್ ಸೌಲಭ್ಯವು ರೈಡಿಂಗ್‌ಗೆ ಪೂರಕವಾದ ಮತ್ತೊಂದು ಪ್ರಮುಖ ಗುಣಲಕ್ಷಣವಾಗಿದೆ.

ಹೊಸ ಎಂಜಿನ್ ಪರ್ಫಾಮೆನ್ಸ್ ಬಗೆಗೆ ಹೇಳುವುದಾದರೆ ಆರಂಭದಲ್ಲಿ ಮಂದಗತಿಯಾಗಿದೆ ಎನ್ನಿಸಿದರೂ ಮಧ್ಯಮದ ವೇಗದಲ್ಲಿ ಬೈಕ್ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, 1500 ಆರ್‌ಪಿಎಂ ನಂತರ ಬೈಕ್ ಉತ್ತಮ ವೇಗ ಪಡೆದುಕೊಳ್ಳುತ್ತದೆ. ಹೊಸ ಬೈಕ್ ಮೂಲಕ ಪ್ರತಿ ಗಂಟೆಗೆ 120 ಕಿ.ಮೀ ವೇಗವನ್ನು ಯಾವುದೇ ಅಡೆತಡೆಯಿಲ್ಲದ ಗರಿಷ್ಠ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಎಂಜಿನ್ ಮಾದರಿಯ ನಂತರ ಈ ಹಿಂದಿನ ಮಾದರಿಯಲ್ಲಿದ್ದ ವೈಬ್ರೆಷನ್ ತೊಂದರೆಯನ್ನು ಸಾಕಷ್ಟು ಸುಧಾರಿಸಲಾಗಿದೆ. ಹಾಗೆಯೇ ಸ್ಪೀಡ್ ಗೇರ್ ಬಾಕ್ಸ್ ಸಹ ನಯವಾಗಿದ್ದು, ಪ್ರತಿ ಗಂಟೆಗೆ 80 ರಿಂದ 100 ಕಿ.ಮೀ ವೇಗದಲ್ಲಿ ಬೈಕ್ ರೈಡಿಂಗ್ ಸಾಕಷ್ಟು ಹಿಡಿತ ಹೊಂದಿದೆ.

ನಗರದ ಟ್ರಾಫಿಕ್ ಭರಿತ ರಸ್ತೆಗಳಲ್ಲಿ ಮಾತ್ರವಲ್ಲ ಹೆದ್ದಾರಿಗಳಲ್ಲೂ ಉತ್ತಮ ರೈಡಿಂಗ್ ಅನುಭವ ನೀಡುವ ಹೊಸ ಹಿಮಾಯನ್ ಬೈಕ್ ಮಾದರಿಯು ಉತ್ತಮ ಸಮತೋಲ ಪಡೆದುಕೊಂಡಿದ್ದು, 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಲಾಂಗ್ ರೈಡ್ ಟ್ರಾವೆಲ್ ಸಸ್ಷೆಂಷನ್ ಸೌಲಭ್ಯಗಳು ಹೊಸ ಬೈಕಿನ ಆಫ್ ರೋಡ್ ಸಾಮರ್ಥ್ಯಕ್ಕೆ ಪೂರಕವಾಗಿವೆ.

ಹಾಗೆಯೇ ಹೊಸ ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯವು ಉತ್ತಮ ಗುಣಮಟ್ಟವನ್ನು ಹೊಂದಿದ್ದು, ನಗರಪ್ರದೇಶಗಳಲ್ಲಿನ ಬೈಕ್ ರೈಡಿಂಗ್ ಸಂದರ್ಭದಲ್ಲಿ ಕೆಲವು ಬಾರಿ ಇನ್ನಷ್ಟು ನಿಖರ ಹಿಡಿತ ಹೊಂದಿರುವ ಬ್ರೇಕಿಂಗ್ ಬೇಕಿತ್ತು ಎನ್ನಿಸದೆ ಇರಲಾರದು.

2021ರ ಹಿಮಾಲಯನ್ ಬಗೆಗೆ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಆವೃತ್ತಿಯಲ್ಲಿ ಈ ಹಿಂದಿನ ಮಾದರಿಗಿಂತಲೂ ಹಲವಾರು ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿರುವುದು ಉತ್ತಮ ರೈಡಿಂಗ್ ಒದಗಿಸಲು ಸಹಕಾರಿಯಾಗಿದ್ದು, ಹೊಸ ಬಣ್ಣಗಳ ಆಯ್ಕೆ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು. ಆದರೆ ಅಡ್ವೆಂಚರ್ ಕೌಶಲ್ಯತೆಗೆ ಪೂರಕವಾಗಿ ಹೊಸ ಬೈಕಿನಲ್ಲಿ ದುಬಾರಿ ಬೆಲೆಗೆ ಅನುಗುಣವಾಗಿ ಇನ್ನು ಪ್ರಮುಖ ತಾಂತ್ರಿಕ ಅಂಶಗಳನ್ನು ಉನ್ನತೀಕರಿಸಬಹುದಾಗಿತ್ತು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಇದರ ಹೊರತಾಗಿ ಈ ಸೆಗ್ಮೆಂಟ್‌ನಲ್ಲಿ ಹಿಮಾಲಯನ್ ಬೈಕ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ರೈಡಿಂಗ್ ಅನುಭವ ಒದಗಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.