Just In
- 19 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಸ್ಟ್ ರೈಡ್ ರಿವ್ಯೂ: ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಸದ್ದು ಮಾಡುತ್ತಾ ಹೋಂಡಾ ಹೈನೆಸ್ ಸಿಬಿ 350?
ಹೋಂಡಾ ಮೋಟರ್ ಸೈಕಲ್ಸ್ & ಸ್ಕೂಟರ್ಸ್ ಇಂಡಿಯಾ(ಎಚ್‌ಎಂಎಸ್‌ಐ) ತನ್ನ ಪ್ರೀಮಿಯಂ ಮತ್ತು ಕೈಗೆಟುಕುವ ರೆಟ್ರೊ-ಮಾರ್ಡನ್ ಕ್ರೂಸರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದು ಹೊಸ ಹೋಂಡಾ ಹೈನೆಸ್ ಸಿಬಿ350 ಕ್ರೂಸರ್ ಮಾದರಿಯಾಗಿದೆ. ಆಧುನಿಕ ಫೀಚರ್ ಗಳು ಮತ್ತು ರೆಟ್ರೋ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೊ ಮತ್ತು ಕ್ಲಾಸಿಕ್ ಬೈಕುಗಳ ವಿಭಾಗದಲ್ಲಿ ದೀರ್ಘಕಾಲದವರೆಗೆ ಪ್ರಾಬಲ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಗೆ ಪೈಪೋಟಿ ನೀಡಲು ಹೋಂಡಾ ತನ್ನ ಹೈನೆಸ್ ಸಿಬಿ350 ಕ್ರೂಸರ್ ಮಾದರಿಯನ್ನು ಬಿಡುಗಡೆಗೊಳಿಸಿತು. 2020ರ ಅಕ್ಟೋಬರ್‌ನಲ್ಲಿ ಹೋಂಡಾ ಹೈನೆಸ್ ಸಿಬಿ350 ಕ್ರೂಸರ್ ಬಿಡುಗಡೆಗೊಳಿಸಿತ್ತು. ದೀರ್ಘ ಕಾಯುವಿಕೆಯ ನಂತರ, ಹೊಸ ಪ್ರೀಮಿಯಂ ರೆಟ್ರೊ-ಮಾರ್ಡನ್ ಕ್ರೂಸರ್ ಅನ್ನು ಹೋಂಡಾ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹಾಗಾದರೆ ರಾಯಲ್ ಎನ್‌ಫೀಲ್ಡ್ ಬೈಕ್ ಗಿಂತ ಹೋಂಡಾ ಹೈನೆಸ್ ಸಿಬಿ350 ರೆಟ್ರೊ ಕ್ರೂಸರ್ ಹೇಗೆ ಭಿನ್ನವಾಗಿದೆ ಮತ್ತು ಇದರ ವಿಶೇಷತೆಗಳೇನು ಎಂಬುವುದನ್ನು ಇಲ್ಲಿ ನೋಡೋಣ.

ವಿನ್ಯಾಸ
ಹೊಸ ಹೋಂಡಾ ಹೈನೆಸ್ ಸಿಬಿ350 ಭಾರತದಲ್ಲಿ ಬ್ರ್ಯಾಂಡ್‌ನ ಮೊದಲ ಪ್ರೀಮಿಯಂ 350ಸಿಸಿ ಕ್ರೂಸರ್ ಬೈಕ್ ಆಗಿದೆ. ಇದು ಮಾರ್ಡನ್-ಕ್ಲಾಸಿಕ್ ವಿನ್ಯಾಸದ ಥೀಮ್‌ನೊಂದಿಗೆ ಬರುತ್ತದೆ, ಇದು ಬ್ರ್ಯಾಂಡ್‌ನ ‘ಸಿಬಿ' ಮಾದರಿಗಳಿಗಿಂದ ಸ್ಫೂರ್ತಿ ಪಡೆದಿದೆ. ರೆಟ್ರೊ ವಿನ್ಯಾಸ ಥೀಮ್ ಒಳಗೊಂಡಿರುವ ಹೈನೆಸ್ ಸಿಬಿ350 ಸುತ್ತಲೂ ಕ್ರೋಮ್‌ನಿಂದ ಒಳಗೊಂಡಿದೆ. ಇದು ಹೆಡ್‌ಲ್ಯಾಂಪ್ ಕವರ್‌ಗಳು, ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳು, ಹ್ಯಾಂಡಲ್‌ಬಾರ್‌ಗಳು, ಎಕ್ಸಾಸ್ಟ್ ಪೈಪ್ಸ್, ಟೈಲ್ ಲೈಟ್ ಕವರ್‌ಗಳು ಮತ್ತು ಎಂಜಿನ್‌ನಲ್ಲಿದೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕಿನ ಮುಂಭಾಗ ಉತ್ತಮ ಪ್ರತಿಫಲನದ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಈ ಹೆಡ್ ಲ್ಯಾಂಪ್ ಯುನಿಟ್ ನಲ್ಲಿ ಕ್ರೋಮ್ ಅಂಶಗಳಿಂದ ಸುತ್ತುವರಿದಿದೆ.

ಹೆಡ್‌ಲ್ಯಾಂಪ್ ಯುನಿಟ್ ಎರಡೂ ಬದಿಗಳು ವೃತ್ತಾಕಾರದ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳನ್ನು ಹೊಂದಿದೆ. ಇದು ಮೊದಲ-ವಿಭಾಗದ ಫೀಚರ್ ಗಳಾಗಿದೆ. ಮುಂಭಾಗದ ತುದಿಯ ಸಸ್ಪೆಂಕ್ಷನ್ ಸೆಟಪ್‌ಗಾಗಿ ಕ್ರೋಮ್-ಫಿನಿಶಿಂಗ್ ಮತ್ತು ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಸಹ ಕಾಣಬಹುದು. ಹೈನೆಸ್ ಸಿಬಿ350 ಸ್ಟೈಲಿಶ್ ಅಲಾಯ್ ವ್ಹೀಲ್‌ಗಳೊಂದಿಗೆ ಬರುತ್ತದೆ, ಇದು ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ 15-ಲೀಟರ್ ಸಾಮರ್ಥ್ಯದ ದೊಡ್ಡದಾದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇದು ರೂಪಾಂತರವನ್ನು ಅವಲಂಬಿಸಿ ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ. ಫ್ಯೂಯಲ್ ಟ್ಯಾಂಕ್ ರಿಟೇಜ್-ಪ್ರೇರಿತ ಬ್ಯಾಡ್ಜಿಂಗ್‌ನೊಂದಿಗೆ ಬರುತ್ತದೆ, ಇದರಲ್ಲಿ ಕ್ರೋಮ್-ಫಿನಿಶಿಂಗ್ ‘ಹೊಂಡಾ' ಎಂದು ಬರೆಯಲಾಗಿದೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿ ಸಿಂಗಲ್-ಪೀಸ್ ಸೀಟನ್ನು ಅನ್ನು ಹೊಂದಿದೆ. ಇದು ಅಗಲವಾಗಿದ್ದು, ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ಇತರ ಅಂಶಗಳು ಕ್ರೋಮ್ ಫಿನಿಶಿಂಗ್ ಮೇಲಕ್ಕೆ ಎಕ್ಸಾಸ್ಟ್ ಪೈಪ್‌ಗಳು, ರೈಡರ್ ಸೀಟಿನ ಕೆಳಗಿರುವ ಹೆಚ್ನೆಸ್ ಸಿಬಿ 350 ಬ್ಯಾಡ್ಜಿಂಗ್ ಮತ್ತು ಇತರ ಅನೇಕ ಕ್ರೋಮ್ ಸುತ್ತಲೂ ಅಲಂಕರಿಸುತ್ತವೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ ಹಿಂದಿನ ಹಿಂದಿನ ವಿನ್ಯಾಸವು ಕ್ರೋಮ್-ಫಿನಿಶಿಂಗ್ ಫೆಂಡರ್‌ಗಳೊಂದಿಗೆ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ. ಇದು ಟೈಲ್‌ಲೈಟ್‌ಗಳು ಮತ್ತು ಟರ್ನ್ ಇಂಡಿಕೇಟರ್ ಅನ್ನು ಹೊಂದಿವೆ. ಇವೆರಡೂ ಎಲ್ಇಡಿ ಯುನಿಟ್ ಗಳಾಗಿವೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ಆಧುನಿಕ ಸ್ಪರ್ಶಗಳೊಂದಿಗೆ ರೆಟ್ರೊ-ಸ್ಟೈಲಿಂಗ್ ಅನ್ನು ಮನಬಂದಂತೆ ಸಂಯೋಜಿಸುತ್ತದೆ. ಕ್ರೋಮ್‌ನ ಸಮೃದ್ಧಿಯನ್ನು ಅಲಾಯ್ ವ್ಹೀಲ್ ಗಳು ಸೇರಿದಂತೆ ಹಲವಾರು ಕಪ್ಪು ಬಣ್ಣದ ಅಂಶಗಳಿಂದ ಸರಿದೂಗಿಸಲಾಗುತ್ತದೆ, ಇದು ಈ ಕ್ರೂಸರ್ ಬೈಕಿಗೆ ಕಲಾತ್ಮಕವಾದ ಲುಕ್ ಅನ್ನು ನೀಡಿದೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ ಮಾರ್ಡನ್ ಫೀಚರ್ ಗಳು, ಉಪಕರಣಗಳು ಮತ್ತು ಕನೆಕ್ಟಿವಿಟಿ ತಂತ್ರಜ್ಞಾನದಿಂದ ತುಂಬಿದೆ. ರೆಟ್ರೊ-ಸ್ಟೈಲಿಂಗ್ ನೊಂದಿಗೆ ಎಲ್ಇಡಿ ಲೈಟಿಂಗ್ ಬರುತ್ತದೆ. ಇದನ್ನು ಮೊದಲೇ ಹೇಳಿದಂತೆ ಹೆಡ್‌ಲ್ಯಾಂಪ್, ಟೈಲ್ ಲೈಟ್ ಯುನಿಟ್ ಗಳು ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್ ಅನ್ನು ಹೊಂದಿದೆ.

ಇನ್ನು ಈ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಿಂಗಲ್-ಪಾಡ್ ಯುನಿಟ್ ಅನ್ನು ಹೊಂದಿದೆ. ಕ್ಲಸ್ಟರ್ ಅನಲಾಗ್ ಸ್ಪೀಡೋಮೀಟರ್ ಅನ್ನು ಹೊಂದಿದೆ, ಜೊತೆಗೆ ಕೆಳಭಾಗದಲ್ಲಿ ಸಣ್ಣ ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಜಿಟಲ್ ಡಿಸ್ ಪ್ಲೇಯು ಕೆಲವು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದರಲ್ಲಿ ಎರಡು ಟ್ರಿಪ್ ಮೀಟರ್‌ಗಳು, ಸರಾಸರಿ ಇಂಧನ ದಕ್ಷತೆ, ಇಂಧನ ಗೇಜ್, ಗೇರ್ ಪೊಷಿಸನ್ ಇಂಡಿಕೇಟರ್ ಮತ್ತು ಕೆಲವು ಇತರವುಗಳು ಸೇರಿವೆ.

ಇನ್ಸ್ ಟ್ರೂಮೆಂಟ್ ಪಾಡ್ ಪಕ್ಕದಲ್ಲಿ, ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಎಬಿಎಸ್, ಟರ್ನ್ ಸಿಗ್ನಲ್ಸ್, ಎಂಜಿನ್ ಚೆಕ್ ಲೈಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಹೋಂಡಾ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂನೊಂದಿಗೆ ‘ಹೋಂಡಾ ವೇರಿಯಬಲ್ ಟಾರ್ಕ್ ಕಂಟ್ರೋಲ್ (ಎಚ್‌ವಿಟಿಸಿ) ಅನ್ನು ಹೊಂದಿದೆ.

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೋಂಡಾ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ (ಎಚ್‌ಎಸ್‌ವಿಸಿ) ಜೊತೆಗೆ ಕನೆಕ್ಟಿವಿಟಿ ತಂತ್ರಜ್ಞಾನದೊಂದಿಗೆ ಬರುತ್ತದೆ. ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್ ಬಳಸಿ ಬ್ಲೂಟೂತ್ ಮೂಲಕ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದು. ಫೋನ್‌ನೊಂದಿಗೆ ಒಮ್ಮೆ ಸಿಂಕ್ ಮಾಡಿದ ನಂತರ ಬರುವ ಕರೆಗಳನ್ನು ಸ್ವೀಕರಿಸಬಹುದು.

ಇದರೊಂದಿಗೆ ಮೇಸೆಜ್ ಬರುತ್ತದೆ ಮತ್ತು ನ್ಯಾವಿಗೇಷನ್ ಅನ್ನು ಕೂಡ ಬಳಸಬಹುದು. ಇನ್ನು ಮ್ಯೂಸಿಕ್ ಕಂಟ್ರೋಲ್ ಅನ್ನು ಸಹ ಹೊಂದಿದೆ. ಸವಾರನು ತಮ್ಮ ಹೆಲ್ಮೆಟ್‌ಗಳಲ್ಲಿ ಇಂಟರ್‌ಕಾಮ್ ಅಥವಾ ಕೆಲವು ಆಫ್ಟರ್ ಮಾರ್ಕೆಟ್ ಸ್ಪೀಕರ್‌ಗಳನ್ನು ಅಳವಡಿಸಬೇಕಾಗುತ್ತದೆ.

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಪಕ್ಕದಲ್ಲಿ ನಿಮ್ಮ ಮೊಬೈಲ್ ಸಾಧನಗಳನ್ನು ಚಾರ್ಜ್ ಮಾಡಲು ಯುಎಸ್ಬಿ ಸಾಕೆಟ್ ಇದೆ. ಹೋಂಡಾ ಟೈಪ್-ಎ ಪೋರ್ಟ್ ಬದಲಿಗೆ ಹೆಚ್ಚು ಆಧುನಿಕ ಟೈಪ್-ಸಿ ಪೋರ್ಟ್ ಅನ್ನು ಒದಗಿಸಿದೆ. ಪ್ರಯಾಣದಲ್ಲಿರುವಾಗ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲು ಪ್ರತ್ಯೇಕ ಅಡಾಪ್ಟರ್ ಪಡೆಯುವ ಅಗತ್ಯವಿರುತ್ತದೆ.

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೆಳಗೆ ಡ್ಯುಯಲ್ ಹಾರ್ನ್‌ಗಳನ್ನು ಹೊಂದಿದೆ, ಇದನ್ನು ಮತ್ತೆ ಕ್ರೋಮ್‌ನಲ್ಲಿ ಒಳಗೊಂಡಿದೆ. ಡ್ಯುಯಲ್-ಹಾರ್ನ್ ಟಾಪ್-ಸ್ಪೆಕ್ ‘ಡಿಎಲ್‌ಎಕ್ಸ್ ಪ್ರೊ' ರೂಪಾಂತರದಲ್ಲಿ ಮಾತ್ರ ಇರುತ್ತದೆ, ಮೂಲ ಮಾದರಿಯು ಕೇವಲ ಒಂದೇ-ಹಾರ್ನ್ ಅನ್ನು ಹೊಂದಿರುತ್ತದೆ.

ಇನ್ನು ಎಡಭಾಗದ ಹ್ಯಾಂಡಲ್‌ಬಾರ್‌ನಲ್ಲಿ ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‌ಗಳೂ ಇವೆ. ಹಿಂಭಾಗದ ಭಾಗವು ಹೈ ಭೀಮ್ ಮತ್ತು ಪಾಸ್-ಸ್ವಿಚ್‌ನ ನಿಯಂತ್ರಣಗಳನ್ನು ಸಹ ಹೊಂದಿದೆ. ಎಂಜಿನ್ ಕಟ್-ಆಫ್ ಮತ್ತು ಇಗ್ನಿಷನ್ ಕಂಟ್ರೋಲ್ ಗಳೊಂದಿಗೆ ಬಲಭಾಗದ ಹ್ಯಾಂಡಲ್ ಬಾರ್ ನಲ್ಲಿದೆ.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿ ಸಿಂಗಲ್ ಫೀಸ್ ಸೀಟ್ ಅನ್ನು ಹೊಂದಿದೆ. ಇದು ಸವಾರನಿಗೆ ಮತ್ತು ಪಿಲಿಯನ್ ಪ್ರಯಾಣಿಕರಿಗೆ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ಇನ್ನು ಹಿಂಭಾಗದ ಗ್ರ್ಯಾಬ್ ರೈಲ್ ಚಿಕ್ಕಿದಾಗಿದೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್-ಅಬ್ಸಾರ್ಬರ್ಸ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 310 ಎಂಎಂ ಮತ್ತು 240 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ. ಹೋಂಡಾ ಹೈನೆಸ್ ಸಿಬಿ350 ಸಹ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿ ಹೊಸ 348.36 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಇಂಧನ-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಳಾಗಿದೆ. ಈ ಎಂಜಿನ್ 5500 ಆರ್‌ಪಿಎಂನಲ್ಲಿ 20.8 ಬಿಹೆಚ್‌ಪಿ ಪವರ್ ಮತ್ತು 3000 ಆರ್‌ಪಿಎಂನಲ್ಲಿ 30 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

ಇನ್ನು ಎಕ್ಸಾಸ್ಟ್ ನೋಟ್ ತುಂಬಾ ಉತ್ತಮವಾಗಿದೆ ಈ ಹೋಂಡಾ ಹೈನೆಸ್ ಸಿಬಿ350 ಬೈಕಿನ ಎಕ್ಸಾಸ್ಟ್ ನೋಟ್ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350ಗಿಂತ ಖಂಡಿತವಾಗಿಯೂ ಉತ್ತಮವಾಗಿದೆ. ಹೈನೆಸ್ ಸಿಬಿ350 ಬೈಕ್ ತನ್ನ ಪ್ರತಿಸ್ಪರ್ಧಿಗಳಾಗಿಂತ ಹೆಚ್ಚು ಸ್ಪೋರ್ಟಿ ಎಂದು ತೋರುತ್ತದೆ.

ಪರ್ಫಾಮೆನ್ಸ್ ತಕ್ಕಂತೆ ಹೋಂಡಾ ಹೈನೆಸ್ ಸಿಬಿ350 ಬೈಕ್ ಉತ್ತಮ ಲೋ-ಎಂಡ್ ಟಾರ್ಕ್ ನೀಡುತ್ತದೆ. ಮೊದಲ ಎರಡು ಗೇರುಗಳಲ್ಲಿ ಟಾರ್ಕ್ನ ತ್ವರಿತ ರಶ್ ಲಭ್ಯವಿದೆ, ಎಂಜಿನ್ ಸ್ವತಃ ಉತ್ತಮ ಮಟ್ಟದ ಪರಿಷ್ಕರಣೆ ಮತ್ತು ಮೃದುತ್ವವನ್ನು ನೀಡುತ್ತದೆ, ಲೈಟ್ ಕ್ಲಚ್ ಸ್ವಲ್ಪ ಹೆಚ್ಚು ಅರ್ಥಗರ್ಭಿತವಾಗಿರಬಹುದು, ವಿಶೇಷವಾಗಿ ಹೆದ್ದಾರಿಯಲ್ಲಿ ಹೆಚ್ಚಿನ ವೇಗದಲ್ಲಿ. ಹೋಂಡಾ ಬೈಕನ್ನು ಸಾಕಷ್ಟು ಎತ್ತರಕ್ಕೆ ಸಜ್ಜುಗೊಳಿಸಿದೆ ಎಂಬ ಅಂಶವನ್ನು ಇದು ಪರಿಗಣಿಸುತ್ತಿದೆ,

ಉತ್ತಮ ಕಡಿಮೆ-ಮಟ್ಟದ ಟಾರ್ಕ್ ಇದ್ದರೂ, ಎರಡನೇ ಗೇರ್‌ನಲ್ಲಿರುವಾಗ ಗಂಟೆಗೆ 10 - 15 ಕಿ.ಮೀ ವೇಗದಲ್ಲಿ ಚಲಿಸಲು ಬೈಕ್ ಹೆಣಗಾಡುತ್ತದೆ. ದೊಡ್ಡ ವೇಗದ ಬ್ರೇಕರ್‌ಗಳ ಮೇಲೆ ಹೋಗುವಾಗ ರೈಡರ್‌ಗಳು ತಮ್ಮನ್ನು ಮೊದಲ ಗೇರ್‌ಗೆ ನಿರಂತರವಾಗಿ ಇಳಿಸಬೇಕಾಗುತ್ತದೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ರಸ್ತೆಯ ಮೇಲೆ ಸಮತೋಲಿತವಾಗಿದೆ ಎಂದು ಭಾವಿಸುತ್ತದೆ, ಸವಾರನು ಬೈಕಿನ 181 ಕೆಜಿ ತೂಕವನ್ನು ಅರಿತುಕೊಳ್ಳುವುದಿಲ್ಲ, ಹೈ ವೇಗಳಲ್ಲಿ ಉತ್ತಮ ರೋಡ್ ಗ್ರೀಪ್ ಅನ್ನು ಹೊಂದಿದೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ಸುಲಭವಾಗಿ ನಿರ್ವಹಿಸಬಲ್ಲದು ಮತ್ತು ಟ್ರಾಫಿಕ್ ಜಾಮ್ ಗಳಿಲ್ಲಿ ಕಷ್ಟಕರವಾಗುವುದಿಲ್ಲ. ತೀಕ್ಷ್ಣವಾದ ತಿರುವುಗಳನ್ನು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಅದರ ಕಾಂಪ್ಯಾಕ್ಟ್ 800ಎಂಎಂ ಅಗಲವನ್ನು ಹೊಂದಿದೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ಗುಂಡಿಗಳು ಮತ್ತು ಎತ್ತರದ ವೇಗದ ಬ್ರೇಕರ್‌ಗಳಲ್ಲಿ ಉತ್ತಮವಾಗಿ ಸಾಗುತ್ತದೆ. ಎರಡೂ ತುದಿಯಲ್ಲಿರುವ ಡಿಸ್ಕ್ ಬ್ರೇಕ್‌ಗಳು ಬೈಕನ್ನು ಅನ್ನು ತ್ವರಿತವಾಗಿ ನಿಲ್ಲಿಸುತ್ತವೆ.

ಇನ್ನು ಈ ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ ನಿಖರವಾದ ಮೈಲೇಜ್ ಅಂಕಿ ಅಂಶವನ್ನು ಪರೀಕ್ಷಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಪ್ರತಿ ಲೀಟರ್ ಗೆ 29 ಕಿ.ಮೀ ಮೈಲೇಜ್ ಅನ್ನು ನೀಡುತದೆ ಎಂದು ಪ್ರದರ್ಶಿಸುತ್ತಿತ್ತು.

ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ ಕುಳಿತುಕೊಳ್ಳುವ ಸ್ಥಾನವೂ ಸಹ ಆರಾಮದಾಯಕವಾಗಿದೆ. ಈ ಹೈನೆಸ್ ಸಿಬಿ350 ವಿಶಾಲವಾದ ರೈಡರ್ ಸೀಟ್ ಅನ್ನು ಹೊಂದಿದೆ. ಇದು ಆರಾಮವಾಗಿರುವ ದೀರ್ಘ ಪ್ರಯಾಣಕ್ಕಾಗಿ ಉತ್ತಮ ಪ್ರಮಾಣದ ಮೆತ್ತನೆಯನ್ನು ನೀಡುತ್ತದೆ. ಪಿಲಿಯನ್ ಪ್ರಯಾಣಿಕನ ಸೀಟ್ ಸಹ ಅಗಲವಾಗಿದೆ ಮತ್ತು ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ಇದು ಲಾಂಗ್ ಡ್ರೈವ್ ಹೋಗುವಾಗ ಹೆಚ್ಚಿನ ಪ್ರಯೋಜನವಾಗುತ್ತದೆ.

ವೆರಿಯೆಂಟ್, ಬಣ್ಣಗಳು ಮತ್ತು ಬೆಲೆ
ಹೊಸ ಹೋಂಡಾ ಹೈನೆಸ್ ಸಿಬಿ350 ಬೈಕ್ ಡಿಎಲ್ಎಕ್ಸ್ ಮತ್ತು ಡಿಎಲ್ಎಕ್ಸ್ ಪ್ರೊ ಎಂಬ ಎರಡು ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಇದರ ಡಿಎಲ್‌ಎಕ್ಸ್ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದೆ. ಈ ಬೈಕ್ ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್‌ನ ಇತ್ತೀಚಿಗೆ ಬಿಡುಗಡೆಗೊಂಡ ಮಿಟಿಯೊರ್ 350 ಮಾದರಿಗೆ ಹೋಂಡಾ ಹೈನೆಸ್ ಸಿಬಿ350 ಬೈಕ್ ನೇರವಾಗಿ ಪೈಪೋಟಿಯನ್ನು ನೀಡುತ್ತದೆ. ಇದಲ್ಲದೆ, ಹೋಂಡಾ ಹೈನೆಸ್ ಸಿಬಿ350 ಭಾರತದಲ್ಲ್ಲಿಬೆನೆಲ್ಲಿ ಇಂಪಿರಿಯ 400 ಬೈಕಿಗೂ ಪೈಪೋಟಿ ನೀಡುತ್ತದೆ.
Specs | Honda H'ness CB 350 | Royal Enfield Meteor 350 | Benelli Imperiale 400 |
Engine Displacement | 348.36cc | 349cc | 374cc |
Power | 20.8bhp @ 5500rpm | 20.2bhp @ 6100rpm | 20.7bhp @ 6000rpm |
Torque | 30Nm @ 3000rpm | 27Nm @ 4000rpm | 29Nm @ 3500rpm |
Gearbox | 5-Speed | 5-Speed | 5-Speed |
Kerb Weight | 181Kg | 191Kg | 205Kg |
Fuel Tank Capacity | 15-Litres | 15-Litres | 12-Litres |
Starting Price | Rs 1.86 Lakh | Rs 1.79 Lakh | Rs 1.99 Lakh |

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮಾರ್ಡನ್-ಕ್ಲಾಸಿಕ್ ಕ್ರೂಸರ್ ವಿಭಾಗದಲ್ಲಿ ಹೋಂಡಾ ಹೈನೆಸ್ ಸಿಬಿ350 ಬೈಕ್ ಖಂಡಿತವಾಗಿಯೂ ಅತ್ಯುತ್ತಮ ಕೊಡುಗೆಯಾಗಿದೆ. ನಿಜವಾದ ಹೋಂಡಾ ಶೈಲಿಯಲ್ಲಿರುವ ಹೈನೆಸ್ ಸಿಬಿ350 ಬೈಕ್ ಅತ್ಯುತ್ತಮ ಮಟ್ಟದ ಎಂಜಿನ್ ಪರಿಷ್ಕರಣೆಯನ್ನು ನೀಡುತ್ತದೆ. ಗೇರ್ ಶಿಫ್ಟ್‌ಗಳು ಸಹ ಸುಗಮವಾಗಿರುತ್ತವೆ, ಅಲ್ಲದೇ ಎಕ್ಸಾಸ್ಟ್ ನೋಟ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿರುತ್ತದೆ. ರಾಯಲ್ ಎನ್‌ಫೀಲ್ಡ್ ಅನ್ನು ಬಯಸದವರಿಗೆ ಹೋಂಡಾ ಹೈನೆಸ್ ಸಿಬಿ350 ಬೈಕ್ ಆಯ್ಕೆಯನ್ನು ಪರಿಗಣಿಸಬಹುದು. ಹೋಂಡಾ ಹೈನೆಸ್ ಸಿಬಿ350 ಬೈಕ್ ತನ್ನದೇ ಕೆಲವು ವಿಶೇಷತೆಗಳನ್ನು ಹೊಂದಿದೆ. ಹೋಂಡಾ ಹೈನೆಸ್ ಸಿಬಿ350 ಬೈಕನ್ನು ಬ್ರ್ಯಾಂಡ್‌ನ ಬಿಗ್ ವಿಂಗ್ ಡೀಲರುಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತಿದೆ.