TVS Ntorq 150 Review: ಟಿವಿಎಸ್ ಎನ್‌ಟಾರ್ಕ್ 150 ರಿವ್ಯೂ.. ಚಿನ್ನದಂತಹ ಸ್ಕೂಟರ್!
ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಟಿವಿಎಸ್ ಮೋಟಾರ್ (TVS Motor), ನೂತನ 'ಎನ್‌ಟಾರ್ಕ್ 150' ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಇದು ಹೈಪರ್-ಸ್ಪೋರ್ಟ್ ಮಾಡೆಲ್ ಆಗಿದೆ. ಕನಿಷ್ಠ ರೂ.1.19 ಲಕ್ಷ ಹಾಗೂ ಗರಿಷ್ಠ ರೂ.1.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಎನ್‌ಟಾರ್ಕ್ 150 ಮತ್ತು ಎನ್‌ಟಾರ್ಕ್ 150 ಟಿಎಫ್‌ಟಿ ಎಂಬ 2 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಬುಕ್ಕಿಂಗ್ ಶುರುವಾಗಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ವಿತರಣೆಗಳು ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.
ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ತಮಿಳುನಾಡಿನ ಹೊಸೂರಿನ ಹೊಚ್ಚ ಹೊಸ ಟಿವಿಎಸ್ ಎನ್‌ಟಾರ್ಕ್ 150 (TVS Ntorq 150) ಸ್ಕೂಟರ್ ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ನೂತನ ಸ್ಕೂಟರ್‌ನ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಎಲ್ಲ ವಿವರಗಳನ್ನು ತಿಳಿಯೋಣ.

ವಿನ್ಯಾಸ (Design):
ಈ ಟಿವಿಎಸ್ ಎನ್‌ಟಾರ್ಕ್ 150 ಉತ್ತಮವಾದ ವಿನ್ಯಾಸವನ್ನು ಪಡೆದಿದ್ದು, ಪ್ರತಿಯೊಬ್ಬರನ್ನು ತನ್ನತ್ತ ಆಕರ್ಷಿಸಿತ್ತದೆ. ಆದರೂ 'ಟಿವಿಎಸ್ ಎನ್‌ಟಾರ್ಕ್ 125'ಗೆ ಹೋಲುತ್ತದೆ. ತುಂಬಾ ಚೆನ್ನಾಗಿರುವ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್, ಹಝರ್ಡ್ ಲೈಟ್‌ಗಳು, ಅಗ್ರೆಸಿವ್ ಬಾಡಿ ಪ್ಯಾನೆಲ್‌ಗಳು, 3ಡಿ ಟಿವಿಎಸ್ ಲೋಗೋ '150' ಸಿಸಿಯನ್ನು ಸೂಚಿಸುವ ಡೆಕಾಲ್‌ಗಳು ಹಾಗೂ 12-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಸುತ್ತಳತೆ & ಬಣ್ಣಗಳು (Dimensions & Colors):
ಇದು ಬೃಹದಾಕಾರದ ಸ್ಕೂಟರ್ ಆಗಿದೆ. 1861 ಎಂಎಂ ಉದ್ದ, 740 ಎಂಎಂ ಅಗಲ ಮತ್ತು 1120 ಎಂಎಂ ಎತ್ತರ ಕೂಡ ಇದೆ. 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1285 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಹಾಗೂ ನೈಟ್ರೋ ಗ್ರೀನ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಕಾರ್ಯಕ್ಷಮತೆ (Performance):
ನೂತನ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 149.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನುಒಳಗೊಂಡಿದೆ. 13.2 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 14.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 40 ಕಿ.ಮೀ ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಸ್ಕೂಟರ್ ದೂರದ ಸ್ಥಳಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ 5.8 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ 104 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ವೈಶಿಷ್ಟ್ಯಗಳು (Features):
ಇದು ರೂಪಾಂತರಗಳಿಗೆ ತಕ್ಕಂತೆ ಎಲ್‌ಸಿಡಿ ಡಿಸ್‌ಪ್ಲೇ ಹಾಗೂ ಫುಲ್ ಟಿಎಫ್‌ಟಿ ಡಿಸ್‌ಪ್ಲೇ (ಕಾಲ್/ಮೆಸೇಜ್ ಅಲರ್ಟ್ & ವಾಟ್ಸಪ್ ನೋಟಿಫಿಕೇಶನ್‌ನ್ನು ವೀಕ್ಷಿಸಬಹುದು) ಹೊಂದಿದೆ. ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸ್ಟ್ರೀಟ್ ಮತ್ತು ರೇಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 22 ಲೀಟರ್ ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಪಡೆದಿದೆ. 115 ಕೆಜಿ ತೂಕವು ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಹೊಸ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್, ಸವಾರರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್ ಹಾಗೂ ಹಿಂಭಾಗ (ರೇರ್) ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಂಗಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಚಾಲನಾ ಅನುಭವ (Raiding Impressions):
ಈ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಎಲ್ಲ ವಿಧದ ರಸ್ತೆಯಲ್ಲಿಯೂ ಸುಲಭವಾಗಿ ಚಲಿಸಬಲ್ಲದು. ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕ್‌ಗಳು ಅತ್ಯುತ್ತಮ ಕೆಲಸ ನಿರ್ವಹಿಸಿದವು. ಇದರಲ್ಲಿರುವ ಟೈರ್‌ಗಳು ಸಹ ತುಂಬಾ ಚೆನ್ನಾಗಿದ್ದು, ರಸ್ತೆ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಲು ಸಹಾಯಕವಾಗಿವೆ.
ವಿಶೇಷವಾಗಿ ಈ ಸ್ಕೂಟರ್‌ನ ಏರೋಡೈನಮಿಕ್ ವಿನ್ಯಾಸವು ಹೆಚ್ಚಿನ ವೇಗದಲ್ಲಿರುವಾಗಲು ಸಹ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ದಾಟಿದ ಮೇಲೆ ಬೈಕ್‌ನ್ನು ಓಡಿಸಿದಂತೆ ಭಾಸವಾಗುತ್ತಿತ್ತು. 'ರೇಸ್' ರೈಡಿಂಗ್ ಮೋಡ್ ಗರಿಷ್ಠ ವೇಗದಲ್ಲಿ ಹೋಗುವುದಕ್ಕೆ ನೆರವಾಗುತ್ತದೆ. ಅದೇ ರೀತಿಯಲ್ಲಿ ಸ್ಟ್ರೀಟ್ ರೈಡಿಂಗ್ ಮೋಡ್ ನಗರ ಪ್ರಯಾಣದ ವೇಳೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಒಟ್ಟಾರೆ ಅಭಿಪ್ರಾಯ (Overall Opinion):
ನೂತನ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್, ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ನಗರ ಹಾಗೂ ಹೆದ್ದಾರಿಯ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಇದಕ್ಕೆ ಯಮಹಾ ಏರೋಕ್ಸ್ 155 ಹಾಗೂ ಹೀರೋ ಜೂಮ್ 160 ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ನೀವು ಸ್ಪರ್ಧಾತ್ಮಕ ಬೆಲೆಯಲ್ಲಿ '150 ಸಿಸಿ' ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದರೆ, ಇದು ಅತ್ಯುತ್ತಮವಾದ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








