ಬಜೆಟ್ ಬೆಲೆ, ಅಧಿಕ ರೇಂಜ್ ಹೊಂದಿರುವ ಓಲಾ ಎಸ್1 ಪ್ರೊ ಸ್ಕೂಟರ್ ರಿವ್ಯೂ

ಕೆಲವೇ ಕೆಲವು ಸ್ಕೂಟರ್ ಗಳು ಮಾತ್ರ ಮುಂಗಡ ಬುಕ್ಕಿಂಗ್ ನಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತವೆ. ಅಂತಹ ಸ್ಕೂಟರ್ ನಲ್ಲಿ Ola S1 ಹಾಗೂ Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಗಳು ಸೇರಿವೆ. ಈ ಸ್ಕೂಟರ್ ಗಳನ್ನು ಖರೀದಿಸಲು ಲಕ್ಷಾಂತರ ಜನರು ಆಸಕ್ತಿ ತೋರಿದ್ದಾರೆ. ಈಗಾಗಲೇ ಹಲವಾರು ಜನರು ಈ ಎಲೆಕ್ಟ್ರಿಕ್ ಸ್ಕೂಟರಿನ ವಿತರಣೆಯನ್ನು ಸಹ ಪಡೆದಿದ್ದಾರೆ.

ಓಲಾ ಎಸ್1 ಪ್ರೊ ರಿವ್ಯೂ

ಓಲಾ ಎಲೆಕ್ಟ್ರಿಕ್ ಸ್ಕೂಟರಿನ ವಿಶೇಷತೆಗಳೇನು, ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಇತ್ತೀಚಿಗೆ ನಾವು ಬೆಂಗಳೂರಿನ ಹೊರವಲಯದಲ್ಲಿ ಕಂಪನಿಯು ಆಯೋಜಿಸಿದ್ದ ಮೀಡಿಯಾ ಎಕ್ಸ್ ಪಿರಿಯನ್ಸ್ ರೈಡ್‌ನಲ್ಲಿ ಈ ಸ್ಕೂಟರ್ ಚಾಲನೆ ಮಾಡಿದೆವು. ಈ ಸ್ಕೂಟರ್ ಚಾಲನೆಯ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಓಲಾ ಎಸ್1 ಪ್ರೊ ರಿವ್ಯೂ

Ola S1 Pro ವಿಶೇಷತೆಗಳು

Ola S1 Pro 3.97 ಕ.ವ್ಯಾ ಬ್ಯಾಟರಿ ಪ್ಯಾಕ್‌ ಹೊಂದಿದೆ. ಈ ಬ್ಯಾಟರಿ 8.5 ಕಿ.ವ್ಯಾ ಗರಿಷ್ಠ ವಿದ್ಯುತ್ ಉತ್ಪಾದನೆ ಹಾಗೂ 5.5 ಕಿ.ವ್ಯಾನಲ್ಲಿ ರೇಟ್ ಮಾಡಲಾದ ವಿದ್ಯುತ್ ಉತ್ಪಾದನೆಯನ್ನು ಹೊಂದಿದೆ. ಶಾಫ್ಟ್‌ನಲ್ಲಿ ಈ ಮೋಟರ್ 58 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

ಓಲಾ ಕಂಪನಿಯ ಪ್ರಕಾರ ಈ ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಹೋಮ್ ಚಾರ್ಜರ್ ಮೂಲಕ 6 ಗಂಟೆ 30 ನಿಮಿಷಗಳಲ್ಲಿ 0 - 100% ವರೆಗೆ ಚಾರ್ಜ್ ಮಾಡಬಹುದು. Ola ದೇಶಾದ್ಯಂತ ವೇಗದ ಚಾರ್ಜರ್‌ಗಳನ್ನು ಸ್ಥಾಪಿಸಲಿದೆ. ಈ ಹೈಪರ್‌ ಚಾರ್ಜರ್‌ಗಳು ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡುತ್ತವೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಚಾರ್ಜರ್ ಗಳು ಕೇವಲ 18 ನಿಮಿಷಗಳಲ್ಲಿ 75 ಕಿ.ಮೀ ಚಲಿಸುವಷ್ಟು ಚಾರ್ಜ್ ಮಾಡುತ್ತವೆ. Ola ಹೇಳುವಂತೆ S1 Pro ಕೇವಲ 3 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಿದರೆ, 60 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

Ola S1 Pro ರೈಡಿಂಗ್ ಇಂಪ್ರೆಷನ್ಸ್

ನಾವು ಎಲೆಕ್ಟ್ರಿಕ್ ಸ್ಕೂಟರಿನ ವಿದ್ಯುತ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಬಯಸಿದೆವು. ಇದರ ಕಾರ್ಯಕ್ಷಮತೆಯು ನಮಗೆ ಅಚ್ಚರಿಯನ್ನುಂಟು ಮಾಡಿತು. ಈ ಸ್ಕೂಟರ್ ಪ್ರತಿ ಗಂಟೆಗೆ 115 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಈ ಸ್ಕೂಟರ್ ಚಾಲನೆ ವೇಳೆ ನಾವು 90 ಕಿ.ಮೀ ವೇಗವನ್ನು ಮುಟ್ಟುವಲ್ಲಿ ಯಶಸ್ವಿಯಾದೆವು.

ಓಲಾ ಎಸ್1 ಪ್ರೊ ರಿವ್ಯೂ

ಸಾಮಾನ್ಯ ಮೋಡ್ ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ 0 - 30 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಸಾಮಾನ್ಯ ರೈಡ್ ಮೋಡ್‌ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 180 ಕಿ.ಮೀಗಳಷ್ಟು ದೂರ ಚಲಿಸುತ್ತದೆ ಎಂದು ಹೇಳಲಾಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಎಲೆಕ್ಟ್ರಿಕ್ ಸ್ಕೂಟರ್ ನಾರ್ಮಲ್, ಸ್ಪೋರ್ಟ್ಸ್ ಹಾಗೂ ಹೈಪರ್ ಎಂಬ 3 ರೈಡ್ ಮೋಡ್‌ಗಳನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ರಿವರ್ಸ್ ಮೋಡ್ ಸಹ ನೀಡಲಾಗಿದೆ. ಈ ಮೋಡ್‌ ಅನ್ನು ಬಟನ್‌ ಅಥವಾ ಸ್ವಿಚ್‌ಗಿಯರ್ ಮೂಲಕ ಬಳಸಬಹುದು.

ಓಲಾ ಎಸ್1 ಪ್ರೊ ರಿವ್ಯೂ

ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಸಿಂಗಲ್ ಸೈಡ್ ಫೋರ್ಕ್ ಹಾಗೂ ಹಾರಿಜಾಂಟಲ್ ಮೌಂಟೆಡ್ ಮೊನೊಶಾಕ್ ನೀಡಲಾಗಿದೆ. ಸಿಂಗಲ್ ಸೈಡ್ ಫೋರ್ಕ್ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉತ್ತಮವಾಗಿ ನಿಭಾಯಿಸುತ್ತದೆ. ಬ್ರೇಕಿಂಗ್ ಗಳಿಗಾಗಿ ಈ ಎಲೆಕ್ಟ್ರಿಕ್ ಸ್ಕೂಟರಿನ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 180 ಎಂಎಂ ಡಿಸ್ಕ್ ನೀಡಲಾಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಬ್ರೇಕ್‌ಗಳು ತೀಕ್ಷ್ಣವಾಗಿ ಹಾಗೂ ಶಕ್ತಿಯುತವಾಗಿವೆ. ಆದರೂ ಈ ಸ್ಕೂಟರಿನ ಬೆಲೆ ಹಾಗೂ ವೇಗವನ್ನು ಗಮನಿಸಿದಾಗ ಈ ಸ್ಕೂರರಿನಲ್ಲಿ ಎಬಿಎಸ್ ನೀಡಬೇಕಾಗಿತ್ತು ಎಂದು ಅನಿಸದೇ ಇರಲಾರದು. Ola ಕಂಪನಿಯು ಈ ಸ್ಕೂಟರಿನಲ್ಲಿ ಮತ್ತೊಂದು ಸುರಕ್ಷತಾ ಫೀಚರ್ ಅಳವಡಿಸಿದೆ.

ಓಲಾ ಎಸ್1 ಪ್ರೊ ರಿವ್ಯೂ

ಅದು ಬ್ರೇಕ್ ಲಿವರ್‌ನಲ್ಲಿ ಸ್ವಲ್ಪ ಟಚ್ ಪತ್ತೆಹಚ್ಚಿದ ನಂತರ ಥ್ರೊಟಲ್ ಅನ್ನು ಸಂಪೂರ್ಣವಾಗಿ ಕತ್ತರಿಸುತ್ತದೆ. ಇದು ಅನಪೇಕ್ಷಿತ ವೇಗವರ್ಧನೆಯನ್ನು ತಡೆಗಟ್ಟಲು ನೆರವಾಗುತ್ತದೆ. ಒಟ್ಟಾರೆಯಾಗಿ Ola S1 Pro ಮೋಜಿನ ಅನುಭವವನ್ನು ನೀಡುತ್ತದೆ. ಆದರೂ ಈ ಎಲೆಕ್ಟ್ರಿಕ್ ಸ್ಕೂಟರ ಅನ್ನು ನಾವು ನೈಜ ಜಗತ್ತಿನಲ್ಲಿ ಪರೀಕ್ಷಿಸಲು ಕಾಯುತ್ತಿದ್ದೇವೆ.

ಓಲಾ ಎಸ್1 ಪ್ರೊ ರಿವ್ಯೂ

Ola S1 Pro ಫೀಚರ್ ಗಳು ಹಾಗೂ ತಂತ್ರಜ್ಞಾನ

Ola S1 Pro ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಫೀಚರ್ ಗಳಲ್ಲಿ ಹಲವು ಫೀಚರ್ ಗಳನ್ನು ಸೆಗ್ ಮೆಂಟಿನಲ್ಲಿ ಮೊದಲ ಬಾರಿ ನೀಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅಪಾರ ಸಂಖ್ಯೆಯ ಬುಕ್ಕಿಂಗ್ ಪಡೆಯಲು ಈ ಫೀಚರ್ ಗಳು ಮಹತ್ವದ ಪಾತ್ರವನ್ನು ವಹಿಸಿವೆ. ಭಾರತೀಯರು ಬಳಸಲಿ ಅಥವಾ ಬಳಸದಿರಲಿ ಸಾಕಷ್ಟು ಫೀಚರ್ ಗಳನ್ನು ಹೊಂದಲು ಇಷ್ಟಪಡುತ್ತೇವೆ.

ಓಲಾ ಎಸ್1 ಪ್ರೊ ರಿವ್ಯೂ

Ola S1 Pro ಡಿಜಿಟಲ್ ಕೀ, ಮೂಡ್‌ ಹಾಗೂ ವಿಜೆಟ್‌ಗಳಂತಹ ಫೀಚರ್ ಗಳನ್ನು ಹೊಂದಿದೆ. ಅವುಗಳನ್ನು ಸವಾರರು ತಮ್ಮ ಮನಸ್ಥಿತಿಗೆ ತಕ್ಕಂತೆ ಬಳಸಬಹುದು. ಇದರ ಜೊತೆಗೆ ಇನ್ ಬಿಲ್ಟ್ ನ್ಯಾವಿಗೇಷನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ವಾಯ್ಸ್ ಕಂಟ್ರೋಲ್, ಮಲ್ಟಿ ರೈಡರ್ ಪ್ರೊಫೈಲ್‌, ಸ್ಕೂಟರ್ ಟ್ರ್ಯಾಕಿಂಗ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಅಂಶಗಳನ್ನು ದೂರದಿಂದಲೇ ಆಪ್ ಸ್ಟೋರ್ ಹಾಗೂ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನಿಯಂತ್ರಿಸಬಹುದು. ಅಂದ ಹಾಗೆ ನಾವು ಪ್ರಿ ಪ್ರೊಡಕ್ಷನ್ ಮಾದರಿಯನ್ನು ಚಾಲನೆ ಮಾಡಿದೆವು. ಪರೀಕ್ಷೆಯ ಸಮಯದಲ್ಲಿ ಓಲಾದ ಈ ಮಾದರಿಗಳು ಉತ್ಪಾದನೆಗೆ ಹತ್ತಿರದಲ್ಲಿವೆ ಎಂದು ತಿಳಿದು ಬಂತು.

ಓಲಾ ಎಸ್1 ಪ್ರೊ ರಿವ್ಯೂ

ಈ ಸ್ಕೂಟರಿನಲ್ಲಿರುವ 7 ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇ ಬಳಸಲು ಸುಲಭವಾಗಿದೆ. ನೆಟ್‌ವರ್ಕ್ ಲಭ್ಯತೆಯನ್ನು ಅವಲಂಬಿಸಿ ನ್ಯಾವಿಗೇಶನ್ ಸಾಕಷ್ಟು ವೇಗವಾಗಿ ಲೋಡ್ ಎಲೆಕ್ಟ್ರಿಕ್ ಲಾಕ್/ಅನ್‌ಲಾಕ್, ಎಲೆಕ್ಟ್ರಿಕ್ ಸೀಟ್ ಓಪನಿಂಗ್ ಮುಂತಾದ ಇತರ ಫೀಚರ್ ಗಳು ಯಾವುದೇ ತೊಂದರೆ ಇಲ್ಲದೇ ಕಾರ್ಯನಿರ್ವಹಿಸುತ್ತವೆ.

ಓಲಾ ಎಸ್1 ಪ್ರೊ ರಿವ್ಯೂ

ಸ್ವಿಚ್ ಗೇರ್ ಸಹ ಅದ್ಭುತವಾಗಿದೆ. ಇದು ಸರಿಯಾದ ಸ್ವಿಚ್‌ಗಳಿಗಿಂತ ಕೀಪ್ಯಾಡ್‌ನಂತೆ ಭಾಸವಾಗುತ್ತದೆ. ಇವೆಲ್ಲವೂ ವಾಸ್ತವವಾಗಿ ಸಾಫ್ಟ್ ಪ್ರೆಸ್ ಬಟನ್‌ಗಳಾಗಿವೆ. ಬಟನ್‌ಗಳು ಗ್ಯಾಜೆಟ್ ಅನ್ನು ನಿರ್ವಹಿಸುತ್ತಿರುವಂತೆ ಅನಿಸುತ್ತದೆ. ವಾಸ್ತವವಾಗಿ, ಈ ಸ್ಕೂಟರ್ ಹಲವು ವಿಧಗಳಲ್ಲಿ ಗ್ಯಾಜೆಟ್ ಆಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಬಟನ್‌ಗಳ ಮೂಲಕ ಸವಾರರು ಕರೆಗಳನ್ನು ಸ್ವೀಕರಿಸಬಹುದು/ತಿರಸ್ಕರಿಸಬಹುದು, ಸಂಗೀತವನ್ನು ನಿಯಂತ್ರಿಸಬಹುದು, ರಿವರ್ಸ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು/ನಿಷ್ಕ್ರಿಯಗೊಳಿಸಬಹುದು ಅಥವಾ ಕ್ರೂಸ್ ಕಂಟ್ರೋಲ್ ಸಹ ಮಾಡಬಹುದು.

ಓಲಾ ಎಸ್1 ಪ್ರೊ ರಿವ್ಯೂ

ಇದು ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಧ್ವನಿಯನ್ನು ಸಹ ಉತ್ಪಾದಿಸುತ್ತದೆ. ಈ ಧ್ವನಿಯನ್ನು ಎರಡು ಆನ್ ಬೋರ್ಡ್ ಸ್ಪೀಕರ್‌ಗಳ ಮೂಲಕ ಉತ್ಪಾದಿಸಲಾಗುತ್ತದೆ. ಸವಾರ ಆಯ್ಕೆ ಮಾಡುವ ಮನಸ್ಥಿತಿಯು ಅದು ಯಾವ ರೀತಿಯ ಧ್ವನಿಯನ್ನು ಉತ್ಪಾದಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಈ ಸ್ಪೀಕರ್‌ಗಳ ಮೂಲಕ ಕರೆಗಳನ್ನು ಸ್ವೀಕರಿಸಬಹುದು.

ಓಲಾ ಎಸ್1 ಪ್ರೊ ರಿವ್ಯೂ

ಓಲಾ ಕಂಪನಿಯು ಭವಿಷ್ಯದ ನವೀಕರಣವು ಈ ಸ್ಪೀಕರ್‌ಗಳಲ್ಲಿ ಸಂಗೀತವನ್ನು ಪ್ಲೇ ಮಾಡಲು ಅನುಮತಿ ನೀಡುವುದಾಗಿ ತಿಳಿಸಿದೆ. ಕ್ರೂಸ್ ಕಂಟ್ರೋಲ್ ಈ ಸ್ಕೂಟರಿನಲ್ಲಿರುವ ಮತ್ತೊಂದು ಫೀಚರ್ ಆಗಿದ್ದು, ವಿತರಣೆ ಆರಂಭವಾಗುವ ಮುನ್ನ ಸ್ಕೂಟರ್‌ಗಳಿಗೆ ನವೀಕರಣವಾಗಿ ನೀಡುತ್ತದೆ. Ola S1 Pro ಎಲೆಕ್ಟ್ರಿಕ್ ಸ್ಕೂಟರ್ ತನ್ನಲಿರುವ ಫೀಚರ್ ಗಳಿಂದ ಇತರ ವಾಹನ ಸವಾರರನ್ನು ತನ್ನತ್ತ ಸೆಳೆಯುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

Ola S1 Pro ವಿನ್ಯಾಸ ಹಾಗೂ ಶೈಲಿ

Ola S1 Pro ಮುಂಭಾಗದಲ್ಲಿ ವಿಶಿಷ್ಟವಾದ ಹೆಡ್‌ಲ್ಯಾಂಪ್ ಹೊಂದಿದ್ದು, ದೂರದಿಂದಲೂ ತಕ್ಷಣ ಗುರುತಿಸಬಹುದಾಗಿದೆ. ಇದು ಎರಡು ಎಲ್ಇಡಿ ಘಟಕಗಳಿಗೆ ಬಾಹ್ಯ ರೇಖೆಯಾಗಿ ಎಲ್ಇಡಿ ಡಿಆರ್‌ಎಲ್ ಗಳನ್ನು ಪಡೆಯುತ್ತದೆ. ಇದು ಹೈ ಹಾಗೂ ಲೋ ಬೀಮ್ ಗಳನ್ನು ನಿರ್ವಹಿಸುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

ಹೆಡ್‌ಲ್ಯಾಂಪ್‌ನ ಸುತ್ತ ಇರುವ ಪ್ಯಾನೆಲ್ ಮೇಲೆ ತಿಳಿಸಲಾದ ಸ್ವಿಚ್‌ಗಿಯರ್ ಹಾಗೂ ಶಾಟರ್ ಪ್ರೂಫ್ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಮುಂಭಾಗದಲ್ಲಿರುವ ಏಪ್ರನ್ ದೂರದಿಂದ ಸಂಪೂರ್ಣವಾಗಿ ಬಾಗಿದಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಅದರ ಮೇಲೆ ಕೆಲವು ವಿನ್ಯಾಸ ರೇಖೆಗಳನ್ನು ನೀಡಲಾಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಫುಟ್‌ಬೋರ್ಡ್‌ನಲ್ಲಿರುವ ಕಿಂಕ್ ಹಳೆಯ ಸ್ಕೂಟರ್‌ಗಳನ್ನು ನೆನಪಿಸುತ್ತದೆ. ಪಾದವನ್ನು ಇರಿಸಲು ರಬ್ಬರ್ ಇನ್‌ಸರ್ಟ್‌ಗಳನ್ನು ನೀಡಲಾಗಿದೆ. ನಾವು ಒಂದೆರಡು ಆಡ್ ಪಾನೆಲ್ ಗ್ಯಾಪ್ ಗುರುತಿಸಿದೆವು. ಇವುಗಳು ಪ್ರೀ ಪ್ರೊಡಕ್ಷನ್ ಸ್ಕೂಟರ್‌ಗಳಾದ್ದರಿಂದ ಈ ಸಣ್ಣ ಸಮಸ್ಯೆಗಳನ್ನು ಉತ್ಪಾದನಾ ಮಾದರಿಗಳಲ್ಲಿ ಸರಿ ಪಡಿಸಲಾಗುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಸ್ಕೂಟರಿನಲ್ಲಿರುವ ಸೀಟ್ ಅಲಂಕಾರಿಕವಾಗಿದ್ದು, ನಾವು ಇಡುವರೆಗೂ ಯಾವುದೇ ಸ್ಕೂಟರ್‌ನಲ್ಲಿ ನೋಡಿರುವುದಕ್ಕಿಂತ ಭಿನ್ನವಾಗಿ ಅಗಲವಾಗಿದೆ. ಇದು ಪಿಲಿಯನ್ ರೈಡರ್‌ಗೆ ಹೆಚ್ಚಿನ ಆರಾಮವನ್ನು ನೀಡುತ್ತದೆ. ಸೀಟ್ ಕೆಳಗೆ 36 ಲೀಟರ್‌ ಸ್ಟೋರೆಜ್ ಸ್ಪೇಸ್ ನೀಡಲಾಗಿದೆ.

ಓಲಾ ಎಸ್1 ಪ್ರೊ ರಿವ್ಯೂ

ಎರಡು ಅರ್ಧ ಮುಖದ ಹೆಲ್ಮೆಟ್‌ಗಳನ್ನು ಇಲ್ಲಿ ಆರಾಮವಾಗಿ ಇಡಬಹುದು. ಚಾರ್ಜರ್ ಅನ್ನು ಸಹ ಸೀಟಿನ ಕೆಳಗೆ ಇರಿಸಬಹುದು. ಇಂಡಿಕೇಟರ್'ಗಳು ಹಾಗೂ ಟೈಲ್ ಟ್ಯಾಂಪ್ ಸ್ಲಿಮ್ ಆಗಿ, ನಯವಾಗಿ ಕಾಣುತ್ತವೆ. ಕಲರ್ ಫಿನಿಷಿಂಗ್ ಅದ್ಭುತವಾಗಿದ್ದು, ನೀವು ಆಯ್ಕೆ ಮಾಡುವ ಯಾವುದೇ ಬಣ್ಣದಲ್ಲಿ ಸ್ಕೂಟರ್ ಉತ್ತಮವಾಗಿ ಕಾಣುತ್ತದೆ.

ಓಲಾ ಎಸ್1 ಪ್ರೊ ರಿವ್ಯೂ

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹತ್ತು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಾವು ಮಾರ್ಶ್ ಮೆಲ್ಲೊ ಬಣ್ಣ ಹೊಂದಿದ್ದ ಸ್ಕೂಟರ್ ಅನ್ನು ಚಾಲನೆ ಮಾಡಿದೆವು. ನಿಯೋ ಬ್ಲೂ ಹಾಗೂ ಮಿಡ್‌ನೈಟ್ ಬ್ಲೂ ಬಣ್ಣವನ್ನು ಹೊಂದಿರುವ ಸ್ಕೂಟರ್ ಗಳು ಉತ್ತಮವಾಗಿ ಕಾಣುತ್ತವೆ ಎಂಬುದು ನಮ್ಮ ಅಭಿಪ್ರಾಯ.

ಓಲಾ ಎಸ್1 ಪ್ರೊ ರಿವ್ಯೂ

ಈ ಎಲೆಕ್ಟ್ರಿಕ್ ಸ್ಕೂಟರ್ 10 ಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಸಿಂಗಲ್ ಸೈಡ್ ಫೋರ್ಕ್ ಕೆಳಭಾಗದಲ್ಲಿ ವಿಸ್ತರಣೆಯನ್ನು ಹೊಂದಿದ್ದು ಮೊದಲ ನೋಟದಲ್ಲಿ ಪ್ಲಾಸ್ಟಿಕ್ ಕವರ್ ನಂತೆ ಕಾಣುತ್ತದೆ. ಆದರೆ ಇದು ಮೆಟಲ್ ನಿಂದ ಮಾಡಲ್ಪಟ್ಟಿದ್ದು, ಸಸ್ಪೆಂಷನ್ ಸಿಸ್ಟಂ ಲೋಡ್ ಬೇರಿಂಗ್'ಗೆ ಸೇರಿದೆ.

ಓಲಾ ಎಸ್1 ಪ್ರೊ ರಿವ್ಯೂ

ರೇರ್ ಮೊನೊಶಾಕ್ ಅನ್ನು ಅಂದವಾಗಿ ಸಂಯೋಜಿಸಲಾಗಿದ್ದು, ಪವರ್‌ಟ್ರೇನ್‌ನ ಭಾಗವಾಗಿ ಕಾಣುತ್ತದೆ. ಈ ಎಲ್ಲಾ ಅಂಶಗಳಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮವಾಗಿ ಕಾಣುವ ಸ್ಕೂಟರ್‌ಗಳಲ್ಲಿ ಒಂದಾಗಿದೆ ಎಂದು ಸುಲಭವಾಗಿ ಹೇಳಬಹುದು.

ಓಲಾ ಎಸ್1 ಪ್ರೊ ರಿವ್ಯೂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಸಾಹವನ್ನು ಉಂಟು ಮಾಡುವ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಿರುವ ಕಾರಣಕ್ಕೆ ಓಲಾ ಕಂಪನಿಗೆ ಪ್ರಶಂಸೆ ಸಲ್ಲಿಸಬೇಕು. S1 Pro ಎಲೆಕ್ಟ್ರಿಕ್ ಸ್ಕೂಟರ್ ತಂತ್ರಜ್ಞಾನದ ವಿಷಯದಲ್ಲಿ ಅತ್ಯುತ್ತಮವಾದುದನ್ನು ಹೊಂದಿದೆ. ಜೊತೆಗೆ ಸಾಕಷ್ಟು ಆಕರ್ಷಕವಾಗಿದೆ. ನಾವು ಸಾರ್ವಜನಿಕ ರಸ್ತೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿ ಅದರ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಲಿದ್ದೇವೆ ಅದುವರೆಗೂ ಕಾದು ನೋಡಿ.

Most Read Articles

Kannada
English summary
Ola s1 pro electric scooter review specifications riding features and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X