TVS Apache RR 310 Review: ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ರಿವ್ಯೂ.. ಯುವಕರಿಗೆ ಖಂಡಿತ ಇಷ್ಟವಾಗುತ್ತೆ!

ತಮಿಳುನಾಡು ಮೂಲದ ಟಿವಿಎಸ್ ಮೋಟಾರ್ (TVS Motor), ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2017ರಲ್ಲಿ ಜರ್ಮನಿಯ ಬಿಎಂಡಬ್ಲ್ಯೂ ಮೊಟೊರಾಡ್ (BMW Motorrad) ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತ್ತು. ಇವೆರೆಡು ಕಂಪನಿಗಳ ಸಹಭಾಗಿತ್ವದಲ್ಲಿ ಅಪಾಚೆ ಆರ್‌ಆರ್‌ 310 (Apache RR 310) ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇತ್ತೀಚೆಗೆ, ಬಹಳಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ 2024ರ ನವೀಕರಿಸಿದ ಅಪಾಚೆ ಆರ್‌ಆರ್‌ 310 ಬೈಕ್‌ನ್ನು ಮಾರಾಟಕ್ಕೆ ತರಲಾಗಿದೆ. ನಮಗೆ ಈ ಮೋಟಾರ್‌ಸೈಕಲ್‌ ಟೆಸ್ಟ್ ರೈಡ್ (ಪರೀಕ್ಷಾರ್ಥ ಸಂಚಾರ) ಮಾಡುವುದಕ್ಕೆ ಕಂಪನಿಯು ಕೊಯಮತ್ತೂರಿಗೆ ಆಹ್ವಾನಿಸಿತ್ತು. ಬನ್ನಿ.. ನೂತನ ಬೈಕ್ ಹೇಗಿದೆ ಎಂಬುದನ್ನು ತಿಳಿಯೋಣ.

ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ನಲ್ಲಿ ಏನಿದೆ ಬದಲಾವಣೆ: ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್‌ಗೆ ಕೆಲವೊಂದು ಸಣ್ಣ - ಪುಟ್ಟ ಮಾರ್ಪಾಡುಗಳನ್ನು ಮಾಡಿರುವುದು ಬಿಟ್ಟರೆ, ಒಟ್ಟಾರೆ ವಿನ್ಯಾಸದಲ್ಲಿ (ಡಿಸೈನ್) ಅಷ್ಟಾಗಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಬಹುತೇಕ ಹಳೆಯ 'ಅಪಾಚೆ ಆರ್‌ಆರ್‌ 310' ಮಾದರಿಗೆ (ಮಾಡೆಲ್) ಹೋಲಿಕೆಯಾಗುತ್ತದೆ. ವಿಶೇಷವಾಗಿ ನವೀನವಾಗಿರುವ ಬಾಂಬರ್ ಗ್ರೇ ಬಣ್ಣದ (ಕಲರ್) ಆಯ್ಕೆಯನ್ನು ಪಡೆದಿದೆ.

TVS Apache RR 310 Review Specs Riding Impressions Design Features Details

ಇದರೊಟ್ಟಿಗೆ, ಹೊಸ ಮೋಟಾರ್‌ಸೈಕಲ್‌ನ ಸೈಡ್‌ನಲ್ಲಿರುವ (ಬದಿ) 'ಅಪಾಚೆ' ಹೆಸರಿನ ಡಿಕಾಲ್‌ಗಳು (ಒಂದು ರೀತಿಯ ಗ್ರಾಫಿಕ್ಸ್) ದೊಡ್ಡ ಗಾತ್ರದಲ್ಲಿವೆ. ಟ್ರಾನ್ಸ್‌ಪರೆಂಟ್ ಕ್ಲಚ್ ಕವರ್ ಕೂಡ ಪಡೆದಿದೆ. ಹೊಸದಾಗಿರುವ ವಿಂಗ್‌ಲೆಟ್ಸ್‌ನ್ನು ಹೊಂದಿದ್ದು, ಇದು ರಸ್ತೆಯಲ್ಲಿ ಬೈಕ್ ಚಲಿಸುವಾಗ ಎದುರಾಗುವ ಗಾಳಿಯ ಒತ್ತಡವನ್ನು ಕಡಿಮೆಗೊಳಿಸಿ, ಗಟ್ಟಿಯಾದ ಹಿಡಿತವನ್ನು ಒದಗಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ಶಕ್ತಿಯುತವಾಗಿರುವ 312.2 ಸಿಸಿ ಲಿಕ್ವಿಡ್ - ಕೂಲ್ಡ್, ಸಿಂಗಲ್ - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಹಿಂದಿನ ಅಪಾಚೆಗೆ ಹೋಲಿಕೆ ಮಾಡಿದರೆ, ಸಾಕಷ್ಟು ಉತ್ತಮವಾಗಿದೆ. 13% ದೊಡ್ಡದಾಗಿರುವ ಏರ್‌ಬಾಕ್ಸ್‌ನಿಂದಾಗಿ ಎಂಜಿನ್ ಸರಾಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

TVS Apache RR 310 Review Specs Riding Impressions Design Features Details

ಈ ಮೋಟಾರ್‌ಸೈಕಲ್‌, ಸ್ಪೋರ್ಟ್ಸ್ & ಟ್ರ್ಯಾಕ್ ರೈಡಿಂಗ್ ಮೋಡ್‌ನಲ್ಲಿ 9,800 ಆರ್‌ಪಿಎಂನಲ್ಲಿ 37.5 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,900 ಆರ್‌ಪಿಎಂನಲ್ಲಿ 29 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. ಅರ್ಬೆನ್ & ರೈನ್ ರೈಡಿಂಗ್ ಮೋಡ್‌ನಲ್ಲಿ 7,600 ಆರ್‌ಪಿಎಂನಲ್ಲಿ 29.5 ಅಶ್ವ ಶಕ್ತಿ ಹಾಗೂ 6,700 ಆರ್‌ಪಿಎಂನಲ್ಲಿ 26.5 ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 (TVS Apache RR 310) ಬೈಕ್‌ನ ಎಲ್ಲ ರೂಪಾಂತರಗಳು (ವೇರಿಯೆಂಟ್), 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿವೆ. ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಹೊರತುಪಡಿಸಿ, ಉಳಿದಿಲ್ಲ ರೂಪಾಂತರಗಳು ಬೈ ಡೈರೆಕ್ಷನಲ್ ಕ್ವಿಕ್ ಶಿಫ್ಟರ್‌ನ್ನು ಒಳಗೊಂಡಿವೆ.

TVS Apache RR 310 Review Specs Riding Impressions Design Features Details

ಈ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಲೂಟೂತ್ ಕನೆಕ್ಟಿವಿಟಿ & ನ್ಯಾವಿಗೇಷನ್‌ನೊಂದಿಗೆ ಟಿಎಫ್‌ಟಿ ಡಿಸ್ಪ್ಲೇ, ಸ್ಲಿಪ್ಪರ್ & ಅಸಿಸ್ಟ್ ಕ್ಲಚ್, ಹೀಟೇಡ್ & ಕೋಲ್ಡ್ ಸೀಟ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್, 164 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.74 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ & ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟಬಲ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಹ್ಯಾಂಡಲ್ ಬಾರ್‌ನ ಎರಡು ತುದಿಗಳಲ್ಲಿಯೂ ಡಿಸ್ಕ್ ಬ್ರೇಕ್‌ ಆಯ್ಕೆಯನ್ನು ಪಡೆದಿದೆ.

TVS Apache RR 310 Review Specs Riding Impressions Design Features Details

ಚಾಲನಾ ಅನುಭವ: ನಮಗೆ ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದನ್ನು ಆರಾಮದಾಯಕವಾಗಿ ಕುಳಿತುಕೊಂಡು ಓಡಿಸಬಹುದು. ಸ್ಪೋರ್ಟ್ಸ್ ಮತ್ತು ಟ್ರ್ಯಾಕ್ ರೈಡಿಂಗ್ ಮೋಡ್‌ನಲ್ಲಿ ಈ ಮೋಟಾರ್‌ಸೈಕಲ್‌ಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಕಾರ್ನರಿಂಗ್ ಕ್ರೂಸ್ ಕಂಟ್ರೋಲ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸಿತು.

ಮುಂಭಾಗದಲ್ಲಿರುವ ಬ್ರೇಕ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಹಿಂಭಾಗದಲ್ಲಿರುವ ಬ್ರೇಕ್ ಸಹ ಉತ್ತಮವಾಗಿದೆ. ಆದರೆ, ನಾವು ಅಂದುಕೊಂಡ ರೀತಿಯಲ್ಲಿ ಇರಲಿಲ್ಲ. 310 ಸಿಸಿ ಎಂಜಿನ್ ಹೊಂದಿದ್ದರೂ 5 ಹಾಗೂ 6 ನೇ ಗೇರ್‌ನಲ್ಲಿ ಶಕ್ತಿ (ಪವರ್) ಉತ್ಪಾದನೆ ಸ್ವಲ್ಪ ಇಳಿಮುಖವಾದಂತೆ ಭಾಸವಾಯಿತು. 17-ಇಂಚಿನ ಅಲಾಯ್ ವೀಲ್‌ಗಳ ಸಹಾಯದಿಂದ ಟೈರ್‌ಗಳು ರಸ್ತೆಯ ಮೇಲೆ ಬಿಗಿಯಾದ ಹಿಡಿತ ಬರುವಂತೆ ಮಾಡಿದವು.

TVS Apache RR 310 Review Specs Riding Impressions Design Features Details

ಕೊನೆ ಮಾತು: ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ಮೋಟಾರ್‌ಸೈಕಲ್‌ನ ಕ್ವಿಕ್‌ಶಿಫ್ಟರ್ ಇಲ್ಲದ ರೆಡ್ (ಕೆಂಪು) ಬಣ್ಣದ ರೂಪಾಂತರ (ವೇರಿಯೆಂಟ್) ರೂ.2,75,000, ಕ್ವಿಕ್‌ಶಿಫ್ಟರ್‌ವಿರುವ ರೆಡ್ ಬಣ್ಣದ ರೂಪಾಂತರ ರೂ.2,92,000 ಮತ್ತು ಬಾಂಬರ್ ಗ್ರೇ (ಸಾಧಾರಣ ಬೂದು) ಬಣ್ಣದ ರೂಪಾಂತರ ರೂ. 2,92,000 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಈ ಬೈಕ್, ಯುವ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡರೂ ಅಚ್ಚರಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 27, 2024, 12:00 [IST]
English summary
Tvs apache rr 310 review specs riding impressions design features details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+