Review: ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ವಿಮರ್ಶೆ.. ಹೇಗಿದೆ ಗೋತ್ತಾ?
ಭಾರತದಲ್ಲಿ 'ರಾಯಲ್ ಎನ್‌ಫೀಲ್ಡ್' ಜನಪ್ರಿಯ ಪ್ರೀಮಿಯಂ ಬೈಕ್ ಕಂಪನಿಯಾಗಿದೆ. ಅದರ, 'ಸೂಪರ್ ಮೀಟಿಯರ್ 650' ಕ್ರೂಸರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದರ ಆಕರ್ಷಕ ನೋಟ ಹಾಗೂ ವೈಶಿಷ್ಟ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುತ್ತಿದ್ದು, ಸೂಪರ್ ಫೇಮಸ್ ಆಗಿ ಹೊರಹೊಮ್ಮಿದೆ.
ಈ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಕ್ರೂಸರ್ ಮೋಟಾರ್‌ಸೈಕಲ್ ನಲ್ಲಿ ಹೆದ್ದಾರಿಯಲ್ಲಿ ಹೋಗುವುದೇ ಒಂದು ರೀತಿಯ ವಿಶಿಷ್ಟ ಅನುಭವವಾಗಿದೆ. 2022ರಲ್ಲಿ ಮಿಲನ್‌ನಲ್ಲಿ ನಡೆದ EICMA ಶೋನಲ್ಲಿ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650ಯನ್ನು ಪ್ರದರ್ಶನ ಮಾಡಲಾಯಿತು. ಈ ವರ್ಷದ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಇದೀಗ, ನಮ್ಮ ತಂಡಕ್ಕೆ ಬೆಂಗಳೂರಿನಲ್ಲಿ ಈ ಬೈಕ್ ರೈಡ್ ಮಾಡುವ ಅವಕಾಶ ಸಿಕ್ಕಿದ್ದು, ಬನ್ನಿ ಹೇಗಿದೆ ಎಂದು ತಿಳಿಯೋಣ.

ವಿನ್ಯಾಸ & ವೈಶಿಷ್ಟ್ಯ: ಈ 'ಸೂಪರ್ ಮೀಟಿಯರ್ 650' ಇತರೆ, 650 ಲೈನ್ಅಪ್ ಬೈಕ್‌ಗಳಾದ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ GT650 ಪ್ಲಾಟ್‌ಫಾರ್ಮ್ ಅನ್ನೇ ಆಧರಿಸಿದೆ. ಅವುಗಳಿಗೆ ಹೋಲಿಸಿದರೆ ಇದು, ಕೊಂಚ ಆಕರ್ಷಕವಾಗಿದ್ದು, ಕ್ರೂಸರ್ ಮೋಟಾರ್‌ಸೈಕಲ್ ವಿಭಾಗಕ್ಕೆ ಹೇಳಿ ಮಾಡಿಸಿರುವ ರೀತಿಯಿದೆ. ಫ್ರಂಟ್ ರೌಂಡ್ ಹೆಡ್‌ಲೈಟ್, ಟಿಯರ್ ಡ್ರಾಪ್ ಶೇಪ್ಡ್ ಫ್ಯುಯೆಲ್ ಟ್ಯಾಂಕ್, ಸ್ಕೂಪ್ ಔಟ್ ಸೀಟ್, ಫ್ರಂಟ್ ಸೆಟ್ ಫುಟ್‌ಪೆಗ್ಸ್, ಲಾಂಗ್ ಅಂಡ್ ಲೊ ಎಕ್ಸಾಸ್ಟ್ ರೇರ್ ಟೈರ್ ಮತ್ತು ಫೆಂಡರ್ ಅನ್ನು ಹೊಂದಿದೆ.
ಈ ಬೈಕ್, ಟಾಲ್ ಹಾಗೂ ವಿಡ್ತ್ ಆಗಿರುವ ಟೂರಿಂಗ್ ಸ್ಟೈಲ್ ಹ್ಯಾಂಡಲ್‌ಬಾರ್ಸ್ ಹಾಗೂ ದೊಡ್ಡದಾದ ವಿಂಡ್‌ಸ್ಕ್ರೀನ್ ಅನ್ನು ಪಡೆದಿದೆ. ಇದರೊಂದಿಗೆ ಫ್ರಂಟ್ ಅಪ್ ಸೆಡ್ ಡೌನ್ ಫೋರ್ಕ್, ಪಾಡ್ ಇನ್‌ಸ್ಟ್ರುಮೆಂಟೇಶನ್‌ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅನಲಾಗ್ ಸ್ಪೀಡೋ ವಿತ್ ಇನ್‌ಸೆಟ್ LCD ಡಿಸ್ಪ್ಲೇಯನ್ನು ಒಳಗೊಂಡಿದ್ದು, ಇದು ಓಡೋಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಫ್ಯುಯೆಲ್ ಲೆವೆಲ್, ಗೇರ್ ಪೊಸಿಷನ್ ಇಂಡಿಕೇಟರ್ ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ USB ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ.

ಸುತ್ತಳತೆ & ಕಾರ್ಯಕ್ಷಮತೆ: ಟ್ವಿನ್ ಸಿಲಿಂಡರ್ ಆಯ್ಕೆಯನ್ನು ಹೊಂದಿರುವ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ GT650 ಪ್ಲಾಟ್‌ಫಾರ್ಮ್ ಅನ್ನೇ ಆಧರಿಸಿರುವ ಈ ಸೂಪರ್ ಮೀಟಿಯರ್ 650 ಬೈಕ್, ಅವುಗಳಿಗಿಂತ ಉದ್ದವಾಗಿದೆ. ಇದರ ನಿಖರವಾದ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 2,260 ಎಂಎಂ ಉದ್ದ, 890 ಎಂಎಂ ಅಗಲ ಮತ್ತು 1,155 ಎಂಎಂ ಎತ್ತವಿದ್ದು, 1,500 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆದಿದೆ.
ಇಂಟರ್‌ಸೆಪ್ಟರ್ 650ಗೆ ಹೋಲಿಕೆ ಮಾಡಿದರೆ, ಈ ಸೂಪರ್ ಮೀಟಿಯರ್ 650 ಬೈಕ್ ಅದಕ್ಕಿಂತ 141 ಎಂಎಂ ಉದ್ದವಾಗಿದ್ದು, 102 ಎಂಎಂ ಉದ್ದದ ವೀಲ್‌ಬೇಸ್ ಪಡೆದಿದೆ. ಇದೊಂದು ಕ್ರೂಸರ್ ಮೋಟಾರ್‌ಸೈಕಲ್ ಆಗಿರುವುದರಿಂದ ಸೀಟ್ ಎತ್ತರ ಕಡಿಮೆ ಇರಲಿದೆ. ಅದು 740 ಎಂಎಂ ಇದೆ. ಜೊತೆಗೆ 135 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಪವರ್ ಫುಲ್ 648 ಸಿಸಿ ಪ್ಯಾರಲಲ್ ಟ್ವಿನ್ SOHC ಎಂಜಿನ್ ಹೊಂದಿದ್ದು, 47 bhp ಗರಿಷ್ಠ ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 6 ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಇದರ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆಷನ್ ಸೆಟಪ್ ವಿಚಾರದ ಬಗ್ಗೆ ಹೇಳುವುದಾದರೆ, 43 ಎಂಎಂ USD ಫ್ರಂಟ್ ಫೋರ್ಕ್, ರೇರ್ ಟ್ವಿನ್ ಶಾಕ್ಸ್ ಸಸ್ಪೆಷನ್ ಸೆಟಪ್ ಅನ್ನು ಹೊಂದಿದೆ. ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಡ್ಯೂಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆಡಿದ್ದು, ಫ್ರಂಟ್ 320 ಎಂಎಂ, ರೇರ್ 300 ಎಂಎಂ ಡಿಸ್ಕ್ ಬ್ರೇಕ್ ಯೂನಿಟ್ ಹೊಂದಿದೆ.

ಟೈರ್ ಹಾಗೂ ವೀಲ್ ಬಗ್ಗೆ ನೋಡುವುದಾದರೆ, ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಅಲಾಯ್ ವೀಲ್ಸ್ ಪಡೆದಿದೆ. ಫ್ರಂಟ್ 19 ಇಂಚು, ರೇರ್ 16 ಇಂಚಿನ ವೀಲ್ಸ್ ಹೊಂದಿದೆ. ಜೊತೆಗೆ ಫ್ರಂಟ್ 100/90 x 19, ರೇರ್ 150/80 x 16 ಅಳತೆಯ ಸಿಯೆಟ್ ಕಂಪನಿಯ ಜೂಮ್ ಕ್ರೂಜ್ ಟೈರ್‌ಗಳನ್ನು ವೀಲ್ಸ್ ಪಡೆದಿವೆ.
ರೈಡಿಂಗ್ ಇಂಪ್ರೆಷನ್ಸ್: ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ರೈಡಿಂಗ್ ಮಾಡುವುದು ಒಂದು ರೀತಿಯಲ್ಲಿ ಆರಾಮದಾಯಕವಾಗಿರುತ್ತದೆ. ಇದು ಕ್ರೂಸರ್ ಬೈಕ್ ಆಗಿರುವುದರಿಂದ ಇತರೆ ಮೋಟಾರ್‌ಸೈಕಲ್ ಬಳಸುವವರೂ ಹೊಂದಿಕೊಳ್ಳುವುದು ಕೊಂಚ ಕಷ್ಟವಾಗಬಹುದು. 648 ಸಿಸಿ 270 ಡಿಗ್ರಿ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರುವುದರಿಂದ ಇಂಧನ ದಕ್ಷತೆ ಸ್ವಲ್ಪ ಕಮ್ಮಿಯೇ.. ಆದರೂ 24km/l ಮೈಲೇಜ್ ನೀಡುವುದು ಆ ಬೇಸರವನ್ನು ಹೋಗಲಾಡಿಸುತ್ತದೆ.

ಕೊಂಚ ದೂರ ಪ್ರಯಾಣಿಸುವಾಗ ಎಂಜಿನ್ ತಂಪಾಗಿಯೇ ಇರುತ್ತದೆ. ಆದರೆ, ದೂರದ ಪ್ರಯಾಣದ ವೇಳೆ ಅದು ಹೆಚ್ಚು ಬಿಸಿಯಾಗಿ, ಶಾಖ ಕಾಲಿಗೆ ತಾಕಬಹುದು. ಜೊತೆಗೆ 2-ವೇ ಗೇರ್ ಲಿವರ್ ಹೊಂದಿರುವುದರಿಂದ ಅದನ್ನು ಬಳಕೆ ಮಾಡಲು ಸಮಯ ಹಿಡಿಯುತ್ತದೆ. ಬ್ರೇಕಿಂಗ್ ಸಿಸ್ಟಮ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಸಸ್ಪೆಷನ್ ಸೆಟಪ್ ಅದ್ಬುತವಾಗಿದ್ದು, ತಿರುವುಗಳಲ್ಲಿ ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ.
ಒಟ್ಟಾರೆ ಅಭಿಪ್ರಾಯ: ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ರೂ.3.5 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕೊಂಚ ದುಬಾರಿ ಎಂದೇ ಹೇಳಬಹುದು. ಆದರೂ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ GT650 ನಂತೆಯೇ ಉತ್ತಮವಾಗಿದ್ದು, ಒಳ್ಳೆಯ ಇಂಧನ ದಕ್ಷತೆಯನ್ನೇ ಹೊಂದಿದೆ. ಜೊತೆಗೆ ತನ್ನ ಸವಾರರಿಗೆ ಉತ್ತಮ ರೈಡಿಂಗ್ ಅನುಭವ ನೀಡುತ್ತದೆ ಎಂದರೇ ತಪ್ಪಾಗುವುದಿಲ್ಲ.


Click it and Unblock the Notifications








