ಫಸ್ಟ್ ರೈಡ್ ರಿವ್ಯೂ: ಪಲ್ಸರ್ ಪ್ರಿಯರಿಗಾಗಿ ಬಿಡುಗಡೆಯಾದ ಬಜಾಜ್ ಪಲ್ಸರ್ ಎಫ್250 ವಿಶೇಷತೆ ಏನು?

ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ ಕಂಪನಿಯು ಪಲ್ಸರ್ ಸರಣಿ ವಾಹನಗಳ ಮಾರಾಟದಲ್ಲಿ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ವಿಶ್ವಾದ್ಯಂತ 70ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಪಲ್ಸರ್‌ ಸರಣಿ ಬೈಕ್‌ಗಳನ್ನು ಮಾರಾಟ ಮಾಡಿದೆ. ಇದೀಗ ಕಂಪನಿಯು ಪಲ್ಸರ್ ಬ್ರಾಂಡ್‌ನ ಅಡಿಯಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಪರಿಚಯಿಸಿದ್ದು, ಹೊಸ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್ ಮಾದರಿಗಳು ಬಿಡುಗಡೆಗೊಂಡಿವೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಬಜಾಜ್ ಆಟೋ ಕಂಪನಿಯು ಕಳೆದ ವಾರವಷ್ಟೇ ಹೊಸ ಪಲ್ಸರ್ ಎಫ್250 ಮತ್ತು ಎನ್250 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಹೊಸ ಬೈಕ್ ವಿತರಣೆ ಆರಂಭಕ್ಕೂ ಮುನ್ನ ಹೊಸ ಬೈಕ್‌ಗಳ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಮಾಧ್ಯಮ ಸಂಸ್ಥೆಗಳಿಗೆ ಫಸ್ಟ್ ರೈಡ್ ಆಯೋಜಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ಬಜಾಜ್ ಕಂಪನಿಯು 250ಸಿಸಿ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಸರಣಿ ಮಾರಾಟದಲ್ಲಿ ಎರಡು ದಶಕಗಳ ಯಶಸ್ವಿ ಹೆಜ್ಜೆಯಿರಿಸಿರುವ ಬಜಾಜ್ ಕಂಪನಿಯು ಇದೀಗ ಪಲ್ಸರ್ ಸರಣಿಯಲ್ಲಿಯೇ ಉನ್ನತ ಮಟ್ಟದ ಪಲ್ಸರ್ ಎಫ್250 ಮತ್ತು ಎನ್250 ಮಾದರಿಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳ ಕಾರ್ಯಕ್ಷಮತೆ, ಎಂಜಿನ್ ದಕ್ಷತೆ, ತಂತ್ರಜ್ಞಾನ ಸೌಲಭ್ಯಗಳ ಕುರಿತು ಈ ವಿಮರ್ಶೆ ಲೇಖನದಲ್ಲಿ ಸಂಪೂರ್ಣವಾಗಿ ಚರ್ಚಿಸಿದ್ದೇವೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಮಾದರಿಗಳು ಒಂದೇ ಮಾದರಿಯ ಎಂಜಿನ್ ಹೊಂದಿದ್ದರೂ ವಿಭಿನ್ನವಾದ ಚಾಲನಾ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಈ ಹಿನ್ನಲೆಯಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ಹೊಸ ಬೈಕ್ ಮಾದರಿಗಳ ಕಾರ್ಯಕ್ಷತೆ ಮತ್ತು ವೈಶಿಷ್ಟ್ಯತೆಗಳ ನಿಖರ ಮಾಹಿತಿಗಾಗಿ ಪ್ರತ್ಯೇಕವಾದ ಲೇಖನವನ್ನು ಪ್ರಕಟಿಸಿದ್ದೇವೆ. ಈ ವಿಮರ್ಶೆ ಲೇಖನದಲ್ಲಿ ನೀವು ಎಫ್250 ಮಾದರಿಯ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದ್ದು, ಎನ್‌250 ಮಾದರಿಯ ವಿಮರ್ಶೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಬಹುದು.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಎಫ್250 ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಈ ಹಿಂದಿನ 220ಎಫ್ ಮಾದರಿಗಿಂತ ಹೊಸ ಆವೃತ್ತಿಯು ಹೇಗೆ ಭಿನ್ನವಾಗಿದೆ ಎಂಬುವುದನ್ನು ನಾವಿಲ್ಲಿ ತಿಳಿಯೋಣ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಎಫ್250 ವಿನ್ಯಾಸ ಮತ್ತು ಶೈಲಿ

ಹೊಸ ಪಲ್ಸರ್‌ ಸರಣಿಗಳ ವಿನ್ಯಾಸ ಬಜಾಜ್‌ ಕಂಪನಿಯ ಇತರೆ ಪಲ್ಸರ್ ಮಾದರಿಗಳಿಂತಲೂ ಉತ್ತಮವಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಬೈಕ್ ಉತ್ಪನ್ನವನ್ನು ಅತ್ಯುತ್ತಮವಾಗಿ ಸಿದ್ದಗೊಳಿಸುವಲ್ಲಿ ಬಜಾಜ್ ವಿನ್ಯಾಸ ಸಾಕಷ್ಟು ಸವಾಲುಗಳನ್ನು ಎದುರಿಸಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕಿನಲ್ಲಿ ಇಂಧನ ಟ್ಯಾಂಕ್‌ನಿಂದ ಹಿಂಬದಿಯವರೆಗೆ ಚಲಿಸುವ ಮಸ್ಕ್ಯೂಲರ್ ಲೈನ್‌ಗಳು ಪಲ್ಸರ್ ಸರಣಿ ಬೈಕ್ ಮಾದರಿಗಳಲ್ಲಿ ಪ್ರಮಾಣಿತ ವೈಶಿಷ್ಟ್ಯವಾಗಿದ್ದು, ಈ ಹಿಂದೆ 2006ರಲ್ಲಿ ಪರಿಚಯಿಸಲಾದ ಹೊಸ ಟ್ವಿನ್ ವರ್ಟಿಕಲ್ ಸ್ಟಾಕ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಪಲ್ಸರ್ ಸರಣಿಗಳ ವಿನ್ಯಾಸದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಎರಡು ಆಂತರಿಕ ವಿನ್ಯಾಸದ ಗುಣಲಕ್ಷಣಗಳನ್ನು ಕಂಪನಿಯು ಪಲ್ಸರ್ ಎಫ್250 ನಲ್ಲಿಯೂ ಉಳಿಸಿಕೊಳ್ಳಲಾಗಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಆದಾಗ್ಯೂ ಈ ಅಂಶಗಳು ಹೊಸ ಎಫ್250 ಮಾದರಿಗಳಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮಸ್ಕ್ಯೂಲರ್ ಲೈನ್ ಸೌಲಭ್ಯವು ಸೆಮಿ-ಫೇರಿಂಗ್‌ನಲ್ಲಿ ಮೋಟಾರ್‌ಸೈಕಲ್‌ನ ಮುಂಭಾಗದವರೆಗೆ ವಿಸ್ತರಿಸುತ್ತದೆ. ಲಂಬವಾಗಿರುವ ಟೈಲ್ ಲ್ಯಾಂಪ್ ಈಗ ಮೇಲಿನ ತುದಿಯಲ್ಲಿ ಸ್ವಲ್ಪ ವಕ್ರರೇಖೆಯನ್ನು ಹೊಂದಿದ್ದು, ಈ ಎರಡು ವಿನ್ಯಾಸದ ಲಕ್ಷಣಗಳನ್ನು ಹೊರತುಪಡಿಸಿ ಮೋಟಾರ್‌ಸೈಕಲ್ ಹೊಚ್ಚ ಹೊಸ ವಿನ್ಯಾಸಪಡೆದುಕೊಂಡಿವೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪಲ್ಸರ್ 220ಎಫ್ ನಂತೆಯೇ ಸ್ಥಿರವಾದ ಹೆಡ್‌ಲ್ಯಾಂಪ್ ಸ್ಥಾನದಲ್ಲಿ ಸೆಮಿ-ಫೇರ್ಡ್ ಫ್ರಂಟ್-ಎಂಡ್ ಅನ್ನು ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್‌ನ ಮಧ್ಯದ ಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಘಟಕವಿದೆ. ಅದರಲ್ಲಿ ಲೋ ಮತ್ತು ಹೈ ಭೀಮ್ ಲೈಟಿಂಗ್ಸ್ ಸಂಯೋಜಿಸಲಾಗಿದ್ದು, ಎಡ ಮತ್ತು ಬಲ ಭಾಗದಲ್ಲಿನ ಹೆಡ್‌ಲ್ಯಾಂಪ್‌‌ ಮೇಲೆ ರಿವರ್ಸ್-ಬೂಮರಾಂಗ್ ಎಲ್ಇಡಿ ಡಿಆರ್‌ಎಲ್ ಗಳಿವೆ. ಹೆಡ್‌ಲ್ಯಾಂಪ್‌ನ ಮೇಲೆ ಒಂದು ವಿಸರ್ ಕೂಡಾ ಇದ್ದು ಅದು ಗಾಳಿಯ ತೀವ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಕಾರಿಯಾಗಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಎಫ್250 ಮಾದರಿಯಲ್ಲಿ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸೆಮಿ-ಫೇರಿಂಗ್‌ನಲ್ಲಿ ಇರಿಸಲಾಗಿದ್ದು, ಪಲ್ಸರ್ ಎಫ್250 ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಪಡೆದುಕೊಂಡಿದೆ. ಇದರಲ್ಲಿ ಸ್ವಿಚ್‌ಗೇರ್ ಕೂಡಾ ಹೊಚ್ಚ ಹೊಸ ಸೌಲಭ್ಯವಾಗಿದ್ದು, ಸ್ಪ್ಲಿಟ್-ಸೀಟ್‌ನ ಆಕಾರವು ಮೋಟಾರ್‌ಸೈಕಲ್‌ನ ಒಟ್ಟಾರೆ ವಿನ್ಯಾಸ ಮತ್ತು ಶೈಲಿಗೆ ಹೊಸ ಹೊಳಪು ನೀಡುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕಿನಲ್ಲಿ ಎಂಜಿನ್ ಕವಚವನ್ನು ಡಾರ್ಕ್ ಗೋಲ್ಡ್ ಶಾಡೋ ಪೂರ್ಣಗೊಳಿಸಲಾಗಿದ್ದು, ಎಂಜಿನ್‌ನ ಕೆಳಗಿರುವ ಸೂಪರ್ ಸ್ಟೈಲಿಶ್ ಬ್ಯಾಷ್‌ಪ್ಲೇಟ್ ಅನ್ನು ಬಾಡಿ ಕಲರ್‌ನೊಂದಿಗೆ ಪೂರ್ಣಗೊಳಿಸಲಾಗಿದೆ. ಈ ಮೂಲಕ ಹೊಸ ಬೈಕಿನಲ್ಲಿ ಸರಳ ಮತ್ತು ಕ್ಲಾಸಿ ರೆಡ್, ವೈಟ್ ಗ್ರಾಫಿಕ್ಸ್ ಅನ್ನು ಸಹ ಪಡೆದುಕೊಂಡಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಎಫ್250 ಮಾದರಿಯಲ್ಲಿನ ಟ್ವಿನ್ ಎಕ್ಸಾಸ್ಟ್ ಘಟಕವು ಮೋಟಾರ್‌ಸೈಕಲ್‌ನ ಒಟ್ಟಾರೆ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆ ನೀಡಿದ್ದು, ಟ್ವಿನ್-ಪೋರ್ಟ್ ಎಕ್ಸಾಸ್ಟ್ ಅನ್ನು ಸಿಲ್ವರ್-ಬಣ್ಣದ ಕವರ್ ಪಡೆಯುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಇದರೊಂದಿಗೆ ಪಲ್ಸರ್ ಎಫ್250 ಮಾದರಿಯು 250ಸಿಸಿ ವಿಭಾಗದಲ್ಲಿ ಅತ್ಯಂತ ಸೊಗಸಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ಗಳು ನಿಮ್ಮ ಆಯ್ಕೆಯಾಗಿದ್ದರೆ ಹೊಸ ಪಲ್ಸರ್ ಎಫ್250 ಆವೃತ್ತಿಯು ನಿಮ್ಮ ಆಯ್ಕೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಎಫ್250 ವೈಶಿಷ್ಟ್ಯತೆಗಳು

ಪಲ್ಸರ್ ಎಫ್250 ಮಾದರಿಯಲ್ಲಿ ಬಜಾಜ್ ಕಂಪನಿಯು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಧ್ಯದಲ್ಲಿ ಇರಿಸಲಾಗಿರುವ ಟ್ಯಾಕೋ ಮೀಟರ್ ಆಕರ್ಷಕವಾಗಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಬೈಕಿನ ಎಡಕ್ಕೆ ಟೆಲ್-ಟೇಲ್ ಲೈಟ್‌ಗಳು ಮತ್ತು ಬಲಕ್ಕೆ ಎಲ್‌ಸಿಡಿ ಪರದೆ ನೀಡಲಾಗಿದ್ದು, ಪರದೆಯ ಮೂಲಕ ಬೈಕ್ ಸವಾರರು ಸ್ಪೀಡೋ ಮೀಟರ್, ಓಡೋ ಮೀಟರ್, ಟ್ರಿಪ್ ಮೀಟರ್‌, ಇಂಧನ ಲಭ್ಯತೆ ಪ್ರಮಾಣ, ಇಂಧನ ದಕ್ಷತೆ ಪ್ರಮಾಣ, ಮೈಲೇಜ್ ಲಭ್ಯತೆ ಸೇರಿ ಇತರೆ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಬೈಕ್ ಚಾಲನೆಯಲ್ಲಿರುವಾಗಲೇ ರೈಡಿಂಗ್ ಆಧರಿಸಿ ಇಂಧನ ದಕ್ಷತೆಯ (AFE) ಸಂಖ್ಯೆಯನ್ನು ಸಹ ಪಡೆಯಬಹುದಾಗಿದ್ದು, ಇದು ದೂರದ ಪ್ರಮಾಣದ ಸಮಯದಲ್ಲಿ ಅತ್ಯಂತ ಉಪಯುಕ್ತ ವೈಶಿಷ್ಟ್ಯವಾಗಿದೆ. ಟ್ರಿಪ್ ಮೀಟರ್‌ಗಳು ಎರಡು ಮೋಟಾರ್‌ಸೈಕಲ್‌ಗಳಲ್ಲೂ ಇಂಧನ ದಕ್ಷತೆ ವಿಭಿನ್ನವಾಗಿ ಅಳೆಯಲಿದ್ದು, ಹೊಸದಾದ ಸ್ವಿಚ್ ಗೇರ್ ಸೇರಿ ಇತರೆ ಪಲ್ಸರ್‌ಗಳಂತೆ ಬ್ಯಾಕ್‌ಲೈಟ್ ಅನ್ನು ಪಡೆಯುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಇನ್ನುಳಿದಂತೆ ಹೊಸ ಬೈಕಿನಲ್ಲಿ ಫೋನ್ ಚಾರ್ಜಿಂಗ್ ಪೋರ್ಟ್, ಸಿಂಗಲ್-ಚಾನೆಲ್ ಎಬಿಎಸ್ ಮತ್ತು ಯುಎಸ್‌ಬಿ ಸ್ಲಾಟ್ ಮತ್ತು ಇತರೆ ಪ್ರಮುಖ ವೈಶಿಷ್ಟ್ಯಗಳು ಒಳಗೊಂಡಿದೆ. ಆದರೆ ಆಧುನಿಕ ಬೈಕ್‌ಗಳಲ್ಲಿ ಅಗತ್ಯವಾಗಿರುವ ಸ್ಮಾರ್ಟ್‌ಫೋನ್ ಸಂಪರ್ಕಿತ ಬ್ಲೂಟೂಥ್ ಸಂಪರ್ಕವು ಎಫ್250 ಮಾದರಿಯಲ್ಲಿ ನೀಡದಿರುವುದು ಗ್ರಾಹಕರ ಆಯ್ಕೆಗೆ ಹಿನ್ನಡೆ ಉಂಟುಮಾಡಬಹುದಾಗಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಎಫ್250 ಎಂಜಿನ್ ಕಾರ್ಯಕ್ಷಮತೆ ಮತ್ತು ರೈಡಿಂಗ್ ಅನುಭವ

ಬಜಾಜ್ ಕಂಪನಿಯು ಇತರೆ ಪಲ್ಸರ್ ಮಾದರಿಗಳಿಂತಲೂ ಉತ್ತಮವಾದ ಎಂಜಿನ್ ಆಯ್ಕೆ ಹೊಸ ಎಫ್250 ಬೈಕ್ ಮಾದರಿಗಳಲ್ಲಿ ನೀಡಿದೆ. ಹೊಸ ಬೈಕ್ ಮಾದರಿಯು 249 ಸಿಸಿ ಏರ್ ಮತ್ತು ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್‌ನೊಂದಿಗೆ ರಿಯರ್ ವ್ಹೀಲ್ ಡ್ರೈವ್ ಮೂಲಕ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಮಾದರಿಯು 8750ಆರ್‌ಪಿಎಂ ನಲ್ಲಿ 24.1 ಬಿಎಚ್‌ಪಿ ಉತ್ಪಾದನೆಯೊಂದಿಗೆ 6,500ಆರ್‌ಪಿಎಂ ನಲ್ಲಿ 21.5 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಅಸಿಸ್ಟ್ ಕ್ಲಚ್ ಅಸಿಸ್ಟ್ ಸೌಲಭ್ಯವು ಬೈಕ್ ಚಾಲನೆಯನ್ನು ಅರಾಮದಾಯಕಗೊಳಿಸುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಮಾದರಿಯು ಆರಂಭದಲ್ಲಿ ತುಸು ನಿಧಾನ ಎನ್ನಿಸಿದರೂ ನಂತರ ಅತ್ಯುತ್ತಮ ಥ್ರೊಟಲ್ ಹೊಂದಿದ್ದು, ಇದರ ಎಕ್ಸಾಸ್ಟ್ ನೋಟ್ 220ಎಫ್ ಮಾದರಿಗಿಂತ ತುಸು ಸುಧಾರಣೆಗೊಂಡಿದೆ ಎನ್ನಬಹುದು.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಆರಂಭದ 3,000 ಆರ್‌ಪಿಎಂಗಿಂತಲೂ ಕಡಿಮೆ ಥ್ರೊಟಲ್‌ನಲ್ಲಿ ಎಂಜಿನ್ ತುಸು ನಿಧಾನವಾಗಿದ್ದರೂ 3,000 ಆರ್‌ಪಿಎಂ ನಂತರ ಬೈಕ್ ಕಾರ್ಯಕ್ಷತೆಯೇ ಬದಲಾಗುತ್ತದೆ. ಇದು ಎಲ್ಲಾ ಗೇರ್‌ಗಳಲ್ಲಿ ಸಾಕಷ್ಟು ಟಾರ್ಕ್ ನೀಡಿದರೂ ಮಧ್ಯಶ್ರೇಣಿಯಲ್ಲಿ ಅದು ಪ್ರಬಲವಾಗಿದೆ ಎನ್ನಬಹುದು. ನೀವು 5,000 ರಿಂದ 8,000ಆರ್‌ಪಿ ನಡುವೆ ಇರಿಸಿದಾಗ ಈ ಎಂಜಿನ್‌ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಆದರೆ ಪ್ರತಿ ಗಂಟೆ 100 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲಿ ರೈಡಿಂಗ್ ಬಯಸಿದರೆ 6ನೇ ಗೇರ್ ಅಗತ್ಯ ಎನ್ನಿಸಲಿದ್ದು, ನಿರ್ವಹಣೆಯ ವಿಷಯದಲ್ಲಿ ಪಲ್ಸರ್ ಎಫ್250 ಸೇರಿ ಇತರೆ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮವಾಗಿವೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಇದರೊಂದಿಗೆ ಹೊಸ ಬೈಕಿನಲ್ಲಿ ಕ್ಲಿಪ್ ಆನ್ ಹ್ಯಾಂಡಲ್‌ಬಾರ್, ಉತ್ತಮ ಹಿಡಿತ ಹೊಂದಿರುವ ಜಾಪರ್ ಎಂಆರ್‌ಎಫ್ ಟೈರ್‌ಗಳು ಕಾರ್ನರ್‌ಗಳನ್ನು ಬೈಕ್ ಚಾಲನೆಯನ್ನು ಉತ್ತಮಗೊಳಿಸಿದ್ದು, ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ಸಸ್ಷೆಷನ್ ಜೋಡಿಸಲಾಗಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಗುಣಮಟ್ಟದ ಬಿಡಿಭಾಗಗಳೊಂದಿಗೆ ಪಲ್ಸರ್ ಎಫ್250 ಮಾದರಿಯು 250 ಸಿಸಿ ವಿಭಾಗದಲ್ಲಿ ಅತ್ಯಂತ ಆರಾಮದಾಯಕ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಜೋಡಿಸಲಾಗಿದೆ. ಬಜಾಜ್ ಕಂಪನಿಯು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಕ್ಕಾಗಿ ಬೆಬ್ರಿ ಬದಲಾಗಿ ಗ್ರಿಮೆಕಾ ಬ್ರೇಕಿಂಗ್ ಸೌಲಭ್ಯವನ್ನು ಬಳಕೆ ಮಾಡಿದ್ದು, ಈ ಮೂಲಕ ಅತ್ಯುತ್ತಮ ರೈಡಿಂಗ್ ಮೂಲಕ ಬೈಕ್ ಸವಾರನಿಗೆ ಅಪಾರ ವಿಶ್ವಾಸವನ್ನು ನೀಡುತ್ತವೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಎಫ್250 ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಎಫ್250 ಮಾದರಿಯನ್ನು ಪ್ರಮುಖ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದ್ದು, ರೇಸಿಂಗ್ ರೆಡ್ ಮತ್ತು ಟೆಕ್ನೋ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಹೊಸ ಬೈಕಿನ ಬಣ್ಣದ ಆಯ್ಕೆಯಲ್ಲಿ ರೇಸಿಂಗ್ ರೆಡ್ ಹೆಚ್ಚು ಆಕರ್ಷಕವಾಗಿದ್ದು, ಪಲ್ಸರ್ ಎಫ್250 ಮಾದರಿಯು ಎಕ್ಸ್‌ಶೋರಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಮಾದರಿಯು 250 ಸಿಸಿ ವಿಭಾಗದಲ್ಲಿನ ಇತರೆ ಪ್ರತಿಸ್ಪರ್ಧಿ ಮಾದರಿಗಳ ಬೆಲೆಗಿಂತಲೂ ಅತ್ಯಂತ ಕಡಿಮೆ ವೆಚ್ಚದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಎಫ್250 ಮಾದರಿಗೆ ನೇರವಾಗಿ ಯಮಹಾ ಫೇಜರ್ 25 ಮತ್ತು ಸುಜುಕಿ ಜಿಕ್ಸರ್ 250 ಎಸ್ಎಫ್ ಮಾದರಿಗೆ ನೇರ ಸ್ಪರ್ಧೆ ನೀಡಲಿದ್ದರೆ ಕ್ವಾರ್ಟರ್-ಲೀಟರ್ ವಿಭಾಗದಲ್ಲಿರುವ ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್ ಸೇರಿದಂತೆ ಇತರೆ ಮಾದರಿಗಳಿಗೂ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಪಲ್ಸರ್ ಎಫ್250 ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಆಟೋ ಕಂಪನಿಯು ಉತ್ತಮ ಬೆಲೆ ಸ್ತರದಲ್ಲಿ ಹೊಸ ಪಲ್ಸರ್ ಎಫ್250 ಬಿಡುಗಡೆ ಮಾಡಿದರೂ ಹೊಸ ಬೈಕ್ ಇನ್ನು ಕೆಲವು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಅವಕಾಶವಿತ್ತು. ಹೊಸ ಬೈಕಿನಲ್ಲಿ ಲಿಕ್ವಿಡ್-ಕೂಲಿಂಗ್ ಮತ್ತು ಆರನೇ ಗೇರ್‌ಬಾಕ್ಸ್ ಇಲ್ಲದಿರುವುದು ಹೊಸ ಬೈಕ್ ಆಯ್ಕೆಗೆ ಹಿನ್ನಡೆ ಉಂಟು ಮಾಡಬಹುದು.

ಬಜಾಜ್ ಪಲ್ಸರ್ ಎಫ್250 ಫಸ್ಟ್ ರೈಡ್ ರಿವ್ಯೂ!

ಹೊಸ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಸಾರವಾಗಿ ಹೊಸ ಬೈಕ್ ಹೊರತರಲು ಯತ್ನಿಸಿದರೂ ಮುಂದಿನ ಪಿಳುಗೆಯ ಗ್ರಾಹಕರಿಗೆ ಪೂರಕ ಹಲವು ತಾಂತ್ರಿಕ ಅಂಶಗಳು ಈ ಬೈಕ್ ಮಾದರಿಯಲ್ಲಿ ನೀಡಲಾಗಿಲ್ಲ. ಅದರ ಹೊರತಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ಹಲವಾರು ಹೊಸ ಅಂಶಗಳು ಈ ಬೈಕಿನಲ್ಲಿದ್ದು, 220ಎಫ್ ಮಾದರಿಗಿಂತಲೂ ಹೆಚ್ಚು ಸುಧಾರಿತ ಸೌಲಭ್ಯ, ಹೊಸ ವಿನ್ಯಾಸವು ಅದ್ಭುತ ಮೋಟಾರ್ ಸೈಕಲ್ ಮಾದರಿಯನ್ನಾಗಿಸಲು ಸಹಕಾರಿಯಾಗಿವೆ.

Most Read Articles

Kannada
English summary
Bajaj pulsar f250 review features spec and more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X