ಫಸ್ಟ್ ರೈಡ್ ರಿವ್ಯೂ: ಅಡ್ವೆಂಚರ್ ವಿಭಾಗದಲ್ಲಿ ಯೆಜ್ಡಿ ಅಡ್ವೆಂಚರ್ ಹೊಸ ಅಧ್ಯಾಯ..
2 ಸ್ಟ್ರೋಕ್ ಪ್ರಿಯರ ಹಾಟ್ ಫೇವರಿಟ್ ಬೈಕ್ ಮಾದರಿಯಾಗಿ ಮಿಂಚಿ ಮರೆಯಾಗಿದ್ದ ಯೆಜ್ಡಿ ಬೈಕ್ ಕಂಪನಿಯು ಇದೀಗ ಹೊಸ ತಲೆಮಾರಿನ ಗ್ರಾಹಕರನ್ನು ರಂಜಿಸಲು ಮಾರುಕಟ್ಟೆಗೆ ಪುನಾರಾಗಮಿಸಿದ್ದು, ಆಧುನಿಕ ವೈಶಿಷ್ಟ್ಯತೆಯೊಂದಿಗೆ ವಿವಿಧ ಮೋಟಾರ್‌ಸೈಕಲ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದಶಕಗಳಷ್ಟು ಹಳೆಯದಾದರೂ ಬೈಕ್ ಪ್ರಿಯರಲ್ಲಿ ಈಗಲೂ ಕುತೂಹಲ ಹುಟ್ಟಿಸುವ ಕೆಲವೇ ಬೈಕ್ ಮಾದರಿಗಳಲ್ಲಿ ಯೆಜ್ಡಿ ಕೂಡಾ ಒಂದಾಗಿದ್ದು, ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್ ಮರು ಬಿಡುಗಡೆಗೊಳಿಸುವ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. 2022ರ ಜನವರಿ 13 ರಂದು ಯೆಜ್ಡಿ ನಿರ್ಮಾಣದ ಹೊಸ ಬೈಕ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕ್‌ಗಳ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಕಂಪನಿಯು ಇತ್ತೀಚೆಗೆ ಡ್ರೈವ್‌ಸ್ಪಾರ್ಕ್ ತಂಡವನ್ನು ಸಹ ಆಹ್ವಾನಿಸಿತ್ತು.

ಯೆಜ್ಡಿ ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಮೂರು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳನ್ನು ಪರಿಚಯಿಸಿದೆ. ಡ್ರೈವ್‌ಸ್ಪಾರ್ಕ್ ತಂಡವು ಮೂರು ಬೈಕ್ ಮಾದರಿಗಳನ್ನು ಪ್ರತ್ಯೇಕವಾಗಿ ಚಾಲನೆ ಮಾಡುವ ಮೂಲಕ ವಿವಿಧ ಮಾದರಿಗಳ ಕಾರ್ಯಕ್ಷಮತೆ ಕುರಿತಾಗಿ ಪ್ರತ್ಯೇಕವಾದ ವಿಮರ್ಶೆ ಲೇಖನಗಳನ್ನು ಪ್ರಕಟಿಸುತ್ತಿದ್ದು, ಮೊದಲ ವಿಮರ್ಶೆ ಲೇಖನದಲ್ಲಿ ಯೆಜ್ಡಿ ಅಡ್ವೆಂಚರ್ ಮಾದರಿಯಾಗಿ ಕುರಿತಾಗಿ ವಿಸ್ತೃತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಯೆಜ್ಡಿ ಅಡ್ವೆಂಚರ್ ವಿನ್ಯಾಸ ಮತ್ತು ಶೈಲಿ
ಹೊಸ ಯೆಜ್ಡಿ ಅಡ್ವೆಂಚರ್ ಮಾದರಿಯನ್ನು ಹೊರ ನೋಟದಲ್ಲಿಯೇ ಅಡ್ವೆಂಚರ್ ಮಾದರಿಯೆಂದು ಸುಲಭವಾಗಿ ಗುರುತಿಸಬಹುದಾಗಿದ್ದು, ಅದರ ಆಕರ್ಷಕ ನೋಟವನ್ನು ನೋಡಿದ ತಕ್ಷಣವೇ ಆಫ್-ರೋಡ್ ಸವಾರಿಗೆ ತೆಗೆದುಕೊಂಡು ಹೋಗಬೇಕು ಎನ್ನಿಸದೆ ಇರಲಾರದು. ಯಾಕೆಂದರ ಈ ಬೈಕಿನಲ್ಲಿ ಪ್ರಮುಖ ಅಂಶಗಳು ಆಫ್-ರೋಡ್ ಸಾಹಸಕ್ಕೆ ಸೆಳೆಯುವಂತಿದ್ದು, ಅದು ಸ್ಪೋಕ್ಡ್ ವೀಲ್ಹ್‌ಗಳು, ಫೋರ್ಕ್‌ನಲ್ಲಿರುವ ರಬ್ಬರ್ ಬೂಟ್ ಮತ್ತು ಡ್ಯುಯಲ್-ಪರ್ಪಸ್ ಟೈರ್ ಗಮನಸೆಳೆಯುತ್ತವೆ.

ಹೊಸ ಬೈಕಿನ ಮುಂಭಾಗದಲ್ಲಿ ಕ್ರೋಮ್ ಸರೌಂಡ್ ಜೊತೆಗೆ ವೃತ್ತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಇದ್ದು, ಅದರ ಮೇಲೆ ದೊಡ್ಡ ವಿಂಡ್‌ಸ್ಕ್ರೀನ್ ಅನ್ನು ಸಹ ಪಡೆಯುತ್ತದೆ. ಹಿಂಬದಿಯಲ್ಲಿ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಿಸಲಾಗಿದ್ದು, ಇದು ಆಯತಾಕಾರದ ಆಕಾರದಲ್ಲಿದ್ದರೂ ಅದರಲ್ಲಿರುವ ಪರದೆ ವೃತ್ತಾಕಾರವಾಗಿದೆ. ಹೀಗಾಗಿ ಇದು ಉಳಿದ ಮೋಟಾರ್‌ಸೈಕಲ್‌ನಂತೆ ತುಸು ಒರಟಾಗಿ ಕಾಣುತ್ತದೆ.

ಅಡ್ವೆಂಚರ್ ಬೈಕಿನ ಸೈಡ್ ಪ್ರೊಫೈಲ್ ನೋಡಿದಾಗ ಹೊಸ ಬೈಕಿನ ಅಡ್ವೆಂಚರ್ ಮತ್ತು ಟೂರಿಂಗ್ ಸಾಮರ್ಥ್ಯಗಳನ್ನು ನೀಡುವ ವಿವಿಧ ತಾಂತ್ರಿಕ ಘಟಕಗಳು ಸಾಕಷ್ಟು ಪ್ರಮುಖವಾಗಿವೆ. ಇವುಗಳಲ್ಲಿ 15-ಲೀಟರ್ ಇಂಧನ ಟ್ಯಾಂಕ್, ಬಲಿಷ್ಠ ಬಾಡಿ ಪ್ಯಾನೆಲ್‌ಗಳು, ಯೆಜ್ಡಿ ಬ್ಯಾಡ್ಜಿಂಗ್, ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಫುಟ್‌ಪೆಗ್‌ಗಳು ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳಿವೆ.

ಹೊಸ ಬೈಕಿನ ಇಂಧನ ಟ್ಯಾಂಕ್ ವಿನ್ಯಾಸವು ಅಡ್ವೆಂಚರ್ ಬೈಕ್ ಚಾಲನೆಗೆ ಸಾಕಷ್ಟು ಪೂರಕವಾಗಿದ್ದು, ಹೊಸ ಬೈಕ್ ಮಾದರಿಯನ್ನು ಮ್ಯಾಟ್ ಮತ್ತು ಕ್ಯಾಮೊ ರೂಪಾಂತರಗಳನ್ನಾಗಿ ಆಯ್ಕೆ ಮಾಡಬಹುದಾಗಿದೆ. ಕ್ಯಾಮೊ ರೂಪಾಂತರದಲ್ಲಿ 'ರೇಂಜರ್ ಕ್ಯಾಮೊ' ಎಂಬ ಹೆಸರಿನ ಒಂದೇ ಬಣ್ಣದ ಆಯ್ಕೆ ಲಭ್ಯವಿದ್ದು, ಮ್ಯಾಟ್ ಮಾದರಿಯಲ್ಲಿ ಸ್ಲಿಕ್ ಸಿಲ್ವರ್ ಮತ್ತು ಮ್ಯಾಂಬೋ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಿವೆ.

ವಿವಿಧ ಬಣ್ಣಗಳ ಆಯ್ಕೆ ಜೊತೆಗೆ ಹೊಸ ಬೈಕಿನಲ್ಲಿ ಇನ್ನು ಹಲವು ತಾಂತ್ರಿಕ ಅಂಶಗಳಿದ್ದು, ಬೈಕಿನಲ್ಲಿ ಜೋಡಿಸಲಾಗಿರುವ ಎರಡು ಬದಿಯ ಲಗೇಜ್ ರಾಕ್‌ಗಳು ಬೈಕ್ ಸವಾರನಿಗೆ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸಲಿವೆ ಎನ್ನಬಹುದು. ಆಫ್ ರೋಡ್ ಸವಾರಿ ವೇಳೆ ಬೈಕ್ ನಿಯಂತ್ರಣ ಸಾಧ್ಯತೆ ಹೆಚ್ಚಿರುವುದರಿಂದ ಬೈಕಿನ ಚಾಸಿಸ್ ಮೇಲೆ ನೇರವಾಗಿ ಲಗೇಜ್ ರಾಕ್ ಜೋಡಿಸಲಾಗಿದ್ದು, ಈ ಚೌಕಟ್ಟು ಮೋಟಾರ್‌ಸೈಕಲ್‌ಗೆ ಒರಟು ವಿನ್ಯಾಸವನ್ನು ಸಹ ನೀಡುತ್ತದೆ.

ಇನ್ನು ಯೆಜ್ಡಿ ಅಡ್ವೆಂಚರ್‌ನಲ್ಲಿ ಸರಳವಾದ ಸೈಡ್ ಪ್ಯಾನೆಲ್ ಜೋಡಿಸಲಾಗಿದ್ದು, ಅದರ ಮೇಲೆ 'ಅಡ್ವೆಂಚರ್' ಪದವನ್ನು ಮುದ್ರಿಸಲಾಗಿದೆ. ಹಾಗೆಯೇ ಮೋಟಾರ್‌ಸೈಕಲ್‌ನಲ್ಲಿ ದೊಡ್ಡದಾದ ಸ್ಪ್ಲಿಟ್ ಸೀಟ್‌ಗಳನ್ನು ಜೋಡಿಸಲಾಗಿದ್ದು, ದೂರದ ಸವಾರಿಗಾಗಿ ತುಂಬಾ ಆರಾಮದಾಯಕವಾಗಿದೆ. ಹಾಗೆಯೇ ಮೋಟಾರ್‌ಸೈಕಲ್‌ನಲ್ಲಿ ಲಗೇಜ್ ರಾಕ್ ಜೊತೆ ಉದ್ದನೆಯ ಮಡ್‌ಗಾರ್ಡ್ ಜೊಡಿಸಲಾಗಿದ್ದರೂ ಟೈಲ್ ಲ್ಯಾಂಪ್ ಸೆಟಪ್ ಬಹಳ ವಿಶಿಷ್ಟವಾಗಿರುವುದಲ್ಲದೆ ತುಂಬಾ ಸರಳ ವಿನ್ಯಾಸ ಹೊಂದಿದೆ.

ಹೊಸ ಬೈಕಿಗೆ ಮತ್ತಷ್ಟು ಪ್ರೀಮಿಯಂ ಮೆರಗು ನೀಡಲು ಆಕರ್ಷಕ ವಿನ್ಯಾಸದೊಂದಿಗೆ ಪ್ರತಿಫಲಕ ಮತ್ತು ನಂಬರ್ ಪ್ಲೇಟ್‌ನ ಮೇಲೆ ಸಣ್ಣದಾದ ವೃತ್ತಾಕಾರದ ಟೈಲ್ ಲ್ಯಾಂಪ್ ಜೋಡಿಸಲಾಗಿದ್ದು, ರ‍್ಯಾಕ್ ಮತ್ತು ಫ್ರೆಮ್‌ಗಳು ಬೈಕ್ ಸವಾರರ ಆದ್ಯತೆಗೆ ತಕ್ಕಂತೆ ಮತ್ತಷ್ಟು ಲಗೇಜ್ ಭರ್ತಿ ಮಾಡಲು ಅವಕಾಶ ನೀಡುತ್ತದೆ.

ಇದರ ಜೊತೆಗೆ ಹೊಸ ಬೈಕಿನಲ್ಲಿ ಟಾಪ್ ಬಾಕ್ಸ್‌ಗಳು, ಸ್ಯಾಡಲ್ ಬಾಕ್ಸ್‌ಗಳು, ಜೆರ್ರಿ ಕ್ಯಾನ್‌ಗಳು, ಆಕ್ಸಿಲಿಯರಿ ಲೈಟ್‌ಗಳನ್ನು ನೀಡಲಾಗಿದ್ದು, ಅಡ್ವೆಂಚರ್ ರೈಡ್‌ಗೆ ಪೂರಕವಾಗಿ ಸಿಯೆಟ್ ನಿರ್ಮಾಣದ ಗ್ರಿಪ್ ಟೈರ್‌ನೊಂದಿಗೆ 21-ಇಂಚಿನ ಸ್ಪೋಕ್ಡ್ ಚಕ್ರವನ್ನು ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ 17-ಇಂಚಿನ ಸ್ಪೋಕ್ಡ್ ಚಕ್ರಗಳನ್ನು ನೀಡಲಾಗಿದೆ.

ಯೆಜ್ಡಿ ಅಡ್ವೆಂಚರ್ ವಿನ್ಯಾಸದಲ್ಲಿ ಎಂಜಿನ್ ಮತ್ತು ಎಕ್ಸಾಸ್ಟ್ ಕೂಡಾ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಬ್ಲ್ಯಾಕ್ ಔಟ್ ಎಂಜಿನ್ ಸೇರಿದಂತೆ ಸಿಲಿಂಡರ್ ಬ್ಲಾಕ್ ಕ್ರೋಮ್ ಫಿನ್ ಅನ್ನು ಪಡೆಯುತ್ತದೆ. ಇದರಲ್ಲಿ ಯಜ್ಡಿ ಬೈಕ್‌ಗಳಲ್ಲಿ ಜನಪ್ರಿಯವಾಗಿರುವ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಏರ್-ಕೂಲಿಂಗ್ ಫಿನ್ ನೀಡಲಾಗಿದೆ.

ಇದರೊಂದಿಗೆ ಹೊಸ ಮೋಟಾರ್‌ಸೈಕಲ್ ಸಂಪೂರ್ಣವಾಗಿ ಮ್ಯಾಟ್ ಬ್ಲ್ಯಾಕ್‌ನಲ್ಲಿ ಲೇಪಿತವಾದ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದ್ದು, ಈ ಮೂಲಕ ಇದು ನಿಮಗೆ ಹಳೆಯ ಯೆಜ್ಡಿ ಎಂಜಿನ್‌ಗಳನ್ನು ನೆನಪಿಸುತ್ತದೆ.

ಯೆಜ್ಡಿ ಅಡ್ವೆಂಚರ್ ವೈಶಿಷ್ಟ್ಯತೆಗಳು
ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಯೆಜ್ಡಿ ಹೊಸ ಅಡ್ವೆಂಚರ್ ಮಾದರಿಯು ಮೂರು ಯೆಜ್ಡಿ ಮೋಟಾರ್‌ಸೈಕಲ್‌ಗಳಲ್ಲಿಯೇ ಹೆಚ್ಚಿನ ಫೀಚರ್ಸ್ ಹೊಂದಿದ್ದು, ಇದು ಈ ವಿಭಾಗದಲ್ಲಿನ ಇತರೆ ಮೋಟಾರ್‌ಸೈಕಲ್‌ಗಳಿಗೆ ಪ್ರಬಲ ಪೈಪೋಟಿ ನೀಡುವಂತಹ ಹಲವು ಹೊಸ ವೈಶಿಷ್ಟ್ಯತೆಗಳನ್ನು ಪಡೆಯುತ್ತದೆ.

ಮೊದಲನೆಯದಾಗಿ ಹೊಸ ಮೋಟಾರ್‌ಸೈಕಲ್‌ನಲ್ಲಿ ಸಂಪೂರ್ಣ ಎಲ್ಇಡಿ ಲೈಟ್‌ಗಳನ್ನು ಪಡೆದುಕೊಂಡಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್‌ಗಳು ಉತ್ತಮ ವಿನ್ಯಾಸ ಹೊಂದಿವೆ. ಇದರಲ್ಲಿ ಅತ್ಯಂತ ಪ್ರಾಯೋಗಿಕವಾಗಿಸುವ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಎರಡು ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್‌ಗಳನ್ನು ಪಡೆದುಕೊಂಡಿದ್ದು, ದೂರದ ಪ್ರಯಾಣದ ವೇಳೆ ಚಾರ್ಜಿಂಗ್ ಅವಶ್ಯಕತೆ ಹೆಚ್ಚಾಗಬಹುದಾದ್ದರಿಂದ ಟೈಪ್-ಎ ಮತ್ತು ಟೈಪ್-ಸಿ ಸ್ಲಾಟ್ ನೀಡಲಾಗಿದೆ.

ಇದರಲ್ಲಿ ಮತ್ತೊಂದು ಗಮನಾರ್ಹವಾದ ವೈಶಿಷ್ಟ್ಯತೆಯೆಂದರೆ ಅದು ಎಲ್‌ಸಿಡಿ ಕೂಡಾ ಡಿಸ್ಪ್ಲೇ ರೂಪದಲ್ಲಿ ಬರಲಿದ್ದು, ಇದರಲ್ಲಿ ಪ್ರಮುಖ ವಿವರಗಳೊಂದಿಗೆ ಎಂಜಿನ್ ವೇಗ, ವಾಹನದ ವೇಗ, ಓಡೋ ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಮಲ್ಟಿ ಟ್ರಿಪ್ ಮೀಟರ್ ಜೊತೆಗೆ ಸರಾಸರಿ ಮತ್ತು ಪ್ರಸ್ತುತ ಇಂಧನ ದಕ್ಷತೆಯನ್ನು ಪ್ರದರ್ಶಿಸುತ್ತದೆ.

ಇದಲ್ಲದೆ ಆಯತಾಕಾರದವಾದ ಕನ್ಸೋಲ್‌ನಲ್ಲಿ ಎರಡನೇ ವೃತ್ತಾಕಾರದ ಪರದೆಯನ್ನು ಸಂಯೋಜಿಸಲಾಗಿದ್ದು, ಈ ಡಿಸ್ಪ್ಲೇ ಮೂಲಕ ಬ್ಲೂಟೂತ್ ಸಂಪರ್ಕಿಸಬಹುದಾಗಿದೆ. ಇದರೊಂದಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಜೊತೆಗೆ ಯೆಜ್ಡಿ ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಸಹ ಬಳಸಬಹುದು.

ಹೊಸ ಬೈಕ್ ರೈಡ್ ವೇಳೆ ನಾವು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಕಷ್ಟು ಸಮಯದ ಅಭಾವದಿಂದ ಹೊಸ ಫೀಚರ್ಸ್ ಕುರಿತಾಗಿ ಕೆಲವು ಮಾಹಿತಿಗಳನ್ನು ಪಡೆಯಲು ಸಾಧ್ಯವಾಗದಿದ್ದರೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಡಿಸ್ಪ್ಲೇಯೊಂದಿಗೆ ಜೋಡಿಸುವ ಮೂಲಕ ಕೆಲವು ಉಪಯುಕ್ತ ವೈಶಿಷ್ಟ್ಯತೆಗಳ ಮಾಹಿತಿ ಪಡೆದುಕೊಂಡೆವು.

ಇದರೊಂದಿಗೆ ಹೊಸ ಬೈಕಿನಲ್ಲಿರುವ ಎಲ್‌ಸಿಡಿ ಡಿಸ್‌ಪ್ಲೇ ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಇದು ಟಿಲ್ಟ್-ಹೊಂದಾಣಿಕೆ ಮಾಡಬಹುದಾಗಿದ್ದು, ರೈಡಿಂಗ್ ಸಮಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ರೈಡರ್ ತನ್ನ ನೋಟಕ್ಕೆ ಅನುಗುಣವಾಗಿ ಡಿಸ್‌ಪ್ಲೇ ಅನ್ನು ಸರಿಹೊಂದಿಸಬಹುದು. ಹೆಗೆಂದರೆ ನೀವು ಬೈಕ್ ಅನ್ನು ಆಫ್-ರೋಡ್‌ಗೆ ತೆಗೆದುಕೊಂಡು ಹೋದಾಗ ಫುಟ್‌ಪೆಗ್‌ಗಳ ಮೇಲೆ ನಿಂತು ಬೈಕ್ ರೈಡ್ ಮಾಡುವಾಗ ಎಲ್‌ಸಿಡಿ ಪರದೆಯನ್ನು ನೋಡಲು ಬಯಸಿದರೆ ಅದನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.

ಹಾಗೆಯೇ ಹೊಸ ಬೈಕಿನಲ್ಲಿರುವ ಸ್ವಿಚ್‌ಗೇರ್ ಕೂಡಾ ಪ್ರೀಮಿಯಂ ಅಂಶವಾಗಿದ್ದು, ಹ್ಯಾಂಡಲ್‌ಬಾರ್ ಮೂಲಕವೇ ಬೈಕಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಈ ಮೂಲಕ ಒಂದು ಅದ್ಬುತವಾದ ಅಡ್ವೆಂಚರ್ ರೈಡ್‌ಗೆ ಇದು ಅತ್ಯುತ್ತಮ ಮಾದರಿಯಾಗಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳು ಬೈಕ್ ಮೌಲ್ಯವನ್ನು ಹೆಚ್ಚಿಸಿವೆ.

ಯೆಜ್ಡಿ ಅಡ್ವೆಂಚರ್ ಎಂಜಿನ್ ಕಾರ್ಯಕ್ಷಮತೆ ಮತ್ತು ರೈಡಿಂಗ್ ಅನಿಸಿಕೆಗಳು
ಯೆಜ್ಡಿ ಅಡ್ವೆಂಚರ್ ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಜಿನ್ ಉತ್ತಮವಾಗಿದೆಯೇ? ಕಡಿಮೆ ಮಟ್ಟದ ಟಾರ್ಕ್ ಅನ್ನು ಹೊಂದಿದೆಯೇ? ಎಂಬುವುದು ಹೊಸ ಮೋಟಾರ್‌ಸೈಕಲ್ ಬಿಡುಗಡೆಯಾದಾಗಿನಿಂದಲೂ ಸಾವಿರಾರು ಆಫ್ ರೋಡ್ ಬೈಕ್ ಉತ್ಸಾಹಿಗಳು ಮತ್ತು ನಿರೀಕ್ಷಿತ ಖರೀದಿದಾರರ ಮನಸ್ಸಿನಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಬೈಕ್ ರೈಡ್ ರಿವ್ಯೂ ತೃಪ್ತಿದಾಯಕ ಉತ್ತರಗಳನ್ನು ನೀಡಲಿದೆ.

ಯೆಜ್ಡಿ ಅಡ್ವೆಂಚರ್ ಮಾದರಿಯೊಂದಿಗೆ ರೈಡ್‌ಗೆ ಸಾಗಿದಾಗ ನಾವು ಗಮನಿಸಬಹುದಾದ ಮೊದಲ ವಿಷಯವೆಂದರೆ ಅದು ಬೈಕಿನ ನೇರವಾದ ನಿಲುವು ಮತ್ತು ಆರಾಮದಾಯಕವಾದ ರೈಡಿಂಗ್ ಕಂಫರ್ಟ್ ನೀಡುತ್ತದೆ. ಬೈಕಿನ ನೇರವಾದ ನಿಲುವು ಆಯಾಸ ಮುಕ್ತ ಬೈಕ್ ಸವಾರಿಗೆ ಅವಕಾಶ ನೀಡಲಿದ್ದು ವಿಶೇಷವಾಗಿ ದೂರದವರೆಗೆ ಯಾವುದೇ ತೊಂದರೆಯಿಲ್ಲದೆ ಸವಾರಿಗಾಗಿ ಮೆತ್ತನೆಯ ಸೀಟುಗಳು ಸಹ ಉತ್ತಮವಾಗಿವೆ.

ಜೊತೆಗೆ ಹೊಸ ಬೈಕಿನ ಫುಟ್‌ಪೆಗ್‌ಗಳ ಮಧ್ಯದಲ್ಲಿ ಹೊಂದಿಸಲ್ಪಟ್ಟಿರುವ ಅದರ ವಿಶಿಷ್ಟವಾದ ಸ್ಟಡ್ಡ್ ವಿನ್ಯಾಸಗಳು ಆಫ್-ರೋಡ್ ರೈಡ್‌ಗೆ ಪೂರಕವಾಗಿದ್ದು, ನಂತರದಲ್ಲಿ ಟ್ಯಾಂಕ್ ಪ್ಯಾಡ್‌ಗಳು ಸವಾರನಿಗೆ ಸ್ಟ್ಯಾಂಡ್-ಅಪ್ ರೈಡಿಂಗ್ ಸ್ಥಾನದಲ್ಲಿ ಟ್ಯಾಂಕ್ ಅನ್ನು ಹಿಡಿಯಲು ಅನುವು ಮಾಡಿಕೊಡುವುದಲ್ಲದೆ ನೇರವಾದ ಹ್ಯಾಂಡಲ್‌ಬಾರ್ ಯೆಜ್ಡಿ ಅಡ್ವೆಂಚರ್‌ಗೆ ಬಹುತೇಕ ಪರಿಪೂರ್ಣ ಅಡ್ವೆಂಚರ್ ಸ್ಥಾನವನ್ನು ನೀಡುತ್ತದೆ.

ಹೊಸ ಬೈಕಿನ ಎಂಜಿನ್ ಬಗೆಗೆ ಹೇಳುವುದಾದರೇ ಹೊಸ ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್ ಹೊಂದಿರುವ 334 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 8,000 ಅರ್‌ಪಿಎಂನಲ್ಲಿ 29.7 ಬಿಎಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 29.9 ಎನ್ಎಂ ಗರಿಷ್ಠ ಟಾರ್ಕ್ ಔಟ್‌ಪುಟ್ ಹೊಂದಿದೆ.

ಹೊಸ ಮೋಟಾರ್‌ಸೈಕಲ್ ಹೆಚ್ಚಿನ ಆರ್‌ಪಿಎಂಗಳಲ್ಲಿನ ಶಕ್ತಿ ಮತ್ತು ಟಾರ್ಕ್ ಉತ್ತಮವಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಹಿಡಿತದೊಂದಿಗೆ ಆಫ್ ರೋಡ್‌ನಲ್ಲಿ ಮಾತ್ರವಲ್ಲ ಆನ್ ರೋಡ್‌ಗಳಲ್ಲೂ ಹೆಚ್ಚಿನ ಶಕ್ತಿ ಉತ್ಪಾದನೆಯೊಂದಿಗೆ ಗಮನಸೆಳೆಯುತ್ತದೆ.

ಹಾಗೆಯೇ ಹೊಸ ಬೈಕ್ ಮೂಲಕ ಹೆದ್ದಾರಿ ಚಾಲನೆಯಲ್ಲಿ ಓವರ್‌ಟೇಕಿಂಗ್‌ಗಾಗಿ ನೀವು ಡೌನ್‌ಶಿಫ್ಟ್ ಮಾಡಬೇಕಾಗಿದ್ದು, ಆದಾಗ್ಯೂ, ಯೆಜ್ಡಿ ಅಡ್ವೆಂಚರ್ ಮಾದರಿಯು ಅದ್ಭುತವಾದ ಟೂರಿಂಗ್ ಯಂತ್ರವೆಂದರೆ ತಪ್ಪಾಗಲಾರದು. ಹೊಸ ಬೈಕಿನ ಎಂಜಿನ್ ಉತ್ಪಾದಿಸುವ ಶಕ್ತಿ ಮತ್ತು ಟಾರ್ಕ್ ಮಧ್ಯಮ ಮತ್ತು ಹೆಚ್ಚಿನ ಶ್ರೇಣಿಯಲ್ಲಿ ಉತ್ತಮವಾಗಿದ್ದು, ಆದ್ಯತೆಯ ವೇಗದಲ್ಲಿ ಆಫ್-ರೋಡ್ ಸವಾರಿ ಮಾಡಲು ಇದು ಸಹಕಾರಿಯಾಗಿದೆ.

ಆದಾಗ್ಯೂ ನೀವು ಕಡಿಮೆ ಆರ್‌ಪಿಎಂಗಳಲ್ಲೂ ಹೆಚ್ಚಿನ ಟಾರ್ಕ್ ಅನ್ನು ಬಯಸಲಿದ್ದು, ವಿಶೇಷವಾಗಿ ಆಫ್-ರೋಡ್‌ನಲ್ಲಿ ಅಡಚಣೆಯನ್ನು ಎದುರಿಸಿದಾಗ ಅವಶ್ಯವಾಗಿದೆ. ಅಕಿಲ್ಸ್ ಹೀಲ್ ಮತ್ತು ಅದರ ಹೈ-ರಿವಿವಿಂಗ್ ಎಂಜಿನ್ ಕಡಿಮೆ ವೇಗದಲ್ಲೂ ಬಂಡೆಯಂತಹ ಅಡಚಣೆಯನ್ನು ಎದುರಿಸಿದಾಗ ಚಕ್ರಕ್ಕೆ ಹೆಚ್ಚಿನ ಶಕ್ತಿಯನ್ನು ಪಡೆಯಲು ಕ್ಲಚ್ ಬಳಸಬೇಕಾಗುತ್ತದೆ.

ಇದರೊಂದಿಗೆ ಹೊಸ ಬೈಕಿನ ಎಂಜಿನ್ ಅನ್ನು ವಿವಿಧ ಪರಿಸ್ಥಿತಿಗಳಲ್ಲೂ ಬೇಗನೆ ತಂಪಾಗುವಂತೆ ಮಾಡಲು ಹೊಸ ತಂತ್ರಜ್ಞಾನ ಬಳಸಿರುವುದಾಗಿ ಯೆಜ್ಡಿ ಹೇಳಿಕೊಂಡಿದ್ದು, ಹೊಸ ರೇಡಿಯೇಟರ್ ಸೆಟಪ್ ಅನ್ನು ಬಳಸಿಕೊಳ್ಳುವ ಮೂಲಕ ಕೂಲಿಂಗ್ ಪೈಪ್ ಜೋಡಣೆಯಲ್ಲಿ ಗಮನಸೆಳೆದಿದ್ದು, ಸಮತಲವಾಗಿರುವ ಪೈಪ್‌ಗಳು ಕೂಲಿಂಗ್ ಅನ್ನು ಇತರೆ ಬೈಕ್ ಮಾದರಿಗಳಿಂತಲೂ ಶೇಕಡಾ 50 ರಷ್ಟು ಹೆಚ್ಚು ಪರಿಣಾಮಕಾರಿಯಾಗಿಸಲು ಅನುವು ಮಾಡಿಕೊಡುತ್ತದೆ.

ಜೊತೆಗೆ ಬೈಕ್ ನಿರ್ವಹಣೆಯೂ ಕೂಡಾ ಉತ್ತಮವಾಗಿದ್ದು, ಸಹಜವಾಗಿಯೇ ನಿರ್ವಹಣೆ ವಿಚಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇದನ್ನು ಇಂಜಿನಿಯರ್‌ಗಳು ಸಂಪೂರ್ಣ ನಿರ್ವಹಣೆಗಿಂತಲೂ ಸವಾರಿಯ ಗುಣಮಟ್ಟ ಆದ್ಯತೆಯೊಂದಿಗೆ ಅತ್ಯುತ್ತಮವಾಗಿ ಟ್ಯೂನ್ ಮಾಡಿದ್ದಾರೆ.

ರೈಡಿಂಗ್ ವೇಳೆ ನಾವು ಹೊಸ ಬೈಕಿನೊಂದಿಗೆ ದೊಡ್ಡ ಬಂಡೆಗಳ ಮಧ್ಯೆ ಎರಡು ಬಾರಿ ಹೆಚ್ಚಿನ ಮಟ್ಟದಲ್ಲಿ ಜಂಪ್ ಮಾಡಿದರೂ ಯಾವುದೇ ಅಯಾಸವಿಲ್ಲದ ಸವಾರಿಯನ್ನು ಖಾತ್ರಿಪಡಿಸುವಲ್ಲಿ ಯೆಜ್ಡಿ ಅಡ್ವೆಂಚರ್ ಶಕ್ತವಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಷೆಷನ್ ಅನ್ನು ಹೊಂದಿದೆ.

ಹೊಸ ಬೈಕಿನ ಮುಂಭಾಗದಲ್ಲಿ 200 ಎಂಎಂ ಟ್ರಾವೆಲ್ ಸಸ್ಷೆಷನ್ ಮತ್ತು ಹಿಂಬದಿಯಲ್ಲಿ 180 ಎಂಎಂ ಟ್ರಾವೆಲ್ ಸಸ್ಷೆಷನ್‌ನೊಂದಿಗೆ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದನ್ನು ಡಬಲ್-ಕ್ರೇಡಲ್ ಫ್ರೇಮ್ನಲ್ಲಿ ನಿರ್ಮಿಸಲಾಗಿದ್ದು, ಈ ಸಂಪೂರ್ಣ ಸೆಟಪ್ ದೂರದ ಪ್ರವಾಸಗಳಿಗೆ ಮತ್ತು ಮಧ್ಯಮ ಕ್ರಮಾಂಕದ ಆಫ್-ರೋಡಿಂಗ್‌ಗೆ ಸೂಕ್ತವಾಗಿದೆ.

ಇನ್ನು ಹೊಸ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿದ್ದು, ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಬ್ರೇಕ್‌ಗಳ ಆರಂಭಿಕ ಬೈಟ್ ಅದ್ಭುತವಾಗಿದೆ.

ಮತ್ತೊಂದು ವಿಶೇಷತೆಯೆಂದರೆ ಆಫ್ ರೋಡ್ ಚಾಲನೆ ವೇಳೆ ಎಬಿಎಸ್ ಕಾರ್ಯನಿರ್ವಹಣೆಯನ್ನು ಸ್ವಿಚ್ ಮೂಲಕ ನಿಯಂತ್ರಣ ಮಾಡಬಹುದಾಗಿದ್ದು, ರೋಡ್, ರೈನ್ ಮತ್ತು ಆಫ್ ರೋಡ್ ಮೋಡ್‌ಗಳು ಬೈಕ್ ಚಾಲನೆ ಮತ್ತಷ್ಟು ಮೆರಗು ನೀಡುತ್ತವೆ.

ಯೆಜ್ಡಿ ಅಡ್ವೆಂಚರ್ ಬಣ್ಣಗಳ ಆಯ್ಕೆ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಮೂರು ಬಣ್ಣ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದ್ದು, ಬೆಲೆ ಕೂಡಾ ಖರೀದಿದಾರರು ಆಯ್ಕೆ ಮಾಡಿದ ಬಣ್ಣವನ್ನು ಅವಲಂಬಿಸಿ ನಿರ್ಧಾರವಾಗಲಿದೆ.
ಸ್ಲಿಕ್ ಸಿಲ್ವರ್ - ರೂ. 2,09,900
ಮ್ಯಾಂಬೋ ಬ್ಲ್ಯಾಕ್ - ರೂ. 2,11,900
ರೇಂಜರ್ ಕ್ಯಾಮೊ - ರೂ. 2,18,900

ಈ ಮೂಲಕ ಯೆಜ್ಡಿ ಅಡ್ವೆಂಚರ್ ಮಾದರಿಯು ತನ್ನ ಸೆಗ್ಮೆಂಟ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಗೆ ಮಾತ್ರ ನೇರ ಪ್ರತಿಸ್ಪರ್ಧಿಯಾಗಿದ್ದರೂ ಹಿಮಾಲಯನ್ ಮಾದರಿಯು ಯೆಜ್ಡಿ ಅಡ್ವೆಂಚರ್‌ಗಿಂತಲೂ ಹೆಚ್ಚು ದುಬಾರಿಯಾಗಿದೆ. ಯೆಜ್ಡಿ ಅಡ್ವೆಂಚರ್ ಮಾದರಿಯುಲ್ಲಿ ಹಿಮಾಲಯನ್ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಗಳಿದ್ದು, ಹಿಮಾಲಯನ್ ನಂತರ ಯೆಜ್ಡಿ ಅಡ್ವೆಂಚರ್ ಮಾದರಿಯು ಇತರೆ ಮೋಟಾರ್‌ಸೈಕಲ್ ಮಾದರಿಗಳಾದ ಕೆಟಿಎಂ 250 ಅಡ್ವೆಂಚರ್, ಬೆನೆಲ್ಲಿ ಟಿಆರ್‌ಕೆ 251 ಮತ್ತು ಕೆಟಿಎಂ 390 ಅಡ್ವೆಂಚರ್ ಮಾದರಿಯೂ ಪೈಪೋಟಿ ನೀಡಬಹುದಾದ ವೈಶಿಷ್ಟ್ಯತೆಗಳನ್ನು ಪಡೆದಿದೆ.


Click it and Unblock the Notifications








