ಬಡವರ ಬೈಕ್ ಸೂಪರ್ ಹಿಟ್: ಒಂದೇ ವರ್ಷದಲ್ಲಿ 3 ಲಕ್ಷ ಮಾರಾಟ!

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ ಒಂದು ವರ್ಷದಲ್ಲಿ ಶೈನ್ 100 ಮಾದರಿಯ ಮೂರು ಲಕ್ಷ ಯುನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದೆ ಎಂದು ಘೋಷಿಸಿದೆ. ಇದು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.

ವಾರ್ಷಿಕೋತ್ಸವದ ಅಂಗವಾಗಿ, ಹೋಂಡಾ ಭಾರತದಾದ್ಯಂತ ಹಲವಾರು ನಗರಗಳಲ್ಲಿ ಶೈನ್ 100 ಬೈಕಿನ ಮೆಗಾ ಡೆಲಿವರಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಪಾನಿನ ತಯಾರಕರು 2023-24ರ ಹಣಕಾಸು ವರ್ಷದಲ್ಲಿ 100 cc ಯಿಂದ 110 cc ವಿಭಾಗದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಹೋಂಡಾ ಶೈನ್ 100 (Honda Shine 100) ಬೈಕ್ ಮಾರಾಟ ಸಂಖ್ಯೆಗಳು ಕೂಡ ಅದ್ಭುತವಾಗಿದೆ. ಅದರ ಯಾವುದೇ ಅಲಂಕಾರಗಳಿಲ್ಲದ ಸ್ಟೈಲಿಂಗ್‌ಗಾಗಿ ಇದು ಮೊದಲ ಬಾರಿಗೆ ಖರೀದಿದಾರರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ.

Honda Shine 100

ಅಲ್ಲದೇ ಈ ಹೋಂಡಾ ಶೈನ್ ಭರ್ಜರಿ ಮೈಲೇಜ್ ಮತ್ತು ಸ್ಪರ್ಧಾತ್ಮಕ ಬೆಲೆಯಿಂದ ಕೂಡ ಗ್ರಾಹಕರನ್ನು ಸೆಳೆಯುತ್ತಿದೆ. ಹೆಚ್ಚುವರಿಯಾಗಿ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 6,000 ಕ್ಕೂ ಹೆಚ್ಚು ಮಾರಾಟ ಮತ್ತು ಸರ್ವಿಸ್ ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತದೆ.

1ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಸುತ್ಸುಮು ಒಟಾನಿ ಮಾತನಾಡಿ, ಹೋಂಡಾ ಶೈನ್ 100 ತನ್ನ ಮೊದಲ ವರ್ಷವನ್ನು ನಮ್ಮ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೊಂದಿಗೆ ಪೂರ್ಣಗೊಳಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ, ಇದು ಕೈಗೆಟುಕುವ ಮತ್ತು ವಿಶ್ವಾಸಾರ್ಹ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

Honda Shine 100

ಈ ಮೋಟಾರ್‌ಸೈಕಲ್ ನಮ್ಮ ಗ್ರಾಹಕರಿಗೆ ಅಸಾಧಾರಣ ಮೌಲ್ಯ ಮತ್ತು ಉತ್ತಮ ಮಾಲೀಕತ್ವದ ಅನುಭವವನ್ನು ಒದಗಿಸಲು ಹೋಂಡಾದ ಬದ್ಧತೆಯನ್ನು ಸಾಕಾರಗೊಳಿಸುತ್ತದೆ. ನಾವು ನಿರೀಕ್ಷೆಗಳನ್ನು ಮೀರಿದ ಉತ್ಪನ್ನಗಳನ್ನು ತಲುಪಿಸುವತ್ತ ಗಮನಹರಿಸುವುದನ್ನು ಮುಂದುವರಿಸುತ್ತೇವೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.

2023ರ ಮಾರ್ಚ್ ತಿಂಗಳಿನಲ್ಲಿ ಕಂಪನಿಯು ಮಧ್ಯದಲ್ಲಿ ಶೈನ್ 100 ಅನ್ನು ಪರಿಚಯಿಸಿತು. ಈ ಹೋಂಡಾ ಶೈನ್ 100 ಬೈಕ್ ಪ್ರಸ್ತುತ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.64,900 ಆಗಿದೆ. ಈ ಬೈಕಿಗೆ ಪವರ್ ನೀಡುವುದು ಹೋಂಡಾದ eSP ತಂತ್ರಜ್ಞಾನದೊಂದಿಗೆ ಎಲ್ಲಾ-ಹೊಸ 100 cc OBD2 ಕಂಪ್ಲೈಂಟ್ Fi ಎಂಜಿನ್ ಆಗಿದೆ. ಇದು 7.3 hp ಪವರ್ ಮತ್ತು 05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ್ನು ಹೊಂದಿದೆ.

Honda Shine 100

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಹೋಂಡಾ ಶೈನ್ 100 ಬೈಕಿಗೆ 10-ವರ್ಷದ ವಾರಂಟಿ ಪ್ಯಾಕೇಜ್ (3 ವರ್ಷಗಳ ಸ್ಟ್ಯಾಂಡರ್ಡ್ + 7 ವರ್ಷಗಳ ಆಯ್ಕೆಯ ವಿಸ್ತೃತ ವಾರಂಟಿ) ಅನ್ನು ಸಹ ನೀಡುತ್ತಿದೆ. ಅದರ ದೊಡ್ಡ ಒಡಹುಟ್ಟಿದವರಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆದುಕೊಂಡು, ಹೋಂಡಾ ಶೈನ್ 100 677 ಎಂಎಂ ಉದ್ದದ ಸೀಟ್ ಮತ್ತು ನೇರ ಸವಾರಿ ಸ್ಥಾನವನ್ನು ಹೊಂದಿದೆ.

ಈ ಹೋಂಡಾ ಶೈನ್ 100 ಬೈಕಿನ ತ್ತರ 786 ಎಂಎಂ ಆಗಿದೆ. ಈ ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ ಇನ್-ಬಿಲ್ಟ್ ಸೈಡ್ ಸ್ಟ್ಯಾಂಡ್ ಎಂಜಿನ್ ಇನ್ಹಿಬಿಟರ್ ಮತ್ತು ಡ್ಯುಯಲ್ ರಿಯರ್ ಶಾಕ್‌ಗಳು, ಡ್ಯುಯಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಅಲ್ಯೂಮಿನಿಯಂ ಗ್ರಾಬ್ ರೈಲ್, ಹ್ಯಾಲೊಜೆನ್ ಲೈಟಿಂಗ್ ಯುನಿಟ್‌ಗಳು ಇತ್ಯಾದಿಗಳೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 23, 2024, 19:16 [IST]
English summary
Honda shine 100 achieves 3 lakh unit sales in a year details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+