Honda Activa Electric: ಹೋಂಡಾ ಆಕ್ಟೀವಾ ಇವಿ ಬಿಡುಗಡೆ ಯಾವಾಗ? ಬೆಲೆ, ವೈಶಿಷ್ಟ್ಯಗಳ ಮಾಹಿತಿ!
Honda Activa Electric: ದ್ವಿಚಕ್ರ ವಾಹನ ವಿಭಾಗದಲ್ಲಿ ಆಕ್ಟೀವಾದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿರುವ ಹೋಂಡಾ ಕಂಪನಿಯು, ಇದೇ ಆಕ್ಟೀವಾವನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಸದ್ಯ ಓಲಾ, ಏಥರ್, ಟಿವಿಎಸ್ ಐಕ್ಯೂಬ್ ಇವಿ ವಿಭಾಗದಲ್ಲಿ ಜನಪ್ರಿಯತೆ ಪಡೆದಿದ್ದು, ಈ ಬ್ರಾಂಡ್‌ಗಳನ್ನು ಹೋಂಡಾ ತನ್ನ ಆಕ್ಟೀವಾ ಇವಿಯೊಂದಿಗೆ ಹಿಂದಿಕ್ಕಲು ನೋಡುತ್ತಿದೆ.
ಈ ಸ್ಕೂಟರ್ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಎಲೆಕ್ಟ್ರಿಕ್ ಆಕ್ಟಿವಾವನ್ನು ಬರುವುದು ಪಕ್ಕಾ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಸ್ಕೂಟರ್ ಅನ್ನು ಜೂನ್ 2025 ರಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ. ಈ ಸ್ಕೂಟರ್ ಆಕ್ಟಿವಾ ಪೆಟ್ರೋಲ್ ಆವೃತ್ತಿಗಿಂತ ಉತ್ತಮವಾಗಿರಲಿದೆ ಎಂದು ನಂಬಲಾಗಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ಇದು ಸುಮಾರು 1.02 ಲಕ್ಷ ರೂ.ಗಳಿಂದ 1.23 ಲಕ್ಷ ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಆಕ್ಟಿವಾವನ್ನು ನವೀಕರಿಸಲಾದ ಡಿಸೈನ್‌ನೊಂದಿಗೆ ಬಜೆಟ್ ಸ್ನೇಹಿಯನ್ನಾಗಿ ಪರಿಚಯಿಸಲು ಕಂಪನಿ ನೋಡುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವೈಶಿಷ್ಟ್ಯಗಳು, ರೇಂಜ್, ಟಾಪ್ ಸ್ಪೀಡ್ ಬಗ್ಗೆ ವಿವರವಾಗಿ ನೋಡೋಣ.

ಮುಂಬರಲಿರುವ ಹೊಸ ಎಲೆಕ್ಟ್ರಿಕ್ ಆಕ್ಟೀವಾ ಇವಿ ಸ್ಕೂಟರ್, 3.78 ಕಿಲೋವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸಿಂಗಲ್ ಚಾರ್ಜ್‌ನಲ್ಲಿ 140 ಕಿ.ಮೀ ನಿಂದ 160 ಕಿ.ಮೀ ರೇಂಜ್ ನೀಡಲಿದೆ. ಈ ಸ್ಕೂಟರ್‌ನಲ್ಲಿ 12 ಇಂಚಿನ ಅಲಾಯ್ ವೀಲ್‌ಗಳನ್ನು ಸಹ ನೀಡಲಾಗುವುದು. ಈ ಸ್ಕೂಟರ್‌ನ ಅತ್ಯುತ್ತಮ ರೇಂಜ್‌ನೊಂದಿಗೆ, ಇಂಧನ ಚಾಲಿತ ಆಕ್ಟಿವಾಗೆ ಹೋಲಿಸಿದರೆ ಗ್ರಾಹಕರು ಸಾಕಷ್ಟು ಹಣ ಉಳಿಸಬಹುದು.
ಇದರ ಟಾಪ್ ಸ್ಪೀಡ್ ಗಂಟೆಗೆ 65 ಕಿ.ಮೀ ಇರಬಹುದು ಎನ್ನಲಾಗಿದ್ದು, ನಂತರದ ದಿನಗಳಲ್ಲಿ ಅಪ್‌ಡೇಟ್ ಮಾಡಲಾಗುವುದು. ಈ ಸ್ಕೂಟರ್‌ನಲ್ಲಿ ನಿಮಗೆ ಡಿಜಿಟಲ್ ಡಿಸ್ಪ್ಲೇ ನೀಡಲಾಗುತ್ತಿದ್ದು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಯಾಟರಿ ರೇಂಜ್ ಇತ್ಯಾದಿಗಳನ್ನು ಕಾಣಬಹುದು. ಇದರೊಂದಿಗೆ, ಈ ಸ್ಕೂಟರ್ ನಲ್ಲಿ ಬ್ಲೂಟೂತ್ ಸಂಪರ್ಕ, ಫೋನ್ ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಜೊತೆಗೆ ಮ್ಯೂಸಿಕ್ ಕಂಟ್ರೋಲ್ ಸಿಸ್ಟಮ್ ಅನ್ನು ಸಹ ಒದಗಿಸಲಾಗುತ್ತಿದೆ.

ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ (Honda Activa Electric Scooter) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್, ಪ್ಲಾಟ್‌ಫಾರ್ಮ್ ಇ ಎಂಬ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದನ್ನು ವಿವಿಧ ಬ್ಯಾಟರಿ ಆರ್ಕಿಟೆಕ್ಚರ್ ಮತ್ತು ಇನ್‌ಸ್ಟಾಲೇಶನ್‌ನೊಂದಿಗೆ ಮುಂಬರುವ ಅನೇಕ ಎಲೆಕ್ಟ್ರಿಕ್ ಮಾದರಿಗಳಿಗೆ ಬಳಸಲಾಗುತ್ತದೆ. ಜಪಾನಿನ ದ್ವಿಚಕ್ರ ವಾಹನ ತಯಾರಕರು ಈಗಾಗಲೇ ಸ್ಥಿರ ಬ್ಯಾಟರಿ, ಮೋಟಾರ್‌ಗಳು, ನಿಯಂತ್ರಕಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದ್ದಾರೆ.
ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್‌ನ ಅಡಿಯಲ್ಲಿ ಸ್ಥಿರ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಹಬ್ ಮೋಟರ್ ಅನ್ನು ಹೊಂದಿರುತ್ತದೆ ಎಂದು ಪೇಟೆಂಟ್‌ಗಳು ಸುಳಿವು ನೀಡಿವೆ. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಮತ್ತೊಂದು ಹೊಸ ಇವಿಯನ್ನು ಪರಿಚಯಿಸಲಿದೆ.

ಈ ಹೊಸ ಇವಿ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಯೊಂದಿಗೆ ಬರುವ ಸಾಧ್ಯತೆಯಿದೆ. ದ್ವಿಚಕ್ರ ವಾಹನ ತಯಾರಕ ರಾಷ್ಟ್ರವ್ಯಾಪಿ ತನ್ನ 6,000 ಟಚ್‌ಪಾಯಿಂಟ್‌ಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಬಹಿರಂಗಪಡಿಸಿದೆ. ಸದ್ಯ ಹೋಂಡಾ ಇವಿ ಸ್ಕೂಟರ್ ಬಗ್ಗೆ ದೊರೆತಿರುವ ಅಲ್ಪ ಮಾಹಿತಿಯಾಗಿದೆ. ಈ ಸ್ಕೂಟರ್ ಬಿಡುಗಡೆಯಾದ ನಂತರ, ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು. ಸ್ಕೂಟರ್ ಅನ್ನು ಜೂನ್ 2025 ರಲ್ಲಿ ಬಿಡುಗಡೆ ಮಾಡುವುದಾಗಿ ನಿರೀಕ್ಷಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications