Honda: 30 ಲಕ್ಷ ಮನೆಗಳ ತಲುಪಿ ಹೊಸ ಅಲೆ ಎಬ್ಬಿಸಿದ ಹೋಂಡಾದ 2 ಮೈಲೇಜ್ ಬೈಕ್‌ಗಳು!
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಹೊಸ ಮೈಲಿಗಲ್ಲಿನ್ನು ಸಾಧಿಸಿದೆ. ಹೋಂಡಾದ 125cc ಮೋಟಾರ್ ಸೈಕಲ್‌ಗಳಾದ ಶೈನ್ 125 ಮತ್ತು SP125 ಭಾರತದ ಪೂರ್ವ ಭಾಗದಲ್ಲಿ 30 ಲಕ್ಷ ಗ್ರಾಹಕರ ಮನೆಗಳನ್ನು ತಲುಪಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳನ್ನು ಒಳಗೊಂಡಿರುವ ಪೂರ್ವ ಭಾಗದ ಭಾರತದಲ್ಲಿ ಗುಣಮಟ್ಟದ ಉತ್ಪನ್ನಗಳು ಮತ್ತು ನೆಟ್‌ವರ್ಕ್‌ನೊಂದಿಗೆ ಹೋಂಡಾ (Honda) ಗ್ರಾಹಕರ ನಂಬಿಕೆಯನ್ನು ಗಳಿಸಿದೆ. ಈ ಮೂಲಕ ಪೂರ್ವ ಭಾರತದಲ್ಲಿ 125cc ಮೋಟಾರ್‌ಸೈಕಲ್ ವಿಭಾಗದಲ್ಲಿ ಪ್ರಬಲ ಆಟಗಾರನಾಗಿ HMSI ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. FY 24 (ಆರ್ಥಿಕ ವರ್ಷ 24) ರಲ್ಲಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ಭಾರತ ರಾಜ್ಯಗಳನ್ನು ಒಳಗೊಂಡಿರುವ ಪೂರ್ವ ಭಾರತವು ಶೇ 41.5 ರಷ್ಟು ಮಾರುಕಟ್ಟೆ ಪಾಲನ್ನು ಧಕ್ಕಿಸಿಕೊಂಡು, 125cc ಮೋಟಾರ್‌ಸೈಕಲ್ ವಿಭಾಗದಲ್ಲಿ HMSI ಪ್ರಾಬಲ್ಯ ಹೊಂದಿದೆ.

ಈ ಗಮನಾರ್ಹ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಹಾರವು ಪೂರ್ವ ಪ್ರದೇಶದಲ್ಲಿ 125cc ಮೋಟಾರ್‌ಸೈಕಲ್ ಮಾರಾಟಕ್ಕೆ ಶೇ35 ರಷ್ಟು ಕೊಡುಗೆಯೊಂದಿಗೆ ಹೋಂಡಾಗೆ ಅತಿ ಹೆಚ್ಚು ಲಾಭ ನೀಡಿರುವ ರಾಜ್ಯವಾಗಿ ಗುರ್ತಿಸಿಕೊಂಡಿದೆ. ಅಲ್ಲದೇ ಬಿಹಾರದಲ್ಲಿ ಹೋಂಡಾದ 125cc ಮೋಟಾರ್ ಸೈಕಲ್‌ಗಳಾದ ಶೈನ್ 125 ಮತ್ತು SP125 ಬೈಕ್‌ಗಳಿಗೆ ಪ್ರತ್ಯೇಕ ಅಭಿಮಾನಿಗಳಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಸುಧಾರಿತ ವೈಶಿಷ್ಟ್ಯಗಳು, ಸೊಗಸಾದ ವಿನ್ಯಾಸ ಮತ್ತು ಉನ್ನತ ತಂತ್ರಜ್ಞಾನದೊಂದಿಗೆ ಗ್ರಾಹಕರನ್ನು ತೃಪ್ತಿಪಡಿಸುತ್ತಿರುವ ಹೋಂಡಾ ಶೈನ್ 125 ಮತ್ತು SP125 ಮೋಟಾರ್‌ಸೈಕಲ್‌ಗಳು, 125cc ವಿಭಾಗದಲ್ಲಿ ಗ್ರಾಹಕರ ಆದ್ಯತೆಯ ಆಯ್ಕೆಯಾಗಿದೆ. ಅಲ್ಲದೆ, ಗ್ರಾಹಕರಿಗೆ ಆಧುನಿಕ ತಂತ್ರಜ್ಞಾನದೊಂದಿಗೆ SP125 ನ ಮಾರಾಟವು ಈ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಈ ಗಮನಾರ್ಹ ಸಾಧನೆಯ ಕುರಿತು ಮಾತನಾಡಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್, "ಪೂರ್ವ ಭಾರತದಲ್ಲಿ ಶೈನ್ 125 ಮತ್ತು SP125 ಗಾಗಿ 30 ಲಕ್ಷ ಮಾರಾಟದ ಮಹತ್ವದ ಮೈಲಿಗಲ್ಲನ್ನು ಆಚರಿಸಲು ನಾವು ರೋಮಾಂಚನಗೊಂಡಿದ್ದೇವೆ. HMSI ನಲ್ಲಿ, ತೀವ್ರ ಪೈಪೋಟಿಯ ವಿಭಾಗದಲ್ಲಿ ನಮ್ಮ 125cc ಮೋಟಾರ್ ಸೈಕಲ್‌ಗಳ ನಿರಂತರ ಯಶಸ್ಸಿನ ಕಥೆಯ ಬಗ್ಗೆ ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ. ನಿಜವಾಗಿಯೂ ಭಾರತೀಯ ಕುಟುಂಬಗಳು ವಿಶ್ವಾಸಾರ್ಹ ಒಡನಾಡಿಯಾಗಿದ್ದಾರೆ ಎಂದು ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್ ಹೇಳಿದರು.
ನಮ್ಮ ಮೌಲ್ಯಯುತ ಗ್ರಾಹಕರ ವಿಶ್ವಾಸಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಗ್ರಾಹಕರ ನಿರೀಕ್ಷೆಗಳನ್ನು ನಿರಂತರವಾಗಿ ಮೀರಲು ಬದ್ಧರಾಗಿದ್ದೇವೆ. ಬ್ರಾಂಡ್‌ನಲ್ಲಿ ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ವರ್ಧಿಸುವ ನಿಟ್ಟಿನಲ್ಲಿ ಹೋಂಡಾದ ಉನ್ನತ ಮಾರಾಟ ಮತ್ತು ಸೇವಾ ಜಾಲವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈಗಾಗಲೇ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಭಾರತದ ಪೂರ್ವ ರಾಜ್ಯಗಳಲ್ಲಿ 1,100 ಟಚ್‌ಪಾಯಿಂಟ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ಇನ್ನೂ ಹತ್ತಿರವಾಗಿದ್ದೇವೆ. ವಿಶ್ವಾಸಾರ್ಹ ಮೋಟಾರ್‌ಸೈಕಲ್‌ಗಳೊಂದಿಗೆ ಇನ್ನೂ ಹೆಚ್ಚಿನ ಟಚ್‌ಪಾಯಿಂಟ್‌ಗಳನ್ನು ಭಾರತದಲ್ಲಿ ಸ್ಥಾಪಿಸಿ ಗ್ರಾಹಕರಿಗೆ ಸೌಕರ್ಯಯುವತ ಸೇವೆಯನ್ನು ಒದಗಿಸಲು ಬದ್ದವಾಗಿರುವುದಾಗಿ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications