Ultraviolette F77 Superstreet Review: ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ ರಿವ್ಯೂ, ಹೇಗಿದೆ.. ಯಾರು ಹೇಳಲ್ಲ!

ಬೆಂಗಳೂರು (Bangalore) ಮೂಲದ ಅಲ್ಟ್ರಾವೈಲೆಟ್ (Ultraviolette), ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಎಫ್77 ಮ್ಯಾಕ್ 2 (F77 Mach 2) ಇ-ಬೈಕ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದರ ಅದ್ಬುತವಾದ ನೋಟ, ಹೆಚ್ಚಿನ ರೇಂಜ್ ಹಾಗೂ ಗರಿಷ್ಠ ಟಾರ್ಕ್ ಉತ್ಪಾದನೆಯೂ ಖರೀದಿದಾರರನ್ನು ಸೆಳೆದಿದೆ. ಇದೀಗ ಮತ್ತಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುಲು ಅಲ್ಟ್ರಾವೈಲೆಟ್ ಕಂಪನಿಯು ಎಫ್77 ಸೂಪರ್‌ಸ್ಟ್ರೀಟ್ (F77 Superstreet) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಪರಿಚಯಿಸಿದೆ.

ಇತ್ತೀಚೆಗೆ ನಮ್ಮ ತಂಡಕ್ಕೆ ಬೆಂಗಳೂರಿನಲ್ಲಿ ನೂತನ ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ (Ultraviolette F77 Superstreet) ಇ-ಬೈಕ್‌ ಟೆಸ್ಟ್ ರೈಡ್ ಮಾಡುವ ಅವಕಾಶ ಲಭ್ಯವಾಯಿತು. ಬನ್ನಿ.. ಈ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

Ultraviolette F77 Superstreet Review Specs Riding Impressions Design Features Details

ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ ಹೇಗಿದೆ: ಈ ಹೊಸ ಎಲೆಕ್ಟ್ರಿಕ್ ಬೈಕ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಎಫ್77 ಮ್ಯಾಕ್ 2ಗೆ ಹೋಲಿಕೆ ಮಾಡಿದರೆ, ನೂತನ ಎಫ್77 ಸೂಪರ್‌ಸ್ಟ್ರೀಟ್‌ ಮೋಟಾರ್‌ಸೈಕಲ್‌ ಪಡೆದುಕೊಂಡಿರುವ ಬದಲಾವಣೆಯನ್ನು ಮುಂಭಾಗದಲ್ಲಿ (ಫ್ರಂಟ್) ನೋಡಬಹುದು. ಇದು ಮರುವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲೈಟ್ ಹೊಂದಿದ್ದು, ನೋಡುಗರ ಗಮನವನ್ನು ಸೆಳೆಯುತ್ತದೆ.

ಮತ್ತೊಂದೆಡೆ ಹೆಡ್‌ಲೈಟ್ ಮೇಲ್ಭಾಗದಲ್ಲೇ 5-ಇಂಚಿನ ಟಿಎಫ್‌ಟಿ ಸ್ಕ್ರೀನ್‌ ಇರುವುದನ್ನು ಕಾಣಬಹುದು. ದೊಡ್ಡದಾದ ಬಾಡಿ ಪ್ಯಾನೆಲ್‌ಗಳು, ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಹೊಂದಿದೆ. ಜೊತೆಗೆ ಹೊಸದಾಗಿರುವ ಹ್ಯಾಂಡಲ್‌ಬಾರ್‌ನ್ನು ಕೂಡ ಒಳಗೊಂಡಿರುವುದನ್ನು ನೋಡಬಹುದು. ಇದು ಬಿಟ್ಟರೆ, ನೂತನ ಎಫ್77 ಸೂಪರ್‌ಸ್ಟ್ರೀಟ್‌ನ ಎಲ್ಲ ವಿನ್ಯಾಸ ಅಂಶಗಳು ಎಫ್77 ಮ್ಯಾಕ್ 2ಗೆ ಹೋಲಿಕೆಯಾಗುತ್ತವೆ.

Ultraviolette F77 Superstreet Review Specs Riding Impressions Design Features Details

ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ ಯಾವ ರೀತಿ ಕೆಲಸ ಮಾಡುತ್ತದೆ: ಈ ಬೈಕ್ ಎರಡು ವಿಧದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ಸ್ಟ್ಯಾಂಡರ್ಡ್ ಸೂಪರ್‌ಸ್ಟ್ರೀಟ್ ಮಾಡೆಲ್, 7.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ ಸೂಪರ್‌ಸ್ಟ್ರೀಟ್ ರೆಕಾನ್ ಮಾಡೆಲ್, 10.3 ಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಇವೆರೆಡು ಮಾಡೆಲ್‌ಗಳು ಭರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 211 ರಿಂದ ಕಿಲೋಮೀಟರ್ ರೇಂಜ್ (ಐಡಿಸಿ) ರೇಂಜ್ ನೀಡುತ್ತವೆ.

ಸ್ಟ್ಯಾಂಡರ್ಡ್ ಅಥವಾ ಬೇಸ್ ಸೂಪರ್‌ಸ್ಟ್ರೀಟ್ ಮಾಡೆಲ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 36.2 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 90 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0-60 ಕೆಎಂಪಿಹೆಚ್ ಹಾಗೂ 7.8 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Ultraviolette F77 Superstreet Review Specs Riding Impressions Design Features Details

ಇನ್ನೊಂದು ಸೂಪರ್‌ಸ್ಟ್ರೀಟ್ ರೆಕಾನ್ ಮಾಡೆಲ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 40.2 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 100 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಮಾತ್ರವಲ್ಲದೆ, ಈ ಮಾಡೆಲ್‌ಗಳು 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿವೆ.

ಸುರಕ್ಷತೆಗಾಗಿ ಏನಿದೆ: ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ ಎಲೆಕ್ಟ್ರಿಕ್ ಬೈಕ್, ಮುಂಭಾಗ (ಫ್ರಂಟ್) 4 ಎಂಎಂ ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸವಾರರ ರಕ್ಷಣೆಗಾಗಿ ಮುಂದೆ 320 ಎಂಎಂ ಮತ್ತು ಹಿಂದೆ 230 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Ultraviolette F77 Superstreet Review Specs Riding Impressions Design Features Details

ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 17-ಇಂಚಿನ ಅಲಾಯ್ ವೀಲ್‌ಗಳು, ಮುಂಭಾಗ (ಫ್ರಂಟ್) 110/70 ಆರ್17 ಹಾಗೂ ಹಿಂಭಾಗ (ರೇರ್) 150/60 ಆರ್17 ಅಳತೆಯ ಟೈರ್‌ಗಳನ್ನು ಹೊಂದಿದೆ. ಇದರೊಟ್ಟಿಗೆ 3 ರೈಡಿಂಗ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮೋಡ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ.

ಚಾಲನಾ ಅನುಭವ: ನಮಗೆ ಹೊಚ್ಚ ಹೊಸ ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ (Ultraviolette F77 Superstreet) ಎಲೆಕ್ಟ್ರಿಕ್ ಬೈಕ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದರ ಮೇಲೆ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಬಹುದು. ಅದರಲ್ಲೂ ಸಾಮಾನ್ಯ ಪೆಟ್ರೋಲ್ ಚಾಲಿತ ಬೈಕ್ ಮೇಲೆ ಹೋಗಿದಂತೆ ಭಾಸವಾಗುತ್ತಿತ್ತು.

Ultraviolette F77 Superstreet Review Specs Riding Impressions Design Features Details

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಸಸ್ಪೆನ್ಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಮ್‌ಗಳು ಅದ್ಬುತವಾಗಿ ಕಾರ್ಯನಿರ್ವಹಿಸಿದವು. ರಸ್ತೆಯ ತಿರುವುಗಳಲ್ಲಿಯೂ ಉತ್ತಮವಾಗಿ ಚಲಿಸಿತು. ಸವಾರ ಸುಧೀರ್ಘ ಸಮಯದವರೆಗೂ ನೂತನ ಇ-ಬೈಕ್‌ನ್ನು ಓಡಿಸಬಹುದು. ಆದರೂ ಎಫ್77 ಮ್ಯಾಕ್ 2ನಂತೆಯೇ ಸೀಟ್ ಇನ್ನೂ ಕೊಂಚ ಗಟ್ಟಿಯಾಗಿದೆ. ಇದರೊಟ್ಟಿಗೆ ಹಿಂದಿನ ಸೀಟ್ ಚಿಕ್ಕದಾಗಿದ್ದು, ಅದರ ಮೇಲೆ ಕುಳಿತುಕೊಂಡು ಪ್ರಯಾಣಿಸುವವರು ಆಗಾಗ ವಿಶ್ರಾಂತಿ ತೆಗದುಕೊಳ್ಳಬೇಕಾಗಿ ಬರಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೂತನ ಅಲ್ಟ್ರಾವೈಲೆಟ್ ಎಫ್77 ಸೂಪರ್‌ಸ್ಟ್ರೀಟ್ ಎಲೆಕ್ಟ್ರಿಕ್ ಬೈಕ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.2,99,000 (ಎಕ್ಸ್ ಶೋರೂಂ - ಬೆಂಗಳೂರು) ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ.. ಪ್ರೀಮಿಯಂ ಮೋಟಾರ್‌ಸೈಕಲ್ ಇಷ್ಟಪಡುವವರಿಗೆ, ಹೊಸ 'ಸೂಪರ್‌ಸ್ಟ್ರೀಟ್' ಅತ್ಯತ್ತಮವಾದ ಆಯ್ಕೆಯಾಗಲಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, February 6, 2025, 9:00 [IST]
English summary
Ultraviolette f77 superstreet review specs riding impressions design features details
Read more on ultraviolette india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+