Ultraviolette X47 Review: ಬೆಂಗಳೂರಿನ ಡೈಮಂಡ್.. ಈ ಎಲೆಕ್ಟ್ರಿಕ್ ಬೈಕ್ ಕಾರುಗಳಿಗೂ ಸವಾಲೆಸೆಯಬಲ್ಲದು!
ಇತ್ತೀಚೆಗೆ ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive), ಹೊಚ್ಚ ಹೊಸ ಎಕ್ಸ್47 (X47) ಹೆಸರಿನ ಇ-ಬೈಕ್‌ನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ತುಂಬಾ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ತಕ್ಕಂತೆ ಯಾವುದೇ ಕಾರಿಗೂ ಕಮ್ಮಿಯಿಲ್ಲ ಎಂಬಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಇದು ರೂ.2.49 ಲಕ್ಷ ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಮೊದಲ 5,000 ಬುಕ್ಕಿಂಗ್‌ಗಳ ನಂತರ, ರೂ.2.74 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ.
ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಬಿಡದಿಯಲ್ಲಿ ನೂತನ ಅಲ್ಟ್ರಾವೈಲೆಟ್ ಎಕ್ಸ್47 (Ultraviolette X47) ಇ-ಬೈಕ್ ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ವಿನ್ಯಾಸ & (Design):
ಈ ಎಲೆಕ್ಟ್ರಿಕ್ ಬೈಕ್, ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದೆ. 'ಅಲ್ಟ್ರಾವೈಲೆಟ್ ಎಫ್77' ಇ-ಮೋಟಾರ್‌ಸೈಕಲ್‌ನ ಪ್ಲಾಟ್‌ಫಾರ್ಮ್ ಆಧರಿಸಿದೆ. ಆದರೂ ವಿಭಿನ್ನ ಶೈಲಿಯ ಚಾಸಿಸ್ ಮತ್ತು ಸಬ್-ಫ್ರೇಮ್ ಒಳಗೊಂಡಿದೆ. ಬೀಕ್ (ಪಕ್ಷಿಯ ಕೊಕ್ಕು) ಆಕಾರಕ್ಕೆ ಹೋಲಿಕೆಯಾಗುವ ಫೆಂಡರ್‌ನ್ನು ಪಡೆದಿದೆ. ಉತ್ತಮವದ ಎಲ್ಇಡಿ ಹೆಡ್‌ಲ್ಯಾಂಪ್, ಎತ್ತರವಿರುವ ವಿಂಡ್‌ಸ್ಕ್ರೀನ್, ಅಗಲವಾದ ಹ್ಯಾಂಡಲ್‌ಬಾರ್, ನಕಲ್ ಗಾರ್ಡ್‌ಗಳು ಹಾಗೂ ಸಿಂಗಲ್-ಪೀಸ್ ಸೀಟ್‌ನ್ನು ಒಳಗೊಂಡಿದೆ.
ಸುತ್ತಳತೆ & ಬಣ್ಣಗಳು (Dimensions & Colors):
ಇದು ವಿಶಾಲ ಗಾತ್ರದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. 2,080 ಎಂಎಂ ಉದ್ದ, 830 ಎಂಎಂ ಅಗಲ ಮತ್ತು 1,130 ಎಂಎಂ ಎತ್ತರವಿದೆ. ಜೊತೆಗಿದು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,435 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಲೇಸರ್ ಟರ್ಬೊ ರೆಡ್, ಶಾಡೋ ಕಾಸ್ಮಿಕ್ ಬ್ಲ್ಯಾಕ್, ಏರ್‌ಸ್ಟ್ರೈಕ್ ಸ್ಟೆಲ್ಲರ್ ವೈಟ್ ಹಾಗೂ ಡಸರ್ಟ್ ವಿಂಗ್ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಕಾರ್ಯಕ್ಷಮತೆ (Performance):
ಹೊಸ ಅಲ್ಟ್ರಾವೈಲೆಟ್ ಎಕ್ಸ್47 ಇ-ಬೈಕ್ ಹೆಚ್ಚು ಶಕ್ತಿಯುತವಾದ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. 7.1 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 10.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 211 ರಿಂದ 323 ಕಿಲೋಮೀಟರ್ ರೇಂಜ್ ನೀಡುತ್ತದೆ.
ಈ ಮೋಟಾರ್‌ಸೈಕಲ್ 145 ಕೆಎಂಪಿಹೆಚ್ ಸ್ಪೀಡ್‌ನ್ನು ಪಡೆದಿದೆ. ಕೇವಲ 8.1 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಗ್ಲೈಡ್, ಕಾಂಬ್ಯಾಟ್ ಹಾಗೂ ಬ್ಯಾಲಿಸ್ಟಿಕ್ ಎಂಬ 3 ರೈಡಿಂಗ್ ಮೋಡ್‌ನ್ನು ಒಳಗೊಂಡಿದೆ. ಇವು ಚಾಲನೆ ವೇಳೆ ಸವಾರರಿಗೆ ನೆರವಾಗಬಲ್ಲವು.

ವೈಶಿಷ್ಟ್ಯಗಳು (Features):
ನೂತನ ಅಲ್ಟ್ರಾವೈಲೆಟ್ ಎಕ್ಸ್47 ಎಲೆಕ್ಟ್ರಿಕ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿ & ನ್ಯಾವಿಗೇಷನ್‌ನೊಂದಿಗೆ ಫುಲ್-ಕಲರ್ ಟಿಎಫ್‌ಟಿ ಡಿಸ್‌ಪ್ಲೇ ಕೀಲೆಸ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ರಾಡಾರ್ ಆಧಾರಿತ 'ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್'ನ್ನು ಪಡೆದಿದೆ. 17 ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈಯರ್‌ಗಳನ್ನು ತನ್ನದಾಗಿಸಿಕೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಅಪ್‌ಸೈಡ್-ಡೌನ್ (ಯುಎಸ್‌ಡಿ) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಪ್ರಿ-ಲೋಡ್ ಅಡ್ಜಸ್ಟೇಬಲ್ ಮೊನೊ-ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಜೊತೆಗೆ ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನ್ನು ಒಳಗೊಂಡಿದೆ.

ಚಾಲನಾ ಅನುಭವ (Riding Impressions):
ಈ ಅಲ್ಟ್ರಾವೈಲೆಟ್ ಎಕ್ಸ್47 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಎಲ್ಲ ವಿಧದ ರಸ್ತೆಯಲ್ಲಿಯೂ ಸುಲಭವಾಗಿ ಚಲಿಸಬಲ್ಲದು. ವಿಶೇಷವಾಗಿ ಹಳ್ಳ - ದಿಣ್ಣೆಯಿರುವ ರಸ್ತೆಗಳಲ್ಲಿ ಕೂಡ ಓಡಿಸಬಹುದು. ಸೀಟ್ ಚೆನ್ನಾಗಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸಬಲ್ಲದು. ರಾಡಾರ್ ಬೆಂಬಲಿತ 'ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್' ವೈಶಿಷ್ಟ್ಯಗಳಾದ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಚೇಂಜ್ ಅಸಿಸ್ಟ್ ಹಾಗೂ ಓವರ್‌ಟೇಕ್ ಅಲರ್ಟ್‍ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದವು.
ಇದರ ಸಸ್ಪೆನ್ಷನ್ ಸೆಟಪ್ ಮತ್ತು ಬ್ರೇಕ್‌ಗಳು ತುಂಬಾ ಚೆನ್ನಾಗಿ ಕೆಲಸ ಮಾಡಿದವು. ಇದರಲ್ಲಿರುವ ಟೈರ್‌ಗಳು ಸಹ ಉತ್ತಮವಾಗಿದ್ದು, ರಸ್ತೆ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಬಲ್ಲವು. ಹೆಚ್ಚಿನ ವೇಗದಲ್ಲಿರುವಾಗಲು ಉತ್ತಮವಾದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೆರವಾಗುವಂತೆಯೂ ಈ ಬೈಕ್‌ನ್ನು ವಿನ್ಯಾಸಗೊಳಿಸಲಾಗಿದೆ.

ಒಟ್ಟಾರೆ ಅಭಿಪ್ರಾಯ (Overall Opinion):
ನೀವು ನೀಡುವ ಪ್ರತಿ ರೂಪಾಯಿಗೂ 'ಅಲ್ಟ್ರಾವೈಲೆಟ್ ಎಕ್ಸ್47' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಯೋಗ್ಯವಾಗಿದೆ ಹೇಳಬಹುದು. ಅದಕ್ಕೆ ಬಿಡುಗಡೆಗೊಂಡ 24 ಗಂಟೆಗಳಲ್ಲಿ 3,000ಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿರುವುದೇ ಸಾಕ್ಷಿಯಾಗದೆ. ಅಕ್ಟೋಬರ್‌ನಲ್ಲಿ ವಿತರಣೆ ಶುರುವಾಗಲಿದೆ. ಆ ಬಳಿಕ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








