Triumph Scrambler 400 X: ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ರಿವ್ಯೂ, ಈ ಬೈಕ್ ಇದ್ದವರೇ ಬಾಸು..!
ಬ್ರಿಟಿಷ್ ಮೋಟಾರ್‌ಸೈಕಲ್ ತಯಾರಕ ಟ್ರಯಂಫ್ (Triumph), ಬಜಾಜ್ (Bajaj) ಸಹಭಾಗಿತ್ವದಲ್ಲಿ ಜೂನ್ ತಿಂಗಳಲ್ಲಿ ಎರಡು ಹೊಸ ಬೈಕ್‌ಗಳನ್ನು ಅನಾವರಣಗೊಳಿಸಿತ್ತು. ಅವುಗಳೆಂದರೆ, ಸ್ವೀಡ್ 400 (Speed 400), ಸ್ಕ್ರ್ಯಾಂಬ್ಲರ್ 400 ಎಕ್ಸ್ (Scrambler 400 X).
ಅದಾಗಿ ಒಂದೇ ತಿಂಗಳಲ್ಲಿ (ಜುಲೈ) ಸ್ವೀಡ್ 400 ಮೋಟಾರ್‌ಸೈಕಲ್ ಲಾಂಚ್ ಮಾಡಿತ್ತು. ಕೆಲವೇ ದಿನಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಟ್ರಯಂಫ್ ಕಂಪನಿ, ಸ್ಕ್ರ್ಯಾಂಬ್ಲರ್ 400 ಬೈಕ್‌ನ್ನು ಬಿಡುಗಡೆಗೊಳಿಸಿ, ಬೆಲೆಯನ್ನು ಘೋಷಿಸಿತು. ನಮ್ಮ ತಂಡಕ್ಕೆ ಮಹಾರಾಷ್ಟದ ಪುಣೆಯಲ್ಲಿ ಈ ಮೋಟಾರ್‌ಸೈಕಲ್ ಟೆಸ್ಟ್ ಡ್ರೈವ್ ಮಾಡಲು ಅವಕಾಶ ದೊರೆಯಿತು, ಬನ್ನಿ, ಈ ಬೈಕ್ ಹೇಗಿದೆ ಎಂಬುದನ್ನು ತಿಳಿಯೋಣ.

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ವಿನ್ಯಾಸ & ವೈಶಿಷ್ಟ್ಯ: ಹೊಸ ಸ್ಕ್ರ್ಯಾಂಬ್ಲರ್ 400 ಎಕ್ಸ್ ಮೋಟಾರ್‌ಸೈಕಲ್ ಪಡೆದಿರುವ ಕೆಲವೊಂದು ವಿನ್ಯಾಸದ (ಡಿಸೈನ್) ಅಂಶಗಳು ಸ್ವೀಡ್ 400 ಬೈಕ್‌ಗೆ ಹೋಲಿಕೆಯಾಗುತ್ತದೆ. ಜೊತೆಗೆ ಸ್ಕ್ರ್ಯಾಂಬ್ಲರ್ 400 ಎಕ್ಸ್ ಆಫ್-ರೋಡ್ (ಬೆಟ್ಟ - ಗುಡ್ಡ) ಚಾಲನೆಗೂ ಉಪಯುಕ್ತವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೊಸ ಸ್ಕ್ರ್ಯಾಂಬ್ಲರ್ 400 ಎಕ್ಸ್ (Scrambler 400 X) ಮೋಟಾರ್‌ಸೈಕಲ್ ವಿನ್ಯಾಸದ ದೃಷ್ಟಿಯಿಂದ ಎಲ್ಇಡಿ ಲೈಟಿಂಗ್ ಸೆಟಪ್, ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ವಿಚ್ ಗೇರ್, ಕಪ್ಪು (black) ಬಣ್ಣದಲಿರುವ ಎಂಜಿನ್ ಕೇಸಿಂಗ್, ಗೋಲ್ಡ್ ಆನೋಡೈಸ್ಡ್ ಫ್ರಂಟ್ ಫೋರ್ಕ್ಸ್, ಆಕರ್ಷಕವಾಗಿ ಅಲಂಕೃತಗೊಂಡಿರುವ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿದೆ.

ಬಹುತೇಕ ಇವೆಲ್ಲ ಸ್ವೀಡ್ 400 ಮೋಟಾರ್‌ಸೈಕಲ್ ಗೆ ಹೋಲಿಕೆಯಾಗುತ್ತದೆ. ಇದು ಬಿಟ್ಟರೇ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್, ವಿನೂತನ ಹೆಡ್‌ಲೈಟ್ ಗ್ರಿಲ್, ಸಂಪ್ & ರೇಡಿಯೇಟರ್ ಪ್ರೊಟೆಕ್ಟರ್ಸ್, ಹ್ಯಾಂಡಲ್‌ಬಾರ್ ಬ್ರೇಸ್ ಪ್ಯಾಡ್, ಹ್ಯಾಂಡ್‌ಗಾರ್ಡ್ ಅನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯವಾಗಿ ಕುಳಿತುಕೊಂಡು ಪ್ರಯಾಣಿಸಲು ಸ್ಪ್ಲಿಟ್ ಸೀಟ್ ಇದ್ದು, ಫುಟ್‌ಪೆಗ್ ತೆಗೆಯಬಹುದಾದ (removable) ರಬ್ಬರ್ ಇನ್‌ಸರ್ಟ್ ವಿನ್ಯಾಸವನ್ನು ಹೊಂದಿದೆ.
ಇದರೊಟ್ಟಿಗೆ ಸ್ವೀಡ್ 400 ಬೈಕ್‌ಗೆ ಹೋಲಿಕೆಯಾಗುವಂತೆ ಸ್ಕ್ರ್ಯಾಂಬ್ಲರ್ 400 ಎಕ್ಸ್ ಕೂಡ ಸ್ವಿಚ್ಏಬಲ್ ಟ್ರಾಕ್ಷನ್ ಕಂಟ್ರೋಲ್, ಟಾರ್ಕ್ - ಅಸಿಸ್ಟ್ ಕ್ಲಚ್, ಬಾಷ್ ಡ್ಯುಯಲ್ - ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸ್ಟೀರಿಂಗ್ ಲಾಕ್, ಆಂಟಿ - ಥೆಫ್ಟ್ ಇಮೊಬಿಲೈಸರ್ ಅನ್ನು ಒಳಗೊಂಡಿದೆ. ನೀವು ಆಫ್-ರೋಡ್ ನಲ್ಲಿ ಈ ಬೈಕ್ ಓಡಿಸುವಾಗ ರೇರ್ ಎಬಿಎಸ್ ಸ್ವಿಚ್ ಆಫ್ ಮಾಡಬಹುದು.

ಈ ಬೈಕ್, 3 ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಮ್ಯಾಟ್ ಖಾಕಿ ಗ್ರೀನ್ ವಿತ್ ಫ್ಯೂಷನ್ ವೈಟ್ (Matt Khakhi Green with Fusion White), ಫ್ಯಾಂಟಮ್ ಬ್ಲ್ಯಾಕ್ ವಿತ್ ಸಿಲ್ವರ್ ಐಸ್ (Phantom Black with Silver Ice), ಕಾರ್ನಿವಲ್ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್ (Carnival Red with Phantom Black). ಜೊತೆಗೆ ಇದರ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ನೋಡುಗರನ್ನು ಆಕರ್ಷಿಸುತ್ತದೆ.
ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ವಿಶೇಷತೆ: ಈ ಬೈಕ್, ಸ್ವೀಡ್ 400 ಮೋಟಾರ್‌ಸೈಕಲ್ ನಂತರ ಹೊಸದಾದ ಟಿಆರ್ (TR) ಎಂಜಿನ್ ಪಡೆದಿರುವ ಟ್ರಯಂಫ್ ಕಂಪನಿಯ 2ನೇ ದ್ವಿಚಕ್ರ ವಾಹನವಾಗಿದೆ. ಆಫ್-ರೋಡ್ ಚಾಲನೆಗೆ ಅನುಕೂಲವಾಗುವ ನಿಟ್ಟಿನಲ್ಲಿ 398 ಸಿಸಿ, ಲಿಕ್ವಿಡ್ ಕೂಲ್ಡ್ & ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಒಳಗೊಂಡಿದೆ.

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 8,000 rpmನಲ್ಲಿ 39.5 bhp ಗರಿಷ್ಠ ಪವರ್ ಹಾಗೂ 6,500rpmನಲ್ಲಿ 37.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕ್ ಬಲಭಾಗದಲ್ಲಿರುವ (right side) ಚೈನ್ ಡ್ರೈವ್ ಸೆಟಪ್ ಮೂಲಕ ಹಿಂದಿನ ಚಕ್ರಕ್ಕೆ (rear wheel) ಶಕ್ತಿ (Power) ಕಳುಹಿಸುತ್ತದೆ.
ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಹಾಗೂ ಸ್ವೀಡ್ 400 ಮೋಟಾರ್‌ಸೈಕಲ್ ಒಂದೇ ರೀತಿಯ ಸಸ್ಪೆನ್ಷನ್ ಸೆಟಪ್ ಹೊಂದಿವೆ. ಸ್ಕ್ರ್ಯಾಂಬ್ಲರ್, ಮುಂಭಾಗ 43 ಎಂಎಂ USD ಫ್ರಂಟ್ ಪೋರ್ಕ್ಸ್, ಹಿಂಭಾಗ ಅಡ್ಜಸ್ಟ್ಏಬಲ್ ಮೊನೊಶಾಕ್ ಸೆಟಪ್ ಪಡೆದಿದೆ. ಈ ಬೈಕ್, 10 - ಸ್ಪೋಕ್ ಅಲ್ಯೂಮಿನಿಯಂ ಅಲಾಯ್ ವೀಲ್ ಸೆಟಪ್ ಒಳಗೊಂಡಿದ್ದು, ಮುಂಭಾಗ 100/90-19 ಹಾಗೂ ಹಿಂಭಾಗ 140/80-17 ಅಳತೆಯ ಎಂಆರ್‌ಎಫ್ (MRF) ಟೈಯರ್ಸ್ ಹೊಂದಿದೆ.

ಈ ಬೈಕ್, ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ, ಹಿಂಭಾಗ 230 ಎಂಎಂ ಅಳತೆಯ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರ ಸೀಟ್ ಹೈಟ್ (ಎತ್ತರ) 835 ಎಂಎಂ ಇದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹಾಗೂ 185 ಕೆಜಿ ತೂಕವನ್ನು ಹೊಂದಿದೆ. 16,000 ಕಿಲೋಮೀಟರ್ ಓಡಿಸಿದ ಬಳಿಕ ಅಥವಾ 12 ತಿಂಗಳೊಳಗೆ ಮೊದಲ ಸರ್ವಿಸ್ ಗೆ ಬರಬಹುದು.
ರೈಡಿಂಗ್ ಇಂಪ್ರೆಷನ್: ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಎಂಜಿನ್, ಬಹುತೇಕ ಸ್ವೀಡ್ 400 ಮೋಟಾರ್‌ಸೈಕಲ್ ಗೆ ಹೋಲಿಕೆಯಾಗಲಿದ್ದು, ಆಫ್-ರೋಡ್ ಸೇರಿದಂತೆ ಎಂತಹ ರಸ್ತೆಯಲ್ಲೂ ಬೇಕಾದರೂ ಸುಲಭವಾಗಿ ಚಲಿಸಬಲ್ಲದು. ಇದು, 398 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಹಿಂಬದಿ ಸವಾರನಿದ್ದರೂ 3ನೇ ಗೇರ್‌ನಲ್ಲಿ 25 km/h ವೇಗದಲ್ಲಿ ಬೆಟ್ಟದ ಕಡಿದಾದ ರಸ್ತೆಯನ್ನು ಏರಬಲ್ಲದು. ತಿರುವಿರುವ ರಸ್ತೆಗಳಲ್ಲೂ ಉತ್ತಮವಾಗಿ ಓಡಿಸಬಹುದು.

ಈ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್, ಎಂಆರ್‌ಎಫ್ ಟೈಯರ್ ಹೊಂದಿರುವುದರಿಂದ ಸವಾರ, ರಸ್ತೆಯಲ್ಲಿ ಉತ್ತಮ ಹಿಡಿತ ಸಾಧಿಸಬಹುದು. ಇದು, ಹೈ-ಸ್ಲಂಗ್ ಸೀಟ್ ಹೊಂದಿದ್ದು, ಆಫ್-ರೋಡಿಂಗ್ ಚಾಲನೆಯಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಜೊತೆಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಇದರ ಡಿಸ್ಕ್ ಬ್ರೇಕ್ ಗಳು ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಆಫ್-ರೋಡಿಂಗ್ ಮಾಡುವವರಿಗೆ ಉತ್ತಮ ಆಯ್ಕೆಯಾಗಿದ್ದು, ಕೊಂಚ ದುಬಾರಿ ಬೆಲೆಯನ್ನು ಹೊಂದಿದೆ. ಇದು ರೂ.2.63 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈಗಾಗಲೇ, ಸ್ಕ್ರ್ಯಾಂಬ್ಲರ್ 400 ಎಕ್ಸ್ ಹಾಗೂ ಸ್ವೀಡ್ 400 ಮೋಟಾರ್‌ಸೈಕಲ್ ಹೆಚ್ಚಿನ ಸಂಖ್ಯೆಯಲ್ಲಿ ಯುವ ಖರೀದಿದಾರನ್ನು ಆಕರ್ಷಿಸಿದ್ದು, ಹಬ್ಬದ ಋತುವಿರುವುದರಿಂದ ಮತ್ತಷ್ಟು ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








