Hero Xtreme 250R: ಪವರ್‌ಫುಲ್ ಹೀರೋ ಎಕ್ಸ್‌ಟ್ರೀಮ್ 250R ರಿವ್ಯೂ: ಚಾಲೆಂಜ್‌ಗೆ ರೆಡಿ!
2023 ರಲ್ಲಿ ಮಿಲನ್‌ನಲ್ಲಿ ನಡೆದ EICMA ಮೋಟಾರ್‌ಸೈಕಲ್ ಪ್ರದರ್ಶನಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯು, ಭವಿಷ್ಯದಲ್ಲಿ ಬರಲಿರುವ ತನ್ನ ಕೆಲವು ಆಕರ್ಷಕ ಬೈಕ್‌ಗಳನ್ನು ಪ್ರದರ್ಶಿಸಿತ್ತು. ಈ ಮೋಟಾರ್ ಶೋನಲ್ಲಿ ಪ್ರಮುಖ ವಿಷಯವೆಂದರೆ ಕಾನ್ಸೆಪ್ಟ್ 2.5 R Xtunt ಎಂದು ಕರೆಯಲ್ಪಡುವ ಬೈಕ್ ಆಗಿತ್ತು. ಒಂದು ವರ್ಷದ ನಂತರ, ಈ ಬೈಕ್ ಕೆಲವು ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡು ಕೊನೆಗೂ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಹೌದು, ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ತನ್ನ ಅತ್ಯಂತ ಪವರ್‌ಫುಲ್ ನೇಕೆಡ್ ಮೋಟಾರ್‌ಸೈಕಲ್ ಆಗಿ ಹೀರೋ ಎಕ್ಸ್‌ಟ್ರೀಮ್ 250R (2.5 R Xtunt) ಹೆಸರಿನಲ್ಲಿ ಕಂಪನಿ ಬೈಕ್ ಅನ್ನು ಪರಿಚಯಿಸಿದೆ.
ಈ ಹೊಸ ಬೈಕ್ ಹೇಗಿದೆ ಎಂದು ತಿಳಿಯಲು ಕಂಪನಿಯು ನಮಗೆ ಅವಕಾಶ ಕಲ್ಪಿಸಿತ್ತು. ಇತ್ತೀಚೆಗೆ ನಾವು ಉದಯಪುರದ ಸರೋವರಗಳ ನಗರದಲ್ಲಿ ಮತ್ತು ಸುತ್ತಮುತ್ತ ಈ ಹೊಸ ಹೀರೋ ಎಕ್ಸ್‌ಟ್ರೀಮ್ 250R ಅನ್ನು ಸವಾರಿ ಮಾಡಿದ್ದೇವೆ. ಹೊಚ್ಚ ಹೊಸ ಹೀರೋ ಎಕ್ಸ್‌ಟ್ರೀಮ್ 250R ಅನ್ನು ಒಂದು ದಿನ ಸಂಪೂರ್ಣವಾಗಿ ಓಡಿಸಿದ ಬಳಿಕ ಈ ಹೊಸ ಬೈಕ್ ಬಗ್ಗೆ ನಮ್ಮ ಆಲೋಚನೆಗಳು ಹೀಗಿವೆ.

ಹೀರೋ ಕಾನ್ಸೆಪ್ಟ್ 2.5 R Xtunt ನೇಕೆಡ್ ಬೈಕ್ ವಿನ್ಯಾಸದಷ್ಟೇ ಇದು ಕೂಡ ತೀವ್ರವಾಗಿತ್ತಾದರೂ, ಯಾವುದೇ ರೀತಿಯ ಲ್ಯಾಂಪ್‌ಗಳು, ಸಕ್ರಿಯ ಏರೋ ಮತ್ತು ಸ್ಲಿಕ್ ಟೈರ್‌ಗಳ ಸಂಪೂರ್ಣ ವಿಭಿನ್ನವಾಗಿದ್ದವು. ಹೀರೋ ಕಾನ್ಸೆಪ್ಟ್ 2.5 R Xtunt ಉತ್ಪಾದನಾ-ಸ್ಪೆಕ್ ಆವೃತ್ತಿಯಂತಲ್ಲದೆ ಸ್ವಲ್ಪ ಕಡಿಮೆ ಆಕ್ರಮಣಕಾರಿಯಾಗಿ ಕಾಣುತ್ತದೆ. ಹಾಗೆಂದು ಇದು ತೀರಾ ಕಡಿಮೆ ಆಕ್ರಮಣತೆಯನ್ನು ಹೊಂದಿದೆ ಎಂದಲ್ಲ.
ಮುಂಭಾಗದಲ್ಲಿ, ಟ್ರಯಾಂಗಲ್ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಯೂನಿಟ್ ಸಾಕಷ್ಟು ಆಕ್ರಮಣಕಾರಿಯಾಗಿ ಕಾಣುತ್ತದೆ. ಅದರೊಳಗೆ ಸಂಯೋಜಿಸಲ್ಪಟ್ಟ H- ಆಕಾರದ DRL ಸ್ಪೋರ್ಟಿಯಾಗಿ ಕಾಣುತ್ತದೆ. ಇದರ ಹಿಂದೆ ಕುಳಿತಿರುವ ಗೋಲ್ಡನ್ USD ಮುಂಭಾಗದ ಫೋರ್ಕ್‌ಗಳಿವೆ, ಮೇಲೆ 17-ಇಂಚಿನ ಅಲಾಯ್ ವೀಲ್‌ಗೆ ಇಳಿದು ಮುಂಭಾಗದ ಫೆಂಡರ್ ಅನ್ನು ಸಂಪರ್ಕಿಸುವ ಮೂಲಕ ಅದರ ಲುಕ್ ಇನ್ನಷ್ಟು ಹೆಚ್ಚಾಗಿದೆ.

ಬದಿಯಿಂದ, ಎಕ್ಸ್‌ಟ್ರೀಮ್ 250R ನ ವಿನ್ಯಾಸದ ವಿಷಯದಲ್ಲಿ ಅತ್ಯಂತ ಪ್ರಬಲವಾದ ವೈಶಿಷ್ಟ್ಯವೆಂದರೆ ಆ ಮಸ್ಕುಲರ್ ಫ್ಯೂಲ್ ಟ್ಯಾಂಕ್, ನೋಡುಗರಿಗೆ ಸಂಪೂರ್ಣ ಹೊಸ ಅನುಭವ ನೀಡುತ್ತದೆ. ಎಕ್ಸ್‌ಟ್ರೀಮ್ 250R ಬೈಕ್ ಎಲ್ಲಾ ಸವಾರಿ ವಿವರಗಳೊಂದಿಗೆ LCD ಡಿಸ್ಪ್ಲೇ ಮತ್ತು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು, ಪ್ರಯಾಣದಲ್ಲಿರುವಾಗ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡುತ್ತದೆ. ಇಂಧನ ಟ್ಯಾಂಕ್ ವಿಭಾಗದಲ್ಲಿ USB ಚಾರ್ಜಿಂಗ್ ಪೋರ್ಟ್ ಕೂಡ ನೀಡಲಾಗಿದೆ.
ಇದರಲ್ಲಿನ ಆಂಗುಲರ್ ಟ್ಯಾಂಕ್ ವಿಸ್ತರಣೆಗಳು ಬೈಕ್‌ನ ರಗಡ್ ಲುಕ್ ಹೆಚ್ಚಿಸಿವೆ, ಹಾಗೆಯೇ ಆ ಎರಡು-ತುಂಡುಗಳ ಸೀಟ್ ಮತ್ತು ಬೈಕ್‌ನ ರಗಡ್ ಎಕ್ಸಾಸ್ಟ್ ಸೌಂಡ್ ರೈಡರ್‌ಗೆ ಉತ್ಸಾಹವನ್ನು ಹೆಚ್ಚಿಸುತ್ತವೆ. ಹಿಂಭಾಗದಲ್ಲಿ LED ಲೈಟ್ ಸೆಟಪ್ ಮತ್ತು 17-ಇಂಚಿನ ಅಲಾಯ್ ವೀಲ್‌ನಲ್ಲಿ ಸುತ್ತುವರೆದಿರುವ ಅಗಲವಾದ ಹಿಂಭಾಗದ ಟೈರ್ ಕೂಡ ರೋಡ್ ಗ್ರಿಪ್ ಹೆಚ್ಚಿಸುವಂತೆ ಕಾಣುತ್ತದೆ.

ಹೀರೋ ಎಕ್ಸ್‌ಟ್ರೀಮ್ 250R ಬೈಕ್, ಕಂಪನಿಯ 250cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 9,250rpm ನಲ್ಲಿ 30bhp ಪವರ್ ಮತ್ತು 7,250rpm ನಲ್ಲಿ 25Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಎಕ್ಸ್‌ಟ್ರೀಮ್ 250R ಸಸ್ಪೆನ್ಷನ್ ವಿಷಯಕ್ಕೆ ಬಂದರೆ, 43mm USD ಫ್ರಂಟ್ ಫೋರ್ಕ್‌ನಿಂದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಮತ್ತು 6 ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಲ್‌ನೊಂದಿಗೆ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ಇದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ 320mm ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಣ್ಣ 230mm ಪೆಟಲ್ ಡಿಸ್ಕ್ ನೀಡಲಾಗಿದೆ. ಎಕ್ಸ್‌ಟ್ರೀಮ್ 250R 110/70 (ಮುಂಭಾಗ) ಮತ್ತು 150/60 ಹಿಂಭಾಗದ ಟೈರ್‌ಗಳಿಂದ 17-ಇಂಚಿನ ಅಲಾಯ್ ವೀಲ್‌ಗಳು ನೀಡಲಾಗಿದೆ.

ಎಕ್ಸ್‌ಟ್ರೀಮ್ 250R 2,023mm ಉದ್ದ, 828mm ಅಗಲ ಮತ್ತು 1,062mm ಎತ್ತರವನ್ನು ಹೊಂದಿದೆ. 1,357mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಸೀಟ್ ಎತ್ತರ 806mm ಮತ್ತು ಗ್ರೌಂಡ್ ಕ್ಲಿಯರೆನ್ಸ್ 167mm ಇದೆ. ಹೀರೋ ಎಕ್ಸ್‌ಟ್ರೀಮ್ 250R 167.7kg ತೂಕ ಮತ್ತು 11.5 - ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.
ಪ್ರಯಾಣದಲ್ಲಿರುವಾಗ, ಹೊಸ ಹೀರೋ ಎಕ್ಸ್‌ಟ್ರೀಮ್ 250R ನಿಜವಾಗಿಯೂ ಎದ್ದು ಕಾಣುತ್ತದೆ, ಅದರ ಸರಿಯಾದ ಸ್ಪೋರ್ಟಿ ಲುಕ್‌ನಿಂದಾಗಿ ಎಂಥವರನ್ನು ಆಕರ್ಷಿಸುವ ವಿನ್ಯಾಸವನ್ನು ಹೊಂದಿದೆ. ಅದೃಷ್ಟವಶಾತ್, ಹೀರೋ ಕಂಪನಿಯು ಪರ್ಫಾಮೆನ್ಸ್ ವಿಷಯದಲ್ಲಿ ಇದಕ್ಕೆ ಕಡಿಮೆ ಮಾಡಿಲ್ಲ. ಈ ನೇಕೆಡ್ ಸ್ಟ್ರೀಟ್‌ಫೈಟರ್ ತನ್ನ ಪ್ರತಿಸ್ಪರ್ಧಿಗಳಿಗೆ ಸರಿಯಾದ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಎಕ್ಸ್‌ಟ್ರೀಮ್ 250R 250 ಸಿಸಿ ಎಂಜಿನ್ ಸಂಸ್ಕರಿಸಲ್ಪಟ್ಟಿದ್ದರೂ ತುಂಬಾ ಟಾರ್ಕ್ ಹೊಂದಿದೆ. ಮೊದಲ ಗೇರ್ ಸಣ್ಣದಾಗಿದ್ದರೂ ಚುರುಕಾಗಿರುತ್ತದೆ. ನೀವು ಗೇರ್‌ಗಳನ್ನು ಸುಲಭವಾಗಿ ಬದಲಾಯಿಸಿತ್ತಾ ಸ್ಪೀಡೋಮೀಟರ್‌ನಲ್ಲಿ ವೇಗ ಏರುವುದನ್ನು ನೋಡಿದಾಗ ಅದರ ಪರ್ಫಾಮೆನ್ಸ್ ಬಗ್ಗೆ ಅರಿವಾಗುತ್ತದೆ. ಆಕ್ರಮಣಕಾರಿ ಪರ್ಫಾಮೆನ್ಸ್‌ನೊಂದಿಗೆ ರೈಡರ್‌ಗೆ ಉತ್ಸಾಹವನ್ನು ಹೆಚ್ಚಿಸುತ್ತದೆ.
ಎಕ್ಸ್‌ಟ್ರೀಮ್ 250R ನ ಆರನೇ ಗೇರ್ ಹೆದ್ದಾರಿಯಲ್ಲಿ ಪ್ರಯಾಣಿಸಲು ಸೂಕ್ತವಾಗಿದೆ. ಬೈಕ್ ತನ್ನ ಪವರ್‌ಪ್ಲಾಂಟ್ ಅನ್ನು ಒತ್ತಿಹೇಳತ್ತಾ... ಮೂರು ಅಂಕೆಗಳ ವೇಗದಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಆದರೂ, 4000 - 5250rpm ಮಾರ್ಕ್‌ನಲ್ಲಿ ಹೆಚ್ಚಾಗಿ ಪವರ್ ವಿತರಣೆಯಲ್ಲಿ ನಾವು ಸ್ವಲ್ಪ ಸಮತಟ್ಟಾದ ಸ್ಥಾನವನ್ನು ಕಂಡುಕೊಂಡಿದ್ದೇವೆ.

ಎಕ್ಸ್‌ಟ್ರೀಮ್ 250R ನ ಸಸ್ಪೆನ್ಷನ್ ಸೆಟಪ್ ಅನ್ನು ಚೆನ್ನಾಗಿ ಮಾಪನಾಂಕ ನಿರ್ಣಯಿಸಲಾಗಿದೆ. ಬೈಕ್ ಗುಂಡಿಗಳನ್ನು ನಿಭಾಯಿಸುತ್ತಾ ಒರಟು ರಸ್ತೆಗಳಲ್ಲಿ ಸುಲಭವಾಗಿ ಸವಾರಿ ಮಾಡುವಂತಿದೆ. ಚೆನ್ನಾಗಿ ಪ್ಯಾಡ್ ಮಾಡಿದ ಸೀಟ್ ಮತ್ತು ಸಡಿಲವಾದ ಸವಾರಿ ಸ್ಥಾನವು ಆರಾಮ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘ ಸವಾರಿಗಳನ್ನು ಆರಾಮವಾಗಿ ಮಾಡುವಂತೆ ಸಹಕರಿಸುತ್ತದೆ.
ಎಕ್ಸ್‌ಟ್ರೀಮ್ 250R 50:50 ತೂಕ ವಿತರಣೆಯನ್ನು ಹೊಂದಿದ್ದು, ಪ್ರಯಾಣದಲ್ಲಿರುವಾಗ, ಬೈಕ್ ಅದರ ಕರ್ಬ್ ತೂಕ ಸೂಚಿಸುವುದಕ್ಕಿಂತ ಹಗುರವಾಗಿರುತ್ತದೆ ಎಂದು ಹೀರೋ ಹೇಳಿಕೊಂಡಿದೆ. ಬೈಕ್ ಸರಾಗವಾಗಿ ಮೂಲೆಗಳಲ್ಲಿಯೂ ಯಾವುದೇ ಸ್ಕಿಡ್ ಇಲ್ಲದೇ ಮುನ್ನುಗ್ಗುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು MRF ಜ್ಯಾಪರ್ ಟೈರ್‌ಗಳು ಹೆಚ್ಚಿಸುತ್ತವೆ, ಒಟ್ಟಾರೆ ಎಕ್ಸ್‌ಟ್ರೀಮ್ 250R ಸರಿಯಾಗಿ ಸಜ್ಜುಗೊಂಡಿದೆ.

ನೀವು ಟ್ರ್ಯಾಕ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ ಬ್ರೇಕ್‌ಗಳು ತೀಕ್ಷ್ಣ ಮತ್ತು ಪರಿಣಾಮಕಾರಿಯಾಗಿರುತ್ತವೆ. ಟ್ರ್ಯಾಕ್ ಮೋಡ್ ನಿಲ್ಲಿಸುವಾಗ ನೀವು ಸ್ವಲ್ಪ ಮೋಜು ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ರೋಡ್ ಮೋಡ್‌ನಲ್ಲಿ, ಡ್ಯುಯಲ್-ಚಾನೆಲ್ ABS ಸೆಟಪ್ ನಮಗೆ ಸ್ವಲ್ಪ ಬೇಗನೆ ಮಧ್ಯಪ್ರವೇಶಿಸುತ್ತದೆ, ಇದು ಟೈರ್‌ಗಳೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದು. ಮತ್ತೊಂದು ದೋಷವೆಂದರೆ ನೀವು ಪ್ರಯಾಣದಲ್ಲಿರುವಾಗ ಎರಡು ಮೋಡ್‌ಗಳ ನಡುವೆ ABS ಅನ್ನು ಬದಲಾಯಿಸಲು ಸಾಧ್ಯವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








