ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ಸೈಕಲ್ ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಸೈಕಲ್‌ಗಳನ್ನು ಮನರಂಜನೆ, ಫಿಟ್‌ನೆಸ್, ಪ್ರಯಾಣ ರೇಸಿಂಗ್ ಮತ್ತು ಮಕ್ಕಳು ಆಟವಾಡಲು ಬಳಸಲಾಗುತ್ತದೆ. ಸೈಕಲ್‌ಗಳ ಮೂಲ ವಿನ್ಯಾಸ ನಿಜವಾಗಿಯೂ ಬದಲಾಗಿಲ್ಲ ನಿಜ, ಆದರೆ ತಾಂತ್ರಿಕವಾಗಿ ತುಂಬಾ ಮುಂದುವರೆದಿದೆ. ವಿಶೇಷವಾಗಿ ಈ ಎಲೆಕ್ಟ್ರಿಕ್ ವಾಹನಗಳ ಯುಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಯನ್ನು ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಸೈಕಲ್ ಗಳು ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಭಾರತದಲ್ಲಿ ನೆಕ್ಸ್‌ಜು ಮೊಬಿಲಿಟಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಬೈಸಿಕಲ್ ತಯಾರಕರಲ್ಲಿ ಒಬ್ಬರು, ನೆಕ್ಸ್‌ಜು ಬ್ರ್ಯಾಂಡ್'ನ ರಾಂಪಸ್ ಪ್ಲಸ್ ಜನಪ್ರಿಯ ಮಾದರಿಯಾಗಿದೆ, ಈ ನೆಕ್ಸ್‌ಜು ರಾಂಪಸ್ ಪ್ಲಸ್ ನಾವು ನಗರ ಪ್ರದೇಶ ಮತ್ತು ಇತರ ಕಡೆಗಳಲ್ಲಿ ರೈಡ್ ಮಾಡಿದ್ದೇವೆ. ಈ ಎಲೆಕ್ಟ್ರಿಕ್ ಸೈಕಲ್ ರೈಡ್ ಮಾಡಿದ ಅನುಭವ, ಫೀಚರ್ಸ್ ಮತ್ತು ಪರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ವಿನ್ಯಾಸ

ನಾವು ಬ್ಲೂ ಶೇಡ್ ಬಣ್ಣದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಅನ್ನು ರಿವ್ಯೂ ಮಾಡಿಲಾಗಿದೆ. ಈ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಮುಂಭಾಗದಲ್ಲಿ ವೃತ್ತಾಕಾರದ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ದೇಹದ ಬಣ್ಣದ ಮಡ್‌ಗಾರ್ಡ್‌ಗಳನ್ನು ಹೊಂದಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಈ ಸೈಕಲ್ ಹ್ಯಾಂಡಲ್‌ಬಾರ್ ಹೆಚ್ಚು ದಪ್ಪವಾದ ಯುನಿಟ್ ಆಗಿದ್ದು, ಎಲೆಕ್ಟ್ರಿಕ್ ಡ್ರೈವ್‌ಟ್ರೇನ್‌ನ ಕಂಟ್ರೋಲ್ ಪ್ಯಾನೆಲ್ ಅನ್ನು ಅದೇ ಹ್ಯಾಂಡಲ್‌ಬಾರ್‌ನಲ್ಲಿ ಅಳವಡಿಸಲಾಗಿದೆ. ನೆಕ್ಸ್‌ಜು ರಾಂಪಸ್ ಪ್ಲಸ್ ಹೈಬ್ರಿಡ್ ಫ್ರೇಮ್ ಅನ್ನು ಆಧರಿಸಿದೆ. ಇದರರ್ಥ ಇದು ಸುಸಜ್ಜಿತ ರಸ್ತೆಗಳಲ್ಲಿ ಬಳಸಲು ಉತ್ತಮವಾಗಿದೆ ಮತ್ತು ಇದನ್ನು ಆಫ್-ರೋಡ್ ಭೂಪ್ರದೇಶದಲ್ಲಿಯೂ ಬಳಸಬಹುದು.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಈ ಎಲೆಕ್ಟ್ರಿಕ್ ಸೈಕಲ್ ಇನ್-ಫ್ರೇಮ್ ಬ್ಯಾಟರಿಯನ್ನು ಹೊಂದಿದೆ, ಮತ್ತು ಇದು ಅಚ್ಚುಕಟ್ಟಾಗಿ ಹೊರಗಿನ ನೋಟವನ್ನು ನೀಡುತ್ತದೆ. ವೈರ್ ಗಳನ್ನು ಸಹ ಫ್ರೇಮ್ ನಲ್ಲಿ ಇರಿಸಲಾಗಿದೆ. ಸೀಟ್ ಎತ್ತರವು ಹೊಂದಾಣಿಕೆಯು ಮತ್ತು ಹಿಂಭಾಗದ ತುದಿಯು ತುಂಬಾ ಸರಳವಾಗಿದೆ. ಹಿಂಭಾಗದ ಮಡ್‌ಗಾರ್ಡ್‌ನಲ್ಲಿ ರಿಫ್ಲೇಕ್ಟರ್ ಅನ್ನು ಅಳವಡಿಸಲಾಗಿದೆ ಮತ್ತು ಅದು ಹಿಂಭಾಗದ ವಿನ್ಯಾಸವನ್ನು ಒಟ್ಟುಗೂಡಿಸುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ನೆಕ್ಸ್‌ಜು ರಾಂಪಸ್ ಪ್ಲಸ್ ಸೈಕಲ್ 26 ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇದು ಆಫ್-ರೋಡ್ ನಾಬ್ಲಿ ಟೈರ್‌ಗಳಿಂದ ಕೂಡಿದೆ. ಟೈರ್ ವ್ಹೀಲ್ ಸೈಕಲ್'ಗೆ ಒರಟುತನ ಲುಕ್ ಅನ್ನು ನೀಡುತ್ತದೆ. ಇನ್ನು ಇದರಲ್ಲಿ ಅಲ್ಯೂಮಿನಿಯಂ ರಿಮ್ ಕೂಡ ಇದೆ.ಸ್ಪೋಕ್ ಎಂಡ್ ಬ್ರಷ್ಡ್ ಅಲ್ಯೂಮಿನಿಯಂ ತರಹದ ಫಿನಿಶ್ ಪಡೆಯುತ್ತವೆ ಮತ್ತು ಸೈಕಲ್‌ಗೆ ಉತ್ತಮವಾಗಿ ಕಾಣುವಂತೆ ಮಾಡುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಈ ಎಲೆಕ್ಟ್ರಿಕ್ ಸೈಕಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಪೆಡಲ್ ಡಿಸ್ಕ್ ಬ್ರೇಕ್ ಗಳು ವಿನ್ಯಾಸ ಅಂಶಕ್ಕೆ ಸೇರಿಸುತ್ತವೆ. ಸಂಪೂರ್ಣ ಪೆಡಲ್ ಕಾರ್ಯವಿಧಾನವು ಮೂಲಭೂತವಾಗಿದೆ ಮತ್ತು ವಿನ್ಯಾಸದ ಅಂಶವನ್ನು ಹೆಚ್ಚಿಸಲು ನಿಜವಾಗಿಯೂ ಸಹಾಯ ಮಾಡುವುದಿಲ್ಲ. ಹಿಂಭಾಗದಲ್ಲಿ ವ್ಹೀಲ್ ಹಬ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಇದೆ

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಫೀಚರ್ಸ್

ನೆಕ್ಸ್‌ಜು ರಾಂಪಸ್ ಪ್ಲಸ್ ಸೈಕಲ್ ಫೀಚರ್ಸ್ ಗಳು ದೀರ್ಘ ಪಟ್ಟಿಯೊಂದಿಗೆ ಬರುವುದಿಲ್ಲ ಆದರೆ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಅನ್ನು ಮುಂದುವರಿಸಿಕೊಂಡು ಹೋಗಲು ನಿಮಗೆ ಬೇಕಾಗಿರುವ ವಾಕ್ ಅಸಿಸ್ಟ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆಂಕ್ಷನ್, ರೈಡಿಂಗ್ ಮೋಡ್ಸ್, ಮೂರು ರೈಡ್ ಸ್ಪೀಡ್ಸ್ ಮತ್ತು ಡ್ಯುಯಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಇದು ಹ್ಯಾಂಡಲ್‌ಬಾರ್-ಮೌಂಟಡ್ ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆಯುತ್ತದೆ, ಇದು ರೈಡ್ ಮೋಡ್ ಮತ್ತು ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಡ್‌ಲ್ಯಾಂಪ್ ಆನ್ ಅಥವಾ ಆಫ್ ಮಾಡಲು ಸ್ವಿಚ್ ಸಹ ಇದೆ. ಈ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಸಣ್ಣ ಹಾರ್ನ್ ಅನ್ನು ಕೂಡ ನೀಡಿದ್ದಾರೆ. ಇದು ಹೆಚ್ಚು ಕಿರಿದಾದ ಜಾಗದಲ್ಲಿ ಮತ್ತು ಹೆಚ್ಚು ಜನಜಂಗುಳಿ ಇರುವ ಸ್ಥಳಗಳಲ್ಲಿ ಈ ಪುಟ್ಟ ಹಾರ್ನ್ ಉಪಯೋಗವಾಗುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಪವರ್‌ಟ್ರೇನ್ ಮತ್ತು ಕಾರ್ಯಕ್ಷಮತೆ

ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ನಲ್ಲಿ 5.2 ಎಹೆಚ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಬ್ಯಾಟರಿಯನ್ನು ಫ್ರೇಮ್‌ನೊಳಗೆ ಜೋಡಿಸಲಾಗಿದೆ ಮತ್ತು ಸಂಪೂರ್ಣವಾಗಿ ಚಾರ್ಜ್ ಆಗಲು 2.5 ರಿಂದ 3 ಗಂಟೆಗಳ ನಡುವಿನ ಅವಧಿಯನ್ನು ತೆಗೆದುಕೊಳ್ಳುತ್ತದೆ. ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಮೋಡ್ ನಲ್ಲಿ 22 ಕಿಲೋಮೀಟರ್ ವರೆಗಿನ ರೇಂಜ್ ಹೊಂದಿದ್ದರೆ, ಪೆಡಲ್ ಮೋಡ್ ನಲ್ಲಿ ಸುಮಾರು 32 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರೈಡ್ ಮಾಡುವುದು ಬಹಳ ಸರಳವಾಗಿದೆ. ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್ ಅನ್ನು ರೈಡ್ ಮಾಡುವವರು ಕೂಡ ಸುಲಭವಾಗಿ ರೈಡ್ ಮಾಡುವಂತಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಎಲೆಕ್ಟ್ರಿಕ್ ಮೋಟರ್ ಇರುವುದರಿಂದ ಸಾಮಾನ್ಯ ಸೈಕಲ್ ಗಿಂತ ಭಿನ್ನವಾಗಿಸುತ್ತದೆ. ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಅನ್ನು ಆನ್ ಅಥವಾ ಆಫ್ ಮಾಡಲು ಕಂಟ್ರೋಲ್ ಪ್ಯಾನಲ್ ನಲ್ಲಿ ಆನ್/ಆಫ್ ಬಟನ್ ಅನ್ನು ಬಳಸಬಹುದು. ಅದನ್ನು ಆನ್ ಮಾಡಿದಾಗ ಅದು ಪೂರ್ವನಿಯೋಜಿತವಾಗಿ ಪೆಡೆಲೆಕ್ ಮೋಡ್‌ನಲ್ಲಿರುತ್ತದೆ. ಈಗ ಹೈಬ್ರಿಡ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ರೈಡರ್ ಪೆಡಲ್ ಮಾಡುವಾಗ ಎಲೆಕ್ಟ್ರಿಕ್ ಮೋಟರ್ ಸಹಾಯವನ್ನು ಒದಗಿಸುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಸೈಕಲ್ ತುಳಿಯಲು ಪ್ರಾರಂಭಿಸಿದಾಗ ಪೆಡೆಲೆಕ್ ಮೋಡ್ ಟಾರ್ಕ್ನಲ್ಲಿ ಹಠಾತ್ ವರ್ಧನೆಯೊಂದಿಗೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಪೆಡೆಲೆಕ್ ಮೋಡ್ ಮುಂಭಾಗದ ಸ್ಪ್ರಾಕೆಟ್ ಬಳಿ ಸೆನ್ಸಾರ್ ಅನ್ನು ಅವಲಂಬಿಸಿದೆ. ಮುಂಭಾಗದ ಸ್ಪ್ರಾಕೆಟ್ ತಿರುಗುತ್ತಿದೆ ಎಂದು ಅದು ಪತ್ತೆ ಮಾಡಿದಾಗ, ಸವಾರ ಪೆಡಲ್ ಮಾಡುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಎಲೆಕ್ಟ್ರಿಕ್ ಸಹಾಯವನ್ನು ಒದಗಿಸುದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ರಸ್ತೆಗಳಲ್ಲಿ ಪೆಡಲಿಂಗ್ ಮಾಡಿದರೆ ಪವರ್ ಅಸಿಸ್ಟ್ ಸವಾರಿ ಮಾಡುವುದು ತುಂಬಾ ಸುಲಭವಾಗಿಸುತ್ತದೆ, ಇಳಿಜಾರು ಮತ್ತು ಒರಟು ರಸ್ತೆಗಳಲ್ಲಿ ಈ ವ್ಯತ್ಯಾಸವನ್ನು ವಿಶೇಷವಾಗಿ ಅನುಭವಿಸಬಹುದು. ಈ ಎಲೆಕ್ಟ್ರಿಕ್ ಸೈಕಲ್ ಲೋ, ಮೀಡಿಯಂ ಮತ್ತು ಹೈ ಎಂಬ ಸ್ಪೀಡ್ ಸೆಟ್ಟಿಂಗ್‌ಗಳನ್ನು ಹೊಂದಿವೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಪೆಡೆಲೆಕ್ ಮೋಡ್‌ನಲ್ಲಿಯೂ ಸಹ ಸ್ಪೀಡ್ ಸೆಟ್ಟಿಂಗ್‌ಗಳು ವ್ಯತ್ಯಾಸವನ್ನುಂಟುಮಾಡುತ್ತವೆ. ಹೈ-ಸ್ಪೀಡ್ ನಲ್ಲಿ ಸೈಕ್ಲಿಂಗ್ ಮಾಡಬಹುದು, ಇನ್ನು ಹೆಚ್ಚು ಟ್ರಾಫಿಕ್ ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಲೋ ಸೆಟ್ಟಿಂಗ್‌ನಲ್ಲಿ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ರೈಡ್ ಮಾಡಬಹುದು.ಎಲೆಕ್ಟ್ರಿಕ್ ಮೋಡ್‌ಗೂ ಇದು ಅನ್ವಯಿಸುತ್ತದೆ. ಇನ್ನು ಸೈಕ್ಲಿಂಗ್ ಮಾಡುವಾಗ 250ಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್ ನಿಂದ ಉತ್ಪತ್ತಿಯಾಗುವ ಟಾರ್ಕ್ ಅನ್ನು ತಕ್ಷಣವೇ ಅನುಭವಿಸಬಹುದು.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಕಡಿಮೆ ವೇಗದಲ್ಲಿ ಥ್ರೊಟಲ್ ಇನ್‌ಪುಟ್‌ಗಳಿಗೆ ಮೋಟಾರ್ ಸ್ಪಂದಿಸುತ್ತದೆ ಮತ್ತು ಈ ಸ್ಪಂದಿಸುವಿಕೆಯು ಗಂಟೆಗೆ 20 ಕಿ.ಮೀ ನಿಂದ ಗಂಟೆಗೆ 25 ಕಿ.ಮೀ ವರೆಗೂ ಸಾಗುತ್ತದೆ. ಎಲೆಕ್ಟ್ರಿಕ್ ಅಸಿಸ್ಟ್ ಆಫ್ ಆಗಿದ್ದರೂ, ನಾವು ರಾಂಪಸ್ ಪ್ಲಸ್ ಅನ್ನು ಸವಾರಿ ಮಾಡಲು ಸ್ವಲ್ಪ ಕಷ್ಟಪಟ್ಟಿದ್ದೇವೆ. ಹಿಂಭಾಗದ ಸ್ಪ್ರಾಕೆಟ್ ಸ್ವಲ್ಪ ಚಿಕ್ಕದಾಗಿದೆ ಮತ್ತು ಇಳಿಜಾರಿನ ಮೇಲೆ ಸವಾರಿ ಮಾಡುವುದು ವಿಶೇಷವಾಗಿ ಸ್ವಲ್ಪ ಕಷ್ಟವಾಗುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಅನ್ನು ಹ್ಯಾಂಡಲ್ ಮಾಡಲು ಸಾಕಷ್ಟು ಹಗುರವಾಗಿರುತ್ತದೆ. ಟೈರ್‌ಗಳು ಉತ್ತಮವಾಗಿದೆ. ಒರಟಾದ ರಸೆಗಳಲ್ಲಿಯು ಸಾಗಲು ಸಾಹಯವಾಗುತ್ತದೆ. ಇದರ ಸಸ್ಪೆಂಕ್ಷನ್ ಸೆಟಪ್ ಉತ್ತಮವಾಗಿದೆ. ಇನ್ನು ಇದರ ಸೀಟ್ ಮೃದು ಮತ್ತು ಆರಾಮದಾಯಕವಾಗಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಇನ್ನು ಈ ಸೈಕಲ್ ಹಿಂಭಾಗದ ಸಸ್ಪಂಕ್ಷನ್ ಸೆಟಪ್ ಸವಾರಿಗೆ ಹೆಚ್ಚು ಉತ್ತಮವಾಗಿರುತ್ತದೆ. ಆದರೆ ಬೆಲೆಯಲ್ಲಿ ಇದು ಬಹುಶಃ ಆಶಾದಾಯಕವಾಗಿದೆ. ಒಟ್ಟಾರೆಯಾಗಿ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಬೆಲೆ ಮತ್ತು ವಾರಂಟಿ

ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಬೆಲೆಯು ರೂ,32,925 ಗಳಾಗಿದೆ. ಈ ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಲೆಕ್ಟ್ರೋ ಸಿ 3 ಮತ್ತು ಬ್ಯಾಟ್ರೆ ಎಲೆಕ್ಟ್ರಿಕ್ ನ್ಯೂಟ್ರಾನ್ ನಂತಹ ಎಲೆಕ್ಟ್ರಿಕ್ ಸೈಕಲ್ ಗಳಿಗೆ ಪೈಪೋಟಿ ನೀಡುತ್ತದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ನೆಕ್ಸ್‌ಜು ರಾಂಪಸ್ ಪ್ಲಸ್ ವಿಭಿನ್ನ ಯುನಿಟ್ ಗಳಿಗೆ ವಾರಂಟಿ ವಧಿಗಳೊಂದಿಗೆ ಬರುತ್ತದೆ. ಇದು ಕಂಟ್ರೋಲರ್ ಮತ್ತು ಚಾರ್ಜರ್ 6 ತಿಂಗಳ ವಾರಂಟಿಯೊಂದಿಗೆ ಬರುತ್ತದೆ ಮತ್ತು ಫ್ರೇಮ್ ಮತ್ತು ಫೋರ್ಕ್ ಒಂದು ವರ್ಷದ ವಾರಂಟಿಯನ್ನು ಹೊಂದಿದೆ, ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ 18 ತಿಂಗಳ ವಾರಂಟಿಯನ್ನು ಹೊಂದಿದೆ.

ಆಕರ್ಷಕ ಫೀಚರ್ಸ್, ಕೈಗೆಟುಕವ ದರದ ನೆಕ್ಸ್‌ಜು ರಾಂಪಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನೆಕ್ಸ್‌ಜು ರಾಂಪಸ್ ಪ್ಲಸ್ ರೈಡ್ ಮಾಡಲು ಮೋಜಿನ ಅನುಭವನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಪ್ರಯಾಣ, ಫಿಟ್‌ನೆಸ್ ಅಥವಾ ದೈನಂದಿನ ಅಗತ್ಯಗಳಿಗೆ ಬಳಸಲು ಉತ್ತಮ ಆಯ್ಕೆಯಾಗಿದೆ. ಕೈಗೆಟುಕವ ದರದ ಎಲೆಕ್ಟ್ರಿಕ್ ಸೈಕಲ್ ಅನ್ನು ಖರೀದಿಸಲು ಬಯಸುವವರಿಗೆ ಸೂಕ್ತವಾದ ಆಯ್ಕೆಗಳಲಿ ಒಂದಾಗಿದೆ.

Most Read Articles

Kannada
English summary
Nexzu Rompus+ Electric Cycle Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X