Kinetic E Luna: ಕೈನೆಟಿಕ್ ಇ-ಲೂನಾವನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 1970ರ ದಶಕದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದ ಕೈನೆಟಿಕ್ ಲೂನಾ (Kinetic Luna) ಎಲೆಕ್ಟ್ರಿಕ್ ರೂಪದಲ್ಲಿ ಫೆಬ್ರವರಿ 7ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಬಹುತೇಕರಿಗೆ ಈ ಮೊಪೆಡ್ ಖರೀದಿಸಬೇಕೆಂಬ ಆಸೆಯಿರುತ್ತದೆ. ಇಲ್ಲಿ ನೂತನ ಇ-ಲೂನಾದ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.
ಬೆಂಗಳೂರಿನಲ್ಲಿ ಕೈನೆಟಿಕ್ ಇ-ಲೂನಾ ಮೊಪೆಡ್ ಎರಡು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಎಕ್ಸ್1 (X1) ಮಾದರಿಯು ರೂ.73,570 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.10,000 ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, ರೂ.63,570 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.2,042 ಇಎಂಐ ಕಟ್ಟಬೇಕು.

ಕೈನೆಟಿಕ್ ಇ-ಲೂನಾ ಎಕ್ಸ್2 (X2) ರೂಪಾಂತರವು ರೂ.90,268 ಆನ್-ರೋಡ್ ದರವನ್ನು ಪಡೆದಿದೆ. ಈ ಮೊಪೆಡ್‌ನ್ನು ರೂ.10,000 ಡೌನ್ ಪೇಮೆಂಟ್ ಕಟ್ಟಿ ಕೊಂಡುಕೊಂಡರೆ ಉಳಿದ ರೂ.80,268 ಸಾಲದ ಹಣಕ್ಕೆ ಶೇಕಡ 9.7% ಬ್ಯಾಂಕ್ ಬಡ್ಡಿ ದರದಲ್ಲಿ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.2,579 ಇಎಂಐ (EMI) ಪಾವತಿಸಬೇಕು.
ಮೊದಲಿಗೆ ಕೈನೆಟಿಕ್ ಇ-ಲೂನಾ ಎಕ್ಸ್1 ಆವೃತ್ತಿಯ ಬಗ್ಗೆ ಮಾತನಾಡೋಣ. ಇದು 1.7 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 90 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಕೂಡ ಹೊಂದಿದೆ. ಇದರ ಬ್ಯಾಟರಿಯು 3 ಗಂಟೆಗಳಲ್ಲಿ ಭರ್ತಿ ಚಾರ್ಜ್ ಆಗಿಬಿಡುತ್ತದೆ.

ಕೈನೆಟಿಕ್ ಇ-ಲೂನಾ ಎಕ್ಸ್2 ಮಾದರಿಯ ಬಗ್ಗೆ ಹೇಳುವುದಾದರೆ, ಈ ಮೊಪೆಡ್ 2 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್ ನಲ್ಲಿ 110 ಕಿ.ಮೀ ಕ್ರಮಿಸುತ್ತದೆ. ಜೊತೆಗೆ 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಬ್ಯಾಟರಿಯು 4 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಈ ಎಲೆಕ್ಟ್ರಿಕ್ ಲೂನಾ ಮೊಪೆಡ್ ಪರ್ಲ್ ಯೆಲ್ಲೋ, ಮಲ್ಬೆರಿ ರೆಡ್, ಓಷನ್ ಬ್ಲೂ, ಸ್ಪಾರ್ಕ್ಲಿಂಗ್ ಗ್ರೀನ್ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 16 - ಇಂಚಿನ ವೀಲ್‌ಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಸಹ ಪಡೆದಿದ್ದು, 150 ಕೆಜಿ ತೂಕವನ್ನು ಸಾಗಿಸಬಲ್ಲದು.

ನೂತನ ಕೈನೆಟಿಕ್ ಇ-ಲೂನಾ ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಈ ಮೊಪೆಡ್‌ಗೆ ಟಿವಿಎಸ್ ಎಕ್ಸ್ಎಲ್ 100 ನೇರ ಪ್ರತಿಸ್ಪರ್ಧಿಯಾಗಿದೆ. ನಿಮ್ಮ ಗಮನಕ್ಕೆ ಎಲೆಕ್ಟ್ರಿಕ್ ಲೂನಾದ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








